ನವದೆಹಲಿ, ಡಿಸೆಂಬರ್ 10: ಸಿಬಿಎಸ್ಇ ಶಾಲೆಗಳಿಂದ (CBSE affiliated schools) ಸುಮಾರು ಎಂಟು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಐ ಕೋರ್ಸ್ಗಳಿಗೆ ಸೇರಿದ್ದಾರೆ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಕಲಿಯುವ ಹಪಾಹಪಿ ಶಾಲಾ ಮಟ್ಟದಲ್ಲೇ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಈ ಮಾಹಿತಿ ಹಂಚಿಕೊಂಡಿದ್ದಾರೆ. 2024-25ರ ಸಾಲಿನಲ್ಲಿ 4,538 ಶಾಲೆಗಳಿಂದ 9 ಮತ್ತು 10ನೇ ತರಗತಿ ಮಟ್ಟದಲ್ಲಿ ಓದುತ್ತಿರುವ 7,90,999 ವಿದ್ಯಾರ್ಥಿಗಳು ಎಐ ಕೋರ್ಸ್ಗಳಿಗೆ ಸೇರಿದ್ದಾರೆ. ಸಿಬಿಎಸ್ಇ 944 ಶಾಲೆಗಳಲ್ಲಿ ಹತ್ತು ಮತ್ತು ಹನ್ನೊಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 50,363 ವಿದ್ಯಾರ್ಥಿಗಳು ಎಐ ಕೋರ್ಸ್ ಕಲಿಯುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಕೋರ್ಸ್ಗಳನ್ನು ಸಿಬಿಎಸ್ಇ ಶಾಲೆಗಳಲ್ಲಿ 2019ರಿಂದ ನಡೆಸಲಾಗುತ್ತಿದೆ. ಆಗಿನಿಂದಲೂ ಇವು ಜನಪ್ರಿಯತೆ ಪಡೆದಿವೆ. ಎಂಟನೇ ಇಯತ್ತೆಯಲ್ಲಿ ಮೊದಲಿಗೆ 15 ಗಂಟೆ ಎಐ ಫೌಂಡೇಶನ್ ಮಾಡ್ಯೂಲ್ ಇದೆ. 9ರಿಂದ 12ನೇ ತರಗತಿಯವರಗೂ ಒಂದು ಎಐ ಸ್ಕಿಲ್ ಕಲಿಯುವ ಅವಕಾಶ ಇರುತ್ತದೆ.
ಇದನ್ನೂ ಓದಿ: ಹಣದುಬ್ಬರ ನವೆಂಬರ್ನಲ್ಲಿ 70 ಮೂಲಾಂಕಗಳಷ್ಟು ಇಳಿಕೆ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ ಅಂದಾಜು
‘ಕೃತಕ ಬುದ್ಧಿಮತ್ತೆಯನ್ನು ಅರಿತು, ನಮ್ಮ ಜೀವನದಲ್ಲಿ ಅದರ ಬಳಕೆ ಮಾಡುವ ಕುರಿತು ಅರಿವು ಹೊಂದುವುದು ಎಐ ಪಠ್ಯಕ್ರಮದ ಉದ್ದೇಶವಾಗಿದೆ’ ಎಂದು ಸಚಿವರು ಹೇಳಿದ್ದಾರೆ.
ಸಿಬಿಎಸ್ಇ ಪಠ್ಯಕ್ರಮ ಅಳವಡಿಸಿಕೊಂಡಿರುವ 30,373 ಶಾಲೆಗಳ ಪೈಕಿ 29,719 ಸಾಲೆಗಳಲ್ಲಿ ಸೂಕ್ತ ಐಟಿ ಇನ್ಫ್ರಾಸ್ಟ್ರಕ್ಚರ್ ಇದೆ. ಇದರಿಂದ ಎಐ ಹಾಗೂ ಇತರ ಐಟಿ ಆಧಾರಿತ ಕೋರ್ಸ್ಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಣದುಬ್ಬರ, ಆರ್ಥಿಕ ಬೆಳವಣಿಗೆ ಮಧ್ಯೆ ಸಮತೋಲನ ಸಾಧಿಸುವ ಕೆಲಸವಾಗಬೇಕು: ಹೊಸ ಆರ್ಬಿಐ ಗವರ್ನರ್ಗೆ ದಾಸ್ ಸಲಹೆಗಳು…
‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು 21ನೇ ಶತಮಾನಕ್ಕೆ ಬೇಕಾದ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಿರ್ಮಿಸಲು ಆದ್ಯತೆ ಕೊಡುತ್ತದೆ. ಮೆಷಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಮಹತ್ವವನ್ನು ಹೊಸ ನೀತಿಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ,’ ಎಂದು ಕೇಂದ್ರ ಸಚಿವ ಜಯಂತ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Tue, 10 December 24