ನೈರೋಬಿ, ಸೆಪ್ಟೆಂಬರ್ 10: ಕೀನ್ಯಾದಲ್ಲಿ ಅದಾನಿ ಕಂಪನಿ ವಿರುದ್ಧ ಪ್ರತಿಭಟನೆಗಳು ಮುಂದುವರಿಯುತ್ತಿರುವ ಹೊತ್ತಲ್ಲಿ ಭಾರತದ ಕಂಪನಿಗೆ ನ್ಯಾಯಾಲಯ ಕೂಡ ಮುಳುವಾಗಿದೆ. ಕೀನ್ಯಾ ದೇಶದ ರಾಜಧಾನಿ ನೈರೋಬಿ ನಗರದ ಜೋಮೋ ಕೀನ್ಯಾಟ್ಟ ಇಂಟರ್ನ್ಯಾಷನಲ್ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್ನ ಸುಪರ್ದಿಗೆ ಒಪ್ಪಿಸುವ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಕೀನ್ಯಾದ ಅತಿದೊಡ್ಡ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಜೊತೆ ಅಲ್ಲಿನ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. 30 ವರ್ಷ ಕಾಲ ಲೀಸ್ಗೆ ನೀಡುವ ಪ್ರಸ್ತಾಪ ಇದೆ. ಈ 30 ವರ್ಷದಲ್ಲಿ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್ನ ಕಂಪನಿಯೇ ನಿರ್ವಹಣೆ ಮಾಡಲಿದೆ. ಏರ್ಪೋರ್ಟ್ ಅಭಿವೃದ್ಧಿಪಡಿಸುವುದು ಅದರ ಜವಾಬ್ದಾರಿ, ಹಾಗೆಯೇ, ಆದಾಯದಲ್ಲಿ ಪಾಲು ಪಡೆಯಬಹುದು.
ಇದನ್ನೂ ಓದಿ: ವಿಶ್ವದ ಮೊದಲ ಬಿಲಿಯನೇರ್ ಜಾನ್ ರಾಕೆಫೆಲ್ಲರ್; ಯಾರಾಗ್ತಾರೆ ಮೊದಲ ಟ್ರಿಲಿಯನೇರ್? ಮಸ್ಕ್ vs ಅದಾನಿ
ಆದರೆ, ಅದಾನಿ ಗ್ರೂಪ್ಗೆ ನೈರೋಬಿ ಏರ್ಪೋರ್ಟನ್ನು ಕೊಡುವ ಪ್ರಸ್ತಾಪಕ್ಕೆ ಅಲ್ಲಿನ ಜನರನ್ನು ಆಕ್ರೋಶಗೊಳಿಲಿದೆ. ಜನರ ಪ್ರತಿಭಟನೆಗಳು ಬುಗಿಲೆದ್ದಿವೆ. ಕೀನ್ಯಾ ಏವಿಯೇಶನ್ ಕಾರ್ಮಿಕರ ಒಕ್ಕೂಟವೂ ಕೂಡ ಇದನ್ನು ವಿರೋಧಿಸಿದೆ.
ವಿದೇಶೀ ಕಂಪನಿಗೆ ಏರ್ಪೋರ್ಟ್ ನಿರ್ವಹಣೆ ಒಪ್ಪಿಸುತ್ತಿರುವುದು ಒಂದು ಕಾರಣ. ಹಾಗೆಯೇ, ವಿದೇಶೀ ಕಂಪನಿಗೆ ಏರ್ಪೋರ್ಟ್ ನಿರ್ವಹಣೆ ಸಿಕ್ಕರೆ ಸ್ಥಳೀಯರಿಗೆ ಕೆಲಸ ಸಿಗುವುದಿಲ್ಲ. ವಿದೇಶೀ ಕೆಲಸಗಾರರನ್ನು ಕರೆತರಲಾಗುತ್ತದೆ ಎನ್ನುವುದು ಎರಡನೇ ಕಾರಣ.
ಇದನ್ನೂ ಓದಿ: ವಿದೇಶಗಳಿಗೆ ಹೋಗಲಿವೆ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರುಗಳು; ಬಯೋಫುಯಲ್, ಹೈಡ್ರೋಜನ್ ಕಾರುಗಳ ತಯಾರಿಕೆಗೂ ಆಲೋಚನೆ
ಏರ್ಪೋರ್ಟ್ ಅನ್ನು ಮಾರಾಟ ಮಾಡುತ್ತಿಲ್ಲ. ಪಬ್ಲಿಕ್ ಪ್ರೈವೇಟ್ ಪಾಲುದಾರಿಕೆಯಲ್ಲಿ ಏರ್ಪೋರ್ಟ್ ಅನ್ನು ಅಭಿವೃದ್ಧಿಪಡಿಸಬೇಕೆಂಬುದು ಉದ್ದೇಶ. ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಕಂಪನಿ ಜೊತೆಗಿನ ಡೀಲ್ ಇನ್ನೂ ಅಂತಿಮಗೊಂಡಿಲ್ಲ ಎಂದು ಕೀನ್ಯಾ ಸರ್ಕಾರ ಹೇಳುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ