EPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ

Using Umang app, How To Withdraw EPF Fund: ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಲು ಉಮಂಗ್ ಆ್ಯಪ್​ನಲ್ಲಿ ಸುಲಭ ಕ್ರಮಗಳಿವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ...

EPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ
ಉಮಂಗ್ ಆ್ಯಪ್
Follow us
|

Updated on: Jun 25, 2023 | 6:15 PM

ಉದ್ಯೋಗಿಗಳು ಕೆಲಸ ಮಾಡುವಾಗ ಪ್ರತೀ ತಿಂಗಳು ಸಂಬಳದಲ್ಲಿ ನಿರ್ದಿಷ್ಟ ಭಾಗವು ಇಪಿಎಫ್ ಖಾತೆಗೆ (EPF) ಜಮೆ ಆಗುತ್ತಾ ಹೋಗುತ್ತದೆ. ಇದು ನಿವೃತ್ತಿ ಬಳಿಕ ಜೀವನ ಸಹಾಯಕ್ಕೆಂದು ಕೇಂದ್ರದ ಇಪಿಎಫ್​ಒ ರೂಪಿಸಿರುವ ಯೋಜನೆ. ಇದೀಗ ಆನ್​ಲೈನ್​ನಲ್ಲಿ ಇಪಿಎಫ್ ಖಾತೆಯ ಎಲ್ಲಾ ವಿವರಗಳನ್ನೂ ನೋಡುವ ಅವಕಾಶ ಇದೆ. ಇಪಿಎಫ್​ಒನ ಪೋರ್ಟಲ್​ನಲ್ಲಿ ಮಾತ್ರವಲ್ಲ, ಉಮಂಗ್ ಆ್ಯಪ್​ನಲ್ಲೂ ಇಪಿಎಫ್ ಸೌಲಭ್ಯ ಇದೆ. ಇಪಿಎಫ್ ಅಷ್ಟೇ ಅಲ್ಲದೆ ಆಧಾರ್, ನ್ಯಾಷನಲ್ ಪೆನ್ಷನ್ ಸ್ಕೀಮ್, ಆಭಾ ಹೆಲ್ತ್ ಸ್ಕೀಮ್ (ABHA) ಇತ್ಯಾದಿ ಯೋಜನೆಗಳ ಮಾಹಿತಿ ಈ ಉಮಂಗ್ ಆ್ಯಪ್​ನಲ್ಲಿ ನೋಡಬಹುದಾಗಿದೆ.

ಉಮಂಗ್ ಆ್ಯಪ್​ನಲ್ಲಿ ಇಪಿಎಫ್​ನ ವಿವಿಧ ಸೇವೆಗಳು ಲಭ್ಯ ಇವೆ. ನಿಮ್ಮ ಯುಎಎನ್ ಅಡಿಯಲ್ಲಿ ಎಷ್ಟು ಇಪಿಎಫ್ ಖಾತೆಗಳಿವೆ, ಎಷ್ಟು ಹಣ ಶೇಖರಣೆ ಆಗಿದೆ ಇತ್ಯಾದಿ ವಿವರ ಇದೆ. ಅಲ್ಲದೇ ಇಪಿಎಫ್ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಅವಕಾಶವೂ ಇದೆ.

ಇದನ್ನೂ ಓದಿ7 IPOs: ಮುಂದಿನ ವಾರ ಏಳು ಐಪಿಒಗಳ ಬಿಡುಗಡೆ; 1600 ಕೋಟಿ ರೂ ಬಂಡವಾಳ ಸಂಗ್ರಹದ ಗುರಿ

ಉಮಂಗ್ ಆ್ಯಪ್​ನಲ್ಲಿ ಇಪಿಎಫ್ ಕ್ಲೈಮ್ ಮಾಡುವುದು ಹೇಗೆ?

  • ಉಮಂಗ್ ಆ್ಯಪ್ ಡೌನ್​ಲೋಡ್ ಮಾಡಿ, ಲಾಗಿನ್ ಆಗಿರಿ.
  • ಹೊಸದಾಗಿ ಸೈನಪ್ ಆಗಿದ್ದರೆ ಇಪಿಎಫ್​ಒ ಅನ್ನು ಸರ್ಚ್ ಮಾಡಿ ತೆರೆಯಿರಿ.
  • ಇಪಿಎಫ್​ಒ ಸೇವೆಗಳ ಪಟ್ಟಿಯಲ್ಲಿ ‘ರೈಸ್ ಕ್ಲೈಮ್’ ಮೇಲೆ ಕ್ಲಿಕ್ ಮಾಡಿ
  • ಯುಎಎನ್ ನಂಬರ್ ಹಾಕಿರಿ. ಬಳಿಕ ಯುಎಎನ್ ಜೊತೆ ಜೋಡಿತವಾಗಿರುವ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
  • ಹಣ ಹಿಂಪಡೆಯಲು ಯಾಕೆ ಎಂದು ಆರಿಸಿ, ಬಳಿಕ ಸಬ್ಮಿಟ್ ಕೊಡಿ

ಇದಾದ ಬಳಿಕ ನಿಮಗೆ ಸ್ವೀಕೃತಿ ಪತ್ರ ಅಥವಾ ಕ್ಲೈಮ್ ರೆಫರೆನ್ಸ್ ಸಂಖ್ಯೆ ಬರುತ್ತದೆ. ನಿಮ್ಮ ಅರ್ಜಿಯ ಸ್ಥಿತಿ ಏನಾಯಿತು ಎಂದು ತಿಳಿಯಲು ಈ ಸಂಖ್ಯೆಯನ್ನು ಬಳಸಬಹುದು. ಕೆಲ ದಿನಗಳಲ್ಲೇ ನಿಮ್ಮ ಕ್ಲೈಮ್ ಸ್ಥಿತಿಗತಿ ಏನೆಂದು ತಿಳಿಸಿ ಮೊಬೈಲ್ ನಂಬರ್​ಗೆ ಸಂದೇಶ ಬರುತ್ತದೆ. ಅಥವಾ ಉಮಂಗ್ ಆ್ಯಪ್​ಗೆ ಬಂದು ಬೇಕಾದರೂ ಇದನ್ನು ತಿಳಿಯಬಹುದು. ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗಿದ್ದರೆ ಅದಕ್ಕೆ ಏನು ಕಾರಣ ಎಂದೂ ಇದರಲ್ಲಿ ತಿಳಿಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ