Aadhaar PAN Linking: ಆಧಾರ್ ಮತ್ತು ಪ್ಯಾನ್​ನಲ್ಲಿ ಹೆಸರು ಇತ್ಯಾದಿ ಮ್ಯಾಚ್ ಆಗದೇ ಲಿಂಕ್ ಆಗುತ್ತಿಲ್ಲವಾ? ಐಟಿ ಇಲಾಖೆ ಕೊಟ್ಟ ಸಲಹೆಗಳಿವು

How To Update Aadhaar and PAN Card Data: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್​ನಲ್ಲಿ ಹೆಸರು, ಜನ್ಮದಿನಾಂಕ, ಲಿಂಗ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿಗಳು ಸರಿಹೊಂದದೇ, ಅವೆರಡೂ ಲಿಂಕ್ ಆಗುತ್ತಿಲ್ಲ ಎಂಬ ದೂರುಗಳಿವೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಐಟಿ ಇಲಾಖೆ ಕೆಲ ಸಲಹೆ ಕೊಟ್ಟಿದೆ...

Aadhaar PAN Linking: ಆಧಾರ್ ಮತ್ತು ಪ್ಯಾನ್​ನಲ್ಲಿ ಹೆಸರು ಇತ್ಯಾದಿ ಮ್ಯಾಚ್ ಆಗದೇ ಲಿಂಕ್ ಆಗುತ್ತಿಲ್ಲವಾ? ಐಟಿ ಇಲಾಖೆ ಕೊಟ್ಟ ಸಲಹೆಗಳಿವು
ಆಧಾರ್ ಪ್ಯಾನ್ ನಂಬರ್ ಲಿಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2023 | 8:32 AM

ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಲು (Aadhaar and Pan Linking) ಜೂನ್ 30 ಕೊನೆಯ ದಿನ. ಆಧಾರ್ ಜೊತೆ ಲಿಂಕ್ ಆಗಿಲ್ಲದ ಪ್ಯಾನ್ ನಂಬರ್​ಗಳು ನಿಷ್ಕ್ರಿಯಗೊಳ್ಳುತ್ತವೆ. ನೀವು ಐಟಿ ರಿಟರ್ನ್ ಫೈಲ್ ಮಾಡಲು ಇತ್ಯಾದಿ ಕಾರ್ಯಗಳಿಗೆ ಈ ನಿಷ್ಕ್ರಿಯ ಪ್ಯಾನ್ ನಂಬರ್ ಬಳಸುತ್ತಿದ್ದರೆ ಆಗ ಸಮಸ್ಯೆ ತಲೆದೋರುತ್ತದೆ. ಡೆಡ್​ಲೈನ್ ಸನಿಹ ಬಂದಿದ್ದರೂ ಬಹಳ ಮಂದಿ ಪ್ಯಾನ್ ಕಾರ್ಡ್​ದಾರರು ಆಧಾರ್​ಗೆ ಲಿಂಕ್ ಮಾಡಿಸಿಲ್ಲ. ನಾನಾ ಕಾರಣಕ್ಕೆ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗುತ್ತಿಲ್ಲ. ಇಲಾಖೆಯ ದೋಷದಿಂದಲೇ ಒಂದೇ ಪ್ಯಾನ್ ನಂಬರ್ ಒಬ್ಬರಿಗಿಂತ ಹೆಚ್ಚು ಮಂದಿಗೆ ಅಲಾಟ್ ಆಗಿಹೋಗಿರುವುದು, ಪ್ಯಾನ್ ಮತ್ತು ಆಧಾರ್ ದತ್ತಾಂಶದಲ್ಲಿ ಹೊಂದಾಣಿಕೆ ಇಲ್ಲದಿರುವುದು ಇತ್ಯಾದಿ ಕಾರಣಕ್ಕೆ ಲಿಂಕ್ ಆಗುತ್ತಿಲ್ಲ ಎಂಬ ದೂರುಗಳಿವೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್​ನಲ್ಲಿ ಹೆಸರು, ಜನ್ಮದಿನಾಂಕ, ಲಿಂಗ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿಗಳು ಸರಿಹೊಂದೇ, ಅವೆರಡೂ ಲಿಂಕ್ ಆಗುತ್ತಿಲ್ಲ ಎನ್ನುವ ದೂರುಗಳೂ ಸಾಕಷ್ಟಿವೆ. ಇಂಥ ಒಂದು ಸಂದರ್ಭದಲ್ಲಿ ಏನು ಮಾಡಬೇಕು? ಆದಾಯ ತೆರಿಗೆ ಇಲಾಖೆ ಇದಕ್ಕೆ ಕೆಲ ಸಲಹೆ ನೀಡಿದೆ.

ಹೆಸರು ಇತ್ಯಾದಿ ವಿವರದಲ್ಲಿ ವ್ಯತ್ಯಾಸ ಇದ್ದರೆ ಏನು ಮಾಡಬೇಕು?

ಪ್ಯಾನ್ ಕಾರ್ಡ್​ನಲ್ಲಿರುವ ಮಾಹಿತಿ ಅಪ್​ಡೇಟ್ ಮಾಡುವುದು ಹೀಗೆ….

ಪ್ಯಾನ್ ಕಾರ್ಡ್​ನಲ್ಲಿರುವ ಮಾಹಿತಿಯನ್ನು ಆಧಾರ್​ಗೆ ಹೊಂದಿಕೆಯಾಗುವಂತೆ ಬದಲಾಯಿಸಬೇಕೆಂದಿದ್ದರೆ ಪ್ಯಾನ್​ನ ಪೋರ್ಟಲ್​ಗಳಲ್ಲಿ ಅವಕಾಶ ಇದೆ. ಎರಡು ಪೋರ್ಟಲ್​ಗಳ ಯುಆರ್​ಎಲ್ ಇಲ್ಲಿ ಕೆಳಕಾಣಿಸಿದಂತಿವೆ:

ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿ ಅಪ್​ಡೇಟ್ ಮಾಡುವುದು ಹೀಗೆ….

ಪ್ಯಾನ್ ಕಾರ್ಡ್​ನಲ್ಲಿರುವ ನಿಮ್ಮ ವಿವರ ಸರಿಯಾಗಿದ್ದು ಆಧಾರ್ ಕಾರ್ಡ್​ನಲ್ಲಿ ಮಾಹಿತಿ ಬದಲಾಯಿಸಬೇಕೆಂದಿದ್ದರೆ ಯುಐಡಿಎಐ ವೆಬ್​ಸೈಟ್​ನಲ್ಲಿ ಅವಕಾಶ ಇದೆ. ಈ ವೆಬ್ ತಾಣಕ್ಕೆ ಲಾಗಿನ್ ಆಗಿ ನೀವು ಡೆಮೋಗ್ರಾಫಿಕ್ ಮಾಹಿತಿ ಪರಿಷ್ಕರಿಸಬಹುದು.

ಇದನ್ನೂ ಓದಿ: PM Kisan eKYC: ಪಿಎಂ ಕಿಸಾನ್ ಸ್ಕೀಮ್: ಇಕೆವೈಸಿ ಅಪ್​ಡೇಟ್ ಬಹಳ ಸುಲಭ; ಇಲ್ಲಿವೆ ವಿವಿಧ ವಿಧಾನಗಳು

ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿ ಪರಿಷ್ಕರಿಸಿದ ಬಳಿಕ ಆದಾಯ ತೆರಿಗೆ ಇಲಾಖೆಯ ಇಫೈಲಿಂಗ್ ಪೋರ್ಟಲ್​ಗೆ ಹೋಗಿ ಪ್ಯಾನ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡಲು ಪ್ರಯತ್ನಿಸಬಹುದು. ಈ ಪೋರ್ಟಲ್​ನ ಲಿಂಕ್ ಇಲ್ಲಿದೆ:

eportal.incometax.gov.in/iec/foservices/#/pre-login/bl-link-aadhaar

ಐಟಿ ಪೋರ್ಟಲ್​ನಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಇನ್ನೂ ಆಗುತ್ತಿಲ್ಲ ಎಂದರೆ….

ನೀವು ಪ್ಯಾನ್ ಮತ್ತು ಆಧಾರ್​ನಲ್ಲಿರುವ ಡೆಮಾಗ್ರಾಫಿಕ್ ಮಾಹಿತಿ ಸರಿಹೊಂದುವಂತೆ ಪರಿಷ್ಕರಿಸಿದ ಬಳಿಕವೂ ಆದಾಯ ತೆರಿಗೆ ಪೋರ್ಟಲ್​ನಲ್ಲಿ ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಲ್ಲಿ ನೇರವಾಗಿ ಪ್ಯಾನ್ ಸೆಂಟರ್​ಗೆ ಹೋಗಿ ಪ್ರಯತ್ನಿಸಬಹುದು.

ಪ್ಯಾನ್ ಸೇವಾ ನೀಡುಗರ ಯಾವುದಾದರೂ ಒಂದು ಕೇಂದ್ರಕ್ಕೆ ಹೋಗಿ ಅಲ್ಲಿ ಬಯೋಮೆಟ್ರಿಕ್ ಅಥೆಂಟಿಕೇಶನ್ ಮೂಲಕ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬಹುದು. ಇದಕ್ಕೆ 50 ರೂ ಶುಲ್ಕ ಇರುತ್ತದೆ. ಇಲ್ಲಿ ಹೋಗುವಾಗ ನಿಮ್ಮ ಜೊತೆ ಪ್ಯಾನ್ ಮತ್ತು ಆಧಾರ್ ದಾಖಲೆಗಳು ಇರಲಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್