Union Budget 2024: ಮೊಬೈಲ್​​ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ, ಫೋನ್, ಚಾರ್ಜರ್​ಗಳ ಮೇಲಿನ ತೆರಿಗೆ ಇಳಿಕೆ

ಕೇಂದ್ರ ಸಚಿವೆ ಸಚಿವೆ ನಿರ್ಮಾಲ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್​​​​ನಲ್ಲಿ ತಂತ್ರಜ್ಞಾನಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಈ ಮೂಲಕ ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎಗಳು ಮತ್ತು ಮೊಬೈಲ್ ಚಾರ್ಜರ್‌ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ. ಎಷ್ಟು ಇಳಿಸಲಾಗಿದೆ? ಈ ಬಗ್ಗೆ ವಿತ್ತ ಸಚಿವರು ಹೇಳಿದ್ದೇನು ಇಲ್ಲಿದೆ ನೋಡಿ.

Union Budget 2024: ಮೊಬೈಲ್​​ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ, ಫೋನ್, ಚಾರ್ಜರ್​ಗಳ ಮೇಲಿನ ತೆರಿಗೆ ಇಳಿಕೆ
ಸಾಂದರ್ಭಿಕ ಚಿತ್ರ

Updated on: Jul 23, 2024 | 2:29 PM

ಇಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್​​ನಲ್ಲಿ ಮಹತ್ವದ ಯೋಜನೆಗಳಿಗೆ ಹಾಗೂ ಸಾಮಾನ್ಯ ವರ್ಗಕ್ಕೆ ಹೆಚ್ಚುನ ಅನುದಾನವನ್ನು ನೀಡಿದೆ. ಕೃಷಿ, ಮಹಿಳಾ, ಕೈಗಾರಿಕೆ, ರೈಲ್ವೆ, ಹೀಗೆ ಅನೇಕ ಕ್ಷೇತ್ರಗಳಿಗೆ ಭರಪೂರ ಅನುದಾನ ಹಾಗೂ ಯೋಜನೆಯಲ್ಲಿ ನೀಡಿದೆ. ಇದರ ಜತೆಗೆ ತಂತ್ರಜ್ಞಾನಕ್ಕೂ ಹೆಚ್ಚು ವಿನಾಯಿತಿಗಳನ್ನು ನೀಡಿದೆ. ಹೌದು ಕೇಂದ್ರ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಮಂಡಿಸಿರುವ ಬಜೆಟ್​​ನಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎಗಳು ಮತ್ತು ಮೊಬೈಲ್ ಚಾರ್ಜರ್‌ ಮೇಲಿನ ಆಮದು ಸುಂಕವನ್ನು ಶೇಕಾಡ 20ರಿಂದ ಶೇಕಾಡ 15ಕ್ಕೆ ಇಳಿಸಿದ್ದಾರೆ. ಕಳೆದ 6 ವರ್ಷಗಳಲ್ಲಿ ದೇಶೀಯ ಉತ್ಪಾದನೆಯು ಮೂರು ಪಟ್ಟು ಹೆಚ್ಚಾಗಿದೆ ಹಾಗೂ ಮೊಬೈಲ್ ಫೋನ್‌ಗಳ ರಫ್ತು 100 ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಬಜೆಟ್​​​​ ಭಾಷಣದಲ್ಲಿ ಮಾತನಾಡಿದ ಸಚಿವೆ ನಿರ್ಮಾಲ ಸೀತಾರಾಮನ್ ಅವರು ದೇಶೀಯ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ ಮತ್ತು ಕಳೆದ ಆರು ವರ್ಷಗಳಲ್ಲಿ ಮೊಬೈಲ್ ಫೋನ್‌ಗಳ ರಫ್ತಿನಲ್ಲಿ ಸುಮಾರು 100 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಹಾಗೂ ಭಾರತೀಯ ಮೊಬೈಲ್ ಉದ್ಯಮವು ಪ್ರಬುದ್ಧವಾಗಿದೆ. ಅದಕ್ಕಾಗಿ ಗ್ರಾಹಕರ ಹಿತದೃಷ್ಟಿಯಿಂದ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿ (ಬೇಸಿಕ್ ಕಸ್ಟಮ್ಸ್ ಡ್ಯೂಟಿ) ಅನ್ನು 15% ಕ್ಕೆ ಇಳಿಸಲು ಮುಂದಾಗಿದ್ದೇವೆ ಹಾಗೂ ಈ ಬಗ್ಗೆ ಪ್ರಸ್ತಾವನೆಯನ್ನು ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ ಮೊಬೈಲ್ ಫೋನ್ ತಯಾರಿಕೆಯಲ್ಲಿ ತೊಡಗಿರುವ ಹಲವಾರು ಬಿಡಿ ಭಾಗಗಳ ಮೇಲಿನ ಆಮದು ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಇನ್ನು ದೇಶೀಯ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಮೌಲ್ಯವರ್ಧನೆ ಹೆಚ್ಚಿಸುವ ಸಲುವಾಗಿ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿಯನ್ನು ಇಳಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌, ಕೃಷಿ ಕ್ಷೇತ್ರಕ್ಕೆ ಮೋದಿ ನೀಡಿದ ಅನುದಾನ ಎಷ್ಟು?

ಹ್ಯಾಂಡ್‌ಸೆಟ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಕರು ಆಮದು ಸುಂಕವನ್ನು ಕಡಿಮೆ ಮಾಡಲು ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಭಾರತೀಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಕರ್ಷಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:06 pm, Tue, 23 July 24