Budget 2023: ಸರ್ಕಾರಿ ಏಜೆನ್ಸಿಗಳಲ್ಲಿ ಡಿಜಿಟಲ್ ಗುರುತಿನ ದಾಖಲೆಗೆ ಇನ್ನು ಪ್ಯಾನ್ ಸಾಕು

|

Updated on: Feb 01, 2023 | 12:20 PM

ಈ ನಿರ್ಧಾರದಿಂದ ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಲ್ಲಿ ಕೆವೈಸಿ ಪ್ರಕ್ರಿಯೆ ಪ್ಯಾನ್​ಕಾರ್ಡ್ ಹೊಂದಿರುವವರಿಗೆ ಸುಲಭವಾಗಲಿದೆ.

Budget 2023: ಸರ್ಕಾರಿ ಏಜೆನ್ಸಿಗಳಲ್ಲಿ ಡಿಜಿಟಲ್ ಗುರುತಿನ ದಾಖಲೆಗೆ ಇನ್ನು ಪ್ಯಾನ್ ಸಾಕು
ಪ್ಯಾನ್ ಕಾರ್ಡ್
Follow us on

ನವದೆಹಲಿ: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಡಿಜಿಟಲ್ ವ್ಯವಸ್ಥೆಯಲ್ಲಿ ಗುರುತಿನ ದೃಢೀಕರಣಕ್ಕಾಗಿ ಪ್ಯಾನ್ (PAN) ಕಾರ್ಡ್ ಅನ್ನು ಸಾಮಾನ್ಯ ಗುರುತಿನ ಸಾಧನವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಿಸಿದರು. 2023-24ನೇ ಸಾಲಿನ ಬಜೆಟ್ (Budget 2023) ಮಂಡನೆ ಮಾಡಿದ ಅವರು, ಈ ಘೋಷಣೆ ಮಾಡಿದರು. ಈ ನಿರ್ಧಾರದೊಂದಿಗೆ, ವ್ಯಕ್ತಿಗಳ ಡಿಜಿಟಲ್ ಗುರುತು ದೃಢೀಕರಣದ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದರು. ಈ ನಿರ್ಧಾರದಿಂದ ಆದಾಯ ತೆರಿಗೆ ಇಲಾಖೆ (Income Tax Department) ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಲ್ಲಿ ಕೆವೈಸಿ ಪ್ರಕ್ರಿಯೆ ಪ್ಯಾನ್​ಕಾರ್ಡ್ ಹೊಂದಿರುವವರಿಗೆ ಸುಲಭವಾಗಲಿದೆ.

ಇಷ್ಟೇ ಅಲ್ಲದೆ, ದೇಶದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲು ಬಜೆಟ್ ಮೂಲಕ ಕೇಂದ್ರ ಸರ್ಕಾರವು ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಉದ್ಯಮಗಳು ಪ್ರತ್ಯೇಕ ಪ್ಯಾನ್ (PAN) ನಂಬರ್ ಹೊಂದಬೇಕು. ಈ ನಂಬರ್ ಆಧರಿಸಿ ಉದ್ಯಮಿಗಳ ಕುಂದುಕೊರತೆಯನ್ನು ಶೀಘ್ರ ಪರಿಹರಿಸಲಾಗುವುದು. ಇದಕ್ಕಾಗಿ ಹಲವು ನಿಯಮಗಳನ್ನು ಸಡಿಲಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬಜೆಟ್​ ಲೈವ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Wed, 1 February 23