Duplicate PAN: ಆನ್​ಲೈನ್​ನಲ್ಲಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್​ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ

How To Download PAN Online: ನೀವು ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದರೆ ಆನ್​ಲೈನ್​ನಲ್ಲಿ ಡೂಪ್ಲಿಕೇಟ್ ಪ್ರತಿಯನ್ನು ಪಡೆಯಲು ಸಾಧ್ಯ. ಎನ್​ಎಸ್​ಟಿಎಲ್, ಯುಟಿಐಟಿಎಸ್​ಎಲ್ ಪೋರ್ಟಲ್​ಗಳಲ್ಲಿ ಅವಕಾಶಗಳುಂಟು.

Duplicate PAN: ಆನ್​ಲೈನ್​ನಲ್ಲಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಡೌನ್​ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿಧಾನ
ಪ್ಯಾನ್
Follow us
|

Updated on: Jul 03, 2023 | 6:21 PM

ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ (PAN- Permanent Account Number) ಎನ್ನುವುದು 10 ಅಂಕಿಗಳಿರುವ ಕಾರ್ಡ್ ಆಗಿದೆ. ಭಾರತದಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಹಣಕಾಸು ವಹಿವಾಟು ನಡೆಸಲು ಮತ್ತು ತೆರಿಗೆ ಪಾವತಿಸಲು ಇದು ಅಗತ್ಯ ದಾಖಲೆಯಾಗಿದೆ. ದೇಶದ ಹಣಕಾಸು ಹರಿವಿನ ಮೇಲೆ ನಿಗಾ ಇರಿಸಲು ಈ ಪ್ಯಾನ್ ನಂಬರ್​ಗಳು ಆದಾಯ ತೆರಿಗೆ ಇಲಾಖೆಗೆ ಬಹಳ ಸಹಾಯಕವಾಗುತ್ತವೆ. ಆಧಾರ್​ನಷ್ಟೇ ಮಹತ್ವದ ದಾಖಲೆಯಾಗಿರುವ ಪ್ಯಾನ್ ಕಾರ್ಡ್ ಕೆಲವೊಮ್ಮೆ ಕಳೆದುಹೋಗುವ ಸಂಭವ ಇರುತ್ತದೆ. ಹಾಗೊಂದು ವೇಳೆ ಆದಲ್ಲಿ ಡೂಪ್ಲಿಕೇಟ್ ಪ್ಯಾನ್ ಪಡೆಯಬಹುದು. ಪ್ಯಾನ್ ರೀಪ್ರಿಂಟ್ ಪಡೆಯಬಹುದು. ಪ್ಯಾನ್ ಪಡೆಯಬಹುದು. ಆನ್​ಲೈನ್​ನಲ್ಲಿ ಇಪ್ಯಾನ್ ಕಾರ್ಡನ್ನು ಡೌನ್​ಲೋಡ್ ಮಾಡಬಹುದು.

ಪ್ಯಾನ್ ಕಾರ್ಡನ್ನು ಡೌನ್​ಲೋಡ್ ಮಾಡಲು ಹಲವು ಪ್ಲಾಟ್​ಫಾರ್ಮ್​ಗಳ ಆಯ್ಕೆಗಳಿವೆ. ಎನ್​ಎಸ್​ಡಿಎಲ್ ಪ್ಯಾನ್ ಪೋರ್ಟಲ್, ಯುಟಿಐಟಿಎಸ್​ಎಲ್, ಆಧಾರ್, ಐಟಿ ಇಫೈಲಿಂಗ್ ವೆಬ್​ಸೈಟ್​ಗಳಲ್ಲಿ ಪ್ಯಾನ್ ಕಾರ್ಡನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. ಇಂಥ ಇಪ್ಯಾನ್ ಕಾರ್ಡ್​ಗಳನ್ನು ಮೂಲ ಪ್ಯಾನ್ ಕಾರ್ಡ್​ನಂತೆಯೇ ಬಳಸಬಹುದು.

ಇದನ್ನೂ ಓದಿIT Returns: ಐಟಿ ರಿಟರ್ನ್ಸ್​ಗೆ ನೊಂದಾಯಿಸುವುದು ಹೇಗೆ, ಐಟಿಆರ್ ಫೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮೊದಲೇ ಪ್ಯಾನ್ ಕಾರ್ಡ್ ಹೊಂದಿರುವವರು ಇಪ್ಯಾನ್ ಪಡೆಯಲು ಆಗುವುದಿಲ್ಲ. ಹೊಸದಾಗಿ ಪ್ಯಾನ್ ಕಾರ್ಡ್​ಗೆ ಅರ್ಜಿ ಹಾಕಿ, ಅದು ಅಲಾಟ್ ಆಗಿದ್ದು, ಆ ಕಾರ್ಡ್ ಇನ್ನೂ ವಿಳಾಸ ತಲುಪದೇ ಇದ್ದ ಸಂದರ್ಭದಲ್ಲಿ ಅದರ ಇ ಪ್ರತಿಯನ್ನು ಆನ್​ಲೈನ್​ನಲ್ಲಿ ಪಡೆಯಬಹುದು. ಮೇಲೆ ಹೇಳಿದ ಪೋರ್ಟಲ್​ಗಳಲ್ಲಿ ಅದರ ಸೌಲಭ್ಯಗಳು ಲಭ್ಯ ಇರಲಿವೆ.

ಡೂಪ್ಲಿಕೇಟ್ ಪ್ಯಾನ್ ಡೌನ್​ಲೋಡ್ ಮಾಡುವುದು ಹೇಗೆ?

ಎನ್​ಎಸ್​ಡಿಎಲ್ onlineservices.nsdl.com/paam/ReprintEPan.html ವೆಬ್​ಸೈಟ್​ಗೆ ಹೋಗಿ ಡೂಪ್ಲಿಕೇಟ್ ಪ್ಯಾನ್ ಪ್ರತಿ ಪಡೆಯಬಹುದು.

  • ಈ ಎನ್​ಎಸ್​ಡಿಎಲ್ ವೆಬ್​ಸೈಟ್​ನಲ್ಲಿ ಪ್ಯಾನ್ ನಂಬರ್, ಆಧಾರ್ ನಂಬರ್ ಮತ್ತು ಜನ್ಮದಿನಾಂಕದ ವಿವರ ತುಂಬಿ ಕ್ಯಾಪ್ಚಾ ಕೋಡ್ ಹಾಕಿ ಸಬ್ಮಿಟ್ ಕ್ಲಿಕ್ ಮಾಡಿರಿ.
  • ಈಗ ಹೊಸ ಪುಟದಲ್ಲಿ ನಿಮ್ಮ ಪ್ಯಾನ್ ವಿವರ ಕಾಣುತ್ತದೆ.
  • ಬಳಿಕ ರಿಸೀವ್ ಒಟಿಪಿ ಆನ್ ಇಮೇಲ್ ಐಡಿ ಆರ್ ಮೊಬೈಲ್ ನಂಬರ್ ಎಂದು ಕಾಣುತ್ತದೆ. ಅದನ್ನು ಚೆಕ್ ಮಾಡಿರಿ.
  • ನಿಮಗೆ ಒಟಿಪಿ ಬರುತ್ತದೆ. ಅದನ್ನು ಹಾಕಿ, ವ್ಯಾಲಿಡೇಟ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಪ್ಯಾನ್​ನ ಡೂಪ್ಲಿಕೇಟ್ ಕಾಪಿ ಡೌನ್​ಲೋಡ್ ಆಗುತ್ತದೆ.

ಯುಟಿಐಟಿಎಸ್​ಎಲ್ ಪೋರ್ಟಲ್​ನಲ್ಲೂ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪ್ರಿಂಟ್ ಪಡೆಯಬಹುದು.

ಇನ್ನಷ್ಟು ಯುಟಿಲಿಟಿ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ