Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan eKYC: ಪಿಎಂ ಕಿಸಾನ್ ಸ್ಕೀಮ್: ಇಕೆವೈಸಿ ಅಪ್​ಡೇಟ್ ಬಹಳ ಸುಲಭ; ಇಲ್ಲಿವೆ ವಿವಿಧ ವಿಧಾನಗಳು

How to Update eKYC For PM Kisan Scheme: ಪಿಎಂ ಕಿಸಾನ್ ಸ್ಕೀಮ್​ನಲ್ಲಿ ನೊಂದಾಯಿಸಿದವರೆಲ್ಲರೂ ಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯ. ಕೆವೈಸಿ ಪರಿಷ್ಕರಿಸದಿದ್ದವರಿಗೆ 13ನೇ ಕಂತಿನ ಹಣ ಸಿಕ್ಕಿರಲಿಲ್ಲ. ಈಗಲೂ ಅಂಥವರಿಗೆ 14ನೇ ಕಂತಿನ ಹಣ ಬರುವುವುದಿಲ್ಲ. ಆನ್​ಲೈನ್​ನಲ್ಲೇ ಇಕೆವೈಸಿ ಅಪ್​ಡೇಟ್ ಮಾಡುವ ಸುಲಭ ವಿಧಾನಗಳು ಇಲ್ಲಿವೆ.

PM Kisan eKYC: ಪಿಎಂ ಕಿಸಾನ್ ಸ್ಕೀಮ್: ಇಕೆವೈಸಿ ಅಪ್​ಡೇಟ್ ಬಹಳ ಸುಲಭ; ಇಲ್ಲಿವೆ ವಿವಿಧ ವಿಧಾನಗಳು
ಪಿಎಂ ಕಿಸಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 26, 2023 | 3:56 PM

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಕೇಂದ್ರದ 14ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ನಡೆದಿದೆ. ಯಾವಾಗ ಬೇಕಾದರೂ ಕಂತಿನ ಹಣ ಬಿಡುಗಡೆ ಆಗಬಹುದು. ಈ ವಾರವೇ 2,000 ರೂ ಬಿಡುಗಡೆ ಆಗುವ ಸಾಧ್ಯತೆ ಇಲ್ಲದಿಲ್ಲ. ಆದರೆ, 13ನೇ ಕಂತಿನ ಹಣ ಲಕ್ಷಾಂತರ ರೈತರಿಗೆ ಸಿಕ್ಕಿರಲಿಲ್ಲ. 13ನೇ ಕಂತು ಬಿಡುಗಡೆಗೂ ಮುನ್ನ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಅಪ್​ಡೇಟ್ ಮಾಡಲು ಹೇಳಿತ್ತು. ಇದನ್ನು ಮಾಡದವರಿಗೆ 13ನೇ ಕಂತಿನ ಹಣ ಸಿಕ್ಕಿರಲಿಲ್ಲ. ಅದಾದ ಬಳಿಕ ಇಕೆವೈಸಿ ಅಪ್​ಡೇಟ್ (eKYC updation) ಮಾಡಿದವರಿಗೆ 14ನೇ ಕಂತಿನ ಹಣ ಲಭ್ಯವಾಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ.

ನೀವು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದರೂ ಇಕೆವೈಸಿ ಮಾಡಿರಲೇಬೇಕು. ಕೆವೈಸಿ ಎಂದರೆ ನೋ ಯುವರ್ ಕಸ್ಟಮರ್ ಎಂದು. ಬ್ಯಾಂಕ್ ಮತ್ತಿತರ ಸೇವಾ ಸಂಸ್ಥೆಗಳು ಕೆವೈಸಿ ಮೂಲಕ ಕಾಲಕಾಲಕ್ಕೆ ಗ್ರಾಹಕರಿಂದ ದಾಖಲೆಗಳನ್ನು ಪರಿಷ್ಕರಿಸುತ್ತವೆ. ಅಂತೆಯೇ, ಪಿಎಂ ಕಿಸಾನ್ ಸ್ಕೀಮ್​ನಲ್ಲೂ ಕೆವೈಸಿ ಕಡ್ಡಾಯಪಡಿಸಲಾಗಿದೆ. ಆನ್​ಲೈನ್​ನಲ್ಲೇ ಕೆವೈಸಿ ಅಪ್​ಡೇಟ್ ಮಾಡಲು ಸರ್ಕಾರ ಹಲವು ಅವಕಾಶ ಕೊಟ್ಟಿದೆ. ಈ ವಿಧಾನಗಳ ಬಗ್ಗೆ ಒಂದು ಮಾಹಿತಿ

ಪಿಎಂ ಕಿಸಾನ್: ಓಟಿಪಿ ಮೂಲಕ ಇಕೆವೈಸಿ ಅಪ್​ಡೇಟ್

ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋದರೆ ಅಲ್ಲಿ ಫಾರ್ಮರ್ಸ್ ಕಾರ್ನರ್ ಬಾಕ್ಸ್ ಒಳಗೆ ಇಕೆವೈಸಿ ಆಪ್ಷನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ಅನ್ನು ಒದಗಿಸಿ ಸರ್ಚ್ ಕೊಡಿ.

ಇದನ್ನೂ ಓದಿBlocking Debit Card: ಎಸ್​ಬಿಐ ಡೆಬಿಟ್ ಕಾರ್ಡ್ ಕಳೆದುಹೋಗಿದೆಯೇ? ಬ್ಲಾಕ್ ಮಾಡುವ ಸುಲಭ ವಿಧಾನಗಳಿವು

ಆಧಾರ್​ಗೆ ಜೋಡಿತವಾದ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್ ಒಪಿಟಿ ಕ್ಲಿಕ್ ಮಾಡಿ. ಈಗ ನಿಮ್ಮ ಇಕೆವೈಸಿ ಪೂರ್ಣವಾದಂತೆ.

ಮುಖದ ಸ್ಕ್ಯಾನ್ ಮಾಡಿ ಪಿಎಂ ಕಿಸಾನ್ ಇಕೆವೈಸಿ ಅಪ್​ಡೇಟ್ ಮಾಡಿ

ಪಿಎಂ ಕಿಸಾನ್ ಆ್ಯಪ್ ಡೌನ್​ಲೋಡ್ ಮಾಡಿ. ನೀವು ಇಕೆವೈಸಿ ಅಪ್​ಡೇಟ್ ಮಾಡಿರದಿದ್ದರೆ ನೋ ಯೂಸರ್ ಸ್ಟೇಟಸ್ ಮಾಡ್ಯೂಲ್ ಅನ್ನು ಬಳಸಿ. ಅದರಲ್ಲಿ ಫೇಸ್ ಅಥೆಂಟಿಕೇಶನ್ ಫೀಚರ್ ಇರುತ್ತದೆ. ಅದರಲ್ಲಿ ಸ್ಕ್ಯಾನರ್ ಮೂಲಕ ಮುಖದ ಸ್ಕ್ಯಾನ್ ಮಾಡಿ ಸಬ್ಮಿಟ್ ಮಾಡಬೇಕು. ಆಗ ಇಕೆವೈಸಿ ಪೂರ್ಣಗೊಳ್ಳುತ್ತದೆ.

ಸರ್ವಿಸ್ ಸೆಂಟರ್​ಗೆ ಹೋಗಿ ಬಯೋಮೆಟ್ರಿಕ್ ಆಧಾರಿತವಾಗಿ ಇಕೆವೈಸಿ ಮಾಡಿ

ನಿಮಗೆ ಆನ್​ಲೈನ್​ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಅಪ್​ಡೇಟ್ ಮಾಡಲು ಹಿಂಜರಿಕೆಯಾದರೆ ಸಮೀಪದ ಕಾಮನ್ ಸರ್ವಿಸ್ ಸೆಂಟರ್​ಗೆ ಹೋಗಿಯೂ ಇಕೆವೈಸಿ ಅಪ್​ಡೇಟ್ ಮಾಡಬಹುದು. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕು.

ಇದನ್ನೂ ಓದಿAadhaar PAN: ನಿಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್​ಗೆ ಲಿಂಕ್ ಆಗಿದೆಯಾ? ಸರಿಪಡಿಸಲು ಹೀಗೆ ಮಾಡಿ

ಸರ್ವಿಸ್ ಸೆಂಟರ್​ನಲ್ಲಿ ಆಪರೇಟರ್​ಗೆ ನಿಮ್ಮ ಆಧಾರ್ ಕಾರ್ಡ್ ಕೊಟ್ಟರೆ ಅವರು ನಿಮ್ಮ ಬೆರಳ ಅಚ್ಚು ಸೇರಿದಂತೆ ಬಯೋಮೆಟ್ರಿಕ್ ಮಾಹಿತಿ ಪಡೆಯುತ್ತಾರೆ. ಇದು ಹೊಂದಿಕೆ ಆದಲ್ಲಿ ನಿಮ್ಮ ಇಕೆವೈಸಿ ಅಪ್​ಡೇಟ್ ಆಗುತ್ತದೆ.

ನಿಮ್ಮ ಇಕೆವೈಸಿ ಅಪ್​ಡೇಟ್ ಯಶಸ್ವಿಯಾಗಿದ್ದರೆ ಮೊಬೈಲ್ ನಂಬರ್​ಗೆ ದೃಢಪಡಿಸುವ ಮೆಸೇಜ್​ವೊಂದು ಬಂದಿರುತ್ತದೆ. ನಿಮಗೆ ಆ ಮೆಸೇಜ್ ಬಂದಿಲ್ಲದಿದ್ದರೆ, ಇಕೆವೈಸಿ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಪರಿಶೀಲಿಸಬಹುದು. ಆ ಪೋರ್ಟಲ್​ನಲ್ಲಿ ಫಾರ್ಮರ್ಸ್ ಕಾರ್ನರ್​ನಲ್ಲಿ ಬೆನಿಫಿಷಿಯರಿ ಸ್ಟೇಟಸ್ ಕ್ಲಿಕ್ ಮಾಡಿ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಅಥವಾ ಪಿಎಂ ಕಿಸಾನ್ ನೊಂದಣಿ ನಂಬರ್ ಮೂಲಕ ಸರ್ಚ್ ಮಾಡಿ ತಿಳಿದುಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ