Aadhaar PAN: ನಿಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್ಗೆ ಲಿಂಕ್ ಆಗಿದೆಯಾ? ಸರಿಪಡಿಸಲು ಹೀಗೆ ಮಾಡಿ
Wrong Linking of Aadhaar and PAN: ಆಧಾರ್ ನಂಬರ್ಗೆ ತಪ್ಪಾದ ಪ್ಯಾನ್ ನಂಬರ್ ಜೋಡಣೆ ಆಗಿಬಿಟ್ಟಿದ್ದರೆ ಆಗ ಆಧಾರ್ನಿಂದ ಪ್ಯಾನ್ ನಂಬರ್ ಅನ್ನು ಡೀಲಿಂಕ್ ಮಾಡಬೇಕು. ಅಂದರೆ ಲಿಂಕ್ ಆಗಿರುವುದನ್ನು ಹಿಂಪಡೆಯಬೇಕು. ಆ ಬಳಿಕ ಆಧಾರ್ ನಂಬರ್ಗೆ ಸರಿಯಾದ ಪ್ಯಾನ್ ನಂಬರ್ ಅನ್ನು ಲಿಂಕ್ ಮಾಡಬೇಕು.
ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ (Aadhaar PAN linking) ಮಾಡಲು ಕೊನೆಯ ಗಡುವು 2023 ಜೂನ್ 30ರವರೆಗೆ ಇದೆ. ಗಡುವಿಗೆ 10 ದಿನ ಮಾತ್ರವೇ ಬಾಕಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ಪ್ಯಾನ್ ನಂಬರ್ಗೆ ಆಧಾರ್ ನಂಬರ್ ಲಿಂಕ್ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್ ನಂಬರ್ಗೆ ಲಿಂಕ್ ಆಗಿದೆ ಎಂದೋ, ತಮ್ಮ ಆಧಾರ್ ನಂಬರ್ಗೆ ಬೇರೆಯವರ ಪ್ಯಾನ್ ನಂಬರ್ ಲಿಂಕ್ ಆಗಿದೆ ಎಂದೋ ಹೇಳುತ್ತಿರುವುದುಂಟು. ನಿಮ್ಮ ಆಧಾರ್ ನಂಬರ್ಗೆ ಬೇರೆ ಪ್ಯಾನ್ ನಂಬರ್ ಲಿಂಕ್ ಆಗಿದ್ದರೆ ಏನು ಮಾಡಬೇಕು? ಈ ನಿಟ್ಟಿನಲ್ಲಿ ಕೆಲ ಮಾರ್ಗೋಪಾಯಗಳಿವೆ.
ಮೇಲೆ ಹೇಳಿದ ರೀತಿಯ ಸಮಸ್ಯೆ ನಿಮ್ಮದಾಗಿದ್ದರೆ, ಅಂದರೆ, ಆಧಾರ್ ನಂಬರ್ಗೆ ತಪ್ಪಾದ ಪ್ಯಾನ್ ನಂಬರ್ ಜೋಡಣೆ ಆಗಿಬಿಟ್ಟಿದ್ದರೆ ಆಗ ಆಧಾರ್ನಿಂದ ಪ್ಯಾನ್ ನಂಬರ್ ಅನ್ನು ಡೀಲಿಂಕ್ ಮಾಡಬೇಕು. ಅಂದರೆ ಲಿಂಕ್ ಆಗಿರುವುದನ್ನು ಹಿಂಪಡೆಯಬೇಕು. ಆ ಬಳಿಕ ಆಧಾರ್ ನಂಬರ್ಗೆ ಸರಿಯಾದ ಪ್ಯಾನ್ ನಂಬರ್ ಅನ್ನು ಲಿಂಕ್ ಮಾಡಬೇಕು.
ನೀವು ಯಾವಾಗೆಲ್ಲಾ ಆಧಾರ್–ಪಾನ್ ಡೀಲಿಂಕ್ ಮಾಡಬೇಕು?
ಕೆಲವೊಮ್ಮೆ ತಾಂತ್ರಿಕ ದೋಷದಿಂದಾಗಿ ಐಟಿ ಇಲಾಖೆಯು ಒಂದೇ ಪ್ಯಾನ್ ನಂಬರ್ ಅನ್ನು ಹೆಚ್ಚು ಮಂದಿಗೆ ನೀಡುವುದುಂಟು. ಇದೇನಾದರೂ ಅಗಿದ್ದು ಗಮನಕ್ಕೆ ಬಂದ ಕೂಡಲೇ ಆಧಾರ್ನಿಂದ ಆ ಪ್ಯಾನ್ ನಂಬರ್ ಅನ್ನು ಡೀಲಿಂಕ್ ಮಾಡಬೇಕು.
ಇನ್ನೂ ಕೆಲ ಬಾರಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ಗಳನ್ನು ಪಡೆದಿರುವುದುಂಟು. ಅದರಲ್ಲಿ ಒಂದನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ನೀವು ಅದನ್ನು ಆಧಾರ್ಗೆ ಲಿಂಕ್ ಮಾಡಿದ್ದರೆ ಡೀಲಿಂಕ್ ಮಾಡಬೇಕು.
ಈಗ ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ ಬೇರೊಬ್ಬ ವ್ಯಕ್ತಿಯ ಆಧಾರ್ ನಂಬರ್ಗೆ ಲಿಂಕ್ ಮಾಡಿದ್ದಿರಬಹುದು. ಇದು ತಪ್ಪಾಗಿ ಆಗಿದ್ದಿರಬಹುದು. ಹೀಗಾಗಿದ್ದರೆ ಡೀಲಿಂಕ್ ಮಾಡಬೇಕು.
ಪ್ಯಾನ್ ನಂಬರ್ಗೆ ಬೇರೆಯವರ ಆಧಾರ್ ಲಿಂಕ್ ಆಗಿದ್ದರೆ ಏನು ಮಾಡಬೇಕು?
- ಒಬ್ಬರ ಪ್ಯಾನ್ ನಂಬರ್ ಇನ್ನೊಬ್ಬರ ಆಧಾರ್ ನಂಬರ್ಗೆ ಲಿಂಕ್ ಆಗಿದ್ದರೆ ಆಗ ಪ್ಯಾನ್ ಸರ್ವಿಸ್ ಪ್ರೊವೈಡರ್ನಿಂದ ಪ್ಯಾನ್ ಕಾರ್ಡ್ ಪ್ರೋಸಸಿಂಗ್ನ ವಿವರ ಪಡೆಯಿರಿ.
- ಇನ್ಕಂ ಟ್ಯಾಕ್ಸ್ ಬ್ಯುಸಿನೆಸ್ ಅಪ್ಲಿಕೇಶನ್ನಿಂದ ಆಡಿಟ್ ಲಾಗ್ ಪಡೆಯಿರಿ
- ತಪ್ಪಾಗಿ ಲಿಂಕ್ ಮಾಡಿದ್ದಕ್ಕೆ ಕಾರಣ ಏನೆಂದು ತಿಳಿದು, ಅಗತ್ಯಬಿದ್ದರೆ ಡೀಲಿಂಕ್ ಮಾಡಲು ನಿರ್ಧರಿಸಿ
- ಇನ್ಕಂ ಟ್ಯಾಕ್ಸ್ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ
ಇದನ್ನೂ ಓದಿ: PAN Card: ಆಧಾರ್ ಮೂಲಕ ನಿಮ್ಮ ಪ್ಯಾನ್ ಕಾರ್ಡ್ನಲ್ಲಿನ ವಿಳಾಸ ಬದಲಿಸುವ ವಿಧಾನ
ಜೆಎಒಗೆ ಮನವಿ ಸಲ್ಲಿಸಿ
ಆಧಾರ್ನಿಂದ ಪ್ಯಾನ್ ಅನ್ನು ಡೀಲಿಂಕ್ ಮಾಡಲು ನೀವು ಜೆಎಒಗೆ (JAO- Jurisdictional Assessment Officer) ಮನವಿ ಸಲ್ಲಿಸಬೇಕು.
ಜೆಎಒ ಯಾರು?
ಡೀಲಿಂಕ್ಗೆ ಯಾವ ಜೆಎಒಗೆ ಮನವಿ ಸಲ್ಲಿಸಬೇಕು ಎಂಬುದನ್ನು ತಿಳಿಯಲು ಇನ್ಕಂ ಟ್ಯಾಕ್ಸ್ ಪೋರ್ಟಲ್ ಅಥವಾ ಇಫೈಲಿಂಗ್ ಪೋರ್ಟಲ್ಗೆ ಲಾಗಿನ್ ಆಗಿ ಪರಿಶೀಲನೆ ನಡೆಸಬಹುದು. ಇನ್ಕಂ ಟ್ಯಾಕ್ಸ್ ಪೋರ್ಟಲ್ನಲ್ಲಿನ ಅದರ ಲಿಂಕ್ ಇಲ್ಲಿದೆ: eportal.incometax.gov.in/iec/foservices/#/pre-login/knowYourAO
ಇಫೈಲಿಂಗ್ ಪೋರ್ಟಲ್ಗೆ ಹೋದರೆ ಅಲ್ಲಿ ಲಾಗಿನ್ ಆದ ಬಳಿಕ ಗೋ ಟು ಪ್ರೊಫೈಲ್ ಕ್ಲಿಕ್ ಮಾಡಿ, ಬಳಿಕ ಜುರಿಸ್ಡಿಕ್ಷನಲ್ ಡೀಟೇಲ್ಸ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಜೆಎಒಗೆ ಆಧಾರ್ ಡೀಲಿಂಕ್ಗೆ ಮನವಿ ಸಲ್ಲಿಸಬಹುದು. ಅಲ್ಲಿಯೇ ಜೆಎಒ ಅವರ ಅಧಿಕೃತ ಇಮೇಲೆ ಐಡಿಯೂ ಇದ್ದು ಆ ಮೂಲಕವೂ ನೀವು ಸಂಪರ್ಕಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ