AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಏನೇನು ಮಾಡಬೇಕು? ಕಾರ್ಡ್ ಬ್ಲಾಕ್ ಮಾಡುವುದು ಸೇರಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳಿವು

ಕ್ರೆಡಿಟ್ ಕಾರ್ಡ್ ಕಳೆದುಹೋದಾಗ ಮುಂದಿನ ಕ್ರಮ ಕೈಗೊಳ್ಳಲು ತಡ ಮಾಡುವಂತಿಲ್ಲ. ಕಾರ್ಡ್ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕಳುವಾದ ಕೂಡಲೇ ಕಾರ್ಡ್ ಅನ್ನು ಬ್ಲಾಕ್ ಮಾಡುವುದು ಸೇರಿದಂತೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸುವುದು ಇತ್ಯಾದಿ ಕೆಲ ಅಗತ್ಯ ಕ್ರಮಗಳ ಮಾಹಿತಿ ಈ ಲೇಖನದಲ್ಲಿ ಇದೆ.

ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಏನೇನು ಮಾಡಬೇಕು? ಕಾರ್ಡ್ ಬ್ಲಾಕ್ ಮಾಡುವುದು ಸೇರಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳಿವು
ಕ್ರೆಡಿಟ್ ಕಾರ್ಡ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 07, 2026 | 6:47 PM

Share

ಕ್ರೆಡಿಟ್ ಕಾರ್ಡ್ ಕಳೆದುಹೋಗುವುದು ಅಥವಾ ಕಳುವಾಗುವುದು ಪ್ರತಿಯೊಬ್ಬರಿಗೂ ಆತಂಕ ತರುವ ವಿಷಯ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅನಧಿಕೃತ ವಹಿವಾಟುಗಳು ನಡೆದು ಭಾರಿ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. ಒಟಿಪಿ ಅಗತ್ಯವಿಲ್ಲದೆಯೇ ಕ್ರೆಡಿಟ್ ಕಾರ್ಡ್ ಬಳಸುವ ಅವಕಾಶ ಇರುತ್ತದೆ. ಹೀಗಾಗಿ, ಕ್ರೆಡಿಟ್ ಕಾರ್ಡ್ ಕಳೆದುಹೋದಾಗ ಕೂಡಲೇ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ. ಕ್ರೆಡಿಟ್ ಕಾರ್ಡ್ ಕಳೆದುಹೋದ ತಕ್ಷಣವೇ ಅನಧಿಕೃತ ಬಳಕೆಯನ್ನು ತಡೆಯಲು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು ಈ ಕೆಳಕಂಡಂತಿವೆ:

ತಕ್ಷಣವೇ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿ

ಕಾರ್ಡ್ ಕಾಣೆಯಾಗಿದೆ ಎಂದು ತಿಳಿಯುತ್ತಿದ್ದಂತೆ ತಡಮಾಡದೇ ನಿಮ್ಮ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ (Customer Care) ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿಸಿ. ಅಥವಾ ಬ್ಯಾಂಕ್‌ನ ಮೊಬೈಲ್ ಬ್ಯಾಂಕಿಂಗ್ ಆಪ್ / ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ ‘Block Card’ ಅಥವಾ ‘Hotlist’ ಆಯ್ಕೆ ಬಳಸಿ ತಕ್ಷಣವೇ ಕಾರ್ಡ್ ನಿಷ್ಕ್ರಿಯಗೊಳಿಸಿ.

ಅಂತರರಾಷ್ಟ್ರೀಯ ಮತ್ತು ಆನ್‌ಲೈನ್ ವಹಿವಾಟುಗಳನ್ನು ಆಫ್ ಮಾಡಿ

ಕಾರ್ಡ್ ಬ್ಲಾಕ್ ಮಾಡುವ ಮೊದಲು ಅಥವಾ ಗ್ರಾಹಕ ಸೇವೆ ಸಂಪರ್ಕಿಸುವ ಮುನ್ನ, ಮೊಬೈಲ್ ಆಪ್ ಮೂಲಕ ‘Manage Card Controls’ ವಿಭಾಗಕ್ಕೆ ಹೋಗಿ ಆನ್‌ಲೈನ್ ವಹಿವಾಟು, ಎಟಿಎಂ ವಿತ್‌ಡ್ರಾವಲ್ ಹಾಗೂ ಅಂತರರಾಷ್ಟ್ರೀಯ ಪಾವತಿಗಳನ್ನು (International Transactions) ತಕ್ಷಣವೇ ಆಫ್ (Disable) ಮಾಡಿ. ಇದರಿಂದ ಒಟಿಪಿ (OTP) ಇಲ್ಲದೆ ನಡೆಯುವ ಪಾವತಿಗಳನ್ನು ತಡೆಯಬಹುದು.

ಇದನ್ನೂ ಓದಿ: ಸಣ್ಣ ಪ್ರಮಾಣದ ಯುಪಿಐ ಶುಲ್ಕದಿಂದ ದೊಡ್ಡ ಪರಿಣಾಮ ಆಗುವುದಿಲ್ಲ: ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಭಿಪ್ರಾಯ

ತಪ್ಪು ವಹಿವಾಟುಗಳನ್ನು ಪರಿಶೀಲಿಸಿ

ಕಾರ್ಡ್ ಕಳೆದುಹೋದ ಸಮಯದಿಂದ ಬ್ಲಾಕ್ ಮಾಡುವವರೆಗಿನ ಅವಧಿಯಲ್ಲಿ ಯಾವುದೇ ಅನಧಿಕೃತ ವಹಿವಾಟು ನಡೆದಿದೆಯೇ ಎಂದು SMS ಹಾಗೂ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿ. ಒಂದು ವೇಳೆ ಅಕ್ರಮ ವಹಿವಾಟು ನಡೆದಿದ್ದರೆ, ತಕ್ಷಣ ಬ್ಯಾಂಕ್‌ಗೆ ‘Zero Liability’ ನಿಯಮದಡಿ ಅಧಿಕೃತವಾಗಿ ದೂರು ನೀಡಿ.

ಪೋಲೀಸ್ ದೂರು ದಾಖಲಿಸಿ

ಕಾರ್ಡ್ ಕಳುವಾಗಿದ್ದರೆ ಅಥವಾ ದುರುಪಯೋಗವಾಗುವ ಶಂಕೆಯಿದ್ದರೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್ (FIR) ಅಥವಾ ಇ-ದೂರು (e-Lost Report) ದಾಖಲಿಸಿ. ಭವಿಷ್ಯದಲ್ಲಿ ಉಂಟಾಗಬಹುದಾದ ಕಾನೂನು ತೊಡಕುಗಳಿಂದ ಬಚಾವಾಗಲು ಹಾಗೂ ಬ್ಯಾಂಕ್ ಕ್ಲೈಮ್ ಸಲ್ಲಿಸಲು ಈ ಪೋಲೀಸ್ ದೂರಿನ ಪ್ರತಿ ಅತ್ಯಗತ್ಯ.

ಬದಲಿ ಕಾರ್ಡ್‌ ಪಡೆಯಿರಿ

ಹಳೆಯ ಕಾರ್ಡ್ ಬ್ಲಾಕ್ ಮಾಡಿದ ನಂತರ ಬ್ಯಾಂಕ್‌ಗೆ ಹೊಸ ‘ರಿಪ್ಲೇಸ್‌ಮೆಂಟ್ ಕಾರ್ಡ್’ (Replacement Card) ನೀಡುವಂತೆ ಕೋರಿ. ಹೊಸ ಕಾರ್ಡ್ ಸಿಕ್ಕ ನಂತರ, ಹಳೆಯ ಕಾರ್ಡ್‌ಗೆ ಲಿಂಕ್ ಆಗಿದ್ದ ಸಬ್‌ಸ್ಕ್ರಿಪ್ಷನ್‌ಗಳು, ಬಿಲ್ ಪಾವತಿಗಳು ಮತ್ತು ಆಟೋ-ಡೆಬಿಟ್ (Auto-debit/ECS) ಮಾಹಿತಿಗಳನ್ನು ಅಪ್​ಡೇಟ್ ಮಾಡಿ.

ಇದನ್ನೂ ಓದಿ: ಆರ್​ಬಿಐ ದರ ಹೆಚ್ಚಳದ ಬಳಿಕ ಫಿಕ್ಸೆಡ್ ಡೆಪಾಸಿಟ್ ದರ ಪರಿಷ್ಕರಣೆಯ ನಿರೀಕ್ಷೆ; ಠೇವಣಿ ದರ ಹೆಚ್ಚಿದರೆ ಎಷ್ಟು ಲಾಭ? ಇಲ್ಲಿದೆ ಡೀಟೇಲ್ಸ್

ಈ ವಿಷಯಗಳು ಸದಾ ದಾಖಲಾಗಿರಲಿ…

ನಿಮ್ಮ ಮೊಬೈಲ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳು ಕಳೆದುಹೋದರೆ ಏನು ಮಾಡಬೇಕು, ಯಾವ ನಂಬರ್​ಗಳನ್ನು ಸಂಪರ್ಕಿಸಬೇಕು, ಲಾಗಿನ್ ವಿವರ ಇತ್ಯಾದಿಯನ್ನು ಭೌತಿಕವಾಗಿ ಬ್ಯಾಕಪ್ ರೀತಿ ದಾಖಲಿಸಬೇಕು. ಇಲ್ಲದಿದ್ದರೆ, ಕಳುವಾದ ತಕ್ಷಣವೇ ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ