Film Scam: ನಕಲಿ ಸಿನಿಮಾ, ನಕಲಿ ವಿತರಕರ ಹೆಸರಲ್ಲಿ 1,500 ಕೋಟಿ ರೂ ಲಪಟಾಯಿಸಿಕೊಂಡಿತಾ ಎರೋಸ್? ಸೆಬಿ ತನಿಖೆಯಲ್ಲಿ ಕರ್ಮಕಾಂಡ ಬಯಲು

Eros International Name In Scam: ನಕಲಿ ಸಿನಿಮಾ ಮತ್ತು ನಕಲಿ ವಿತರಕರ ಹೆಸರಲ್ಲಿ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ 1,500 ಕೋಟಿ ರೂ ಅಕ್ರಮ ಎಸಗಿರುವುದನ್ನು ಸೆಬಿ ಪತ್ತೆ ಹೆಚ್ಚಿದೆ. ಇದರ ವಿವರ ಇಲ್ಲಿದೆ...

Film Scam: ನಕಲಿ ಸಿನಿಮಾ, ನಕಲಿ ವಿತರಕರ ಹೆಸರಲ್ಲಿ 1,500 ಕೋಟಿ ರೂ ಲಪಟಾಯಿಸಿಕೊಂಡಿತಾ ಎರೋಸ್? ಸೆಬಿ ತನಿಖೆಯಲ್ಲಿ ಕರ್ಮಕಾಂಡ ಬಯಲು
ಎರೋಸ್ ಇಂಟರ್ನ್ಯಾಷನಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2023 | 12:53 PM

ನವದೆಹಲಿ: ಕಪ್ಪು ಹಣ ಬಿಳಿ ಮಾಡಿಕೊಳ್ಳಲು ನಾಮಕಾವಸ್ತೆ ಸಿನಿಮಾ ತಯಾರಿಸುತ್ತಾರೆ ಎಂಬಂತಹ ಆರೋಪ ಚಿತ್ರರಂಗಗಳಲ್ಲಿ ಕೇಳಿಬರುತ್ತಿರುತ್ತವೆ. ವಿಶ್ವದ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ ಎರೋಸ್ ಇಂಟರ್ನ್ಯಾಷನಲ್ (Eros International Media) ನಕಲಿ ಚಿತ್ರ, ನಕಲಿ ವಿತರಕರ ಹೆಸರಿನಲ್ಲಿ 1,500 ರೂ ಲಪಟಾಯಿಸಿರುವ ಸಂಗತಿಯನ್ನು ಸೆಬಿ (SEBI) ಪತ್ತೆಹೆಚ್ಚಿದೆ. ಎರೋಸ್​ನ ಬೆನ್ನುಬಿದ್ದಿದ್ದ ಸೆಬಿ, ಅದರ ಎಂಡಿ ಆರ್ಜನ್ ಲುಲ್ಲಾ ಮತ್ತು ಸಿಇಒ ಪ್ರದೀಪ್ ಕುಮಾರ್ ದ್ವಿವೇದಿ ಅವರನ್ನು ಕಂಪನಿಯಲ್ಲಿ ಬೋರ್ಡ್ ಸ್ಥಾನ ಹೊಂದದಂತೆ ನಿರ್ಬಂಧಿಸಿ ಜೂನ್ 22ರಂದು ಮಧ್ಯಂತರ ಆದೇಶ ಹೊರಡಿಸಿದೆ. ಹಾಗೆಯೇ, ಮುಂದಿನ ಆದೇಶ ಬರುವವರೆಗೂ ಎರೋಸ್ ಇಂಟರ್ನ್ಯಾಷನಲ್ ಹಾಗೂ ಬೇರೆ ಎರಡು ಸಂಬಂಧಿತ ಕಂಪನಿಗಳು ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸದಂತೆ ನಿಷೇಧ ಕೂಡ ಹಾಕಲಾಗಿದೆ. ಅಂದರೆ ಇದರ ಯಾವ ಷೇರುಗಳ ವಹಿವಾಟು ನಡೆದಂತೆ ನಿರ್ಬಂಧಿಸಲಾಗಿದೆ. ಸೆಬಿಯಿಂದ ತನಿಖೆ ಪೂರ್ಣ ಆಗುವವರೆಗೂ ಎರೋಸ್ ಇಂಟರ್ನ್ಯಾಷನಲ್​ನ ಸಾರ್ವಜನಿಕ ಷೇರುದಾರರು ಮತ್ತು ಇತರ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗಾಗಿ ಹಾಗೂ ಎರೋಸ್​ನ ಷೇರುಗಳ ಕುಸಿತ ಆಗದಂತೆ ಎಚ್ಚರ ವಹಿಸುವ ಸಲುವಾಗಿ ಸೆಬಿ ಈ ಕ್ರಮ ಕೈಗೊಂಡಿದೆ.

ಸೆಬಿ ಮಧ್ಯಂತರ ಆದೇಶ ಹೊರಬಂದದ್ದು ಜೂನ್ 22ರಂದು. ಆಗ ಅದರ ಷೇರು ಬೆಲೆ 26 ರೂಗೂ ಹೆಚ್ಚು ಇತ್ತು. ಜೂನ್ 23ರಂದು ಅದರ ಬೆಲೆ 21.10 ರೂಗೆ ಇಳಿದಿದೆ. ಶೇ. 6ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿAmazon: ಅಮೇಜಾನ್​ನಿಂದ ಹೆಚ್ಚುವರಿ 1.23 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ; ಮೋದಿ ಭೇಟಿ ಬಳಿಕ ಸಿಇಒ ಹೇಳಿಕೆ

ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಮಾಡಿದ ಕರ್ಮಕಾಂಡ ಏನು?

2019-20ರ ಹಣಕಾಸು ವರ್ಷದಲ್ಲಿ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಬಿಡುಗಡೆ ಮಾಡಿದ ಹಣಕಾಸು ವರದಿ ಸೆಬಿ ಗಮನ ಸೆಳೆದಿತ್ತು. ಅದರಲ್ಲಿ 1,553.52 ಕೋಟಿ ರೂನಷ್ಟು ನಷ್ಟ ಆಗಿದೆ ಎಂದು ವರದಿಯಲ್ಲಿ ತೋರಿಸಲಾಗಿತ್ತು. ಚಲನಚಿತ್ರಗಳ ವಿತರಣಾ ಹಕ್ಕು, ಅಡ್ವಾನ್ಸ್ ಇತ್ಯಾದಿಯಲ್ಲಿ ನಷ್ಟ ಎನ್ನಲಾಗಿತ್ತು. ಈ ಪೈಕಿ ಥಿಯೇಟರ್​ಗಳಲ್ಲಿ ಚಿತ್ರಗಳ ಬಿಡುಗಡೆಗೆ ಮತ್ತು ಸೆಟಿಲೈಟ್ ಬ್ರಾಡ್​​ಕ್ಯಾಸ್ಟಿಂಗ್​ಗೆ ಕಮರ್ಷಿಯಲ್ ಹಕ್ಕು ಇತ್ಯಾದಿಗೆ 519.98 ಕೋಟಿ ರೂ ಹಣ ನಷ್ಟವಾಗಿದೆ ಎಂದು ವರದಿಯಲ್ಲಿ ಬಿಂಬಿಸಲಾಗಿತ್ತು. ಅ ವರ್ಷ ಸಲ್ಲಿಸಿದ ಈ ಫೈಲಿಂಗ್ ಬಗ್ಗೆ ಎನ್​ಎಸ್​ಇಗೆ ಅನುಮಾನ ಬಂದು, ಸೆಬಿಯ ಗಮನಕ್ಕೆ ತಂದಿತ್ತು. ಸೆಬಿ ದರ ಜಾಡು ಹಿಡಿದು ಹೊರಟಾಗ ಭಯಂಕರ ಸತ್ಯಗಳು ಹೊರಬಂದಿವೆ.

ಸೆಬಿ ನೀಡಿರುವ ಮಾಹಿತಿ ಪ್ರಕಾರ, ಕಳೆದ 10 ವರ್ಷಗಳಿಂದಲೂ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ನಕಲಿ ಸಿನಿಮಾ, ನಕಲಿ ವಿತರಕರ ಹೆಸರಿನಲ್ಲಿ ಸುಳ್ಳು ಲೆಕ್ಕಗಳನ್ನು ಸೃಷ್ಟಿಸಿತ್ತು. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಅದು ದುರುಪಯೋಗಿಸಿಕೊಂಡು ಹಣ ಮಾಡಿಕೊಂಡಿದೆ. ನಕಲಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮುಂಗಡ ಕೊಟ್ಟಿರುವ ಲೆಕ್ಕ ತೋರಿಸಿದೆ. ಸೆಟಿಲೈಟ್ ಮತ್ತು ವಿತರಣಾ ಹಕ್ಕುಗಳನ್ನು ಖರೀದಿಸಿದ ನಕಲಿ ಕಂಪನಿಗಳು ನೀಡಬೇಕಾದ ಹಣವನ್ನು ಮನ್ನಾ ಮಾಡಲಾಗಿದೆ. ಹಣ ಪಡೆಯಲು ಒಂದು ವರ್ಷದ ಗಡುವು ಇದ್ದರೂ ಎರೋಸ್ ಸಂಸ್ಥೆ ತರಾತುರಿಯಲ್ಲಿ ಆ ಹಣವನ್ನು ಮನ್ನಾ ಮಾಡಿದೆ. ಚಲನಚಿತ್ರಗಳ ನಿರ್ಮಾಣಕ್ಕಾಗಿ ಕಂಪನಿ ಸಾಕಷ್ಟು ಹಣವನ್ನು ವರ್ಗಾವಣೆ ಮಾಡಿದ್ದರೂ ಆ ಯಾವ ಸಿನಿಮಾ ಕೂಡ ನಿರ್ಮಾಣವಾಗಿಲ್ಲ.

ಇದನ್ನೂ ಓದಿForex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಸೆಬಿ ಈ ಒಪ್ಪಂದಗಳ ಪ್ರತಿಗಳನ್ನು ಕೊಡಬೇಕೆಂದು ಎರೋಸ್ ಸಂಸ್ಥೆಯನ್ನು ಕೇಳಿದಾಗ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ವಿತರಣಾ ಹಕ್ಕು ಮತ್ತು ಪ್ರಸಾರ ಹಕ್ಕು ಕೊಡಲಾದ 17 ಸಂಸ್ಥೆಗಳ ಪೈಕಿ ಹತ್ತು ಪೂರ್ಣ ನಕಲಿಯೆ ಅಗಿವೆ. ಉಳಿದ 7 ಕಂಪನಿಗಳ ಜಾಡು ಹಿಡಿಯುವಲ್ಲಿ ಸೆಬಿ ಯಶಸ್ವಿಯಾದರೂ ಅವುಗಳಿಂದಲೂ ಅಸ್ಪಷ್ಟ ಮಾಹಿತಿ ಬಂದಿದೆ. ಈ ಕಂಪನಿಗಳ ನಿರ್ದೇಶಕರೂ ನಕಲಿಗಳೇ ಅಗಿವೆ. ಚಲನ ಚಿತ್ರಗಳ ಹಕ್ಕು ಪಡೆದ ಇವರು ಆ ಹಕ್ಕನ್ನು ವಾಣಿಜ್ಯಾತ್ಮಕವಾಗಿ ಹೇಗೆ ಬಳಕೆ ಮಾಡಲಾಯಿತು ಇತ್ಯಾದಿ ಯಾವ ಮಾಹಿತಿಯನ್ನೂ ಈ ಕಂಪನಿಗಳು ನೀಡಲು ವಿಫಲವಾಗಿವೆ. ಅಲ್ಲದೇ ಈ ಸಿನಿಮಾಗಳು ಪ್ರಸಾರವಾಗಬೇಕಾದರೆ ಸೆನ್ಸಾರ್ ಮಂಡಳಿಯಿಂದ ಪ್ರತ್ಯೇಕವಾಗಿ ಕನಿಷ್ಠ 977 ಅಪ್ರೂವಲ್​ಗಳನ್ನು ಪಡೆಯಬೇಕಾಗುತ್ತದೆ. ಆದರೆ, ಸೆಬಿಯ ತನಿಖಾಧಿಕಾರಿಗಳಿಗೆ ಒಂದಾದರೂ ಅನುಮೋದನೆ ಕಂಡುಬರಲಿಲ್ಲ. ಇವರೆಲ್ಲರೂ ನಕಲಿ ವಿತರಕರೆಂಬುದು ಸೆಬಿಗೆ ಮನದಟ್ಟಾಗಿದೆ.

ಆರೋಪ ನಿರಾಕರಿಸಿದ ಎರೋಸ್

ಆದರೆ, ಸೆಬಿ ಆದೇಶವನ್ನು ಎರೋಸ್ ಇಂಟರ್ನ್ಯಾಷನಲ್ ಮೀಡಿಯಾ ಸಂಸ್ಥೆ ಪ್ರಶ್ನಿಸಿದೆ. ತನ್ನಿಂದ ಯಾವುದೇ ಅಕ್ರಮ ಅಗಿಲ್ಲ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅದು ಹೇಳಿದೆ.

ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಬಹಳಷ್ಟು ದೊಡ್ಡದೊಡ್ಡ ಹಾಲಿವುಡ್ ಸಿನಿಮಾಗಳನ್ನು ನಿರ್ಮಿಸಿದೆ. ಬಾಜಿರಾವ್ ಮಸ್ತಾನಿ ಇತ್ಯಾದಿ ದೊಡ್ಡಬಜೆಟ್​ನ ಬಾಲಿವುಡ್ ಚಿತ್ರಗಳನ್ನೂ ನಿರ್ಮಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ