Budget 2022: ಭಾರತದ ಆರ್ಥಿಕ ಬೆಳವಣಿಗೆ 9.27 ಪರ್ಸೆಂಟ್​, ಪ್ರಸಕ್ತ ಬಜೆಟ್​ನಲ್ಲಿ ಈ 7 ಅಂಶಗಳಿಗೆ ಪ್ರಾಮುಖ್ಯತೆ

| Updated By: Lakshmi Hegde

Updated on: Feb 01, 2022 | 11:53 AM

ಸೂಕ್ಷ್ಮ ಮತ್ತು ಸ್ಥೂಲ ಆರ್ಥಿಕತೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರೊಂದಿಗೆ ಡಿಜಿಟಲ್​ ಆರ್ಥಿಕತೆ, ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Budget 2022: ಭಾರತದ ಆರ್ಥಿಕ ಬೆಳವಣಿಗೆ 9.27 ಪರ್ಸೆಂಟ್​, ಪ್ರಸಕ್ತ ಬಜೆಟ್​ನಲ್ಲಿ ಈ 7 ಅಂಶಗಳಿಗೆ ಪ್ರಾಮುಖ್ಯತೆ
ಬಜೆಟ್​ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್​
Follow us on

ದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ಪ್ರಸಕ್ತ ವರ್ಷದಲ್ಲಿ ಅಂದಾಜು ಶೇ.9.27ರಷ್ಟಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ. 2022-23ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆ ವೇಳೆ ಮಾಹಿತಿ ನೀಡಿದ ಅವರು, ಭಾರತದ ಬೆಳವಣಿಗೆ ಶೇ.9.2ರಷ್ಟಿದ್ದು, ಇದು ಅತ್ಯಂತ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಬಜೆಟ್​ ಮಂಡನೆ ಪ್ರಾರಂಭದಲ್ಲಿ  ಆಜಾದಿ ಕಾ ಅಮೃತ್ ಮಹೋತ್ಸವದ ಉಲ್ಲೇಖ ಮಾಡಿದ ನಿರ್ಮಲಾ ಸೀತಾರಾಮನ್​, @75ರಲ್ಲಿರುವ  ಇಂಡಿಯಾವನ್ನು @100ಕ್ಕೆ ಕೊಂಡೊಯ್ಯುವ ಆದ್ಯತೆಯನ್ನಿಟ್ಟುಕೊಂಡು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​ ರೂಪಿಸಲಾಗಿದೆ ಎಂದು ಹೇಳಿದರು.

ನಾವೀಗ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಈ ಹೊತ್ತಲ್ಲಿ ಸೂಕ್ಷ್ಮ ಮತ್ತು ಸ್ಥೂಲ ಆರ್ಥಿಕತೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರೊಂದಿಗೆ ಡಿಜಿಟಲ್​ ಆರ್ಥಿಕತೆ, ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿ ಎಂದು ಹೇಳಿದರು. ಹಾಗೇ, ಪ್ರಸಕ್ರ ಬಾರಿಯ ಬಜೆಟ್​ನಲ್ಲಿ, ಪಿಎಂ ಗತಿಶಕ್ತಿ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಉತ್ಪಾದಕತೆಯ ವೃದ್ಧಿ, ಅವಕಾಶಗಳಲ್ಲಿ ಹೆಚ್ಚಳ, ವಿದ್ಯುತ್​ ಉತ್ಪಾದನೆ  ಮತ್ತು ವಿತರಣೆಯಲ್ಲಿ ಸುಧಾರಣೆ, ಪರಿಸರ ಸಂರಕ್ಷಣೆ, ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು  ನೀಡಲು ಆದ್ಯತೆ ನೀಡಲಾಗಿದೆ. ಈ ಏಳು ಅಂಶಗಳಿಗೆ 2022-23ರ ಕೇಂದ್ರ ಬಜೆಟ್​​ನ ಪ್ರಾಮುಖ್ಯತೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದರು.

ಹಾಗೇ, ಕೊರೊನಾ ಸಾಂಕ್ರಾಮಿಕ ಹೊತ್ತಲ್ಲಿ ಕೇಂದ್ರ ಸರ್ಕಾರ ಪ್ರಾರಂಭ ಮಾಡಿದ ಆತ್ಮ ನಿರ್ಭರ್​ ಭಾರತ ಅಭಿಯಾನದ ಬಗ್ಗೆ ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್​, ಆತ್ಮ ನಿರ್ಭರ ಭಾರತಕ್ಕೆ ದೇಶಾದ್ಯಂತ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ಏರ್​ ಇಂಡಿಯಾ ಮಾರಾಟ ಯಶಸ್ವಿಯಾಗಿ ನಡೆದಿದೆ. ಬರುವ ದಿನಗಳಲ್ಲಿ ಎಲ್​ಐಸಿಯಿಂದ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ನಿರ್ಮಲಾ ಸೀತಾರಾಮನ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Budget 2022: ಮೂರು ವರ್ಷಗಳಲ್ಲಿ 400 ಹೊಸ ತಲೆಮಾರಿನ ವಂದೇ ಭಾರತ್ ರೈಲು: ನಿರ್ಮಲಾ ಸೀತಾರಾಮನ್

Published On - 11:51 am, Tue, 1 February 22