- Kannada News Photo gallery Raksha Bandhan 2022: Make these special dishes at home on Raksha Bandhan?
Raksha Bandhan 2022: ರಕ್ಷಾ ಬಂಧನದಂದು ಈ ವಿಶೇಷ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿ?
Raksha Bandhan 2022: ದೇಶಾದ್ಯಂತ ಒಡಹುಟ್ಟಿದವರು ಈ ದಿನವನ್ನು ಒಬ್ಬರಿಗೊಬ್ಬರು ವಿಶೇಷವಾಗಿ ಆಚರಣೆ ಮಾಡುತ್ತಾರೆ. ರುಚಿಕರವಾದ ಮನೆಯ ಊಟ ಇಲ್ಲಿದೆ ಈ ಹಬ್ಬವು ಪೂರ್ಣಗೊಳ್ಳುವುದಿಲ್ಲ.
Updated on:Aug 10, 2022 | 5:28 PM

Raksha Bandhan 2022

Raksha Bandhan 2022

ಗೋಲಿ ಬಜ್ಜಿ: ಈ ಖಾದ್ಯವು ಮಂಗಳೂರಿನ ಪ್ರಸಿದ್ಧ ತಿಂಡಿಯಾಗಿದ್ದು ಇದನ್ನು ವಿವಿಧ ಹಿಟ್ಟು ಮತ್ತು ಮೊಸರುಗಳಿಂದ ತಯಾರಿಸಲಾಗುತ್ತದೆ. ಇದಕ್ಕೆ ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಿ ಇನ್ನೂ ಚೆನ್ನಾಗಿರುತ್ತದೆ.

ಪಾಲಾಕ್ ಪನಿಯಾಣಗಳು: ಬಾಯಲ್ಲಿ ನೀರೂರಿಸುವ ಪಾಲಕ್ ರೆಸಿಪಿ ಇದು ಆರೋಗ್ಯಕರವಾಗಿಯೂ ರುಚಿಕರವಾಗಿಯು ಇರುತ್ತದೆ. ಇದಕ್ಕೆ ಕೇವಲ ಮೂರು ಪದಾರ್ಥಗಳು ಬೇಕಾಗುತ್ತವೆ - ಪಾಲಕ್, ಕಾಳು ಹಿಟ್ಟು (ಬೇಸನ್) ಮತ್ತು ಉಪ್ಪು. ನೀವು ಎಲೆಗಳನ್ನು ಡೀಪ್ ಫ್ರೈ ಮಾಡಬಹುದು ಅಥವಾ ಅವುಗಳನ್ನು ಬೇಯಿಸಬಹುದು.

ಚಿಕನ್ 65: ಈ ಮಸಾಲೆಯುಕ್ತ, ಡೀಪ್ ಫ್ರೈಡ್ ಚಿಕನ್ ಖಾದ್ಯವು ತುಂಬಾ ರುಚಿಯಾಗಿರುತ್ತದೆ. ಇದು ದಕ್ಷಿಣ ಭಾರತದ ಜನಪ್ರಿಯ ಅಪೆಟೈಸರ್‌ಗಳಲ್ಲಿ ಒಂದಾಗಿದೆ, ಇದನ್ನು ಮೊಸರಿನಿಂದ ಮ್ಯಾರಿನೇಡ್ ಮಾಡಲಾಗುತ್ತದೆ, ಶುಂಠಿ, ಬೆಳ್ಳುಳ್ಳಿ ಮತ್ತು ಮಸಾಲೆಯುಕ್ತ ಸಾಸ್‌ನೊಂದಿಗೆ ಸವಿಯಬಹುದು.

ದಹಿ ಕಬಾಬ್: ಸಸ್ಯಾಹಾರಿಗಳು ಈ ಖಾದ್ಯವನ್ನು ಇಷ್ಟಪಡುತ್ತಾರೆ. ಈ ಖಾದ್ಯದಲ್ಲಿ ಮೊಸರು ಒಂದು ಪ್ರಮುಖ ಅಂಶವಾಗಿದೆ. ಇದಕ್ಕೆ ತರಕಾರಿಗಳನ್ನು ಹಿಟ್ಟನ್ನು ಬಳಸುತ್ತಾರೆ. ಇದನ್ನು ಹಸಿರು ಚಟ್ನಿಯೊಂದಿಗೆ ಸೇವಿಸಿ.

ಬ್ರೆಡ್ ಪಕೋಡ: ಇದನ್ನು ಬೀದಿಯಲ್ಲಿ ಹೆಚ್ಚು ಸೇವನೆ ಮಾಡುತ್ತೇವೆ, ಆದರೆ ಈ ರಕ್ಷಾ ಬಂಧನದಂದು ಬ್ರೆಡ್ ಪಕೋಡ ಮನೆಯಲ್ಲಿಯೇ ಮಾಡಿ. ಈ ಖಾರದ ಬ್ರೆಡ್ನ ಒಳಗೆ ಆಲೂಗೆಡ್ಡೆಯನ್ನು ಹಾಕಿ ಮಸಾಲೆಯುಕ್ತ ಹಿಟ್ಟಿನಲ್ಲಿ ನೆನೆಸಿ ನಂತರ ಹುರಿಯಲಾಗುತ್ತದೆ.
Published On - 5:28 pm, Wed, 10 August 22



















