ರಕ್ಷಾ ಬಂಧನ ಒಂದು ವಿಶೇಷವಾದ ಹಬ್ಬ, ಅನುಬಂಧಗಳು ಗಟ್ಟಿ ಮಾಡಿ, ಪ್ರೀತಿ ವಾತ್ಸಲ್ಯ ಹೆಚ್ಚಿಸುವ ವಿಶೇಷ ಗಳಿಗೆ. ನಮ್ಮ ಕುಟುಂಬದಲ್ಲಿ ನಾವು ಮೂರು ಜನ ಗಂಡು ಮಕ್ಕಳು. ನಮಗೆ ಪ್ರತಿ ವರ್ಷ ರಕ್ಷಾಬಂಧನದಂದು ರಾಖಿ ಕಟ್ಟಲು ಬರುವ ಜೀವ ಎಂದರೆ ಕವಿತಾ, ನಾವು ಅವರನ್ನು ಪ್ರೀತಿಯಿಂದ ದೀದಿ ಎಂದು ಕರೆಯುತ್ತೇವೆ. ನಮಗೆಲ್ಲ ಪ್ರತಿ ವರ್ಷ ತಪ್ಪದೇ ರಾಖಿ ಕಟ್ಟಿದ್ದಾಗ, ಉಡುಗರೆ ಕೊಟ್ಟು, ಆಶೀರ್ವಾದ ಪಡೆಯುತ್ತಿದ್ದೆವು. ಒಂದು ಬಾರಿ ನಾನು ವಿದ್ಯಾಭ್ಯಾಸಕ್ಕಾಗಿ ಬೇರೆಯ ಊರಿಗೆ ಹೋದ ಕಾರಣ ದೀದಿ ರಾಖಿಯನ್ನು ಕೊರಿಯರ್ ಮೂಲಕ ಕಳಿಸಿಕೊಟ್ಟಿದರು.
ಶಾಲೆ ದಿನಗಳಲ್ಲಿ ನಾನು ಮತ್ತು ನನ್ನ ಗೆಳೆಯ ಟ್ಯೂಷನ್ಗೆ ಹೋಗುತ್ತಿದ್ದೆವು. ಅಲ್ಲಿ ಅವನಿಗೆ ಒಬ್ಬಳು ಮೇಲೆ ಕ್ರಶ್ ಆಗಿತ್ತು. ನಂತರ ಅವಳೊಡನೆ ಮಾತನಾಡಲು ಶುರು ಮಾಡಿದ. ಆದ್ರೆ ಅವನ ಪ್ರೀತಿಗೆ ಒಂದು ವಿಘ್ನ ಕಾದಿತ್ತು. ಅದೇನೆಂದರೆ ಮುಂದಿನ ವಾರ ರಕ್ಷಾ ಬಂಧನದ ದಿನವಾಗಿತ್ತು. ನಾವು ಎಂದಿನಂತೆ ಆ ದಿನವೂ ಟ್ಯೂಷನ್ ಹೋದೆವು. ಆದ್ರೆ ಅವಳು ಟ್ಯೂಷನ್ ಮುಗಿದ ಮೇಲೆ ಗೆಳೆಯನ ಕೈಗೆ ರಾಖಿ ಕಟ್ಟಿದಳು. ಪ್ರೀತಿ ವ್ಯಕ್ತಪಡಿಸಬೇಕೆಂದ ಗೆಳೆಯ ತಂಗಿ ಎಂದು ಕರೆದ. ಪಾಪ ಪ್ರೀತಿ ಚಿಗುರುವ ಮುನ್ನವೇ ಬಾಡಿ ಹೋಯಿತ್ತು.
ಡಿಗ್ರಿಯಲ್ಲಿ ಬಿಎಸ್ಸಿ ಓದುತ್ತಿರಬೇಕಾದರೆ. ನಮ್ಮ ಪ್ರೀತಿಯ ಸೀನಿಯರ್ ಅಕ್ಕಂದಿರ ಜೊತೆಯಲ್ಲಿ ನಾನು ಊಟ ಮಾಡುವುದು, ಮನಸಲ್ಲಿದ್ದ ಭಾವನೆಗಳನ್ನು ಅವರೊಡನೆ ಚರ್ಚೆ ಮಾಡುತ್ತಿದ್ದೆ. ಅವರು ನನಗೆ ಸ್ವಂತ ತಮ್ಮನ ಹಾಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಕಾಳಜಿ ಮಾಡುತ್ತಿದ್ದರು. ರಕ್ಷಾಬಂಧನ ಸಮಯದಲ್ಲಿ ರಾಖಿ ಕಟ್ಟಿದ್ದಾಗ, ನನಗೂ ಅಕ್ಕಂದಿರು ಇದ್ದಾರೆ ಎನ್ನುವ ಅನುಬಂಧದ ಹೆಚ್ಚಾಯ್ತು. ಈಗಲೂ ಅವರು ಬೇರೆ ಕ್ಷೇತ್ರದಲ್ಲಿ ಇದ್ದರು. ಅವರ ಜೊತೆಗಿನ ನಂಟು ಗಟ್ಟಿಯಾಗಿ ಇನ್ನೂ ಹಾಗೆ ಇದೆ.
ಆನಂದ ಜೇವೂರ್, ಕಲಬುರಗಿ