AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon: ಅಮೇಜಾನ್​ನಿಂದ ಹೆಚ್ಚುವರಿ 1.23 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ; ಮೋದಿ ಭೇಟಿ ಬಳಿಕ ಸಿಇಒ ಹೇಳಿಕೆ

India's eCommerce Industry: ಬಹಳ ದೊಡ್ಡ ರೀಟೆಲ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಅಮೇಜಾನ್ ತನ್ನ ಬಂಡವಾಳ ಹೂಡಿಕೆಯನ್ನು ಎರಡು ಪಟ್ಟು ಹೆಚ್ಚಿಸಲು ಬದ್ಧವಾಗಿದೆ. ಅಮೆಜಾನ್ ಸಿಇಒ ಅವರೇ ಖುದ್ದಾಗಿ ಈ ವಿಚಾರ ತಿಳಿಸಿದ್ದಾರೆ.

Amazon: ಅಮೇಜಾನ್​ನಿಂದ ಹೆಚ್ಚುವರಿ 1.23 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ; ಮೋದಿ ಭೇಟಿ ಬಳಿಕ ಸಿಇಒ ಹೇಳಿಕೆ
ಅಮೇಜಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2023 | 11:52 AM

Share

ನವದೆಹಲಿ: ವಿಶ್ವದ ಪ್ರಮುಖ ಕಾರ್ಖಾನೆಯಾಗಲು ಹೊರಟಿರುವ ಭಾರತ ವಿಶ್ವಕ್ಕೆ ದೊಡ್ಡ ಮಾರುಕಟ್ಟೆಯೂ ಆಗಿದೆ. ಚೀನಾದಂತೆ ಭಾರತದ ಮಾರುಕಟ್ಟೆ ಅರ್ಧ ಮುಚ್ಚಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬಂಡವಾಳ ಹೂಡಲು ಬಹುರಾಷ್ಟ್ರೀಯ ಕಂಪನಿಗಳು ಮುಗಿಬೀಳುತ್ತವೆ. ವಿಶ್ವ ಇಕಾಮರ್ಸ್ ದಿಗ್ಗಜ ಅಮೇಜಾನ್ (Amazon) ಭಾರತದಲ್ಲಿ ಬಂಡವಾಳ ಹೆಚ್ಚಿಸಲು ನಿರ್ಧರಿಸಿದೆ. ಈಗಾಗಲೇ 11 ಬಿಲಿಯನ್ ಡಾಲರ್​ನಷ್ಟು (ಸುಮಾರು 90,000 ಕೋಟಿ ರೂ) ಮೊತ್ತದ ಬಂಡವಾಳವನ್ನು (Investment) ಭಾರತದಲ್ಲಿ ಹಾಕಿರುವ ಅಮೇಜಾನ್ ಮುಂಬರುವ ಎರಡು ಪಟ್ಟಿಗೂ ಹೆಚ್ಚು ಬಂಡವಾಳ ಹೆಚ್ಚಿಸಲಿದೆ. ವರದಿಗಳ ಪ್ರಕಾರ ಮುಂದಿನ 7 ವರ್ಷಗಳಲ್ಲಿ ಅಮೇಜಾನ್ ಹೆಚ್ಚುವರಿ 15 ಬಿಲಿಯನ್ ಡಾಲರ್ (ಸುಮಾರು 1.23 ಲಕ್ಷ ಕೋಟಿ ರೂ) ಹೆಚ್ಚುವರಿ ಬಂಡವಾಳ ಹೂಡುವ ನಿರೀಕ್ಷೆ ಇದೆ. ಇದರೊಂದಿಗೆ ಭಾರತದಲ್ಲಿ ಅಮೇಜಾನ್​ನ ಒಟ್ಟು ಹೂಡಿಕೆ 26 ಬಿಲಿಯನ್ ಡಾಲರ್, ಅಂದರೆ ಸುಮಾರು 2.13 ಲಕ್ಷ ಕೋಟಿ ರೂ ಆಗಲಿದೆ.

ಅಮೇಜಾನ್ ಭಾರತದಲ್ಲಿ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಬದ್ಧವಾಗಿರುವ ವಿಚಾರವನ್ನು ಸ್ವತಃ ಅದರ ಸಿಇಒ ಆಂಡಿ ಜ್ಯಾಸಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿ, ವಾಗ್ದಾನ ಕೊಟ್ಟಿದ್ದಾರೆನ್ನಲಾಗಿದೆ. ಮೋದಿ ಅವರ ಅಮೆರಿಕ ಭೇಟಿ ವೇಳೆ ಈ ಬೆಳವಣಿಗೆ ಆಗಿದೆ.

2030ರಷ್ಟರಲ್ಲಿ ಭಾರತದಲ್ಲಿ 26ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಲು ಅಮೇಜಾನ್ ಬದ್ಧವಾಗಿರುವ ಬಗ್ಗೆ ಚರ್ಚಿಸಿದೆವು. ಸ್ಟಾರ್ಟಪ್​ಗಳಿಗೆ ಬೆಂಬಲಿಸುವುದು, ಉದ್ಯೋಗಸೃಷ್ಟಿ, ರಫ್ತಿಗೆ ಉತ್ತೇಜನ, ವ್ಯಕ್ತಿಗಳ ಸಬಲೀಕರಣ, ಸಣ್ಣ ಉದ್ಯಮಗಳ ಜಾಗತಿಕ ಸ್ಪರ್ಧಾತ್ಮಕತೆ ಇತ್ಯಾದಿಗೆ ನೆರವು ಒದಗಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಅಮೇಜಾನ್ ಸಿಇಒ ಟ್ವೀಟ್ ಮಾಡಿದ್ದಾರೆ.

ಭಾರತದ ಇಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಅಮೇಜಾನ್ ತಾನು ಭಾರತದಲ್ಲಿ 13ಲಕ್ಷದಷ್ಟು ನೇರ ಮತ್ತು ಪರೋಕ್ಷ ಉದ್ಯೋಗಸೃಷ್ಟಿಗೆ ಕಾರಣವಾಗಿರುವುದಾಗಿ ಇತ್ತೀಚೆಗೆ ಹೇಳಿಕೊಂಡಿತ್ತು. 62 ಲಕ್ಷ ಸಣ್ಣ ಉದ್ದಮಿಗಳನ್ನು ಡಿಜಿಟೈಸ್ ಮಾಡಿದ್ದೇವೆ. 7 ಬಿಲಿಯನ್ ಡಾಲರ್ ಮೊತ್ತದಷ್ಟು ರಫ್ತಿಗೆ ಕಾರಣವಾಗಿದ್ದೇವೆ ಎಂದೂ ಅಮೇಜಾನ್ ತನ್ನ ಬ್ಲಾಗ್​ವೊಂದರಲ್ಲಿ ಹೇಳಿತ್ತು.

ಇದನ್ನೂ ಓದಿForex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಭಾರತದ ಇಕಾಮರ್ಸ್ ಮಾರುಕಟ್ಟೆಯಲ್ಲಿ ಈವರೆಗೂ ಸಿಂಹಪಾಲು ಹೊಂದಿರುವುದು ಅಮೆಕನ್ ಕಂಪನಿಗಳೇ. ಒಂದು ಅಮೇಜಾನ್ ಮತ್ತೊಂದು ಫ್ಲಿಪ್​ಕಾರ್ಟ್. ಫ್ಲಿಪ್​ಕಾರ್ಟ್ ಮೂಲತಃ ಭಾರತೀಯರು ಸ್ಥಾಪಿಸಿದ ಸ್ಟಾರ್ಟಪ್ ಆದರೂ ಅಮೆರಿಕದ ರೀಟೇಲ್ ಚೈನ್ ದೈತ್ಯ ವಾಲ್ಮಾರ್ಟ್ ಸಂಸ್ಥೆ ಕೆಲ ವರ್ಷಗಳ ಹಿಂದೆ ಫ್ಲಿಪ್​ಕಾರ್ಟ್ ಅನ್ನು ಖರೀದಿಸಿತ್ತು.

ಅಮೇಜಾನ್​ಗೆ ಈಗ ನೇರವಾಗಿ ಪೈಪೋಟಿ ನೀಡುತ್ತಿರುವ ಭಾರತೀಯ ಕಂಪನಿ ಎಂದರೆ ಅದು ರಿಲಾಯನ್ಸ್ ಗ್ರೂಪ್​ನದ್ದು. ರಿಲಾಯನ್ಸ್ ರೀಟೇಲ್ ಸಂಸ್ಥೆ ಅಮೇಜಾನ್​ನಷ್ಟು ಆನ್​ಲೈನ್​ನಲ್ಲಿ ಇನ್ನೂ ಪ್ರಬಲವಾಗಿಲ್ಲ. ಆದರೆ, ಅದರ ಆಫ್​ಲೈನ್ ಸ್ಟೋರ್​ಗಳು ಬಹಳಷ್ಟು ಇದ್ದು, ಮುಂಬರುವ ವರ್ಷಗಳಲ್ಲಿ ಆನ್​ಲೈನ್ ಉಪಸ್ಥಿತಿ ಹೆಚ್ಚಿಸಿಕೊಳ್ಳಲು ಹೊರಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!