Infosys: ಡೆನ್ಮಾರ್ಕ್ ದೇಶದ ಬ್ಯಾಂಕ್​ಗೆ ಐಟಿ ಸೇವೆಯ ಗುತ್ತಿಗೆ ಇನ್ಫೋಸಿಸ್ ಪಾಲು; ಇನ್ಫೋಸಿಸ್ ಸುಪರ್ದಿಗೆ ಬರಲಿದೆ ಬೆಂಗಳೂರಿನ ಡ್ಯಾನ್​ಸ್ಕ್ ಸೆಂಟರ್

Danske Bank IT Service By Infosys: ಡೆನ್ಮಾರ್ಕ್ ದೇಶದ ಡ್ಯಾನ್​ಸ್ಕ್ ಬ್ಯಾಂಕ್​ಗೆ ಜನರೇಟಿವ್ ಎಐ ಸೇರಿದಂತೆ ಐಟಿ ತಂತ್ರಜ್ಞಾನ ಅಳವಡಿಕೆಯ ಕಾರ್ಯಕ್ಕೆ ಇನ್ಫೋಸಿಸ್ ಗುತ್ತಿಗೆ ಪಡೆದಿದೆ. ಐದು ವರ್ಷದ ಈ ಗುತ್ತಿಗೆ ಮೌಲ್ಯ 3,690 ಕೋಟಿ ರೂ ಎಂದಿದೆ.

Infosys: ಡೆನ್ಮಾರ್ಕ್ ದೇಶದ ಬ್ಯಾಂಕ್​ಗೆ ಐಟಿ ಸೇವೆಯ ಗುತ್ತಿಗೆ ಇನ್ಫೋಸಿಸ್ ಪಾಲು; ಇನ್ಫೋಸಿಸ್ ಸುಪರ್ದಿಗೆ ಬರಲಿದೆ ಬೆಂಗಳೂರಿನ ಡ್ಯಾನ್​ಸ್ಕ್ ಸೆಂಟರ್
ಇನ್ಫೋಸಿಸ್
Follow us
|

Updated on: Jun 26, 2023 | 1:50 PM

ಬೆಂಗಳೂರು: ಅಮೆರಿಕದ ಕಂಪನಿಗಳಿಗೆ ಐಟಿ ಸೇವೆ ಒದಗಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದ ಭಾರತದ ಐಟಿ ಕಂಪನಿಗಳಿಗೆ ಈಗ ಯೂರೋಪ್​ನಿಂದ ಆದಾಯಮೂಲ ಹೆಚ್ಚುತ್ತಿರುವ ಟ್ರೆಂಡ್ ಕಾಣುತ್ತಿದೆ. ಅಮೆರಿಕದ ಟ್ರಾನ್ಸಮೆರಿಕಾ ಕಂಪನಿ ಟಿಸಿಎಸ್ ಜೊತೆಗಿನ 2 ಬಿಲಿಯನ್ ಡಾಲರ್ ಒಪ್ಪಂದವನ್ನು ಮಧ್ಯದಲ್ಲೇ ಕೈಬಿಡಲು ನಿರ್ಧರಿಸಿದ್ದೂ ಸೇರಿದಂತೆ ಭಾರತೀಯ ಐಟಿ ಕಂಪನಿಗಳಿಗೆ ಈಗ ಅಮೆರಿಕದಿಂದ ಹೆಚ್ಚು ವ್ಯವಹಾರ ಸಿಗುತ್ತಿಲ್ಲ. ಈ ಮಧ್ಯೆ ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್​ಗೆ ಐರೋಪ್ಯ ದೇಶವೊಂದರ ಕಂಪನಿಯಿಂದ ಒಳ್ಳೆಯ ಒಪ್ಪಂದ ಸಿಕ್ಕಿದೆ. ಡೆನ್ಮಾರ್ಕ್ ದೇಶದ ಡ್ಯಾನ್​ಸ್ಕ್ ಬ್ಯಾಂಕ್ (Dansk Bank) 450 ಮಿಲಿಯನ್ ಡಾಲರ್ (ಸುಮಾರು 3,690 ಕೋಟಿ ರೂ) ಮೊತ್ತದ ಒಪ್ಪಂದವನ್ನು ಇನ್ಪೋಸಿಸ್ ಜೊತೆ ಮಾಡಿಕೊಂಡಿದೆ. ಡೆನ್ಮಾರ್ಕ್​ನ ಈ ಪ್ರಮುಖ ಬ್ಯಾಂಕ್​ಗೆ ಎಐ ಇತ್ಯಾದಿ ಹೊಸ ತಂತ್ರಜ್ಞಾನದ ಅಳವಡಿಕೆ ಮಾಡಿ, ಅದರ ಸೇವೆಯನ್ನು ಉನ್ನತ ಸ್ತರಕ್ಕೆ ಏರಿಸುವ ಹೊಣೆಗಾರಿಕೆ ಇನ್ಫೋಸಿಸ್ ಮೇಲಿದೆ. ಐದು ವರ್ಷಗಳ ಅವಧಿಗೆ ಈ ಗುತ್ತಿಗೆ ಇರಲಿದೆ. ಡ್ಯಾನ್​ಸ್ಕ್ ಬ್ಯಾಂಕ್ ಇಚ್ಛಿಸಿದಲ್ಲಿ ಹೆಚ್ಚುವರಿ 3 ವರ್ಷ ಕಾಲ ಒಪ್ಪಂದದ ಅವಧಿ ಹೆಚ್ಚಿಸಬಹುದು. ಇದೇ ಸೆಪ್ಪಂಬರ್ ತಿಂಗಳ ಕೊನೆಯೊಳಗೆ ಇನ್ಫೋಸಿಸ್ ಮತ್ತು ಡ್ಯಾನ್​ಸ್ಕ್ ಬ್ಯಾಂಕ್ ಮಧ್ಯೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಡ್ಯಾನ್​ಸ್ಕ್ ಬ್ಯಾಂಕ್ ಬೆಂಗಳೂರಿನಲ್ಲೇ ಟೆಕ್ನಾಲಜಿ ಸಪೋರ್ಟ್ ಸೆಂಟರ್ ಹೊಂದಿದ್ದು ಅದರಲ್ಲಿ 1,400 ಮಂದಿ ಉದ್ಯೋಗಿಗಳಿದ್ದಾರೆ. ಒಪ್ಪಂದದ ಪ್ರಕಾರ, ಈ ಐಟಿ ಕೇಂದ್ರವು ಇನ್ಫೋಸಿಸ್ ಸ್ವಾಧೀನಕ್ಕೆ ಹೋಗಲಿದ್ದು, 1400 ಉದ್ಯೋಗಿಗಳು ಇನ್ಫೋಸಿಸ್ ನಿರ್ವಹಣೆಯ ಅಡಿಯಲ್ಲಿ ಇರುತ್ತಾರೆ. ಈ ಟೆಕ್ನಾಲಜಿ ಸೆಂಟರ್​ಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆ ಮಾಡಲಾಗುತ್ತದೆ. ಇನ್ಫೋಸಿಸ್ ಟೋಪಾಜ್ ಎಂಬ ಜನರೇಟಿವ್ ಎಐ ಸರ್ವಿಸ್​ಗಳ ಸ್ಯೂಟ್ ಅನ್ನು ಡ್ಯಾನ್​ಸ್ಕ್ ಬ್ಯಾಂಕ್​ನ ಟೆಕ್ನಾಲಜಿ ಸೆಂಟರ್​ಗೆ ಅಳವಡಿಸಲಾಗುತ್ತದೆ ಎಂದು ಮಾಧ್ಯಮಗಳಿಗೆ ಮಾಹಿಇತ ಸಿಕ್ಕಿದೆ.

ಇದನ್ನೂ ಓದಿShree Cements: ಶ್ರೀ ಸಿಮೆಂಟ್ಸ್ ವಿರುದ್ಧ 23,000 ಕೋಟಿ ತೆರಿಗೆ ವಂಚನೆ ಆರೋಪ; ಕುಸಿಯುತ್ತಿರುವ ಷೇರುಬೆಲೆ

ಈ ಒಪ್ಪಂದದಿಂದ ಡ್ಯಾನ್​ಸ್ಕ್ ಬ್ಯಾಂಕ್​ನ ಪ್ರಧಾನ ವ್ಯವಹಾರಕ್ಕೆ ಇನ್ಫೋಸಿಸ್​ನ ಡಿಜಿಟಿಲ್, ಕ್ಲೌಡ್ ಮತ್ತು ಡಾಟಾ ತಂತ್ರಜ್ಞಾನದ ಪುಷ್ಟಿ ಸಿಗಬಹುದು. ಪ್ರಬಲ ಎಐ ತಂತ್ರಜ್ಞಾನವು ಬ್ಯಾಂಕ್​ನ ಗ್ರಾಹಕರಿಗೆ ಇನ್ನೂ ಒಳ್ಳೆಯ ಸೇವೆ ಕೊಡಲು ನೆರವಾಗಬಹುದು ಎಂಬ ನಿರೀಕ್ಷೆ ಇದೆ.

ಇನ್ಫೋಸಿಸ್ ಸಂಸ್ಥೆ ಇತ್ತೀಚೆಗಷ್ಟೇ ಡೆನ್ಮಾರ್ಕ್​ನ ಬೇಸ್ ಲೈಫ್ ಸೈನ್ಸಸ್ ಸಂಸ್ಥೆ ಹಾಗೂ ಫಿನ್​ಲ್ಯಾಂಡ್​ನ ಫ್ಲ್ಯೂಡೋ ಕಂಪನಿಗಳನ್ನು ಖರೀದಿಸಿತ್ತು. ಸ್ವೀಡನ್​ನ ಗೋಥೆನ್​ಬರ್ಗ್ ಹಾಗೂ ನಾರ್ವೆಯ ಓಸ್ಲೋದಲ್ಲಿ ಹೊಸ ಪ್ರಾಕ್ಸಿಮಿಟಿ ಸೆಂಟರ್​ಗಳನ್ನು ತೆರೆದು ಐರೋಪ್ಯ ದೇಶಗಳಿಂದ ಹೆಚ್ಚಿನ ವ್ಯವಹಾರದ ನಿರೀಕ್ಷೆ ಇಟ್ಟುಕೊಂಡಿದೆ.

ಇದನ್ನೂ ಓದಿTCS Shocker: ಕಾಸು ಕೊಟ್ಟವನಿಗೆ ಕೆಲಸ; ಟಿಸಿಎಸ್​ನಲ್ಲಿ ಹಿರಿಯ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ; ಖಾಸಗಿ ವಲಯಕ್ಕೂ ಬಂತಾ ಸರ್ಕಾರಿ ಕಾಯಿಲೆ?

ಇನ್ನೊಂದೆಡೆ, ಅಮೆರಿಕದ ಟ್ರಾನ್ಸಮೆರಿಕಾ ಒಪ್ಪಂದ ಕಳೆದುಕೊಂಡ ಟಿಸಿಎಸ್ ಸಂಸ್ಥೆ ಬ್ರಿಟನ್ ದೇಶದ ನ್ಯಾಷನಲ್ ಎಂಪ್ಲಾಯ್ಮೆಂಟ್ ಸೇವಿಂಗ್ಸ್ ಟ್ರಸ್ಟ್ ಸಂಸ್ಥೆಯ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಯೂರೋಪ್​ನ ನಾಲ್ಕನೇ ಕಂಪನಿಯಿಂದ ಟಿಸಿಎಸ್​ಗೆ ಸಿಕ್ಕ ಗುತ್ತಿಗೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘