WMS Loan: ನೇಕಾರರ ಮುದ್ರಾ ಯೋಜನೆ ಪಡೆಯಲು ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್
Weavers' Mudra Scheme, How To Get Loan?: ಶೇ. 6ರ ಆಸುಪಾಸಿನ ಬಡ್ಡಿದರದಲ್ಲಿ ಸಿಗುವ ನೇಕಾರರ ಮುದ್ರಾ ಯೋಜನೆಯ ಸಾಲ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರ ಇಲ್ಲಿದೆ...
ಕೇಂದ್ರ ಸರ್ಕಾರ ಸಣ್ಣ ಉದ್ದಿಮೆಗಳ (Small businesses) ಉತ್ತೇಜನಕ್ಕಾಗಿ ರೂಪಿಸಿರುವ ಕೆಲ ಪ್ರಮುಖ ಯೋಜನೆಗಳಲ್ಲಿ ಮುದ್ರಾ ಸ್ಕೀಮ್ ಒಂದು. ಇದು ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಮತ್ತು ಈಗಾಗಲೇ ಇರುವ ಉದ್ದಿಮೆಗಳಿಗೆ ನೀಡಲಾಗುವ ಸಾಲ ಯೋಜನೆ. ನೇಕಾರ ಉದ್ದಿಮೆಗಳಿಗೂ ಮುದ್ರಾ ಅಡಿ ಸಾಲ ಸೌಲಭ್ಯ ಕೊಡಲಾಗುತ್ತದೆ. ವೀವರ್ಸ್ ಮುದ್ರಾ ಸ್ಕೀಮ್ (WMS- Weavers Mudra Scheme) ಅಡಿಯಲ್ಲಿ ನೇಕಾರರಿಗೆ 2 ಲಕ್ಷ ರೂವರೆಗೂ ಸಾಲ ಕೊಡಲಾಗುತ್ತದೆ. 3 ವರ್ಷ ಅವಧಿಯ ಈ ಸಾಲಕ್ಕೆ ವಾರ್ಷಿಕ ಬಡ್ಡಿ ಕೇವಲ ಶೇ. 6 ಮಾತ್ರ. ಮೂರು ವರ್ಷಕ್ಕೆ ಸಾಲ ನವೀಕರಿಸುವ ಅವಕಾಶವೂ ಇದೆ.
ನೇಕಾರರ ಮುದ್ರಾ ಸ್ಕೀಮ್ನ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಕ್ರಮಗಳು:
- ಜನಸಮರ್ಥ್ ವೆಬ್ಸೈಟ್ಗೆ ಹೋಗಿ, ಅಲ್ಲಿ ಸ್ಕೀಮ್ಸ್ ಡ್ರಾಪ್ಡೌನ್ ಅಡಿಯಲ್ಲಿ ಬ್ಯುನಿನೆಸ್ ಆ್ಯಕ್ಟಿವಿಟಿ ಲೋನ್, ವೀವರ್ ಮುದ್ರಾ ಸ್ಕೀಮ್ ಅನ್ನು ಕ್ಲಿಕ್ ಮಾಡಿ
- ಕೆಳಗೆ ಸ್ಕ್ರಾಲ್ ಮಾಡಿ ‘ಚೆಕ್ ಎಲಿಜಿಬಿಲಿಟಿ’ ಕ್ಲಿಮ್ ಮಾಡಿ.
- ಲೋನ್ ಫಾರ್ ಹ್ಯಾಂಡ್ಲೂಮ್ ವೀವರ್ ಅನ್ನು ಆಯ್ದುಕೊಳ್ಳಿ. ಹಾಗೂ ಕ್ಯಾಲ್ಕುಲೆಟ್ ಎಲಿಜಿಬಿಲಿಟಿ ಮೇಲೆ ಕ್ಲಿಕ್ ಮಾಡಿ
- ಸರ್ಕಾರಿ ಸೆನ್ಸಸ್ನಲ್ಲಿ ನಿಮ್ಮನ್ನು ನೇಕಾರ ಎಂದು ಗುರುತಿಸಲಾಗಿದ್ದರೆ ನೌದು ಎಂದು ಆಯ್ದುಕೊಳ್ಳಿ.
- ನಿಮ್ಮ ಉದ್ದಿಮೆ ಹೊಸದಾಗಿದ್ದ ನ್ಯೂ ಎಂದು, ಈಗಾಗಲೇ ಅಸ್ತಿತ್ವದಲ್ಲಿದ್ದರೆ ಎಗ್ಸಿಸ್ಟಿಂಗ್ ಎಂದು ಆರಿಸಿ.
- ವೈಯಕ್ತಿಕ ವ್ಯವಾರವಾಗಿದ್ದರೆ ಇಂಡಿವಿಜುವಲ್ ಎಂದು, ಅಲ್ಲದಿದ್ದರೆ ನಾನ್–ಇಂಡಿವಿಜುವಲ್ ಎಂದು ಆರಿಸಿ.
- ಪ್ರಾಜೆಕ್ಟ್ ವೆಚ್ಚವನ್ನು ನಮೂದಿಸಿ. ನೀವು ಸ್ವಂತವಾಗಿ ಎಷ್ಟು ಹೂಡಿಕೆ ಮಾಡುತ್ತೀರಿ ಎಂದು ಮೊತ್ತ ನಮೂದಿಸಿ. ಬಳಿಕ ಕ್ಯಾಲ್ಕುಲೇಟ್ ಎಲಿಜಿಬಿಲಿಟಿ ಮೇಲೆ ಕ್ಲಿಕ್ ಮಾಡಿ.
- ನಿಮಗೆ ಸಿಗುವ ಸಬ್ಸಿಡಿ ಮೊತ್ತ, ಮಾಸಿಕ ಕಂತಿನ ಹಣ ಹಾಗೂ ಎಷ್ಟು ಅವಧಿಗೆ ಸಾಲ ಇತ್ಯಾದಿ ವಿವರ ಕಾಣುತ್ತದೆ.
- ಬಳಿಕ ಲಾಗಿನ್ ಟು ಅಪ್ಲೈ ಕ್ಲಿಕ್ ಮಾಡಿ. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ.
- ಪ್ಯಾನ್, ಆಧಾರ್, ಉದ್ಯಮ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಇತ್ಯಾದಿ ಮಾಹಿತಿ ತುಂಬಬೇಕಾಗುತ್ತದೆ.
- ಆಧಾರ್, ಐಟಿ, ಸಿಬಿಲ್ ಮಾಹಿತಿ ಪಡೆಯಲು ಒಪ್ಪಿಗೆ ಸೂಚಿಸಿ. ಬಳಿಕ ಅಗ್ರೀ ಅಂಡ್ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ: 12,500 Bogus Entities: ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೃಷ್ಟಿಸುವ 12,500 ನಕಲಿ ಸಂಸ್ಥೆಗಳನ್ನು ಗುರುತಿಸಿದ ಸಿಬಿಐಸಿ
- ಪ್ಯಾನ್, ಉದ್ಯಮ್ ಮಾಹಿತಿ ತುಂಬಿಸಿ, ಪ್ರೊಸೀಡ್ ಕ್ಲಿಕ್ ಮಾಡಿ
- ನಿಮ್ಮ ಜಿಎಸ್ಟಿನ್ ವಿವರ ಪಡೆಯಲಾಗುತ್ತದೆ. ನಿಮ್ಮ ಉದ್ದಿಮೆ ಜಿಎಸ್ಟಿಗೆ ನೊಂದಾಯಿತವಾಗಿಲ್ಲದಿದ್ದರೆ, ಅಲ್ಲಿ ಕೊಡಲಾಗಿರುವ ಯಾವುದಾದರೂ ಒಂದು ಕಾರಣ ಆಯ್ಕೆ ಮಾಡಿರಿ.
- ನಿಮ್ಮ ಉದ್ದಿಮೆ ಇವರ ಮತ್ತು ಮಾಸಿಕ ಮಾರಾಟ ಮಾಹಿತಿ ಒದಗಿಸಿ ಪ್ರೊಸೀಡ್ ಕ್ಲಿಕ್ ಮಾಡಿ.
- ಬ್ಯಾಂಕ್ ಸ್ಟೇಟ್ಮೆಂಟ್ ಕೊಡಿ ಅಥವಾ ಬ್ಯಾಂಕ್ ಖಾತೆ ವೆರಿಫೈ ಮಾಡಿ
- ನಿಮ್ಮ ಉದ್ದಿಮೆಯ ವಿಳಾಸ, ಉದ್ಯೋಗಿಗಳ ಸಂಖ್ಯೆ ನಮೂದಿಸಿ. ಈಗಾಗಲೇ ಸಾಲ ಇದ್ದರೆ ಅದರ ವಿವರ ನೀಡಿ.
- ನಿಮ್ಮ ಈ ಎಲ್ಲಾ ಮಾಹಿತಿ ಬರ್ತಿಯಾಗಿದ್ದರೆ ಕಂಪ್ಲೀಟ್ ಎಂದು ತೋರಿಸುತ್ತದೆ. ಆಗ ಅದನ್ನು ಸಬ್ಮಿಟ್ ಮಾಡಿ.
- ಸಬ್ಮಿಟ್ ಮಾಡಿದ ಬಳಿಕ ವಿವಿಧ ಬ್ಯಾಂಕುಗಳಲ್ಲಿ ಲಭ್ಯವಾವಿರುವ ಸಾಲ, ಬಡ್ಡಿ, ಅವಧಿಯ ವಿವರವನ್ನು ನೀಡಲಾಗುತ್ತದೆ.
- ನಿಮಗೆ ಬೇಕಾದ ಸಾಲವನ್ನು ಆಯ್ದುಕೊಳ್ಳಲು ಸೆಲೆಕ್ಟ್ ಆಫರ್ ಕ್ಲಿಕ್ ಮಾಡಿ
- ನೀವು ಆಯ್ದುಕೊಂಡ ಸಾಲಕ್ಕೆ ಆ ಬ್ಯಾಂಕ್ ಅನುಮೋದನೆ ನೀಡಿದಲ್ಲಿ, ಸಾಲ ವಿತರಿಸುವ ಮುಂದಿನ ಪ್ರಕ್ರಿಯೆ ಆರಂಭಗೊಳ್ಳುತ್ತದೆ.
- ಅಗತ್ಯಬಿದ್ದರೆ ನೀವು ಕೆಲ ದಾಖಲೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಬ್ಯಾಂಕಿಗೆ ಹೋಗಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ