
ದೀಪಾವಳಿ ಹಬ್ಬದ ಶಾಪಿಂಗ್‌ಗೆ ಆನ್‌ಲೈನ್ ಮಾರುಕಟ್ಟೆಯೂ ಸಜ್ಜಾಗಿದೆ. ದೇಶದ ಪ್ರಮುಖ ಇ-ಕಾಮರ್ಸ್ ತಾಣಗಳಾದ ಅಮೆಜಾನ್ (Amazon) ಮತ್ತು ಫ್ಲಿಪ್‌ಕಾರ್ಟ್‌ನ ಬಹುನಿರೀಕ್ಷಿತ ಫೆಸ್ಟಿವಲ್ ಸೇಲ್‌ಗಳು ಆರಂಭವಾಗಿವೆ. ಅಮೆಜಾನ್‌ನಲ್ಲಿ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಸೇಲ್ ಇಂದು ಅಕ್ಟೋಬರ್ 8ರ ಮಧ್ಯರಾತ್ರಿಯಿಂದ ಎಲ್ಲ ಗ್ರಾಹಕರಿಗೂ ತೆರೆದಿದ್ದರೆ, ಫ್ಲಿಪ್‌ಕಾರ್ಟ್‌ನ ‘ಬಿಗ್ ಬಿಲಿಯನ್ ಡೇಸ್’ ಸೇಲ್‌ಗೆ ಇಂದು ಆಯ್ದ ಗ್ರಾಹಕರಿಗೆ ಆರಂಭಿಕ ಪ್ರವೇಶ ನೀಡಲಾಗಿದೆ. ಸಾಮಾನ್ಯ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ ಸೇಲ್ ಅಕ್ಟೋಬರ್ 9ರಿಂದ ಆರಂಭವಾಗಲಿದೆ.
ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ, ಟ್ಯಾಬ್ಲೆಟ್, ಹೆಡ್‌ಫೋನ್, ಸ್ಮಾರ್ಟ್‌ವಾಚ್, ಗೃಹೋಪಯೋಗಿ ವಸ್ತುಗಳು, ಫ್ಯಾಷನ್ ಸೇರಿದಂತೆ ಹಲವು ವಿಭಾಗಗಳಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಹೊಸ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ವಸ್ತು ಖರೀದಿಸಲು ಕಾಯುತ್ತಿದ್ದವರಿಗೆ ಈ ಸೇಲ್‌ಗಳು ಪ್ರಮುಖವಾಗಿವೆ.
ಈ ಬಾರಿ ಎರಡೂ ತಾಣಗಳಲ್ಲಿ ಐಫೋನ್‌ಗಳ ಮೇಲಿನ ಆಫರ್‌ಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 17ರ ಬೆಲೆ 79,999ರಿಂದ ಆರಂಭವಾಗಲಿದೆ ಎಂದು ಸೇಲ್ ಪುಟದಲ್ಲಿ ತಿಳಿಸಲಾಗಿದೆ. ಅನ್ವಯವಾಗುವ ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಪ್ರಯೋಜನಗಳನ್ನು ಬಳಸಿದರೆ ಅಂತಿಮ ಬೆಲೆ ಇನ್ನಷ್ಟು ಕಡಿಮೆಯಾಗಬಹುದು.
ಅಮೆಜಾನ್‌ನಲ್ಲೂ ಐಫೋನ್ 16 ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಬೆಲೆ ಘೋಷಿಸಲಾಗಿದೆ. ಸ್ಯಾಮ್‌ಸಂಗ್, ಒನ್‌ಪ್ಲಸ್, ಶಿಯೋಮಿ, ಐಕ್ಯೂ ಸೇರಿದಂತೆ ಹಲವು ಕಂಪನಿಗಳ ಮೊಬೈಲ್‌ಗಳ ಮೇಲೂ ರಿಯಾಯಿತಿ ಸಿಗಲಿದೆ.
ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಏನೇನು ಮಾಡಬೇಕು? ಕಾರ್ಡ್ ಬ್ಲಾಕ್ ಮಾಡುವುದು ಸೇರಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳಿವು
ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಶೇ.80ರವರೆಗೆ ರಿಯಾಯಿತಿ ಇರುವುದಾಗಿ ತಿಳಿಸಿದೆ. ಫ್ಯಾಷನ್ ಮತ್ತು ಬ್ಯೂಟಿ ಉತ್ಪನ್ನಗಳ ಮೇಲೂ ಶೇ.80ರವರೆಗೆ, ಮನೆ ಮತ್ತು ಫರ್ನಿಚರ್ ವಿಭಾಗದಲ್ಲಿ ಶೇ.75ರವರೆಗೆ ರಿಯಾಯಿತಿ ಘೋಷಿಸಲಾಗಿದೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್‌ನಲ್ಲಿ ಕೇವಲ ಸಾಮಾನ್ಯ ರಿಯಾಯಿತಿಗಳಷ್ಟೇ ಅಲ್ಲದೆ, ಸೀಮಿತ ಅವಧಿಯ ವಿಶೇಷ ಡೀಲ್‌ಗಳನ್ನೂ ನೀಡುತ್ತಿದೆ. ‘ಟಿಕ್ ಟಾಕ್ ಡೀಲ್ಸ್’, ‘ಪ್ರೈಸ್ ಕ್ರ್ಯಾಶ್’, ‘ಡಬಲ್ ಡಿಸ್ಕೌಂಟ್’ ಮತ್ತು ‘ಬ್ರ್ಯಾಂಡ್ ಅವರ್ಸ್’ನಂತಹ ಆಫರ್‌ಗಳ ಮೂಲಕ ಆಯ್ದ ಉತ್ಪನ್ನಗಳ ಬೆಲೆಗಳನ್ನು ನಿರ್ದಿಷ್ಟ ಅವಧಿಗೆ ಮತ್ತಷ್ಟು ಕಡಿಮೆ ಮಾಡಲಾಗುತ್ತಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 17 ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4, ಮೋಟೊರೊಲಾ ಎಡ್ಜ್ 70 ಫ್ಯೂಷನ್ ಸೇರಿದಂತೆ ಹಲವು ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೂ ವಿಶೇಷ ಬೆಲೆಗಳನ್ನು ಘೋಷಿಸಲಾಗಿದೆ. ಆಯ್ದ ವಹಿವಾಟುಗಳಲ್ಲಿ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ಶೇ.10ರವರೆಗೆ ತಕ್ಷಣದ ರಿಯಾಯಿತಿ ಸಿಗಲಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ