
ಅಕ್ಷಯ ತೃತೀಯ ದಿನಕ್ಕೆ ಭಾರತದ ಸಂಪ್ರದಾಯದಲ್ಲಿ ಮಹತ್ವದ ಸ್ಥಾನ ಇದೆ. ಇದು ಸಮೃದ್ಧಿ, ಶುಭಾರಂಭಕ್ಕೆ ಸಂಕೇತವಾಗಿದೆ. ಹೊಸ ಕೆಲಸ, ಹೊಸ ಸಾಹಸ, ಹೊಸ ಜೀವನ, ಹೊಸ ಆಕಾಂಕ್ಷೆಗಳಿಗೆ ಮನಸ್ಸು ತೆರೆಯುವ ಸಂದರ್ಭ ಇದು. ಮದುವೆಯ ಸೀಸನ್ ಕೂಡ ಆರಂಭವಾಗುತ್ತದೆ. ಮದುವೆ ಎಂದರೆ ಯಾರದೇ ಬಾಳಿನಲ್ಲಿ ಬರುವ ಸುಮಧುರ ಮತ್ತು ಅತಿ ಮಹತ್ವದ ಕ್ಷಣ. ಮದುವೆಯಾಗುವ ಜೋಡಿ ಹಾಗೂ ಅವರ ಕುಟುಂಬಗಳಿಗೆ ಸಂಭ್ರಮದ ಕ್ಷಣ. ಮದುವೆಯಲ್ಲಿ ಆಭರಣಗಳಿಗೆ ಮಹತ್ವದ ಸ್ಥಾನ ಇದೆ. ಆದರೆ, ಇವತ್ತಿನ ದಿನದಲ್ಲಿ ಚಿನ್ನದ ಬೆಲೆಯನ್ನು ನೋಡಿದರೆ ಒಡವೆ ಖರೀದಿಸುವುದೇ ಬಹಳ ದೊಡ್ಡ ಸಾಹಸ ಎನಿಸಿಬಿಡಬಹುದು.
ಭಾರತದ ಸುಪ್ರಸಿದ್ಧ ಆಭರಣ ಬ್ರ್ಯಾಂಡ್ ಆದ Tanishq ಈ ಬಾರಿಯ ಅಕ್ಷಯ ತೃತೀಯಕ್ಕೆ ಸುವರ್ಣಾವಕಾಶ ನೀಡುತ್ತಿದೆ. ಚಿನ್ನಕ್ಕೆ ನೀವೆಂದೂ ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಮೌಲ್ಯ ತಂದುಕೊಡುತ್ತಿದೆ. ಬೆಸ್ಟ್ ಗೋಲ್ಡ್ ರೇಟ್ ಪ್ರೊಟೆಕ್ಷನ್ ಮೂಲಕ ಅತ್ಯುತ್ತಮ ಬೆಲೆಗೆ ಚಿನ್ನ ಪಡೆಯುವ ಅವಕಾಶ ನಿಮ್ಮದಾಗುವಂತೆ ಮಾಡುತ್ತಿದೆ.
ಪಾರಂಪರಿಕವಾಗಿ ಕೈಸೇರಿದ ಒಡವೆಯೋ, ಅಥವಾ ವಿವಿಧ ಸಂದರ್ಭದಲ್ಲಿ ಖರೀದಿಸಿದ ಸಣ್ಣ ಪುಟ್ಟ ಒಡವೆಯೋ ಇದ್ದು, ಅವನ್ನು ಬಳಸಲು ಆಗದೇ ಬಹಳಷ್ಟು ಜನರು ಸುಮ್ಮನೆ ಇಟ್ಟಿರಬಹುದು. ಇವುಗಳನ್ನು ಮಾರಲು ಹೋದರೆ, ಅಥವಾ ವಿನಿಮಯ ಮಾಡಲು ಹೋದರೆ ವೇಸ್ಟೇಜ್ ಇತ್ಯಾದಿ ಕಡಿತಗೊಂಡು ಮೌಲ್ಯ ಕಡಿಮೆ ಆಗುತ್ತದೆ. ಆದರೆ, Tanishqನ Rivaah ಈ ಅಕ್ಷಯ ತೃತೀಯಕ್ಕೆ ಭರ್ಜರಿ ಆಫರ್ ನೀಡಿದೆ. ನಿಮ್ಮ ಹಳೆಯ ಆಭರಣಗಳನ್ನು ತಂದುಕೊಟ್ಟರೆ ಅದರ ಪೂರ್ಣ ಮೌಲ್ಯವನ್ನು ಪರಿಗಣಿಸಿ, ಅದಕ್ಕೆ ಬದಲಿಯಾಗಿ ಬಹಳ ಸುಂದರವಾದ ಹೊಸ ವೈವಾಹಿಕ ಆಭರಣವನ್ನು ತಾನಿಷ್ಕ್ನಿಂದ ನೀವು ಪಡೆಯಬಹುದು.
ತಾನಿಷ್ಕ್ ಜ್ಯೂವೆಲರಿ
ಚಿನ್ನದ ಬೆಲೆ ಈಗ ಗಗನಕ್ಕೇರುತ್ತಿದೆ. ಮದುವೆಗೆ ಚಿನ್ನಾಭರಣ ಖರೀದಿಸಬೇಕೆನ್ನುವವರು ಹೈರಾಣಾಗಿ ಹೋಗಬಹುದು. ಈ ಅಕ್ಷಯ ತೃತೀಯಕ್ಕೆ ತಾನಿಷ್ಕ್ ತಂದಿರುವ ಅತ್ಯುತ್ತಮ ಗೋಲ್ಡ್ ರೇಟ್ ಪ್ರೊಟೆಕ್ಷನ್ ಸ್ಕೀಮ್ ಬಹಳ ಉಪಯುಕ್ತ ಎನಿಸಬಹುದು. ವಿವಿಧ ಕಾರಣಕ್ಕೆ ಬಳಕೆಯಾಗದೇ ನಿರುಪಯುಕ್ತವಾಗಿ ಲಾಕರ್ನಲ್ಲಿ ಇರುವ ಒಡವೆಗಳನ್ನು ನೀವು ತಾನಿಷ್ಕ್ ಸುಪರ್ದಿಗೆ ಒಪ್ಪಿಸಿದರೆ ಸಾಕು. ನಿಮಗೆ ಹೊಸ ಟ್ರೆಂಡ್ನ ವಿನ್ಯಾಸ ಇರುವ, ತಾನಿಷ್ಕ್ನಿಂದ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಒಡವೆಗಳನ್ನು ಪಡೆಯಬಹುದು. ಅದೂ ಕೈಯಿಂದ ಹೆಚ್ಚಿನ ಹಣ ನೀಡದೆಯೇ, ನೆಮ್ಮದಿಯಿಂದ, ಹೆಮ್ಮೆಯಿಂದ ಹೊಸ ಆಭರಣದೊಂದಿಗೆ ಮನೆಗೆ ಹೋಗಬಹುದು.
Tanishqನಲ್ಲಿ ದೊರೆಯುವ ಚಿನ್ನಾಭರಣಗಳು ಮಧುಮಗಳ ಸೌಂದರ್ಯವನ್ನು ಇಮ್ಮಡಿಗೊಳಿಸಬಲ್ಲುವು. ಅತ್ಯುತ್ತಮ ಕುಸುರಿಕಲೆಗಳಿಂದ ಕೂಡಿದ ಈ ಒಡವೆಗಳು ನಿಜಕ್ಕೂ ನಯನಮನೋಹರ ಎನಿಸುತ್ತವೆ. ಹಳೆಯ ನಿರುಪಯುಕ್ತ ಒಡವೆಗಳನ್ನು ಮರಳಿಸಿ ತಾನಿಷ್ಕ್ನ ಈ ಅಪೂರ್ವ ಆಭರಣಗಳನ್ನು ಪಡೆಯುವುದೆಂದರೆ ಹೊಸ ಜೀವನಕ್ಕೆ ಹೊಸ ಖುಷಿಯಿಂದ ಅಡಿ ಇಟ್ಟಂತೆಯೇ. ಈ ಅಕ್ಷಯ ತೃತೀಯದಲ್ಲಿ ನೀವು ತಾನಿಷ್ಕ್ ಕಡೆ ಹೆಜ್ಜೆ ಹಾಕುವುದು ಜಾಣ್ಮೆಯ ನಡೆಯಾಗಬಲ್ಲುದು.