Anand Mahindra: ಆ ಒಂದು ಕಾರು ಇಲ್ಲದೇ ಹೋಗಿದ್ದರೆ ನಾನಿಷ್ಟರಲ್ಲಿ ಕಂಪನಿ ಬಿಟ್ಟುಹೋಗಬೇಕಿತ್ತು: ಆನಂದ್ ಮಹೀಂದ್ರ

|

Updated on: Jul 02, 2023 | 6:16 PM

Story of Mahindra Scorpio: 2002ರಲ್ಲಿ ಬಿಡುಗಡೆ ಆಗಿದ್ದ ಸ್ಕಾರ್ಪಿಯೋ ಕಾರು ಭರ್ಜರಿ ಯಶಸ್ಸು ಕಾಣದೇ ಹೋಗಿದ್ದರೆ ಮಹೀಂದ್ರ ಕಂಪನಿಯ ಬೋರ್ಡ್ ತನ್ನನ್ನು ಹೊರಗೆ ಓಡಿಸುತ್ತಿತ್ತು ಎಂದು ಛೇರ್ಮನ್ ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ.

Anand Mahindra: ಆ ಒಂದು ಕಾರು ಇಲ್ಲದೇ ಹೋಗಿದ್ದರೆ ನಾನಿಷ್ಟರಲ್ಲಿ ಕಂಪನಿ ಬಿಟ್ಟುಹೋಗಬೇಕಿತ್ತು: ಆನಂದ್ ಮಹೀಂದ್ರ
ಆನಂದ್ ಮಹೀಂದ್ರ
Follow us on

ಮಹೀಂದ್ರ ಹೆಸರು ಕೇಳದ ಭಾರತೀಯರ ಸಂಖ್ಯೆ ಕಡಿಮೆ. ಆಟೊಮೊಬೈಲ್ ಕ್ಷೇತ್ರದ ಪ್ರಮುಖ ಕಂಪನಿಗಳಲ್ಲಿ ಮಹೀಂದ್ರ ಒಂದು. ಮಹೀಂದ್ರ ಗ್ರೂಪ್ (Mahindra Group) ಭಾರತದ 10 ಅಗ್ರಮಾನ್ಯ ಸಂಸ್ಥೆಗಳಲ್ಲೂ ಒಂದು. ಆಟೊಮೊಬೈಲ್ ಜೊತೆಗೆ ಹಣಕಾಸು, ರಕ್ಷಣೆ, ವಿದ್ಯುತ್ ಉತ್ಪಾದನೆ, ಕೃಷಿ ಉಪಕರಣ, ಐಟಿ, ರಿಯಲ್ ಎಸ್ಟೇಟ್, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಮಹೀಂದ್ರ ಗ್ರೂಪ್ ಅಸ್ತಿತ್ವ ಹೊಂದಿದೆ. 100ಕ್ಕೂ ಹೆಚ್ಚು ದೇಶಗಳಲ್ಲಿ ಇದರ ಕಾರ್ಯಾಚರಣೆಗಳಿವೆ.

ಮಹೀಂದ್ರ ಕಂಪನಿಯ ಇತಿಹಾಸ 1945ರಲ್ಲಿ ಆರಂಭವಾಗುತ್ತದೆ. ಮಹೀಂದ್ರ ಗ್ರೂಪ್​ನ ಈಗಿನ ಛೇರ್ಮನ್ ಆನಂದ್ ಮಹೀಂದ್ರ (Anand Mahindra) ಮೂರನೇ ತಲೆಮಾರಿನವರು. ಮೂಲ ಕಂಪನಿಯ ಸಂಸ್ಥಾಪಕರಾದ ಜೆ.ಸಿ. ಮಹೀಂದ್ರ ಮತ್ತು ಕೆ.ಸಿ. ಮಹೀಂದ್ರ ಅವರ ಮೊಮ್ಮಗ ಆನಂದ್ ಮಹೀಂದ್ರ. ತಾವು ಒಂದು ಸಮಯದಲ್ಲಿ ಸಂಸ್ಥೆ ತೊರೆಯಬೇಕಾದ ಸಂಭವನೀಯತೆ ಇದ್ದ ಪರಿಸ್ಥಿತಿಯ ಬಗ್ಗೆ ಆನಂದ್ ಮಹೀಂದ್ರ ಜುಲೈ 1ರಂದು ಮಾತನಾಡಿದ್ದಾರೆ. ಮಹೀಂದ್ರದ ಅತ್ಯಂತ ಜನಪ್ರಿಯ ಕಾರ್ ಆದ ಸ್ಕಾರ್ಪಿಯೋ ಯಶಸ್ಸು ಕಾಣದೇ ಹೋಗಿದ್ದರೆ ತಮ್ಮನ್ನು ಮಹೀಂದ್ರ ಗ್ರೂಪ್ ಮಂಡಳಿ ಉಚ್ಛಾಟಿಸುತ್ತಿತ್ತು. ತಮ್ಮ ವೃತ್ತಿಗೆ ಆಧಾರ ಕೊಟ್ಟಿದ್ದೇ ಸ್ಕಾರ್ಪಿಯೋ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿApple Market Cap: ಆ್ಯಪಲ್, 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಪಡೆದ ವಿಶ್ವದ ಮೊದಲ ಕಂಪನಿ

ಟ್ರಾಕ್ಟರ್ ಉತ್ಪಾದನೆ ಕ್ಷೇತ್ರದಲ್ಲಿ ಗಟ್ಟಿಯಾಗಿರುವ ಮಹೀಂದ್ರ ಸಂಸ್ಥೆ ಕಾರಿನ ವಿಚಾರದಲ್ಲಿ ಯಶಸ್ಸು ಗಳಿಸಿದ್ದು ಅಷ್ಟಕಷ್ಟೇ. 2002ರಲ್ಲಿ ಮಹೀದ್ರ ಸ್ಕಾರ್ಪಿಯೋ ಬಿಡುಗಡೆ ಆದಾಗ ಯಾರೂ ಕೂಡ ಅದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಕಾರಿನ ಡಿಸೈನ್ ಮತ್ತು ಎಂಜಿನಿಯರಿಂಗ್​ನಲ್ಲಿ ಪಕ್ಕಾ ಭಾರತೀಯತನ ಇದ್ದ ಸ್ಕಾರ್ಪಿಯೋ ಸೂಪರ್ ಹಿಟ್ ಆಯಿತು. ಆಟೊಕಾರ್ ಮ್ಯಾಗಝಿನ್​ನ ಸಂಪಾದಕ ಹರ್ಮಾಜ್ ಸೊರಾಬ್​ಜಿ ಅವರು ಈ ಕಾರಿನ ಬಗ್ಗೆ ಟ್ವೀಟ್ ಮಾಡಿ, ಸ್ಕಾರ್ಪಿಯೋ ಜೊತೆ ಬೇರೆ ಯಾವ ಕಾರೂ ನೇರ ಪೈಪೋಟಿ ಮಾಡಲು ಸಾಧ್ಯವಿಲ್ಲ ಎಂದು ಗುರುವಾರ (ಜೂನ್ 29) ಹೊಗಳಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರ, ಸ್ಕಾರ್ಪಿಯೋ ಕಾರು ಯಶಸ್ಸು ಕಾಣದೇ ಹೋಗಿದ್ದರೆ ಕಂಪನಿಯ ಬೋರ್ಡ್ ತನ್ನನ್ನು ಉಚ್ಛಾಟಿಸುತ್ತಿತ್ತು ಎಂದು ವಿವರ ನೀಡಿದ್ದಾರೆ.

ಇದನ್ನೂ ಓದಿGST Collection: ಜೂನ್ ತಿಂಗಳ ಜಿಎಸ್​​ಟಿ ಸಂಗ್ರಹದಲ್ಲಿ ಭರ್ಜರಿ ಹೆಚ್ಚಳ; ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚು

ಎಸ್​ಯುವಿ ಕಾರ್ ಆಗಿರುವ ಮಹೀಂದ್ರ ಸ್ಕಾರ್ಪಿಯೋ ಭಾರತದಲ್ಲಿ ಈಗಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಹಲವು ಬಾರಿ ಪರಿಷ್ಕರಣೆಗೊಂಡಿದ್ದರೂ ಅದರ ಮೂಲ ವಿನ್ಯಾಸ ಮತ್ತು ಎಂಜಿನಿಯರಿಂಗ್​ನ ಸೊಬಗು ಹಾಗೇ ಇದೆ. ಅದರ ಡಿಸೈನ್​ನಲ್ಲಿ ಸ್ವಂತಿಕೆ ಇದೆ. ಇದರ ಬೆಲೆ 13 ಲಕ್ಷ ರೂನಿಂದ 32 ಲಕ್ಷ ರೂವರೆಗೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Sun, 2 July 23