Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Tips: ಉದ್ಯೋಗಸ್ಥ ಮಹಿಳೆಯರಿಗೆ ಹಣಕಾಸು ನಿಭಾಯಿಸುವ ಉಪಾಯಗಳು; ತೆರಿಗೆ ಉಳಿತಾಯ, ಹೂಡಿಕೆ ತಂತ್ರಗಳು

Financial Planning Tricks For Women: ಹಣಕಾಸು ಶಿಸ್ತು, ಬುದ್ಧಿವಂತಿಕೆ ಎರಡೂ ಇದ್ದರೆ ಹಣ ಉಳಿತಾಯ ಸುಲಭ. ಮಹಿಳೆಯರಿಗೆ ವಿಶೇಷವಾಗಿ ತೆರಿಗೆ ಉಳಿಸುವ ಮತ್ತು ಹಣ ಉಳಿಸುವ ಒಂದಷ್ಟು ಮಾರ್ಗೋಪಾಯಗಳಿವೆ.

Money Tips: ಉದ್ಯೋಗಸ್ಥ ಮಹಿಳೆಯರಿಗೆ ಹಣಕಾಸು ನಿಭಾಯಿಸುವ ಉಪಾಯಗಳು; ತೆರಿಗೆ ಉಳಿತಾಯ, ಹೂಡಿಕೆ ತಂತ್ರಗಳು
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2023 | 1:08 PM

ಭಾರತೀಯ ಸಂಪ್ರದಾಯದಲ್ಲಿ ಹಣ ಎಂದರೆ ಲಕ್ಷ್ಮೀಗೆ ಸಮಾನ. ಲಕ್ಷ್ಮಿಯನ್ನು ಚಂಚಲೆ ಎಂದು ಬಣ್ಣಿಸುತ್ತಾರೆ. ಹಣ ಮತ್ತು ಲಕ್ಷ್ಮೀಗೆ ಹೋಲಿಕೆ ಮೌಢ್ಯ ಎನಿಸಿದರೂ ಯತಾರ್ಥವಾಗಿ ಪರಿಗಣಿಸಬೇಕಿಲ್ಲ. ಸ್ವಲ್ಪ ನಾವು ಸಡಿಲಕೊಟ್ಟರೂ ಹಣ ನಮ್ಮ ಕೈಯಲ್ಲಿ ನಿಲ್ಲುವುದಿಲ್ಲ. ಹಣಕಾಸು ಶಿಸ್ತು (Financial Discipline) ಇಲ್ಲದವರು ಎಷ್ಟೇ ಹಣ ಸಂಪಾದಿಸಿದರೂ ಉಳಿಸುವುದು ಅಷ್ಟಕಷ್ಟೆಯೇ. ಹಣಕಾಸು ಶಿಸ್ತು, ಬುದ್ಧಿವಂತಿಕೆ ಎರಡೂ ಇದ್ದರೆ ಹಣ ಉಳಿತಾಯ ಸುಲಭ. ಮಹಿಳೆಯರಿಗೆ ವಿಶೇಷವಾಗಿ ತೆರಿಗೆ ಉಳಿಸುವ ಮತ್ತು ಹಣ ಉಳಿಸುವ ಒಂದಷ್ಟು ಮಾರ್ಗೋಪಾಯಗಳಿವೆ. ಅದರಲ್ಲಿ ತೆರಿಗೆ ವಿನಾಯಿತಿ, ತೆರಿಗೆ ರಿಯಾಯಿತಿ, ತೆರಿಗೆ ಉಳಿತಾಯ ತರುವ ಯೋಜನೆಗಳು, ಗೃಹಸಾಲಗಳು, ತೆರಿಗೆರಹಿತ ಬಾಂಡ್ (Taxless Bonds), ನಿವೃತ್ತಿ ಯೋಜನೆಗಳು (Retirement Schemes) ಹೀಗೆ ಹಲವು ಅವಕಾಶಗಳು ಉದ್ಯೋಗಸ್ಥ ಮಹಿಳೆಯರ ಮುಂದಿವೆ. ಈ ಬಗ್ಗೆ ಒಂದು ಸಂಕ್ಷಿಪ್ತ ನೋಟ

ತೆರಿಗೆ ರಿಯಾಯಿತಿ ಮತ್ತು ತೆರಿಗೆ ವಿನಾಯಿತಿ ಅವಕಾಶ

ಉದ್ಯೋಗಸ್ಥ ಮಹಿಳೆಯರು ತಮ್ಮ ವರ್ಷದ ಆದಾಯದಲ್ಲಿ 50,000 ರೂವರೆಗೂ ಹಣಕ್ಕೆ ತೆರಿಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಪಿಪಿಎಫ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಮತ್ತು ಇಪಿಎಫ್​ಗಳಂತಹ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ವರ್ಷಕ್ಕೆ 1.5 ಲಕ್ಷ ರೂವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.

ಕುಟುಂಬ ಸದಸ್ಯರಿಗೆ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ನ ಪ್ರೀಮಿಯಮ್ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ಇದನ್ನೂ ಓದಿYONO App: ಯಾವುದೇ ಬ್ಯಾಂಕ್ ಖಾತೆ ಇರಲಿ, ಎಸ್​ಬಿಐ ಯೋನೋ ಆ್ಯಪ್ ಬಳಸಿ ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಕ್ಯಾಷ್ ಹಿಂಪಡೆಯಿರಿ

ತೆರಿಗೆ ಉಳಿಸುವ ಯೋಜನೆಗಳನ್ನು ಗಮನಿಸಿ

ನಿಮ್ಮ ಹೆಣ್ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಪಡೆಯಬಹುದು. ಈ ಸ್ಕೀಮ್ ನಿಮ್ಮ ಹೂಡಿಕೆಗೆ ಉತ್ತಮ ಬಡ್ಡಿ ಕೊಡುತ್ತದೆ. ಜೊತೆಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಲಾಭವೂ ಇರುತ್ತದೆ.

ಈಕ್ವಿಟಿ ಜೋಡಿತ ಉಳಿತಾಯ ಸ್ಕೀಮ್ (ಇಎಲ್​ಎಸ್​ಎಸ್) ಮ್ಯೂಚುವಲ್ ಪಂಡ್​ಗಳಲ್ಲಿ ಮಾಡುವ ಹೂಡಿಕೆ ಹಣಕ್ಕೆ ತೆರಿಗೆ ಲಾಭ ಇರುತ್ತದೆ.

ಪಿಪಿಎಫ್ ಸ್ಕೀಮ್​ನಲ್ಲಿ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುವುದಿಲ್ಲ. ಇದು ಒಳ್ಳೆಯ ಉಳಿತಾಯ ಮತ್ತು ಹೂಡಿಕೆ ಯೋಜನೆಯೂ ಹೌದು.

ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಮಾಡುವ ಹೂಡಿಕೆಯಲ್ಲಿ ಸೆಕ್ಷನ್ 80ಸಿಸಿಡಿ(1ಬಿ) ಅಡಿಯಲ್ಲಿ ಹೆಚ್ಚುವರಿ 50,000 ರೂವರೆಗೂ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಮಹಿಳೆಯರಿಗೆ ಗೃಹ ಸಾಲದಲ್ಲಿ ಲಾಭ

ಗೃಹಸಾಲ ವಿಚಾರದಲ್ಲಿ ಮಹಿಳೆಯರಿಗೆ ಹೆಚ್ಚುವರಿ ತೆರಿಗೆ ಲಾಭಗಳಿರುತ್ತವೆ. ಗೃಹಸಾಲಕ್ಕೆ ಕಟ್ಟಲಾಗುವ ಬಡ್ಡಿಹಣದಲ್ಲಿ ವರ್ಷಕ್ಕೆ 2 ಲಕ್ಷ ರೂವರೆಗಿನ ಮೊತ್ತಕ್ಕೆ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಮೊದಲ ಬಾರಿಗೆ ಮನೆ ಖರೀದಿ ಮಾಡುತ್ತಿರುವವರು ಗೃಹಸಾಲ ಬಡ್ಡಿ ವಿಚಾರದಲ್ಲಿ 2 ಲಕ್ಷ ರೂ ಜೊತೆಗೆ ಹೆಚ್ಚುವರಿ 1.5 ಲಕ್ಷ ರೂವರೆಗೂ ಡಿಡಕ್ಷನ್ ಪಡೆಯಬಹುದು.

ಇದನ್ನೂ ಓದಿTata AIA: ವಾಟ್ಸಾಪ್, ಯುಪಿಐ ಮೂಲಕ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ: ಟಾಟಾ ಎಐಎ ಗ್ರಾಹಕರಿಗೆ ಹೊಸ ಅನುಕೂಲ

ಮಹಿಳೆಯರಿಗೆ ತೆರಿಗೆ ರಹಿತ ಬಾಂಡ್​ಗಳು

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನೀಡುವ ಸಾಲಪತ್ರ ಅಥವಾ ಬಾಂಡ್​ಗಳು ಜನಪ್ರಿಯವಾಗಲು ಕಾರಣಗಳಿವೆ. ಇದರಲ್ಲಿ ಕೊಡಲಾಗುವ ಬಡ್ಡಿಹಣಕ್ಕೆ ತೆರಿಗೆ ಇರುವುದಿಲ್ಲ. ಕಡಿಮೆ ರಿಸ್ಕ್ ಕೂಡ ಇರುವ ಈ ಗವರ್ನ್ಮೆಂಟ್ ಬಾಂಡ್​ಗಳು ಉತ್ತಮ ಆದಾಯ ಮೂಲವಾಗಬಹುದು.

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್

ಹೆಣ್ಮಕ್ಕಳಿಗೆ ಒಡವೆ ಮೇಲೆ ಆಸೆ ಜಾಸ್ತಿ. ಅದರೆ, ಒಡವೆ ಬದಲು ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಸಾಕಷ್ಟು ಲಾಭ ಮಾಡಬಹುದು. ಸರ್ಕಾರ ವರ್ಷಕ್ಕೆ ನಾಲ್ಕು ಬಾರಿ ಬಿಡುಗಡೆ ಮಾಡುವ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ನಿಮಗೆ ಇಷ್ಟ ಬಂದ ಪ್ರಮಾಣದ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇದಕ್ಕೆ ನಿಯಮಿತವಾಗಿ ಬಡ್ಡಿ ಬರುತ್ತದೆ. ನಿಗದಿತ ಕಾಲಾವಧಿ ಬಳಿಕ ಅಂದಿನ ಮಾರುಕಟ್ಟೆಯ ಬೆಲೆ ಪ್ರಕಾರ ನಿಮಗೆ ರಿಟರ್ನ್ ಸಿಗುತ್ತದೆ. ಭೌತಿಕ ಚಿನ್ನದ ಬದಲು ಅದರ ಬೆಲೆಯಷ್ಟು ಹಣ ದೊರೆಯುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ