AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT Returns: ಐಟಿ ರಿಟರ್ನ್ಸ್​ಗೆ ನೊಂದಾಯಿಸುವುದು ಹೇಗೆ, ಐಟಿಆರ್ ಫೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Step-by-Step guide to File ITR: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಜುಲೈ 31ರವರೆಗೆ ಕಾಲಾವಕಾಶ ಇದೆ. ನಾವೇ ಖುದ್ದಾಗಿ ರಿಟರ್ನ್ ಸಲ್ಲಿಸುವುದು ಸುಲಭಸಾಧ್ಯವಿದೆ. ಈ ಬಗ್ಗೆ ಸುಲಭ ವಿಧಾನಗಳ ವಿವರ ಇಲ್ಲಿದೆ...

IT Returns: ಐಟಿ ರಿಟರ್ನ್ಸ್​ಗೆ ನೊಂದಾಯಿಸುವುದು ಹೇಗೆ, ಐಟಿಆರ್ ಫೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಐಟಿ ರಿಟರ್ನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 28, 2023 | 2:48 PM

Share

ಬೆಂಗಳೂರು: ಆದಾಯ ತೆರಿಗೆ ಪಾವತಿದಾರರು ಕಡ್ಡಾಯವಾಗಿ ಸಲ್ಲಿಸಬೇಕಿರುವ ಐಟಿ ರಿಟರ್ನ್ಸ್ (IT Returns) ಫೈಲ್ ಮಾಡಲು ಜುಲೈ 31ಕ್ಕೆ ಕೊನೆಯ ದಿನವಾಗಿದೆ. ಇಲ್ಲಿಯವರೆಗೂ ಒಂದು ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದಾರೆ ಎಂದು ಜೂನ್ 26ರಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದೇ ಅವಧಿಯಲ್ಲಿ ಹೆಚ್ಚು ಮಂದಿ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ. ಹಿಂದಿನ ವರ್ಷದಲ್ಲಿ 1 ಕೋಟಿ ಐಟಿ ರಿಟರ್ನ್ಸ್ ಮೈಲಿಗಲ್ಲು ಮುಟ್ಟಲು ಜುಲೈ 8 ಮುಗಿದಿತ್ತು. ಈಗ ಜೂನ್ 26ಕ್ಕೆ ಈ ಮೈಲಿಗಲ್ಲು ಸಾಧನೆ ಆಗಿದೆ. ಆಡಿಟಿಂಗ್ ಅವಶ್ಯಕತೆ ಇಲ್ಲದ ಮತ್ತು ಸಂಬಳದಾರರಾಗಿರುವ ತೆರಿಗೆ ಪಾವತಿದಾರರಿಗೆ ಜುಲೈ 31ರವರೆಗೂ ಐಟಿಆರ್ ಫೈಲಿಂಗ್​ಗೆ ಕಾಲಮಿತಿ ಇದೆ. ಅಲ್ಲಿಯವರೆಗೆ ಸಾವಕಾಶವಾಗಿ ರಿಟರ್ನ್ಸ್ ಸಲ್ಲಿಸಬಹುದು.

ಹೆಚ್ಚಿನ ಜನರು ಸಿಎ, ಆಡಿಟರ್ ಮೊದಲಾದವರ ಮೂಲಕ ಐಟಿ ರಿಟರ್ನ್ಸ್ ಫೈಲ್ ಮಾಡುವುದುಂಟು. ಆದರೆ, ಈಗ ನಾವೇ ಸ್ವತಃ ಇದನ್ನು ಸಲ್ಲಿಸುವಷ್ಟು ಸುಲಭ ವಿಧಾನಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಐಟಿಆರ್ ಫೈಲ್ ಮಾಡುವಾಗ ನಿಮ್ಮ ಬಳಿ ಈ ಮಾಹಿತಿ ಇರಲಿ

  1. ಸಕ್ರಿಯ ಪ್ಯಾನ್ ನಂಬರ್
  2. ಸಕ್ರಿಯ ಮೊಬೈಲ್ ನಂಬರ್
  3. ಹಾಲಿ ಮನೆ ವಿಳಾಸ
  4. ಇಮೇಲ್ ವಿಳಾಸ

ಐಟಿಆರ್ ಸಲ್ಲಿಸಲು ನೊಂದಣಿ ಪ್ರಕ್ರಿಯೆ

ನೀವು ಆದಾಯ ತೆರಿಗೆಯ ಇಫೈಲಿಂಗ್ ಪೋರ್ಟಲ್​ಗೆ ನೊಂದಾಯಿಸಿಕೊಂಡಿದ್ದರೆ ನೇರವಾಗಿ ಲಾಗಿನ್ ಆಗಬಹುದು. ಇಲ್ಲದಿದ್ದರೆ ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಮುಂದಿನ ವಿಧಾನಗಳ ಮೂಲಕ ರಿಜಿಸ್ಟರ್ ಮಾಡಬಹುದು.

  • ಇಫೈಲಿಂಗ್ ಪೋರ್ಟಲ್​ಗೆ ಭೇಟಿ ನೀಡಿ, incometax.gov.in/iec/foportal/
  • ಮುಖ್ಯಪುಟದ ಮೇಲಿನ ಬಲಭಾಗದಲ್ಲಿರುವ ರಿಜಿಸ್ಟರ್ ಕ್ಲಿಕ್ ಮಾಡಿ
  • ಯೂಸರ್ ಟೈಪ್ ಅನ್ನು ಇಂಡಿವಿಜುವಲ್ ಎಂದು ಆಯ್ಕೆಮಾಡಿ
  • ಕಂಟಿನ್ಯೂ ಕ್ಲಿಕ್ ಮಾಡಿ
  • ಬಳಿಕ ಪ್ಯಾನ್, ಜನ್ಮದಿನಾಂಕ, ರೆಸಿಡೆನ್ಷಿಯಲ್ ಸ್ಟೇಟಸ್ ಮೊದಲಾದ ವಿವರ ತುಂಬಿರಿ
  • ಕಂಟಿನ್ಯೂ ಕ್ಲಿಕ್ ಮಾಡಿ
  • ಪಾಸ್ವರ್ಡ್ ಸೆಟ್ ಮಾಡಿ, ಸಂಪರ್ಕ ವಿಳಾಸ, ಹಾಲಿ ವಿಳಾಸದ ಮಾಹಿತಿ ಹಾಕಿ ಸಬ್ಮಿಟ್ ಕ್ಲಿಕ್ ಮಾಡಿ
  • ಮೊಬೈಲ್ ಮತ್ತು ಇಮೇಲ್ ಐಡಿಗಳಿಗೆ ಪ್ರತ್ಯೇಕವಾಗಿ ಒಟಿಪಿ ಬರುತ್ತದೆ.
  • ಈ ಎರಡು ಓಟಿಪಿಗಳನ್ನು ಹಾಕಿದ ಬಳಿಕ ರಿಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: Aadhaar PAN Linking: ಆಧಾರ್ ಮತ್ತು ಪ್ಯಾನ್​ನಲ್ಲಿ ಹೆಸರು ಇತ್ಯಾದಿ ಮ್ಯಾಚ್ ಆಗದೇ ಲಿಂಕ್ ಆಗುತ್ತಿಲ್ಲವಾ? ಐಟಿ ಇಲಾಖೆ ಕೊಟ್ಟ ಸಲಹೆಗಳಿವು

ಐಟಿ ರಿಟರ್ನ್ ಫೈಲ್ ಮಾಡುವ ವಿಧಾನಗಳು

  • ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್​ಸೈಟ್​ಗೆ ಹೋಗಿ: incometax.gov.in/iec/foportal/
  • ಲಾಗಿನ್ ಕ್ಲಿಕ್ ಮಾಡಿ
  • ಪ್ಯಾನ್ ನಂಬರ್ ನಿಮಗೆ ಯೂಸರ್ ಐಡಿಯಾಗಿರುತ್ತದೆ. ನೊಂದಾಯಿಸುವಾಗ ನಿಗದಿ ಮಾಡಿದ್ದ ಪಾಸ್ವರ್ಡ್ ಹಾಕಿ ಲಾಗಿನ್ ಆಗಿರಿ
  • ಈಗ ಇಫೈಲಿಂಗ್ ಡ್ಯಾಷ್​ಬೋರ್ಡ್ ಕಾಣುತ್ತದೆ.
  • ಡ್ಯಾಷ್​ಬೋರ್ಡ್​ನಲ್ಲಿ ಇರುವ ‘ಇಫೈಲ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಡ್ರಾಪ್ಡೌನ್ ಮೆನುನಲ್ಲಿರುವ ‘ಇನ್ಕಮ್ ಟ್ಯಾಕ್ಸ್ ರಿಟರ್ನ್’ ಆಯ್ಕೆ ಮಾಡಿ
  • ನೀವು ಐಟಿಆರ್ ಸಲ್ಲಿಸುವ ಅಸೆಸ್ಮೆಂಟ್ ವರ್ಷ ಆಯ್ಕೆ ಮಾಡಿ (2022-23ರ ಹಣಕಾಸು ವರ್ಷದ ಐಟಿಆರ್ ಸಲ್ಲಿಸುತ್ತಿದ್ದರೆ ಅಸೆಸ್ಮೆಂಟ್ ಇಯರ್ 2023-24 ಆಗುತ್ತದೆ)
  • ನಿಮ್ಮ ಆದಾಯ ಮೂಲಗಳ ಪ್ರಕಾರವಾಗಿ ಐಟಿಆರ್ ಫಾರ್ಮ್ ಅನ್ನು ಅಯ್ಕೆ ಮಾಡಿ

ಅದರಲ್ಲಿ ಬಹಳಷ್ಟು ಮೊದಲೇ ಭರ್ತಿಯಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿ, ಅಗತ್ಯವಾದುದೆಲ್ಲವನ್ನೂ ಭರ್ತಿ ಮಾಡಿ ಸಲ್ಲಿಸಿ. ಎಲ್ಲಾ ದಾಖಲೆಗಳ ಒಂದು ಪ್ರತಿಯನ್ನು ಇಟ್ಟುಕೊಂಡಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Wed, 28 June 23

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್