ನೋಟು ನಿಷೇಧದ ಸುತ್ತಲಿನ ವಿಶ್ಲೇಷಣೆಗಳನ್ನು ನೋಡಿದರೆ ನನಗೆ ಆಶ್ಚರ್ಯ ಉಂಟಾಗುತ್ತದೆ. ಏಕೆಂದರೆ, ಇವುಗಳಲ್ಲಿ ಬಹಳಷ್ಟು ವಿಶ್ಲೇಷಣೆಗಳು ಪತ್ರಿಕೆಗಳ ಲೇಖನಗಳ ಮೂಲಕ ಮಾಡಲಾಗುತ್ತವೆ. ಕೆಲವು ಗಟ್ಟಿಯಾದ, ಶೈಕ್ಷಣಿಕವಾಗಿ ಉತ್ತಮ ಮತ್ತು ವಸ್ತುನಿಷ್ಠ ಮೌಲ್ಯಮಾಪನವನ್ನು ನೀತಿ ನಿರೂಪಣೆಯ ಮಧ್ಯಸ್ಥಿಕೆ ಎಂದು ಮಾಡುವ ಬದಲಾಗಿ ಈ ರೀತಿ ಲೇಖನಗಳ ಮೂಲಕವಾಗಿ ಮಾಡಲಾಗುತ್ತದೆ. ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಹಾರ್ವರ್ಡ್‌ನಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಅಧ್ಯಯನದ ಮೂಲಕ ಇಂತಹ ಪ್ರಯೋಗವನ್ನು ಮಾಡಿದ್ದಾರೆ. ಅವರ ಕೆಲಸದಿಂದ ಆದ ಪ್ರಮುಖವಾದ ಆವಿಷ್ಕಾರ ಅಂದರೆ, ನೋಟು ನಿಷೇಧದ ನೋವು ಅಲ್ಪಕಾಲಿಕವಾಗಿತ್ತು (ನಿರೀಕ್ಷಿಸಿದಂತೆ). ಆದ್ದರಿಂದ ಆರ್ಥಿಕತೆಯ ಮೇಲೆ ಅದರ ಪರಿಣಾಮವು ಎರಡು ತ್ರೈಮಾಸಿಕಗಳನ್ನು ಮೀರಿ ಮುಂದುವರಿದಿದೆ ಎಂದು ಸೂಚಿಸಲು ಯಾವುದೇ ವಿಶ್ವಾಸಾರ್ಹ ಸೂಚಕವನ್ನು ಆಧರಿಸಿ ಪುರಾವೆಗಳಿವೆಯೇ ಎಂದು ಒಬ್ಬರು ಆಶ್ಚರ್ಯಪಡುತ್ತಾರೆ.
ನೋಟು ನಿಷೇಧವು ಕೆಲವು ಬೆಲೆ ತೆರುವುದರೊಂದಿಗೆ ಬಂದಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಅದೇ ಸಮಯದಲ್ಲಿ ಇದು ದೀರ್ಘಾವಧಿಯ ಸ್ವರೂಪದ ಭರವಸೆಯ ಪ್ರಯೋಜನಗಳ ಸರಣಿಯೊಂದಿಗೆ ಬಂದಿತು. ದುರದೃಷ್ಟವಶಾತ್, ನೋಟು ನಿಷೇಧದ ಪ್ರಯೋಜನಗಳು ಸಾಕಷ್ಟು ಉಲ್ಲೇಖವನ್ನು ಪಡೆಯುವುದೇ ಇಲ್ಲ. ಅದಕ್ಕಾಗಿಯೇ ಅವುಗಳು ಈ ಲೇಖನದ ವಿಷಯವಾಗಿದೆ. ದೇಶದಾದ್ಯಂತ ನಗದು ರಹಿತ ಪಾವತಿ ವಿಧಾನಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದು ಕಣ್ಣಿಗೆ ಕಾಣಿಸುವ ಒಂದು ಪ್ರಯೋಜನವಾಗಿದೆ. ಡಿಜಿಟಲ್ ಪಾವತಿಗೆ ಹೋಲಿಕೆ ಮಾಡಿದರೆ ನಗದು ನಿರ್ವಹಣೆಯು ದುಬಾರಿ ವ್ಯವಹಾರವಾಗಿದೆ. ಆದ್ದರಿಂದ ಡಿಜಿಟಲ್ ಪಾವತಿಗಳು ದೇಶಾದ್ಯಂತ ಪಾವತಿಗೆ ಆದ್ಯತೆಯ ವಿಧಾನವಾಗಿ ಮಾರ್ಪಟ್ಟಿರುವುದು ಆಶ್ಚರ್ಯ ಏನಲ್ಲ.
ನೋಟು ನಿಷೇಧದ ಪರಿಣಾಮ ದೀರ್ಘಾವಧಿಯಲ್ಲಿ ಕಾಣಿಸಲ್ಲ
ಇದು ಸಣ್ಣ ಮಾರಾಟಗಾರರು, ಟೀ-ಸ್ಟಾಲ್‌ಗಳು ಮತ್ತು ಗ್ರಾಮೀಣ ಪ್ರದೇಶಗಳನ್ನು ಸಹ ಒಳಗೊಂಡಿದೆ. ಹೀಗೆ ಡಿಜಿಟಲ್ ಪೇಮೆಂಟ್ ಹೆಚ್ಚಿದ ಸ್ವೀಕಾರದಿಂದಾಗಿ ಹೆಚ್ಚಿನ ಜನರು ಕ್ರಮೇಣ ಹಣಕಾಸಿನ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸಿರುದರಿಂದ ಪಾವತಿ ವಿಧಾನದ ಗಮನಾರ್ಹ ರೂಪಾಂತರವಾಗಿದೆ. ಹಣಕಾಸಿನ ಸೇರ್ಪಡೆಯ (Financial Inclusion) ಆಳವಾದ ರೂಪದಲ್ಲಿ ಎರಡನೇ ಕ್ರಮಾಂಕದ ಪರಿಣಾಮವನ್ನು ಹೊಂದಿರುತ್ತದೆ. ನಗದು-ಜಿಡಿಪಿ ಅಥವಾ ನಗದು ಮತ್ತು ವಿಶಾಲ ಹಣ ಪೂರೈಕೆ ಅನುಪಾತವು ನೋಟು ನಿಷೇಧದ ಪೂರ್ವದ ಮಟ್ಟಕ್ಕೆ ಮರಳಿದೆ. ಆದ್ದರಿಂದ ನೋಟು ನಿಷೇಧದ ಪರಿಣಾಮವು ದೀರ್ಘಾವಧಿಯಲ್ಲಿ ಗೋಚರಿಸುವುದಿಲ್ಲ ಎಂದು ಹಲವರು ಗಮನ ಸೆಳೆದಿದ್ದಾರೆ.
ಅಂತಹ ಕಲ್ಪನೆಯೊಂದಿಗೆ ಎರಡು ಸಮಸ್ಯೆಗಳಿವೆ – ಮೊದಲನೆಯದು ಜಿಡಿಪಿ ಸಂಕುಚಿತಗೊಂಡಾಗ ಕೊರೊನಾ ಕಾಣಿಸಿಕೊಂಡ ವರ್ಷದ ಜಿಡಿಪಿ ಅಂಕಿ-ಅಂಶಗಳನ್ನು ಬಳಸುತ್ತಿದೆ. ಇದರಿಂದಾಗಿ ಮೂಲ ಪರಿಣಾಮವು ಸ್ವಲ್ಪ ಮಟ್ಟಿಗೆ ಅನುಪಾತದಲ್ಲಿ ತೋರಿಸುತ್ತದೆ. ಎರಡನೆಯದು, ಮತ್ತು ಪ್ರಾಯಶಃ ಹೆಚ್ಚು ಮುಖ್ಯವಾಗಿ, ನಾವು ನಗದು-ಜಿಡಿಪಿ ಅನುಪಾತದ ಹೆಚ್ಚಳ ಅಥವಾ ನೋಟು ನಿಷೇಧದ ಅನುಪಸ್ಥಿತಿಯಲ್ಲಿ ಮತ್ತು ನೋಟು ನಿಷೇಧದ ನಂತರದ ಬೆಳವಣಿಗೆಯ ದರಗಳನ್ನು ವೀಕ್ಷಿಸಿದಾಗಲೂ ಅಂತರವನ್ನು ನೋಡುತ್ತಲೇ ಇರುತ್ತೇವೆ. ಕೊರೊನಾ ಸಾಂಕ್ರಾಮಿಕ ರೋಗವು ಡಿಜಿಟಲ್ ಪಾವತಿಗಳ ಹೆಚ್ಚಿನ ಸ್ವೀಕಾರಾರ್ಹತೆಯ ಕಡೆಗೆ ಬದಲಾವಣೆಯನ್ನು ವೇಗಗೊಳಿಸುತ್ತಿದೆ ಮತ್ತು ಆದ್ದರಿಂದ ಭಾರತದಲ್ಲಿ ಪಾವತಿ ಕಾರ್ಯವಿಧಾನಗಳ ಭವಿಷ್ಯವನ್ನು ನೋಡಲು ಕಾಯಬೇಕಿದೆ.
ಸುಧಾರಿತ ತೆರಿಗೆ ನಿಯಮಾವಳಿ
ಸುಧಾರಿತ ತೆರಿಗೆ ನಿಯಮಾವಳಿ ಮತ್ತು ತೆರಿಗೆ ಆದಾಯಗಳ ರೂಪದಲ್ಲಿ ಬರುವುದು ಮತ್ತೊಂದು ಪ್ರಯೋಜನವಾಗಿದೆ. ನೋಟು ನಿಷೇಧದ ನಂತರ ತೆರಿಗೆ ನಿಯಮಾವಳಿಗಳು ಬದಲಾವಣೆ ಆಗಿ, ಸಂಗ್ರಹವು ತಕ್ಷಣವೇ ಹೆಚ್ಚಾಯಿತು ಎಂದು ನಮಗೆ ತಿಳಿದಿದೆ. ಆದರೆ ಅದು ಮುಂದೆ ಹೋಗುವುದನ್ನು ಕಡಿಮೆ ಮಾಡಿದೆ. ಈಗ, IL&FS ಕುಸಿತದಿಂದ ಉಂಟಾದ 2018ರ ಬೆಳವಣಿಗೆಯ ಕುಸಿತದ ಫಲಿತಾಂಶವೂ ಕೆಲವು ಟ್ಯಾಪರಿಂಗ್ ಆಗಿದೆ. ಈ ಅವಧಿಯಲ್ಲಿ ಆರ್‌ಬಿಐನ ವಿತ್ತೀಯ ನೀತಿಯು ಅತಿಯಾಗಿ ಬಿಗಿಯಾಗಿತ್ತು ಮತ್ತು ಇದರಿಂದಾಗಿ ನಮ್ಮ ಬೆಳವಣಿಗೆಯ ನಿರೀಕ್ಷೆಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿದೆ. ನೋಟು ನಿಷೇಧದ ಪ್ರಭಾವವನ್ನು ಪ್ರತ್ಯೇಕಿಸುವುದು ಮತ್ತು ಬೆಳವಣಿಗೆಯ ನಿಧಾನಗತಿಯು ವ್ಯವಸ್ಥೆಯನ್ನು ಸ್ವಚ್ಛಗೊಳಿಸುವಲ್ಲಿ ಪಾತ್ರವನ್ನು ನೋಟು ನಿಷೇಧದ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಮುಖ್ಯವಾಗಿದೆ.
ನಮಗೆ ತಿಳಿದಿರುವ ಇನ್ನೊಂದು ಸಂಗತಿಯೆಂದರೆ, ಜನರು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಹಣವನ್ನು ಸಲ್ಲಿಸುವುದು ಈಗ ಅಗತ್ಯವಾಗಿದೆ. ಆದ್ದರಿಂದ ಸರ್ಕಾರವು ನಗದು ಮೂಲ ಯಾವುದು ಎಂದು ತಿಳಿಯದಿರುವ ಅನಾಮಧೇಯತೆ ತೆಗೆದುಹಾಕುವಲ್ಲಿ ಯಶಸ್ವಿಯಾಗಿದೆ. ತೆರಿಗೆ ವಂಚನೆಯ ಯಾವುದೇ ಪ್ರಯತ್ನಗಳನ್ನು ಮೌಲ್ಯಮಾಪನ ಮಾಡಲು ಮತ್ತು ತನಿಖೆ ಮಾಡಲು ಇದು ತೆರಿಗೆ ಅಧಿಕಾರಿಗಳಿಗೆ ಸಾಕಷ್ಟು ಪ್ರಮಾಣದ ಡೇಟಾವನ್ನು ಒದಗಿಸಿದೆ. ಮತ್ತೊಮ್ಮೆ, ಅನಾಮಧೇಯತೆ ತೆಗೆದುಹಾಕುವ ಪ್ರಯೋಜನಗಳ ಲಾಭವು ತೆರಿಗೆ ತಪ್ಪಿಸುವ ಪ್ರಮಾಣವನ್ನು ಕಂಡುಹಿಡಿಯುವ ತೆರಿಗೆ ಅಧಿಕಾರಿಗಳ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ – ಆದರೂ ಇದು ಕಿರುಕುಳಕ್ಕೆ ಕಾರಣವಾಗಬಹುದು. ಏಕೆಂದರೆ ಇದು ಬಹುಶಃ ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಪ್ರಜ್ಞಾಪೂರ್ವಕ ನೀತಿ ನಿರ್ಧಾರದಂತೆ ತಪ್ಪಿಸಲಾಗಿದೆ.
ಆದರೆ, ಲೆಕ್ಕಕ್ಕೆ ಸಿಗದ ಹಣದ ಹಿಂದಿನ ಹೋಲ್ಡಿಂಗ್ಗಳಿಂದ ತೆರಿಗೆ ಲಾಭವನ್ನು ನಾವು ಅರಿತುಕೊಂಡಿದ್ದೇವೆಯೇ ಎಂಬುದನ್ನು ಲೆಕ್ಕಿಸದೆ ನೋಟು ನಿಷೇಧವು ವ್ಯವಸ್ಥೆಗೆ ಒಂದು ದೊಡ್ಡ ಆಘಾತವಾಗಿದೆ ಮತ್ತು ಹೆಚ್ಚಿನ ಪ್ರಮಾಣದ ಲೆಕ್ಕವಿಲ್ಲದ ಹಣವನ್ನು ಹೊಂದಿರುವ ಜನರ ವಿರುದ್ಧ ಪ್ರಮುಖ ತಡೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನಾವು ಗುರುತಿಸಬೇಕು. ಇದು ಅನಿರೀಕ್ಷಿತ ಆಘಾತವಾಗಿದ್ದು, ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರವು ಎಷ್ಟು ನೀತಿಯನ್ನು ಅಳವಡಿಕೊಳ್ಳಲು ಬಯಸುತ್ತದೆ ಎಂಬುದನ್ನು ಅನೇಕ ರೀತಿಯಲ್ಲಿ ವಿವರಿಸುತ್ತದೆ. ಔಪಚಾರಿಕತೆಯ ವೇಗದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ವರದಿಯು ಈ ಅಂಶವನ್ನು ಮತ್ತಷ್ಟು ದೃಢೀಕರಿಸುತ್ತದೆ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಅನೌಪಚಾರಿಕ ಆರ್ಥಿಕತೆಯಿಂದ ಔಪಚಾರಿಕ ಆರ್ಥಿಕತೆಗೆ ದಾಖಲೆಯ ಪರಿವರ್ತನೆಯು ಆರ್ಥಿಕತೆಗೆ ಉತ್ತಮವಾಗಿದೆ. ಈ ಮೂಲಕ, ಈ ಅನೌಪಚಾರಿಕ ಕಂಪೆನಿಗಳು ಈಗ ಅಗ್ಗದ ದರದಲ್ಲಿ ಔಪಚಾರಿಕ ಹಣಕಾಸು ವಲಯವನ್ನು ಪ್ರವೇಶಿಸಬಹುದು ಮತ್ತು ಮುಂಬರುವ ವರ್ಷಗಳಲ್ಲಿ ತಮ್ಮ ಬೆಳವಣಿಗೆಯಲ್ಲಿ ಮತ್ತಷ್ಟು ಹೂಡಿಕೆ ಮಾಡಬಹುದು. ಇದರಿಂದಾಗಿ ಒಟ್ಟಾರೆ ಆರ್ಥಿಕತೆಗೆ ಹೆಚ್ಚಿನ ಮೌಲ್ಯವನ್ನು ಸೇರಿಸಬಹುದು.
ಲಾಭಗಳು ದೀರ್ಘಾವಧಿ ಹಾಗೂ ಕಟ್ಟಬೇಕಾದ ಬೆಲೆ ಅಲ್ಪಾವಧಿಯದ್ದು
ಅನೇಕರು ಕೇವಲ ನೋಟು ನಿಷೇಧದ ಋಣಾತ್ಮಕ ಪರಿಣಾಮಗಳ ಮೇಲೆ ಮಾತ್ರ ಗಮನಹರಿಸುತ್ತಿರುವಾಗ, ಲಾಭಗಳು ದೀರ್ಘಾವಧಿಯದ್ದಾಗಿದ್ದರೂ ಕಟ್ಟಬೇಕಾದ ಬೆಲೆ ಅಲ್ಪಾವಧಿಯ ಸ್ವರೂಪದ್ದಾಗಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಪ್ರಯೋಜನಗಳನ್ನು ಸಾಧಿಸಲು ನೋಟು ನಿಷೇಧವು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆಯೇ ಎಂಬುದು ನಮಗೆ ತಿಳಿದಿಲ್ಲ. ಆದರೆ ಧನಾತ್ಮಕವಾಗಿ ಇರಬಹುದಾದ ಯಾವುದೇ ರಚನಾತ್ಮಕ ರೂಪಾಂತರವನ್ನು ನಿರ್ಲಕ್ಷಿಸಿ ಕಟ್ಟಬೇಕಾದ ಬೆಲೆಗಳ ಮೇಲೆ ಕೇಂದ್ರೀಕರಿಸುವುದು ಮೌಲ್ಯಮಾಪನ ಮಾಡುವ ಅನ್ಯಾಯದ ಕ್ರಮವಾಗಿದೆ. ಅಸ್ತಿತ್ವದಲ್ಲಿರುವ ವಿಧಾನಗಳನ್ನು ಗಮನಿಸಿದರೆ ಕಠಿಣವಾದ ಆರ್ಥಿಕ ವಿಧಾನದಲ್ಲಿ ಈ ಪರಿಣಾಮಗಳ ಅಂದಾಜು ಮತ್ತು ಎದುರಾಗುವ ಸಮಸ್ಯೆಯು ಕಷ್ಟಕರವಾಗಿದೆ.
ಆದರೂ ನಂತರದ ಅವಧಿಗಳಲ್ಲಿ ನಾವು ಪ್ರಯೋಜನಗಳ ವ್ಯಾಪ್ತಿಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ಪಡೆಯುತ್ತೇವೆ ಎಂದು ಒಬ್ಬರು ವಿಶ್ವಾಸ ಹೊಂದಿದ್ದಾರೆ ಎಂಬುದು ಈ ಕ್ರಮದಿಂದ ತಿಳಿದು ಬಂದಿದೆ. ಅಲ್ಲಿಯವರೆಗೆ, ಬಹುಶಃ ಅದೇ ನಿರೂಪಣೆಯ ಕಲ್ಪನೆಯೊಂದಿಗೆ ಆಗಾಗ ಪ್ರಕಟಿಸುವ ಓಪ್-ಎಡ್‌ಗಳನ್ನು ಅರ್ಥಶಾಸ್ತ್ರದ ಯಾವುದೇ ತಿಳಿವಳಿಕೆಯುಳ್ಳ ವ್ಯಾಖ್ಯಾನಕ್ಕಿಂತ ಹೆಚ್ಚಾಗಿ ನಿರೂಪಣೆ ತಂತ್ರದ ಮೇಲೆ ಕಟ್ಟಿರುವ ಪ್ರಯತ್ನ ಅಂತಂದುಕೊಂಡು ತಿರಸ್ಕರಿಸಬೇಕು.
(ಲೇಖಕರು: ಕರಣ್ ಭಾಸಿನ್
ನ್ಯೂಸ್ 9)