- Kannada News Photo gallery Budget 2022: Who knows the budget more often? Here interesting information to you
ಬಜೆಟ್ 2022: ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಯಾರು ಗೊತ್ತಾ..? ಇಲ್ಲಿದೆ ಆಸಕ್ತಿಕರ ಮಾಹಿತಿ
ಕೇಂದ್ರ ಬಜೆಟ್ 2022: ಕೇಂದ್ರ ಸರ್ಕಾರವು 2022-23ರ ಬಜೆಟ್ ಅನ್ನು ಕೆಲವೇ ದಿನಗಳಲ್ಲಿ ಪರಿಚಯಿಸಲಿದೆ. ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
Updated on: Jan 24, 2022 | 2:10 PM

1958-59ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡಿಸಿ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಹಣಕಾಸು ಸಚಿವಾಲಯ ಪ್ರಧಾನಿ ನೆಹರೂ ಅವರ ಅಧೀನದಲ್ಲಿತ್ತು.

ನೆಹರೂ ನಂತರ ಇಂದಿರಾ ಗಾಂಧಿ ಕೂಡ ಪ್ರಧಾನಿಯಾಗಿ ಬಜೆಟ್ ಮಂಡಿಸಿದ್ದರು. ನಿರ್ಮಲಾ ಸೀತಾರಾಮನ್‌ಗಿಂತ ಮೊದಲು ಇಂದಿರಾಗಾಂಧಿ ಅವರು ಬಜೆಟ್ ಮಂಡಿಸಿ ಹಣಕಾಸು ಸಚಿವ ಸ್ಥಾನ ಅಲಂಕರಿಸಿದ ಏಕೈಕ ಮಹಿಳೆ.

ಮೊರಾರ್ಜಿ ದೇಸಾಯಿ ಅವರು 10 ಬಜೆಟ್ ಮಂಡಿಸಿ, ದೇಶದಲ್ಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು 6 ಬಾರಿ ಹಣಕಾಸು ಸಚಿವರಾಗಿ ಮತ್ತು 4 ಬಾರಿ ಉಪಪ್ರಧಾನಿಯಾಗಿ ಬಜೆಟ್ ಮಂಡಿಸಿದ್ದಾರೆ. ಒಂದು ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ಅವರ ಜನ್ಮದಿನದಂದು ಕೂಡ ಬಜೆಟ್ ಮಂಡಿಸಿದ್ದರು.

2016ರಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಾಮಾನ್ಯ ಬಜೆಟ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಈ ಹಿಂದೆ ರೈಲ್ವೆ ಬಜೆಟ್ನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದರೆ, ರೈಲ್ವೆ ಬಜೆಟ್ ಅನ್ನು ರದ್ದುಗೊಳಿಸಿ ಸಾಮಾನ್ಯ ಬಜೆಟ್ನೊಂದಿಗೆ ವಿಲೀನಗೊಳಿಸಲಾಯಿತು. ಇದು ಸುದೀರ್ಘ ಸಂಪ್ರದಾಯವನ್ನು ಕೊನೆಗೊಳಿಸಿತು.

ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿದ ಮಹಿಳೆ ಎನ್ನುವ ಕೀರ್ತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. ಫೆಬ್ರವರಿ 1, 2022 ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.




