ಈ ಬಾರಿಯ ಕೇಂದ್ರ ಬಜೆಟ್ 2022-23 (Union Budget 2022-23) ಚೇತರಿಕೆಯನ್ನು ಬೆಂಬಲಿಸಬೇಕು ಹಾಗೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಈವರೆಗೆ ದೇಶೀಯ ಚೇತರಿಕೆ ಏರಿಳಿತದಿಂದ ಕೂಡಿದ್ದು, ಸರ್ಕಾರದ ನೀತಿಗಳ ಬೆಂಬಲದ ಅಗತ್ಯ ಇದೆ. ಇದರ ಹೊರತಾಗಿ, ಶೀಘ್ರದಲ್ಲೇ ಜಾಗತಿಕ ಬಾಂಡ್ ಸೂಚ್ಯಂಕದಲ್ಲಿ ಒಳಗೊಳ್ಳುವುದಕ್ಕೆ ಭಾರತ ಸಿದ್ಧತೆ ನಡೆಸುತ್ತಿದೆ. ಇದರಿಂದ ಆರ್ಥಿಕ ಸ್ಥಿರತೆಗೆ ಸಹಾಯ ಆಗುತ್ತದೆ. ಆದ್ದರಿಂದ ಹಣಕಾಸು ವರ್ಷ 2023ರಲ್ಲಿ ಸಾಧಾರಣವಾದ ಕನ್ಸಾಲಿಡೇಷನ್ ನಿರೀಕ್ಷಿಸಲಾಗುತ್ತಿದೆ. ಬ್ರೋಕರೇಜ್ ಮತ್ತು ರೀಸರ್ಚ್ ಸಂಸ್ಥೆಯಾದ ಎಡೆಲ್ವೀಸ್ ಆಲ್ಟರ್ನೇಟಿವ್ ರೀಸರ್ಚ್ ಕಳೆದ ಹತ್ತು ವರ್ಷಗಳಿಂದ ಬಜೆಟ್ ದಿನದಂದು ನಿಫ್ಟಿ-50, ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಮಿಡ್ಕ್ಯಾಪ್ 100 ಸೂಚ್ಯಂಕಗಳ ಪರ್ಫಾರ್ಮೆನ್ಸ್ ವಿಶ್ಲೇಷಣೆ ಮಾಡುತ್ತಾ ಬರುತ್ತಿದೆ. 2021ರ ಬಜೆಟ್ನ ದಿನದಂದು ಭಾರೀ ಗಳಿಕೆ ಕಂಡಿದ್ದು, ಶೇ 5ರಷ್ಟು ಏರಿಕೆ ದಾಖಲಿಸಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಗಳಿಂದ ಹೂಡಿಕೆದಾರರು ಸಂತುಷ್ಟರಾಗಿದ್ದರು. ಅದರ ಫಲಿತಾಂಶ ಸೂಚ್ಯಂಕಗಳಲ್ಲಿ ಕಂಡುಬಂತು. ಆದರೆ 2020ನೇ ಇಸವಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಬಜೆಟ್ ಇರಲಿಲ್ಲ ಎಂಬ ಕಾರಣಕ್ಕೆ ಶೇ 2ರಷ್ಟು ಕುಸಿದಿತ್ತು.
ಕಳೆದ 10 ವರ್ಷಗಳಲ್ಲಿ ನಿಫ್ಟಿ 50 ಬಜೆಟ್ ದಿನದಂದು ಯಾವ ಹಂತದಲ್ಲಿತ್ತು ಹಾಗೂ ಬಜೆಟ್ ದಿನದಂದು ಏನಾಯಿತು, ಯಾವ ದಿನ ಬಜೆಟ್ ಮಂಡನೆ ಆಯಿತು ಎಂಬ ವಿವರ ಇಲ್ಲಿದೆ.
2012: ಮಾರ್ಚ್ 16, 2012: 5,318- ಶೇ 1.2ರಷ್ಟು ಇಳಿಕೆ
2013: ಫೆಬ್ರವರಿ 28, 2013: 5,693- ಶೇ 1.8ರಷ್ಟು ಇಳಿಕೆ
2014: ಫೆಬ್ರವರಿ 17, 2014: 6,073- ಶೇ 0.4ರಷ್ಟು ಏರಿಕೆ
2014: ಜುಲೈ 10, 2014: 7,568- ಶೇ 0.2ರಷ್ಟು ಇಳಿಕೆ
2015: ಫೆಬ್ರವರಿ 28, 2015: 8,902- ಶೇ 0.6ರಷ್ಟು ಏರಿಕೆ
2016: ಫೆಬ್ರವರಿ 1, 2016: 7,556- ಶೇ 0.1ರಷ್ಟು ಇಳಿಕೆ
2017: ಫೆಬ್ರವರಿ 1, 2017: 8,716- ಶೇ 1.8ರಷ್ಟು ಏರಿಕೆ
2018: ಫೆಬ್ರವರಿ 1, 2018: 11,017- ಶೇ 0.1ರಷ್ಟು ಇಳಿಕೆ
2019: ಫೆಬ್ರವರಿ 1, 2019: 10,894- ಶೇ 0.6ರಷ್ಟು ಏರಿಕೆ
2019: ಜುಲೈ 5, 2019: 11,811- ಶೇ 1.1ರಷ್ಟು ಇಳಿಕೆ
2020: ಫೆಬ್ರವರಿ 1, 2020: 11,662- ಶೇ 2.5ರಷ್ಟು ಇಳಿಕೆ
2021: ಫೆಬ್ರವರಿ 1, 2021: 14,281- ಶೇ 4.7ರಷ್ಟು ಏರಿಕೆ
ನಿಫ್ಟಿ ಬ್ಯಾಂಕ್
2012: ಮಾರ್ಚ್ 16, 2012: 10,391- ಶೇ 1.9ರಷ್ಟು ಇಳಿಕೆ
2013: ಫೆಬ್ರವರಿ 28, 2013: 11,487- ಶೇ 3.7ರಷ್ಟು ಇಳಿಕೆ
2014: ಫೆಬ್ರವರಿ 17, 2014: 10,327- ಶೇ 1.2ರಷ್ಟು ಏರಿಕೆ
2014: ಜುಲೈ 10, 2014: 14,822- ಶೇ 0.7ರಷ್ಟು ಇಳಿಕೆ
2015: ಫೆಬ್ರವರಿ 28, 2015: 19,691- ಶೇ 3.2ರಷ್ಟು ಏರಿಕೆ
2016: ಫೆಬ್ರವರಿ 1, 2016: 15,314- ಶೇ 1.3ರಷ್ಟು ಇಳಿಕೆ
2017: ಫೆಬ್ರವರಿ 1, 2017: 20,021- ಶೇ 2.6ರಷ್ಟು ಏರಿಕೆ
2018: ಫೆಬ್ರವರಿ 1, 2018: 27,221- ಶೇ 0.6ರಷ್ಟು ಇಳಿಕೆ
2019: ಫೆಬ್ರವರಿ 1, 2019: 27,086- ಶೇ 0.8ರಷ್ಟು ಇಳಿಕೆ
2019: ಜುಲೈ 5, 2019: 31,476- ಶೇ 0 ಯಾವುದೇ ಬದಲಾವಣೆ ಇಲ್ಲ
2020: ಫೆಬ್ರವರಿ 1, 2020: 29,821- ಶೇ 3.3ರಷ್ಟು ಇಳಿಕೆ
2021: ಫೆಬ್ರವರಿ 1, 2021: 33,089- ಶೇ 8.3ರಷ್ಟು ಏರಿಕೆ
ಈ ಬಾರಿಯ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1, 2022ರಂದು ಸಂಸತ್ನಲ್ಲಿ ಮಂಡಿಸಲಾಗುವುದು. ಈ ಮಧ್ಯೆ ಜನವರಿ 31ನೇ ತಾರೀಕಿನ ಮಧ್ಯಾಹ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು. ಗ್ರಾಮೀಣ ವಲಯ, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ), ಹೊಸ ಉತ್ಪಾದನಾ ಘಟಕಗಳಿಗೆ 2019ರಲ್ಲಿ ಘೋಷಿಸಿದ್ದ ತೆರಿಗೆ ಕಡಿತದ ವಿಸ್ತರಣೆ, ನರೇಗಾದಂಥ ಉದ್ಯೋಗ ಸೃಷ್ಟಿಯ ಯೋಜನೆ ಆರಂಭ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಜೆಟ್ 2022: ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಯಾರು ಗೊತ್ತಾ..? ಇಲ್ಲಿದೆ ಆಸಕ್ತಿಕರ ಮಾಹಿತಿ
Published On - 11:43 am, Wed, 26 January 22