7 IPOs: ಮುಂದಿನ ವಾರ ಏಳು ಐಪಿಒಗಳ ಬಿಡುಗಡೆ; 1600 ಕೋಟಿ ರೂ ಬಂಡವಾಳ ಸಂಗ್ರಹದ ಗುರಿ
Seven IPOs Offering Next Week: ಜೂನ್ 26ರಿಂದ 30ರವರೆಗೆ 3 ದೊಡ್ಡ ಕಂಪನಿಗಳು ಹಾಗೂ 4 ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಆಫರ್ ಕೊಡುತ್ತಿವೆ. ಈ ಏಳೂ ಕಂಪನಿಗಳು ಒಟ್ಟಾರೆ 1,600 ಕೋಟಿ ರೂ ಸಂಗ್ರಹದ ಗುರಿ ಇಟ್ಟುಕೊಂಡಿವೆ.
ನವದೆಹಲಿ: ಷೇರುಪೇಟೆ ಇತ್ತೀಚಿನ ಭರ್ಜರಿ ವ್ಯವಹಾರ ಕಾಣುತ್ತಿರುವ ಹೊತ್ತಿನಲ್ಲೇ ಐಪಿಒಗಳು ಸಾಲುಸಾಲಾಗಿ ಬಿಡುಗಡೆ ಆಗುತ್ತಿವೆ. ಜೂನ್ 26ರಿಂದ 30ರವರೆಗೆ 3 ದೊಡ್ಡ ಕಂಪನಿಗಳು ಹಾಗೂ 4 ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (IPO- Initial Public Offering) ಆಫರ್ ಕೊಡುತ್ತಿವೆ. ಈ ಏಳೂ ಕಂಪನಿಗಳು ಒಟ್ಟಾರೆ 1,600 ಕೋಟಿ ರೂ ಸಂಗ್ರಹದ ಗುರಿ ಇಟ್ಟುಕೊಂಡಿವೆ. ಇದರಲ್ಲಿ ಐಡಿಯಫೋರ್ಜ್, ಸೈಯೆಂಟ್ ಡಿಎಲ್ಎಂ, ಪಿಕೆಎಚ್ ವೆಂಚರ್ಸ್ ದೊಡ್ಡ ಮಟ್ಟದ ಕಂಪನಿಗಳೆನಿಸಿವೆ. ಪೆಂಟಗಾನ್ ರಬ್ಬರ್, ಗ್ಲೋಬಲ್ ಪೆಟ್ ಇಂಡಸ್ಟ್ರೀಸ್, ಸಿನಾಪ್ಟಿಕ್ಸ್ ಟೆಕ್ನಾಲಜೀಸ್, ತ್ರಿಧ್ಯಾ ಟೆಕ್ ಕಂಪನಿಗಳು ಎಸ್ಎಂಇಗಳಾಗಿವೆ.
ಐಡಿಯಾಫೋರ್ಜ್ ಟೆಕ್ನಾಲಜಿ (ideaForge Technology)
- ಐಪಿಒ ದಿನಾಂಕ: ಜೂನ್ 26ರಿಂದ 29ರವರೆಗೆ
- ಪ್ರತೀ ಷೇರಿನ ಬೆಲೆ: 638 ರೂನಿಂದ 672 ರೂ.
- ಕನಿಷ್ಠ ಷೇರು ಖರೀದಿ: 22
- ಒಟ್ಟು ಬಂಡವಾಳ ಗುರಿ: 567 ಕೋಟಿ ರೂ
- ಷೇರುಪೇಟೆಗೆ ಲಿಸ್ಟ್ ಆಗುವ ದಿನ: ಜುಲೈ 7ಕ್ಕೆ
ಸೈಯೆಂಟ್ ಡಿಎಲ್ಎಂ (Cyient DLM)
- ಐಪಿಒ ದಿನಾಂಕ: ಜೂನ್ 27ರಿಂದ 30ರವರೆಗೆ
- ಪ್ರತೀ ಷೇರಿನ ಬೆಲೆ: 250 ರೂನಿಂದ 265 ರೂವರೆಗೆ
- ಸಾರ್ವಜನಿಕರಿಗೆ ಲಭ್ಯ ಇರುವ ಒಟ್ಟು ಷೇರು: 2.23 ಕೋಟಿ ರೂ
- ಕನಿಷ್ಠ ಷೇರು ಖರೀದಿ: 56
- ಒಟ್ಟು ಬಂಡವಾಳ ಗುರಿ: 592 ಕೋಟಿ ರೂ
- ಷೇರುಪೇಟೆಗೆ ಲಿಸ್ಟ್ ಆಗುವ ದಿನ: ಜುಲೈ 10ಕ್ಕೆ
ಇದನ್ನೂ ಓದಿ: Forex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್ನಷ್ಟು ಹೆಚ್ಚಳ
ಪಿಕೆಎಚ್ ವೆಂಚರ್ಸ್ (PKH Ventures)
- ಐಪಿಒ ದಿನಾಂಕ: ಜೂನ್ 30ರಿಂದ ಜುಲೈ 4ರವರೆಗೆ
- ಒಟ್ಟು ಷೇರುಗಳು: 2.56 ಕೋಟಿ ರೂ
- ಪ್ರತೀ ಷೇರಿಗೆ ಆಫರ್ ಮಾಡಿರುವ ದರ: ಇನ್ನೂ ತಿಳಿಸಿಲ್ಲ
- ಒಟ್ಟು ಬಂಡವಾಳ ಗುರಿ: 380 ಕೋಟಿ ರೂ
- ಷೇರುಪೇಟೆಯಲ್ಲಿ ಲಿಸ್ಟ್ ಆಗುವ ದಿನ: ಜುಲೈ 12ಕ್ಕೆ
ಪೆಂಟಗಾನ್ ರಬ್ಬರ್ (Pentagon Rubber)
- ಐಪಿಒ ದಿನಾಂಕ: ಜೂನ್ 26ರಿಂದ ಜೂನ್ 30ರವರೆಗೂ
- ಒಟ್ಟು ಷೇರುಗಳು: 23.1 ಲಕ್ಷ ಈಕ್ವಿಟಿ ಷೇರುಗಳು
- ಪ್ರತೀ ಷೇರಿನ ಬೆಲೆ: 65ರಿಂದ 70 ರೂ
- ಒಟ್ಟು ಬಂಡವಾಳ ಗುರಿ: 16.17 ಕೋಟಿ ರೂ
ಗ್ಲೋಬಲ್ ಪೆಟ್ ಇಂಡಸ್ಟ್ರೀಸ್ (Global Pet Industries)
- ಐಪಿಒ ದಿನಾಂಕ: ಜೂನ್ 29ರಿಂದ ಜುಲೈ 3ರವರೆಗೆ
- ಪ್ರತೀ ಷೇರಿನ ಬೆಲೆ: 49 ರೂ
- ಒಟ್ಟು ಷೇರುಗಳು: 27 ಲಕ್ಷ
- ಬಂಡವಾಳ ಸಂಗ್ರಹ ಗುರಿ: 13.23 ಕೋಟಿ ರೂ
ಇದನ್ನೂ ಓದಿ: PM-Kisan Samman Nidhi Yojana: ಇ-ಕೆವೈಸಿ ಆಗದಿದ್ದರೆ ನಿಮ್ಮ ಖಾತೆಗೆ ಹಣ ಬರಲ್ಲಾ ಎಚ್ಚರ!
ಸಿನಾಪ್ಟಿಕ್ಸ್ ಟೆಕ್ನಾಲಜೀಸ್ (Synoptics Technologies)
- ಐಪಿಒ ದಿನಾಂಕ: ಜೂನ್ 30ರಿಂದ ಜುಲೈ 5ರವರೆಗೆ
- ಒಟ್ಟು ಷೇರುಗಳು: 22.88 ಲಕ್ಷ
- ಪ್ರತೀ ಷೇರಿನ ಬೆಲೆ: 237 ರೂ
- ಒಟ್ಟು ಬಂಡವಾಳ ಸಂಗ್ರಹ ಗುರಿ: 54.03 ಕೋಟಿ ರೂ
ತ್ರಿಧ್ಯಾ ಟೆಕ್ (Tridhya Tech)
- ಐಪಿಒ ದಿನಾಂಕ: ಜೂನ್ 30ರಿಂದ ಜುಲೈ 5ರವರೆಗೆ
- ಒಟ್ಟು ಷೇರುಗಳು: 62.88 ಲಕ್ಷ
- ಪ್ರತೀ ಷೇರಿನ ಬೆಲೆ: 35ರಿಂದ 42 ರೂ
- ಒಟ್ಟು ಬಂಡವಾಳ ಗುರಿ: 26.41 ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ