ಬಿಜ್ನೋರ್‌ನ 42 ವರ್ಷದ ರೈತ ಸುಧೀರ್ ರಜಪೂತ್ ಅವರು ಹೆಚ್ಚೂ ಕಡಿಮೆ 4.5 ಎಕರೆಯಷ್ಟು ಭೂಮಿಯನ್ನು ಹೊಂದಿದ್ದಾರೆ. ಬೇರೆ ಯಾವುದೇ ಆದಾಯ ಇಲ್ಲದ ಕಾರಣ 8.5 ಎಕರೆಯಷ್ಟು ಭೂಮಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಈ ರೀತಿಯಾಗಿ, ಅವರು ಒಟ್ಟು 13 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಕಬ್ಬಿನ ಬಿತ್ತನೆ ವಿಳಂಬದಿಂದಾಗಿ ಈ ವರ್ಷ ಎಕರೆಗೆ 30 ಕ್ವಿಂಟಲ್ ಇಳುವರಿ ಕಡಿಮೆ ಆಗಿದೆ. ಡೀಸೆಲ್ ಬೆಲೆ (Fuel Price) ಸಿಕ್ಕಾಪಟ್ಟೆ ಹೆಚ್ಚಿದ್ದರಿಂ ಬೆಲೆ ಇನ್ನಷ್ಟು ಹೆಚ್ಚಾಗಿದೆ. ಈ ಬಾರಿ ತಿಂಗಳಿಗೆ 10 ಸಾವಿರ ರೂಪಾಯಿ ಗಳಿಸಲು ಸಹ ಅವರಿಗೆ ಸಾಧ್ಯ ಆಗುವುದಿಲ್ಲ. ಸುಧೀರ್ ಕುಟುಂಬದಲ್ಲಿ ತಾಯಿ, ಪತ್ನಿ ಹಾಗೂ ಒಬ್ಬ ಮಗ, ಮಗಳು ಸೇರಿ ಒಟ್ಟು ಐವರು ಇದ್ದಾರೆ. ಮಕ್ಕಳಿಬ್ಬರೂ ಗ್ರಾಮದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಮಾಂದವಾರದಲ್ಲಿ ಇರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ.
ಪ್ರತಿನಿತ್ಯ ಶಾಲಾ ಬಸ್ಸಿನಲ್ಲಿ ಹೋಗುತ್ತಾರೆ. ಸುಧೀರ್ ತನ್ನ ಸಂಪಾದನೆ ಹೆಚ್ಚಿಸಿಕೊಳ್ಳಲು ಹಸುಗಳನ್ನು ಸಾಕುತ್ತಿದ್ದರು. ಹಾಲು ಮಾರಾಟದಿಂದ ಬರುವ ಆದಾಯದಿಂದಲೇ ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣ ವೆಚ್ಚ ಭರಿಸಲಾಗುತ್ತಿತ್ತು. ಲಾಕ್‌ಡೌನ್ ಸಮಯದಲ್ಲಿ ಕೃಷಿಗೆ ತೊಂದರೆ ಆಗಲಿಲ್ಲ, ಆದರೆ ಹಸುವಿನ ಹಾಲನ್ನು ಮಾರಾಟ ಮಾಡದ ಕಾರಣ ಆದಾಯವು ಬಿದ್ದುಹೋಯಿತು. ಈ ನಷ್ಟದಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಮಕ್ಕಳ ಶಾಲೆಗಳು ಮುಚ್ಚಿದ್ದು, ಆನ್‌ಲೈನ್ ವ್ಯಾಸಂಗಕ್ಕೆ ಇಂಟರ್ನೆಟ್, ಸ್ಮಾರ್ಟ್‌ಫೋನ್ ಹೊಂದಿಸಲು ಸಾಧ್ಯವಿಲ್ಲ. ಹಗಲಿರುಳು ಶ್ರಮಿಸಿದ ಸುಧೀರ್ ಒಂದು ವರ್ಷದಲ್ಲಿ 1.20 ಲಕ್ಷ ರೂಪಾಯಿ ಉಳಿಸಲು ಸಾಧ್ಯವಾಗಿದೆ. ಕಿಸಾನ್ ಸಮ್ಮಾನ್ ನಿಧಿಯಿಂದ ಸುಧೀರ್ 2000 ರೂಪಾಯಿ ದೊರೆಯುತ್ತದೆ. ಕಷ್ಟಪಟ್ಟು ಈ ಹಾದಿ ತೆರೆದುಕೊಂಡಿದ್ದು, ಒಂದು ತಿಂಗಳಲ್ಲಿ ಬರೋಬ್ಬರಿ 500 ರೂಪಾಯಿ ಆದಾಯ ಹೆಚ್ಚಿದೆ.
ಈಗ ತಿಂಗಳಿಗೆ ಹತ್ತರಿಂದ ಹನ್ನೊಂದು ಸಾವಿರ ರೂಪಾಯಿ ಸಂಪಾದನೆಯಲ್ಲಿ ಮನೆಗೆ ಕಾಲಿಡುವುದೇ ದುಸ್ತರವಾಗಿದೆ. ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಶೇಕಡಾ 90ರಷ್ಟು ರೈತ ಕುಟುಂಬಗಳಲ್ಲಿ ಸುಧೀರ್ ಕೂಡ ಒಬ್ಬರು. ಆರ್ಥಿಕ ಸಮೀಕ್ಷೆ 2020ರ ಪ್ರಕಾರ, ದೇಶದಲ್ಲಿ ಸುಮಾರು 70 ಕೋಟಿ ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಜನಸಂಖ್ಯೆಯ ಹೆಚ್ಚಳದೊಂದಿಗೆ, ದೇಶದಲ್ಲಿ ಸರಾಸರಿ ಹಿಡುವಳಿ ಗಾತ್ರವು ಕೇವಲ 1.08 ಎಕರೆಗಳಿಗೆ ಇಳಿದಿದೆ. ಸುಮಾರು 4 ಎಕರೆ ಭೂಮಿಯಲ್ಲಿ ಕುಟುಂಬಕ್ಕೆ ಜೀವನ ಸಾಗಿಸಲು ಯಾವುದೇ ಸಂದರ್ಭದಲ್ಲೂ ಸಾಧ್ಯವಿಲ್ಲ.
ಸುಧೀರ್ ಪಶ್ಚಿಮ ಉತ್ತರ ಪ್ರದೇಶದಿಂದ ಬಂದವರು. ಅಲ್ಲಿ ಸಾಕಷ್ಟು ನೀರಾವರಿ ವಿಧಾನಗಳಿವೆ. ಇಲ್ಲಿ ರೈತರು ವರ್ಷದಲ್ಲಿ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಪರಿಸ್ಥಿತಿ ಹೀಗಿರುವಾಗ ಒಡಿಶಾ, ಬಿಹಾರ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳ ಪರಿಸ್ಥಿತಿ ಏನಾಗಬಹುದು ಎಂದು ಸುಲಭವಾಗಿ ಊಹಿಸಬಹುದು. ಬಜೆಟ್ ಬಂತೆಂದರೆ ರೈತರು ರೈತರು ಎಂದು ಏರು ಧ್ವನಿಯಲ್ಲಿ ಕೇಳಲು ಆರಂಭ ಆಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿ ಬಜೆಟ್‌ನಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ ಎಂಬ ಅಂಕಿ- ಅಂಶಗಳನ್ನು ಸರ್ಕಾರ ನೀಡುತ್ತದೆ. ಸರ್ಕಾರವು ಎಂಎಸ್‌ಪಿಯಲ್ಲಿ (ಕನಿಷ್ಠ ಬೆಂಬಲ ಬೆಲೆ) ದಾಖಲೆಯ ಬೆಳೆಗಳನ್ನು ಖರೀದಿಸಿದೆ. ಆದರೆ ಎಷ್ಟು ಪ್ರತಿಶತ ರೈತರು ಇದರಿಂದ ಲಾಭ ಪಡೆಯಲು ಸಾಧ್ಯವಾಯಿತು ಎಂಬುದು ಯಾವಾಗಲೂ ಪ್ರಶ್ನಾರ್ಥಕ ವಿಷಯವಾಗಿದೆ. ಕೃಷಿ ಕ್ಷೇತ್ರಕ್ಕೆ 2020-21ನೇ ಸಾಲಿಗೆ ಒಟ್ಟು 1.42 ಲಕ್ಷ ಕೋಟಿ ರೂಪಾಯಿ, 2021-22ರಲ್ಲಿ 1.48 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಲಾಯಿತು.
ಸರ್ಕಾರವು ರೈತರಿಗೆ ಏನು ನೀಡಿದೆ
ಸರ್ಕಾರವು ಡಿಸೆಂಬರ್ 1, 2018ರಿಂದ ರೈತರಿಗಾಗಿ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿತು. ಇದರಿಂದಾಗಿ 2019-20ನೇ ಸಾಲಿನ ಕೃಷಿ ಕ್ಷೇತ್ರದ ಬಜೆಟ್ ಅನ್ನು 1.30 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸರ್ಕಾರ ಅನುದಾನ ನೀಡುತ್ತದೆ ಎಂದು ಬಜೆಟ್ ಸಮಯದಲ್ಲಿ ಲೆಕ್ಕ ಹಾಕಬಹುದು. 2015-16ನೇ ಸಾಲಿನಲ್ಲಿ 6000 ಕೋಟಿ ರೂಪಾಯಿಗಳ ಹಂಚಿಕೆ ಮಾಡಲಾಗಿದ್ದು, 2019-20ರಲ್ಲಿ 8000 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. 2021-22ನೇ ಸಾಲಿಗೆ ಇದಕ್ಕಾಗಿ 8510 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಕೃಷಿ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿಯಂತಹ ಹಲವು ಯೋಜನೆಗಳ ಲಾಭ ಪಡೆಯುವುದು ಹೇಗೆ ಎಂಬುದು ಸುಧೀರ್ ಅವರಂಥವರಿಗೆ ತಿಳಿದಿಲ್ಲ.
ಈ ಬಗ್ಗೆ ಬಲ್ಲವರು ಜಟಿಲವಾದ ಪ್ರಕ್ರಿಯೆಯಿಂದಾಗಿ ಅದರ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಸುಧೀರ್ ಅವರಂಥವರು ನೇರವಾಗಿ ಕೃಷಿ ವೆಚ್ಚ ಅಂದರೆ ನೀರಾವರಿ, ವಿದ್ಯುತ್, ಡೀಸೆಲ್, ರಸಗೊಬ್ಬರ, ಕೂಲಿ ಮತ್ತು ಮಾರುಕಟ್ಟೆಯಲ್ಲಿನ ಬೆಳೆಗಳ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಅದನ್ನು ಮಾಡುತ್ತಾರೆ. ಅದಕ್ಕೇ ಆದಾಯ ಹೆಚ್ಚಿಲ್ಲ. ಬಜೆಟ್‌ನಲ್ಲಿ ರೈತರ ಹೆಸರಿನಲ್ಲಿ ಸಾಕಷ್ಟು ಅಂಕಿ- ಅಂಶಗಳನ್ನು ತೋರಿಸಲಾಗುತ್ತಿದೆ. ಇನ್ನು ಕಳೆದ ಬಜೆಟ್‌ನಲ್ಲಿ ಸರ್ಕಾರವು ಕೃಷಿ ಸಾಲದ ಗುರಿಯನ್ನು 16.5 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಇಷ್ಟು ಮೊತ್ತವು ಬಜೆಟ್‌ನ ಭಾಗವಾಗಿಲ್ಲ ಅಮದಾಗ ಅದನ್ನು ಏಕೆ ಹೊಗಳುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸರ್ಕಾರದ ಪ್ರಯತ್ನಗಳ ಹೊರತಾಗಿಯೂ ಸಣ್ಣ ರೈತರು ಸರ್ಕಾರಿ ಸಂಸ್ಥೆಗಳಿಂದ ಸಾಲ ಪಡೆಯುವುದು ಸುಲಭದ ಕೆಲಸವಲ್ಲ.
ಕಿಸಾನ್ ಕ್ರೆಡಿಟ್ ಕಾರ್ಡ್
ಆದರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಕೆಸಿಸಿ, ಅದು ಹೇಗೋ ಮಾಡಿದ ನಂತರ ಸಾಲ ಪಡೆಯುವ ಮಾರ್ಗ ಸುಲಭವಾಗುತ್ತದೆ. ದೇಶದಲ್ಲಿ 2.5 ಕೋಟಿ ರೈತರು ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಇದರ ಅಡಿಯಲ್ಲಿ ಸಾಲದ ಮೊತ್ತವು ಮಾರ್ಚ್ 2019ರಲ್ಲಿ 1.6 ಲಕ್ಷ ಕೋಟಿ ರೂಪಾಯಿಗಳಿಂದ 7.09 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂಬ ಅಂಶದಿಂದ ಇದರ ಉಪಯುಕ್ತತೆಯನ್ನು ಅಳೆಯಬಹುದು.
ಅದೊಂದು ಕನಸು ಮಾತ್ರ
ಸುಧೀರ್‌ಗೆ ತನ್ನ ಮಗ ಕೃಷಿ ಮಾಡುವುದು ಇಷ್ಟವಿಲ್ಲ. ಆದರೆ ಆ ಹುಡುಗ ಓದುವುದಾದರೂ ಹೇಗೆ? ತಿಂಗಳಲ್ಲಿ ಏನೂ ಉಳಿದಿಲ್ಲದಿದ್ದರೆ ಆನ್‌ಲೈನ್ ಅಧ್ಯಯನದ ವೆಚ್ಚವನ್ನು ಎಲ್ಲಿಂದ ಭರಿಸಬೇಕು. ನಮ್ಮ ದುಡಿಮೆ ನೋಡಿ, ದಾಖಲೆ ಇಳುವರಿ ಮಾಡುತ್ತಿದ್ದರೂ ಬಡತನ ದೂರವಾಗುತ್ತಿಲ್ಲ ಎನ್ನುತ್ತಾರೆ. ಹೊರಗಿನ ಕೆಲಸವೂ ಈಗ ಸಿಗುತ್ತಿಲ್ಲ. ತನ್ನ ತಿಂಗಳ ಆದಾಯ 15,000 ರುಪಾಯಿ ಆಗುವಂತೆ ಸರ್ಕಾರ ಏನಾದರೂ ಮಾಡಬೇಕು ಎಂಬುದು ಸುಧೀರ್ ಆಶಯ. ಇದರಿಂದ ಒಂದೋ ವೆಚ್ಚ ಕಡಿಮೆಯಾಗುತ್ತದೆ ಅಥವಾ ಬೆಳೆಯ ಬೆಲೆ ಸರಿಯಾಗಿ ಬರಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: Agriculture Loan: 2022ರ ಬಜೆಟ್‌ನಲ್ಲಿ ರೈತರಿಗೆ ನೀಡುವ ಕೃಷಿ ಸಾಲದ ಪ್ರಮಾಣ 18 ಲಕ್ಷ ಕೋಟಿ ರೂ.ಗೆ ಏರಿಕೆ ಸಾಧ್ಯತೆ