Apple Market Cap: ಆ್ಯಪಲ್, 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಪಡೆದ ವಿಶ್ವದ ಮೊದಲ ಕಂಪನಿ

First Company To Cross 3 Trillion Dollar Market Cap: ಆ್ಯಪಲ್ ಕಂಪನಿ ಷೇರುಸಂಪತ್ತು 3 ಟ್ರಿಲಿಯನ್ ಡಾಲರ್ ಮಟ್ಟ ದಾಟಿದೆ. ಈ ಮೈಲಿಗಲ್ಲು ಮುಟ್ಟಿದ ಮೊದಲ ಕಂಪನಿ ಆ್ಯಪಲ್. ವಿಶ್ವದ 120ಕ್ಕೂ ಹೆಚ್ಚು ದೇಶಗಳ ಎಲ್ಲಾ ಜಿಡಿಪಿ ಒಟ್ಟುಗೂಡಿಸಿದರೂ ಆ್ಯಪಲ್ ಷೇರುಸಂಪತ್ತಿಗೆ ಸಮವಾಗಲಾರದು.

Apple Market Cap: ಆ್ಯಪಲ್, 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಪಡೆದ ವಿಶ್ವದ ಮೊದಲ ಕಂಪನಿ
ಆ್ಯಪಲ್
Follow us
|

Updated on: Jul 02, 2023 | 10:49 AM

ನವದೆಹಲಿ: ಐಫೋನ್ ತಯಾರಕ ಸಂಸ್ಥೆ ಆ್ಯಪಲ್ ವಿಶ್ವದಲ್ಲೆ ಅತಿಹೆಚ್ಚು ಷೇರುಸಂಪತ್ತು (Market Capitalization) ಹೊಂದಿರುವ ಕಂಪನಿ. ಮೊನ್ನೆ (ಜೂನ್ 30) ಅದರ ಷೇರುಸಂಪತ್ತು 3.04 ಟ್ರಿಲಿಯನ್ ಡಾಲರ್ (ಸುಮಾರು 249.57 ಲಕ್ಷಕೋಟಿ ರೂ) ಮುಟ್ಟಿತು. 3 ಟ್ರಿಲಿಯನ್ ಡಾಲರ್ ಷೇರುಸಂಪತ್ತಿನ ಮೈಲಿಗಲ್ಲು ಮುಟ್ಟಿದ ಮೊದಲ ಕಂಪನಿ ಆ್ಯಪಲ್. ವಿಶ್ವದ ಯಾವುದೇ ಷೇರುಮಾರುಕಟ್ಟೆಯಲ್ಲೂ ಯಾವುದೇ ಕಂಪನಿ ಈವರೆಗೂ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತಿನ ಮಟ್ಟಕ್ಕೆ ಏರಿದ್ದಿಲ್ಲ. ಅಮೆರಿಕದ ಎಸ್ ಅಂಡ್ ಪಿ 500 ಸೂಚ್ಯಂಕ ಜನವರಿಯಿಂದ ಜೂನ್​ವರೆಗೆ ಶೇ. 16ರಷ್ಟು ಹೆಚ್ಚಳ ಕಾಣುವುದರ ಹಿಂದೆ ಆ್ಯಪಲ್ ಕಂಪನಿಯ ಷೇರುವೃದ್ಧಿ ಪ್ರಮುಖ ಪಾತ್ರವಹಿಸಿದೆ.

ಕುತೂಹಲ ಎಂದರೆ 2022 ಜನವರಿಯಲ್ಲಿ ಆ್ಯಪಲ್ ಕಂಪನಿ ಎರಡು ಬಾರಿ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತಿನ ಗಡಿದಾಟಿತ್ತು. ಆದರೆ, ಅದು ಟ್ರೇಡಿಂಗ್ ಸಮಯದಲ್ಲಿ ಮಾತ್ರ. ದಿನಾಂತ್ಯದಲ್ಲಿ 3 ಟ್ರಿಲಿಯನ್ ಡಾಲರ್ ಮಟ್ಟ ಹಿಡಿದಿಡಲು ಸಾಧ್ಯವಾಗಿರಲಿಲ್ಲ. ಆದರೆ, ಜೂನ್ 30ರಂದು ಷೇರುಪೇಟೆ ವ್ಯವಹಾರ ಮುಗಿದ ಬಳಿಕ ಆ್ಯಪಲ್ ಕಂಪನಿಯ ಷೇರುಸಂಪತ್ತು 3.05 ಟ್ರಿಲಿಯನ್ ಡಾಲರ್ ದಾಟಿತ್ತು.

ಇದನ್ನೂ ಓದಿGST Collection: ಜೂನ್ ತಿಂಗಳ ಜಿಎಸ್​​ಟಿ ಸಂಗ್ರಹದಲ್ಲಿ ಭರ್ಜರಿ ಹೆಚ್ಚಳ; ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚು

ಆ್ಯಪಲ್​ಗೆ ಚಿನ್ನದ ಮೊಟ್ಟೆಯಾಗಲಿರುವ ವಿಷನ್ ಪ್ರೋ

ಆ್ಯಪಲ್ ಕಂಪನಿಯ ಉತ್ಪನ್ನ ಎಂದರೆ ಮೊದಲು ಕಣ್ಮುಂದೆ ಬರುವುದು ಐಫೋನ್. ದಶಕಗಳ ಹಿಂದೆ ಐಫೋನ್ ಹೊಂದುವುದೆಂದರೆ ಅದು ಕಾರ್ ಪ್ರಿಯರಿಗೆ ಪೋರ್ಷೆ, ಲಂಬೋರ್ಗಿನಿಯಂತಹ ಐಷಾರಾಮಿ ಕಾರುಗಳಿದ್ದಂತೆ. ಐಫೋನ್ ಇಟ್ಟುಕೊಳ್ಳುವುದು ಜನರಿಗೆ ಪ್ರತಿಷ್ಠೆಯ ವಿಚಾರವಾಗಿತ್ತು. ಆದರೆ, ಅಷ್ಟರಮಟ್ಟಿಗೆ ಕ್ರೇಜ್ ಈಗ ಉಳಿದಿಲ್ಲ. ಎಲ್ಲರ ಮನೆಗಳನ್ನೂ ಐಫೋನ್ ತಲುಪುತ್ತಿದೆ.

ಈಗ ಆ್ಯಪಲ್ ಕಂಪನಿ ಕ್ರೇಜ್ ಹುಟ್ಟಿಸಿರುವುದು ವಿಷನ್ ಪ್ರೋ ಎಂಬ ಹೊಸ ಫೀಚರ್. ದೊಡ್ಡ ಕನ್ನಡಕದ ರೀತಿಯಲ್ಲಿರುವ ಈ ಉಪಕರಣವು ದೃಶ್ಯ ಶೋಧದ ಹೊಸ ಸಾಧ್ಯತೆಗಳನ್ನೇ ತೆರೆದಿಟ್ಟಿದೆ. ಇದು ಭವಿಷ್ಯದ ದಿನಗಳ ಸೂಪರ್ ಹಿಟ್ ಉತ್ಪನ್ನವೆಂದು ಪರಿಗಣಿಸಲಾಗಿದೆ. ಜೂನ್ ಮೊದಲ ವಾರದಂದು ಆ್ಯಪಲ್ ಕಂಪನಿ ವಿಷನ್ ಪ್ರೋ ಉತ್ಪನ್ನವನ್ನು ಪರಿಚಯಿಸಿತ್ತು. ಆಗಿನಿಂದಲೂ ಷೇರುಪೇಟೆಯಲ್ಲಿ ಆ್ಯಪಲ್ ಕಂಪನಿಯ ಷೇರಿಗೆ ಭರ್ಜರಿ ಡಿಮ್ಯಾಂಡ್ ಕುದುರಿದೆ.

ಇದನ್ನೂ ಓದಿSensex Points: ಸೆನ್ಸೆಕ್ಸ್ ಮೂರೇ ದಿನದಲ್ಲಿ 1,800 ಅಂಕಗಳ ಏರಿಕೆ; ಸೆನ್ಸೆಕ್ಸ್ ಪಾಯಿಂಟ್ ಹೇಗೆ ಲೆಕ್ಕಹಾಕಲಾಗುತ್ತೆ?

ಆ್ಯಪಲ್ ಕಂಪನಿ ಹೊಂದಿರುವ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಸಾಮಾನ್ಯ ಅಲ್ಲ ಎಂಬುದು ಗೊತ್ತಿರಲಿ. ಭಾರತದ ಜಿಡಿಪಿಗೆ ಇದು ಸಮ. ಜಗತ್ತಿನ ಕೆಳಗಿನ 120ಕ್ಕೂ ಹೆಚ್ಚು ದೇಶಗಳ ಎಲ್ಲಾ ಜಿಡಿಪಿಯನ್ನು ಒಟ್ಟುಗೂಡಿಸಿದರೂ ಆ್ಯಪಲ್ ಕಂಪನಿಯ ಷೇರುಸಂಪತ್ತಿಗೆ ಸಮವಾಗಲಾರದು.

ಅತಿಹೆಚ್ಚು ಷೇರುಸಂಪತ್ತು ಇರುವ ಕಂಪನಿಗಳು

  1. ಆ್ಯಪಲ್: 3.05 ಟ್ರಿಲಿಯನ್ ಡಾಲರ್
  2. ಮೈಕ್ರೋಸಾಫ್ಟ್: 2.532 ಟ್ರಿಲಿಯನ್ ಡಾಲರ್
  3. ಸೌದಿ ಅರಾಮ್ಕೋ: 2.079 ಟ್ರಿಲಿಯನ್ ಡಾಲರ್
  4. ಆಲ್ಫಬೆಟ್ (ಗೂಗಲ್): 1.530 ಟ್ರಿಲಿಯನ್ ಡಾಲರ್
  5. ಅಮೇಜಾನ್: 1.337 ಟ್ರಿಲಿಯನ್ ಡಾಲರ್
  6. ಎನ್​ವಿಡಿಯಾ: 1.044 ಟ್ರಿಲಿಯನ್ ಡಾಲರ್
  7. ಟೆಸ್ಲಾ: 829.67 ಬಿಲಿಯನ್ ಡಾಲರ್
  8. ಬರ್ಕ್​ಶೈರ್ ಹಾಥವೇ: 745.01 ಬಿಲಿಯನ್ ಡಾಲರ್
  9. ಮೆಟಾ ಪ್ಲಾಟ್​ಫಾರ್ಮ್ಸ್: 735.45 ಬಿಲಿಯನ್ ಡಾಲರ್
  10. ಟಿಎಸ್​ಎಂಸಿ: 523.41 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು