AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar-PAN Updates: ಪ್ಯಾನ್ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನ; ಡೆಡ್​ಲೈನ್ ವಿಸ್ತರಣೆ ಆಗುತ್ತಾ?

Will Deadline For Linking Aadhaar and PAN Gets Extended?: ಸರ್ವರ್ ಸಮಸ್ಯೆ, ಹಲವರಿಂದ ಇನ್ನೂ ಲಿಂಕ್ ಆಗಿಲ್ಲದೇ ಇರುವುದು ಇತ್ಯಾದಿ ಕಾರಣಗಳಿಂದ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಕಾರ್ಯಕ್ಕೆ ಇರುವ ಜೂನ್ 30ರ ಡೆಡ್​ಲೈನ್ ಇನ್ನಷ್ಟು ಅವಧಿಗೆ ವಿಸ್ತರಣೆ ಅಗಬಹುದು ಎಂಬ ನಿರೀಕ್ಷೆ ಇದೆ.

Aadhaar-PAN Updates: ಪ್ಯಾನ್ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನ; ಡೆಡ್​ಲೈನ್ ವಿಸ್ತರಣೆ ಆಗುತ್ತಾ?
ಆಧಾರ್ ಮತ್ತು ಪ್ಯಾನ್ ಲಿಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 30, 2023 | 11:42 AM

Share

ನವದೆಹಲಿ: ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್​ಗಳನ್ನು ಲಿಂಕ್ ಮಾಡಲು (Aadhaar-PAN Linking) ಜೂನ್ 30ಕ್ಕೆ ಡೆಡ್​ಲೈನ್ ಇದೆ. ಇವತ್ತೂ ಸೇರಿ ಎರಡೇ ದಿನ ಮಾತ್ರ ಬಾಕಿ ಇರುವುದು. ಈವರೆಗೆ ಎಷ್ಟು ಪ್ಯಾನ್ ಕಾರ್ಡ್​ಗಳು ಆಧಾರ್​ಗೆ ಲಿಂಕ್ ಆಗಿವೆ ಎಂಬ ಮಾಹಿತಿ ಇಲ್ಲ. ಮಾರ್ಚ್​ನಲ್ಲಿ ಆದಾಯ ತೆರಿಗೆ ಇಲಾಖೆ (Income Tax Dept) ಕೊಟ್ಟ ಮಾಹಿತಿ ಪ್ರಕಾರ 51 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್​ಗಳು ಆಧಾರ್​ಗೆ ಜೋಡಿತವಾಗಿವೆ. ಅಲ್ಲಿಂದೀಚೆ ಬಹಳಷ್ಟು ಪ್ಯಾನ್ ನಂಬರ್​ಗಳು ಆಧಾರ್​ಗೆ ಲಿಂಕ್ ಆಗಿವೆ. ಆದರೂ ವಿವಿಧ ಕಾರಣಗಳಿಂದ ಇನ್ನೂ ಹಲವರು ಲಿಂಕ್ ಮಾಡಿಲ್ಲ. ಇಬ್ಬರು ಅಥವಾ ಹೆಚ್ಚಿನ ಮಂದಿಗೆ ಒಂದೇ ಪ್ಯಾನ್ ನಂಬರ್ ಅಲಾಟ್ ಮಾಡಿರುವುದು ಹೀಗೆ ಹಲವು ಸಮಸ್ಯೆಗಳು ಲಿಂಕ್ ಕಾರ್ಯಕ್ಕೆ ಅಡ್ಡಿಯಾಗಿವೆ. ಸರ್ವರ್ ಸಮಸ್ಯೆಯಿಂದಲೂ ಹಲವರಿಗೆ ಲಿಂಕ್ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಡೆಡ್​ಲೈನ್ ವಿಸ್ತರಿಸುವ ಸಾಧ್ಯತೆ ಇದೆ ಎಂಬಂತಹ ಸುದ್ದಿ ಕೇಳಿಬರುತ್ತಿದೆ.

2017ರಲ್ಲಿ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಮತ್ತು ಆಧಾರ್ ಲಿಂಕ್ ಕಡ್ಡಾಯ ಆಗಬೇಕು ಎಂದು ನಿಯಮ ಹೊರಡಿಸಿತು. 2017ರ ಜುಲೈ 1ಕ್ಕೆ ಮುಂಚೆ ಪ್ಯಾನ್ ನಂಬರ್ ಹೊಂದಿರುವವರು ಅದನ್ನು ಆಧಾರ್​ಗೆ ಲಿಂಕ್ ಮಾಡಬೇಕೆಂದು ಕಡ್ಡಾಯಪಡಿಸಲಾಯಿತು. ಜುಲೈ 1ರಿಂದ ವಿತರಿಸಲಾದ ಪ್ಯಾನ್ ನಂಬರ್​ಗೆ ಡೀಫಾಲ್ಟ್ ಆಗಿ ಆಧಾರ್ ಲಿಂಕ್ ಮಾಡಲಾಗುತ್ತಿತ್ತು. ಅದ್ದರಿಂದ 2017 ಜುಲೈ 1ಕ್ಕೆ ಮುಂಚಿನ ಪ್ಯಾನ್ ನಂಬರ್​ಗಳಿಗೆ ಆಧಾರ್ ಲಿಂಕ್ ಮಾಡುವುದು ಅಗತ್ಯವಾಗಿತ್ತು. ಒಬ್ಬರಿಗೆ ಹಲವು ಪ್ಯಾನ್ ಕಾರ್ಡ್​ಗಳು ಹಾಗು ಹಲವರಿಗೆ ಒಂದೇ ಪ್ಯಾನ್ ನಂಬರ್ ಸಿಕ್ಕಿದ್ದು ಗೊಂದಲವಾಗಿತ್ತು. ಈ ಹಿನ್ನೆಲೆಯಲ್ಲಿ ಆಧಾರ್ ಜೊತೆ ಪ್ಯಾನ್ ಜೋಡಿಸುವುದನ್ನು ಕಡ್ಡಾಯ ಮಾಡಲಾಗಿತ್ತು.

ಇದನ್ನೂ ಓದಿAadhaar PAN Linking: ಆಧಾರ್ ಮತ್ತು ಪ್ಯಾನ್​ನಲ್ಲಿ ಹೆಸರು ಇತ್ಯಾದಿ ಮ್ಯಾಚ್ ಆಗದೇ ಲಿಂಕ್ ಆಗುತ್ತಿಲ್ಲವಾ? ಐಟಿ ಇಲಾಖೆ ಕೊಟ್ಟ ಸಲಹೆಗಳಿವು

2017ರಲ್ಲಿ ಆರಂಭಗೊಂಡ ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ಜೋಡಣೆಯ ಕಾರ್ಯದಲ್ಲಿ ಹಲವು ಬಾರಿ ಡೆಡ್​ಲೈನ್ ವಿಸ್ತರಣೆ ಆಗಿದೆ. 2019 ಸೆಪ್ಟಂಬರ್ 30ರವರೆಗೂ ಮೊದಲಿಗೆ ಕಾಲಾವಕಾಶ ಕೊಡಲಾಗಿತ್ತು. ಆ ಬಳಿಕ ಹಲವು ಬಾರಿ ಈ ಗಡುವು ವಿಸ್ತರಣೆ ಆಗಿದೆ. ಈಗ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಸಬೇಕಾದರೆ 1,000 ರೂ ಪಾವತಿಸಬೇಕು. ಅದಕ್ಕೂ ಈಗ 2023 ಜೂನ್ 30 ಡೆಡ್​ಲೈನ್ ಆಗಿದೆ. ತಾಂತ್ರಿಕ ದೋಷ ಮತ್ತಿತರ ತೊಂದರೆಗಳಿಂದಾಗಿ ಈ ಡೆಡ್​ಲೈನ್ ವಿಸ್ತರಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಹಲವರಿದ್ದಾರೆ.

ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಆದಾಯ ತೆರಿಗೆಯ ಇಫೈಲಿಂಗ್ ವೆಬ್​ಸೈಟ್​ಗೆ ಹೋದರೆ ಮುಖ್ಯಪುಟದ ಎಡಬದಿಯಲ್ಲಿ ಲಿಂಕ್ ಆಧಾರ್ ಬಟನ್ ಕಾಣಬಹುದು. ಅಲ್ಲಿ ನಿಮಗೆ ಪ್ಯಾನ್ ಮತ್ತು ಆಧಾರ್ ಜೋಡಣೆಯ ಅವಕಾಶ ಇದೆ. ನಿಮ್ಮ ಆಧಾರ್ ಕಾರ್ಡ್​ಗೆ ಜೋಡಿತವಾದ ಮೊಬೈಲ್ ನಂಬರ್​ಗೆ ಬರುವ ಒಟಿಪಿಯ ಮೂಲಕ ಲಿಂಕ್ ಕಾರ್ಯವನ್ನು ಪೂರ್ಣಗೊಳಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:56 am, Thu, 29 June 23

Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!