Blocking Debit Card: ಎಸ್​ಬಿಐ ಡೆಬಿಟ್ ಕಾರ್ಡ್ ಕಳೆದುಹೋಗಿದೆಯೇ? ಬ್ಲಾಕ್ ಮಾಡುವ ಸುಲಭ ವಿಧಾನಗಳಿವು

Know How To Block SBI ATM Card: ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂ ಕಾರ್ಡ್ ಕಳೆದುಹೋಗಿದ್ದರೆ, ಅದನ್ನು ಬ್ಲಾಕ್ ಮಾಡಬೇಕು. ಈ ಕಾರ್ಯವನ್ನು ನಿಮ್ಮ ಮೊಬೈಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಮಾಡಬಹುದು.

Blocking Debit Card: ಎಸ್​ಬಿಐ ಡೆಬಿಟ್ ಕಾರ್ಡ್ ಕಳೆದುಹೋಗಿದೆಯೇ? ಬ್ಲಾಕ್ ಮಾಡುವ ಸುಲಭ ವಿಧಾನಗಳಿವು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Follow us
|

Updated on: Jun 26, 2023 | 11:11 AM

ನಮ್ಮ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಬಳಸುತ್ತೇವೆ. ಶಾಪಿಂಗ್ ಮಾಡಿದಾಗ ಹಣ ಪಾವತಿಗೆ ಡೆಬಿಟ್ ಕಾರ್ಡ್ (Debit Card) ಬಳಸುತ್ತೇವೆ. ನಾವು ಈ ಡೆಬಿಟ್ ಕಾರ್ಡ್​ಗಳನ್ನು ಕಳೆದುಕೊಳ್ಳುವ ಅಥವಾ ಕಳುವಾಗುವ ಸಂದರ್ಭ ಬರಬಹುದು. ದುಷ್ಕರ್ಮಿಗಳು ನಿಮ್ಮ ಕಾರ್ಡನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಅಂಥ ಸಂದರ್ಭದಲ್ಲಿ ಏನು ಮಾಡಬೇಕು? ಕಳುವಾದ ಆ ಡೆಬಿಟ್ ಕಾರ್ಡನ್ನು ಕೂಡಲೇ ನಿಷ್ಕ್ರಿಯಗೊಳಿಸಬೇಕು. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ(SBI) ಡೆಬಿಟ್ ಕಾರ್ಡ್ ನಿಮ್ಮದಾಗಿದ್ದರೆ ಮೂರ್ನಾಲ್ಕು ಸುಲಭ ವಿಧಾನಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು. ಎಸ್​ಬಿಐನ ಟಾಲ್​ಫ್ರೀ ನಂಬರ್, ಎಸ್ಸೆಮ್ಮೆಸ್ ಮತ್ತು ನೆಟ್​ಬ್ಯಾಂಕಿಂಗ್ ಮೂಲಕ ಕಾರ್ಡ್ ನಿಷ್ಕ್ರಿಯಗೊಳಿಸಲು ಸಾಧ್ಯ.

ಎಸ್​ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಲು ಟಾಲ್ ಫ್ರೀ ನಂಬರ್

ಕಳುವಾದ ನಿಮ್ಮ ಎಸ್​ಬಿಐ ಡೆಬಿಟ್ ಕಾರ್ಡನ್ನು ಬಹಲ ಸುಲಭವಾಗಿ ನಿಷ್ಕ್ರಿಯಗೊಳಿಸುವ ವಿಧಾನ ಎಂದರೆ ಅದು ಟಾಲ್ ಫ್ರೀ ನಂಬರ್​ಗೆ ಡಯಲ್ ಮಾಡುವುದು. ನೀವು 1800 112211 ಅಥವಾ 1800 4253800 ನಂಬರ್​ಗೆ ಕರೆ ಮಾಡುವ ಮೂಲಕ ಡೆಬಿಟ್ ಕಾರ್ಡ್ ನಿಷ್ಕ್ರಿಯಗೊಳಿಸಲು ಸಾಧ್ಯ. ಬ್ಯಾಂಕ್​ಗೆ ಜೋಡಿತವಾದ ನಿಮ್ಮ ಮೊಬೈಲ್ ನಂಬರ್​ನಿಂದ ಕರೆ ಮಾಡಬೇಕು.

ಇದನ್ನೂ ಓದಿEPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ

ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಎಸ್​ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವ ವಿಧಾನ

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್​ಸೈಟ್​ಗೆ ಲಾಗಿನ್ ಆಗಿ. ಅದರ ವಿಳಾಸ onlinesbi.com
  • ಲಾಗಿನ್ ಆದ ಬಳಿಕ ಇಸರ್ವಿಸ್ ಸೆಕ್ಷನ್​ಗೆ ಹೋಗಿ
  • ಎಟಿಎಂ ಕಾರ್ಡ್ ಸರ್ವಿಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಬ್ಲಾಕ್ ಎಟಿಎಂ ಕಾರ್ಡ್ ಅನ್ನು ಒತ್ತಿರಿ
  • ಕಾರ್ಡ್​ಗೆ ಜೋಡಿತವಾದ ಖಾತೆಯನ್ನು ಆರಿಸಿ
  • ಆ ಖಾತೆಗೆ ಸಂಬಂಧಿತವಾದ ಎಲ್ಲಾ ಕಾರ್ಡ್​ಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ಬ್ಲಾಕ್ ಆಗಿರುವ, ನಿಷ್ಕ್ರಿಯವಾಗಿರುವ ಮತ್ತು ಚಾಲ್ತಿಯಲ್ಲಿರುವ ಎಲ್ಲಾ ಕಾರ್ಡ್​ಗಳೂ ಕಾಣುತ್ತವೆ. ಈ ಕಾರ್ಡ್​ಗಳ ಮೊದಲ ನಾಲ್ಕು ಮತ್ತು ಕೊನೆಯ ನಾಲ್ಕು ಅಂಕಿಗಳು ಕಾಣುತ್ತವೆ.
  • ನೀವು ಈ ಪಟ್ಟಿಯಲ್ಲಿ ಬ್ಲಾಕ್ ಮಾಡಬೇಕೆಂದಿರುವ ಕಾರ್ಡನ್ನು ಆರಿಸಿಕೊಳ್ಳಿ
  • ಬ್ಲಾಕ್ ಮಾಡುವುದಕ್ಕೆ ಕಾರಣ ಏನೆಂದು ನಮೂದಿಸಿ.
  • ನಂತರ, ಸಬ್ಮಿಟ್ ಕೊಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ