Cancer Insurance: ನೀವು ಕ್ಯಾನ್ಸರ್ ಇನ್ಷೂರೆನ್ಸ್ ಪ್ಲಾನ್ ಪಡೆಯುವ ಮುನ್ನ ಈ 7 ಅಂಶಗಳು ಗಮನದಲ್ಲಿರಲಿ

Things To Remember Before Buying Health Insurance: ಕ್ಯಾನ್ಸರ್​ನಂಥ ಮಾರಕ ರೋಗಗಳಿಗೆಂದು ನಿರ್ದಿಷ್ಟವಾದ ಇನ್ಷೂರೆನ್ಸ್ ಸ್ಕೀಮ್​ಗಳುಂಟು. ಈ ವಿಮಾ ಯೋಜನೆಗಳನ್ನು ಪಡೆಯುವಾಗ ಕೆಲವೊಂದಿಷ್ಟು ಅಂಶಗಳ ಬಗ್ಗೆ ಗಮನ ವಹಿಸಬೇಕು. ಕಡಿಮೆ ಪ್ರೀಮಿಯಂ ಮಾತ್ರವೇ ನಿಮ್ಮ ಮಾನದಂಡವಾಗಕೂಡದು.

Cancer Insurance: ನೀವು ಕ್ಯಾನ್ಸರ್ ಇನ್ಷೂರೆನ್ಸ್ ಪ್ಲಾನ್ ಪಡೆಯುವ ಮುನ್ನ ಈ 7 ಅಂಶಗಳು ಗಮನದಲ್ಲಿರಲಿ
ಹೆಲ್ತ್ ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 02, 2023 | 2:23 PM

ಹೆಲ್ತ್ ಇನ್ಷೂರೆನ್ಸ್ ಅಥವಾ ಆರೋಗ್ಯ ವಿಮೆ (Health Insurance) ಈಗ ಬಹಳ ಅಗತ್ಯವಾಗಿರುವ ಹಣಕಾಸು ಯೋಜನೆ ಎನ್ನುವುದರಲ್ಲಿ ಅನುಮಾನವೇ ಬೇಡ. ಆಸ್ಪತ್ರೆಗೆ ಹೋಗೋದೇ ಇಲ್ಲ ಎನ್ನುವ ಜಗಜಟ್ಟಿಗಳೇ ಹಾಸಿಗೆ ಹಿಡಿದು ಮಲಗಿದ ಉದಾಹರಣೆಗಳು ಬಹಳ ಇವೆ. ಆಸ್ಪತ್ರೆಗೆ ನಾವು ಮಾಡುವ ವೆಚ್ಚ ಕೆಲವೊಮ್ಮೆ ನಮ್ಮನ್ನು ಆರ್ಥಿಕವಾಗಿ ಕಂಗೆಡಿಸಿಬಿಡುತ್ತವೆ. ನಮ್ಮ ಜೀವನ ಭದ್ರತೆಗೆಂದು ತೆಗೆದಿಸಿದ್ದ ಉಳಿತಾಯ ಹಣವೆಲ್ಲಾ ನೀರಲ್ಲಿ ಹೋಮ ಮಾಡಿದಂತೆ ಕರಗಿಹೋಗಬಹುದು. ಈ ಕಾರಣಕ್ಕೆ ಆರೋಗ್ಯ ವಿಮೆ ಇಂದಿನ ಅತ್ಯಗತ್ಯಗಳಲ್ಲಿ ಒಂದು. ಅದರಲ್ಲೂ ಕ್ಯಾನ್ಸರ್​ನಂಥ ಮಾರಕ ರೋಗಕ್ಕೆ ಆರೋಗ್ಯ ವಿಮೆ ಬಹಳ ಮುಖ್ಯ. ಕ್ಯಾನ್ಸರ್​ಗೆ ಆಗುವ ವೆಚ್ಚ ನೆನಸಿಕೊಂಡರೇ ಸಿಂಹಸ್ವಪ್ನದಂತೆ ಭಾಸವಾಗುತ್ತದೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಯ ಪ್ರತೀ ಹಂತದಲ್ಲೂ ನೀರಿನಂತೆ ಹಣ ಚೆಲ್ಲಬೇಕು. ಚಿಕಿತ್ಸೆ ಫಲಿಸಿ ಬದುಕಿದೆಯಾ ಬಡಜೀವ ಎಂದರೂ, ಅದಕ್ಕೆ ಆಗುವ ಖರ್ಚುವೆಚ್ಚಗಳು ಕ್ಯಾನ್ಸರ್​ಗಿಂತಲೂ ಭೀಕರವಾಗಿರಬಹುದು.

ಕ್ಯಾನ್ಸರ್​ನಂಥ ಮಾರಕ ರೋಗಗಳಿಗೆಂದು ನಿರ್ದಿಷ್ಟವಾದ ಇನ್ಷೂರೆನ್ಸ್ ಸ್ಕೀಮ್​ಗಳುಂಟು. ಈ ವಿಮಾ ಯೋಜನೆಗಳನ್ನು ಪಡೆಯುವಾಗ ಕೆಲವೊಂದಿಷ್ಟು ಅಂಶಗಳ ಬಗ್ಗೆ ಗಮನ ವಹಿಸಬೇಕು. ಕಡಿಮೆ ಪ್ರೀಮಿಯಂ ಮಾತ್ರವೇ ನಿಮ್ಮ ಮಾನದಂಡವಾಗಕೂಡದು. ಬೇರೆ ಕೆಲ ಪ್ರಮುಖ ಅಂಶಗಳು ನಿಮ್ಮ ನಿಷ್ಕರ್ಷೆಯಲ್ಲಿರಲಿ.

ಕ್ಯಾನ್ಸರ್ ಇನ್ಷೂರೆನ್ಸ್ ಸ್ಕೀಮ್ ಪಡೆಯುವಾಗ ಗಮನಿಸಬೇಕಾದ ಸಂಗತಿಗಳು

ಪಾಲಿಸಿ ಸಿಗದೇ ಹೋಗಬಹುದು….

ನಿಮಗೆ ಈಗಾಗಲೇ ಕ್ಯಾನ್ಸರ್ ರೋಗ ಇದ್ದರೆ ಬಹುತೇಕ ವಿಮಾ ಸಂಸ್ಥೆಗಳು ನಿಮಗೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಒದಗಿಸದೇ ಹೋಗಬಹುದು. ನೀವು ಆರೋಗ್ಯದಿಂದಿದ್ದು ಅನಿರೀಕ್ಷಿತವಾಗಿ ನಡೆಯುವ ಅವಘಡಗಳಿಗಷ್ಟೇ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಖಚಿತವಾಗಿ ಆರೋಗ್ಯಕೆಡುತ್ತದೆ ಎಂದು ಗೊತ್ತಿದ್ದೂ ಯಾವ ಕಂಪನಿ ಇನ್ಷೂರೆನ್ಸ್ ಪಾಲಿಸಿ ಹೇಗೆ ಕೊಡಲು ಸಾಧ್ಯ?

ಸಾಕಷ್ಟು ಹೆಚ್ಚಿನ ಮೊತ್ತದ ಕವರೇಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳಿ

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸಾ ವೆಚ್ಚ ಬಹಳ ಅಧಿಕ. ತಪಾಸಣೆ, ರೇಡಿಯೇಶನ್, ಕೆಮೋಥೆರಪಿ ಚಿಕಿತ್ಸೆ, ಸರ್ಜರಿ ಇತ್ಯಾದಿಗೆಲ್ಲಾ ಬಹಳ ಖರ್ಚಾಗುತ್ತದೆ. ಹೀಗಾಗಿ, ವರ್ಷಕ್ಕೆ ಇನ್ಷೂರೆನ್ಸ್ ಕವರೇಜ್ ಹೆಚ್ಚಿನ ಮೊತ್ತಕ್ಕೆ ಇರುವಂತಹ ಪ್ಲಾನ್ ಆಯ್ದುಕೊಳ್ಳಿ. ಪ್ರೀಮಿಯಮ್ ಹೆಚ್ಚಾದರೂ ಪರವಾಗಿಲ್ಲ.

ಇದನ್ನೂ ಓದಿHome Loan: ಸಾಲಕ್ಕೆ ಇಎಂಐ ಹುಷಾರ್..! 50 ಲಕ್ಷ ಸಾಲ ಪಡೆದು 40 ವರ್ಷ ಇಎಂಐ ಆದರೆ ಕಟ್ಟುವ ಬಡ್ಡಿಯೇ 1.27 ಕೋಟಿ ರೂ

ಹೆಲ್ತ್ ಇನ್ಷೂರೆನ್ಸ್ ವೇಟಿಂಗ್ ಪೀರಿಯಡ್

ಬಹುತೇಕ ಇನ್ಷೂರೆನ್ಸ್ ಸ್ಕೀಮ್​ಗಳಲ್ಲಿ ಕೆಲ ನಿರ್ದಿಷ್ಟ ರೋಗಗಳ ಚಿಕಿತ್ಸಾ ವೆಚ್ಚ ಭರಿಸಲು ಕಾಯುವಿಕೆ ಅವಧಿ ನಿಗದಿಪಡಿಸಲಾಗುತ್ತದೆ. ಅಂದರೆ ನೀವು ಸ್ಕೀಮ್ ಪಡೆದ ತತ್​ಕ್ಷಣದಿಂದಲೇ ಕೆಲ ಕಾಯಿಲೆಗಳಿಗೆ ಕವರೇಜ್ ಇರುವುದಿಲ್ಲ. ಕ್ಯಾನ್ಸರ್​ನಂಥ ರೋಗಕ್ಕೆ ಕನಿಷ್ಠ 1 ವರ್ಷವಾದರೂ ವೇಟಿಂಗ್ ಪೀರಿಯಡ್ ಇರುತ್ತದೆ. ನೀವು ಪಾಲಿಸಿ ಮಾಡಿಸಿ ವರ್ಷದೊಳಗೆ ಕ್ಯಾನ್ಸರ್ ಕಾಯಿಲೆ ಇದೆ ಎಂದು ಗೊತ್ತಾದಾಗ ಅದಕ್ಕೆ ಕವರೇಜ್ ಇರುವುದಿಲ್ಲ. ಹೀಗೆ, ವೇಟಿಂಗ್ ಪೀರಿಯಡ್ ಬೇರೆ ಬೇರೆ ಕಂಪನಿಗಳಲ್ಲಿ ಬೇರೆ ಬೇರೆ ಅವಧಿ ಇರುತ್ತದೆ. ಕಡಿಮೆ ವೇಟಿಂಗ್ ಪೀರಿಯಡ್ ಇರುವ ಪಾಲಿಸಿ ನಿಮ್ಮ ಗಮನದಲ್ಲಿರಲಿ.

ಕೋಪೇಮೆಂಟ್ ವ್ಯವಸ್ಥೆ

ಕೆಲ ಆರೋಗ್ಯ ವಿಮಾ ಕಂಪನಿಗಳು ಕ್ಯಾನ್ಸರ್ ಚಿಕಿತ್ಸಾ ವೆಚ್ಚವನ್ನು ತಾವೇ ಪೂರ್ಣವಾಗಿ ಭರಿಸದೇ, ಪಾಲಿಸಿದಾರರಿಗೂ ಕೆಲ ಭಾಗದಷ್ಟು ವೆಚ್ಚವನ್ನು ವರ್ಗಾಯಿಸುತ್ತದೆ. ನೀವು ಪಾಲಿಸಿ ಪಡೆಯುವ ಮುನ್ನ ಈ ಅಂಶದ ಬಗ್ಗೆ ಗಮನಿಸಿ. ಇದನ್ನು ನೋಡದೇ ನೀವು ಪಾಲಿಸಿ ಆಯ್ದುಕೊಂಡರೆ ನಿಮ್ಮ ಜೇಬಿಂದ ಒಂದಷ್ಟು ಖರ್ಚು ಮಾಡಬೇಕಾಗಬಹುದು.

ಕ್ಯಾನ್ಸರ್ ಚಿಕಿತ್ಸಾ ವೆಚ್ಚಕ್ಕೆ ಎಷ್ಟು ಮಿತಿ ಇದೆ ಗಮನಿಸಿ

ನೀವು ಪಡೆಯುವ ಆರೋಗ್ಯ ವಿಮೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಮಿತಿ ಹಾಕಲಾಗಿದೆಯಾ ಎಂಬ ಸಂಗತಿಯನ್ನು ಗಮನಿಸಿ. ಉದಾಹರಣೆಗೆ, ನೀವು ಗಂಭೀರ ಕಾಯಿಲೆಗಳಿಗೆ ಪಡೆದ ಇನ್ಷೂರೆನ್ಸ್ ಪ್ಲಾನ್ ಒಟ್ಟಾರೆ 50 ಲಕ್ಷ ರೂ ಕವರೇಜ್ ಹೊಂದಿರಬಹುದು. ಆದರೆ, ಅದರಲ್ಲಿ ಕ್ಯಾನ್ಸರ್ ರೋಗಕ್ಕೆ ಸಿಗುವ ಕವರೇಜ್ 5 ಲಕ್ಷ ರೂಗೆ ಮಿತಿಗೊಳಿಸಿರಬಹುದು.

ಇದನ್ನೂ ಓದಿInsurance: ಸಿಂಗಲ್ ಪ್ರೀಮಿಯಮ್ ಇನ್ಷೂರೆನ್ಸ್ ಪಾಲಿಸಿ ಜನಪ್ರಿಯವಾಗುತ್ತಿರುವುದು ಯಾಕೆ? ಅದರ ಅನುಕೂಲತೆಗಳೇನು?

ಕ್ಯಾನ್ಸರ್ ರೋಗದಿಂದ ಬದುಕುಳಿಯುವ ಅವಧಿ ಮತ್ತು ಇನ್ಷೂರೆನ್ಸ್ ಕವರೇಜ್

ಕ್ಯಾನ್ಸರ್ ರೋಗ ಬಂದರೆ ಬಹಳಷ್ಟು ಸಂದರ್ಭಗಳಲ್ಲಿ ರೋಗಿಗಳು ಹೆಚ್ಚು ಕಾಲ ಬದುಕುವ ಉದಾಹರಣೆ ಕಡಿಮೆ. ಹೀಗಾಗಿ, ಹೆಚ್ಚಿನ ಇನ್ಷೂರೆನ್ಸ್ ಕಂಪನಿಗಳು ಸರ್ವೈವಲ್ ಪೀರಿಯಡ್ ನಿಗದಿ ಮಾಡುತ್ತವೆ. ಅಂದರೆ, ಕ್ಯಾನ್ಸರ್ ಇರುವುದು ಪತ್ತೆಯಾದಂದಿನಿಂದ ಪಾಲಿಸಿದಾರ ನಿರ್ದಿಷ್ಟ ಅವಧಿಯವರೆಗೆ ಬದುಕುಳಿದರೆ ಆಗ ಇನ್ನೂರೆನ್ಸ್ ಲಾಭ ಕೊಡಲಾಗುತ್ತದೆ.

ಕ್ಯಾನ್ಸರ್ ರೋಗ ಬಂದರೆ ಪಾಲಿಸಿ ನವೀಕರಣ ಸಾಧ್ಯವಿಲ್ಲ

ನಿಮಗೆ ಒಮ್ಮೆ ಕ್ಯಾನ್ಸರ್ ರೋಗ ಬಂದಿತೆಂದರೆ ಆ ವರ್ಷ ಮಾತ್ರವೇ ಇನ್ಷೂರೆನ್ಸ್ ಪಡೆಯಲು ಸಾಧ್ಯ. ಅದನ್ನು ಮರು ವರ್ಷಕ್ಕೆ ರಿನಿವ್ ಮಾಡಲು ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Sun, 2 July 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ