PM-Kisan Samman Nidhi Yojana: ಇ-ಕೆವೈಸಿ ಆಗದಿದ್ದರೆ ನಿಮ್ಮ ಖಾತೆಗೆ ಹಣ ಬರಲ್ಲಾ ಎಚ್ಚರ!

ಕೇಂದ್ರ ಸರ್ಕಾರ ರೈತರಿಗೆ ಅನಕೂಲವಾಗಲಿ ಅನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ, ಪ್ರತಿ ವರ್ಷ ಆರು ಸಾವಿರ ಹಣ ಖಾತೆಗೆ ಹಾಕುತ್ತದೆ. ರೈತರ ಅಕೌಂಟ್​​ಗೆ ಮೂರು ಕಂತಿನಲ್ಲಿ ಹಣ ಜಮೆಯಾಗುತ್ತದೆ. ದೇಶದ ಬಹುತೇಕ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಇನ್ನು ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೇ, ಕೂಡಲೇ ಇ- ಕೆ.ವೈ.ಸಿ ಮಾಡಿಸಿ. ಇಲ್ಲದಿದ್ದರೆ ನಿಮ್ಮ ಅಕೌಂಟ್​​​ಗೆ ಮುಂದಿನ ಕಂತು ಹಣ ಜಮೆಯಾಗಲ್ಲ.

PM-Kisan Samman Nidhi Yojana: ಇ-ಕೆವೈಸಿ ಆಗದಿದ್ದರೆ ನಿಮ್ಮ ಖಾತೆಗೆ ಹಣ ಬರಲ್ಲಾ ಎಚ್ಚರ!
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on: Jun 23, 2023 | 9:26 PM

ಕಲಬುರಗಿ: ಕೇಂದ್ರ ಸರ್ಕಾರ ರೈತರಿಗೆ ಅನಕೂಲವಾಗಲಿ ಅನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan Samman Nidhi Yojana) ಅಡಿ, ಪ್ರತಿ ವರ್ಷ ಆರು ಸಾವಿರ ಹಣ   (Farmers) ಖಾತೆಗೆ ಹಾಕುತ್ತದೆ. ರೈತರ ಅಕೌಂಟ್​​ಗೆ ಮೂರು ಕಂತಿನಲ್ಲಿ ಹಣ ಜಮೆಯಾಗುತ್ತದೆ. ದೇಶದ ಬಹುತೇಕ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಇನ್ನು ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೇ, ಕೂಡಲೇ ಇ- ಕೆ.ವೈ.ಸಿ ಮಾಡಿಸಿ. ಇಲ್ಲದಿದ್ದರೆ ನಿಮ್ಮ ಅಕೌಂಟ್​​​ಗೆ ಮುಂದಿನ ಕಂತು ಹಣ ಜಮೆಯಾಗಲ್ಲ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 01-04-2023ರಿಂದ ಬಾಕಿ ಇರುವ 14ನೇ ಕಂತಿನ ಸಹಾಯಧನ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಇದೂವರೆಗೆ ಇ-ಕೆ.ವೈ.ಸಿ. ಮಾಡಿಸದ ರೈತರು ಯೋಜನೆಯ ಆರ್ಥಿಕ ಸೌಲಭ್ಯ ಪಡೆಯಲು ಕೂಡಲೆ ಇ.ಕೆ.ವೈ.ಸಿ. ಮಾಡುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.

ಇ-ಕೆ.ವೈ.ಸಿ. ಮಾಡಿಸಲು ಇದೇ ಜೂನ್ 30 ಕೊನೆ ದಿನವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ಇ-ಕೆ.ವೈ.ಸಿ. ಮಾಡಿಸದ 75,562 ರೈತರು ಕೂಡಲೆ ಇ-ಕೆ.ವೈ.ಸಿ ಮಾಡಿಸುವಂತೆ ಕೋರಿದ್ದಾರೆ. ಒಂದು ವೇಳೆ ಇ-ಕೆ.ವೈ.ಸಿ. ಮಾಡಿಸದಿದ್ದಲ್ಲಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ ಸಿಗುವ 6,000 ರೂ. ಸಹಾಯಧನ ಸಿಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇ-ಕೆ.ವೈ.ಸಿ ಮಾಡಿಸೋದು ಹೇಗೆ?

ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಹಾಗೂ ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಓನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓ.ಟಿ.ಪಿ ಮೂಲಕ ಇ-ಕೆ.ವೈ.ಸಿ. ಮಾಡಿಸಬಹುದು. ಇದಲ್ಲದೆ ಹತ್ತಿರದ ಅಂಚೆ ಕಛೇರಿಗೆ ಭೇಟಿ ಮಾಡಿ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಅಥವಾ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪಿ.ಎಂ ಕಿಸಾನ್ ಮೋಬೈಲ್ ತಂತ್ರಾಂಶವನ್ನು ಮೋಬೈಲ್‌ನ ಪ್ಲೇಸ್ಟೋರ್‌ನಿಂದ ಡೌನಲೋಡ್ ಮಾಡಿಕೊಂಡು ಸ್ವತ ಫಲಾನುಭವಿಗಳ ತಮ್ಮ ಮುಖ ಚಹರೆ ತೋರಿಸುವ ಮೂಲಕ ಇ-ಕೆ.ವೈ.ಸಿ. ಮಾಡಿಕೊಳ್ಳಬಹುದು.

ರೈತರು ಒಂದು ಸಲ ಆನಲೈನ್ ಮೂಲಕ  ಇ-ಕೆ.ವೈ.ಸಿ ಆಗಿದೆಯೋ ಇಲ್ಲವೋ ಅನ್ನೋದನ್ನು ಪರಶೀಲಿಸಿಕೊಳ್ಳಿ. ಒಂದು ವೇಳೆ ಇ-ಕೆ.ವೈ.ಸಿ ಆಗದೇ ಇದ್ದರೆ ಕೂಡಲೇ ಇ-ಕೆ.ವೈ.ಸಿ ಮಾಡಿಸುವದು ಉತ್ತಮ. ಇಲ್ಲದಿದ್ದರೆ ಮುಂದಿನ ಕಂತಿನ ಹಣದಿಂದ ರೈತರು ವಂಚಿತರಾಗಬೇಕಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ