PAN Card: ಆಧಾರ್ ಮೂಲಕ ನಿಮ್ಮ ಪ್ಯಾನ್ ಕಾರ್ಡ್ನಲ್ಲಿನ ವಿಳಾಸ ಬದಲಿಸುವ ವಿಧಾನ
PAN Changes Through Aadhaar: ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ನಾವೇ ಖುದ್ದಾಗಿ ಡೆಮಾಗ್ರಾಫಿಕ್ ಮಾಹಿತಿ ಬದಲಿಸಲು ಸಾಧ್ಯ. ಹಾಗೆಯೇ, ಪ್ಯಾನ್ ಕಾರ್ಡ್ನಲ್ಲೂ ನಾವೇ ವಿಳಾಸ ಬದಲಾಯಿಸಲು ಸಾಧ್ಯವಿದೆ.
ಭಾರತದಲ್ಲಿ ತೆರಿಗೆ ಪಾವತಿದಾರರಿಗೆ (Tax Payers) ಬೇಕಾಗಿರುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸೇರಿವೆ. ಇವೆರೆಡೂ ಕೂಡ ಬಹಳ ಅಗತ್ಯ ದಾಖಲೆಗಳು. ಆಧಾರ್ ಕಾರ್ಡ್ (Aadhaar Card) ನಮ್ಮ ಪಾಲಿಗೆ ಗುರುತಿನ ಚೀಟಿಯೂ ಹೌದು, ವಿಳಾಸ ದಾಖಲೆಯೂ ಹೌದು. ಸರ್ಕಾರದಿಂದ ಬರುವ ಸಬ್ಸಿಡಿಗಳಿಗೆ ವಾಹಕವೂ ಹೌದು. ಇನ್ನು, ಪ್ಯಾನ್ ಕಾರ್ಡ್ (PAN Card) ಬ್ಯಾಂಕಿಂಗ್ ಮತ್ತು ಐಟಿ ರಿಟರ್ನ್ ಇತ್ಯಾದಿ ಹಣಕಾಸು ವಹಿವಾಟು ಕಾರ್ಯಾಚರಣೆಗೆ ಬೇಕಾಗಿರುವ ದಾಖಲೆ. ಆಧಾರ್ ಕಾರ್ಡ್ ಅನ್ನು ಯುಐಡಿಎಐ ಸಂಸ್ಥೆ ಒದಗಿಸಿದರೆ ಪ್ಯಾನ್ ಕಾರ್ಡ್ ಅನ್ನು ಐಟಿ ಇಲಾಖೆಯಿಂದ ಪಡೆಯಬಹುದು. ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ನಾವೇ ಖುದ್ದಾಗಿ ಡೆಮಾಗ್ರಾಫಿಕ್ ಮಾಹಿತಿ ಬದಲಿಸಲು ಸಾಧ್ಯ. ಹಾಗೆಯೇ, ಪ್ಯಾನ್ ಕಾರ್ಡ್ನಲ್ಲೂ ನಾವೇ ವಿಳಾಸ ಬದಲಾಯಿಸಲು ಸಾಧ್ಯವಿದೆ.
ಪ್ಯಾನ್ ಕಾರ್ಡ್ನಲ್ಲಿ ನಮ್ಮ ವಾಸಸ್ಥಳ ವಿಳಾಸ ಬದಲಿಸುವುದು ಹೇಗೆ?
ನಮ್ಮ ಪ್ಯಾನ್ ಕಾರ್ಡ್ನಲ್ಲಿ ಕೆಲವೊಮ್ಮೆ ನಮ್ಮ ವಿಳಾಸ ತಪ್ಪಾಗಿ ನಮೂದಾಗಿದ್ದಿರಬಹುದು. ಅಥವಾ ನಾವೇ ಹೊಸ ವಿಳಾಸಕ್ಕೆ ಶಿಫ್ಟ್ ಆಗಿದ್ದಿರಬಹುದು. ಇಂಥ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ನಲ್ಲೂ ವಿಳಾಸ ಬದಲಿಸಬೇಕಾಗಬಹುದು. ಹಲವು ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಆಧಾರ್ ಕಾರ್ಡ್ ಜೋಡಿಸಿರುವುದರಿಂದ ಪ್ಯಾನ್ ಕಾರ್ಡ್ನಲ್ಲಿನ ನಮ್ಮ ವಿಳಾಸ ಇತ್ಯಾದಿ ವಿವರ ಬದಲಾಯಿಸುವುದು ಸುಲಭಸಾಧ್ಯ.
ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವಿಸ್ ಲಿ (ಯುಟಿಐಟಿಎಸ್ಎಲ್) ಪೋರ್ಟಲ್ನಲ್ಲಿ ಪ್ಯಾನ್ ಕಾರ್ಡ್ ಸಂಬಂಧಿತ ಸೇವೆಗಳು ಲಭ್ಯ ಇವೆ. ಈ ಪೋರ್ಟಲ್ಗೆ ಹೋಗಿ ನಾವು ಪ್ಯಾನ್ ಕಾರ್ಡ್ನಲ್ಲಿನ ನಮ್ಮ ವಿಳಾಸ ಬದಲಿಸಬಹುದು. ಅದರ ಕ್ರಮ ಇಲ್ಲಿದೆ…
- ಯುಪಿಐಐಟಿಎಸ್ಲ್ ಪೋರ್ಟಲ್ಗೆ ಹೋಗಿ, ಅಲ್ಲಿ ಮೆನುನಲ್ಲಿ ‘ಚೇಂಜ್/ಕರೆಕ್ಷನ್ ಇನ್ ಪ್ಯಾನ್ ಕಾರ್ಡ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಅಪ್ಲೈ ಫಾರ್ ಚೇಂಜ್/ಕರೆಕ್ಷನ್ ಇನ್ ಪ್ಯಾನ್ ಕಾರ್ಡ್ ಡೀಟೇಲ್ಸ್ ಅನ್ನು ಆಯ್ಕೆ ಮಾಡಿ ಬಳಿಕ, ನೆಕ್ಸ್ಟ್ ಕ್ಲಿಕ್ ಮಾಡಿ.
- ಇಲ್ಲಿ ನಿಮ್ಮ ಪ್ಯಾನ್ ನಂಬರ್ ನಮೂದಿಸಿರಿ.
- ‘ಆಧಾರ್ ಬೇಸ್ಡ್ ಇ–ಕೆವೈಸಿ ಅಡ್ರೆಸ್ ಅಪ್ಡೇಟ್’ ಆಯ್ಕೆಗೆ ಚೆಕ್ ಮಾಡಿ. (ಇದರಿಂದ ಆಧಾರ್ನಲ್ಲಿರುವ ನಿಮ್ಮ ವಿಳಾಸವನ್ನು ಪ್ಯಾನ್ ಕಾರ್ಡ್ಗೆ ಅನ್ವಯಿಸಲು ಸಾಧ್ಯವಾಗುತ್ತದೆ).
- ಈಗ ನೀವು ನಿಮ್ಮ ಆಧಾರ್ ನಂಬರ್, ಇಮೇಲ್ ಐಡಿ, ಮೊಬೈಲ್ ನಂಬರ್ ಇತ್ಯಾದಿ ಮಾಹಿತಿ ತುಂಬಿರಿ.
- ಈಗ ಆಧಾರ್ ಕಾರ್ಡ್ಗೆ ಜೋಡಿತವಾದ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸಕ್ಕೆ ಬರುವ ಒಟಿಪಿಯನ್ನು ನಮೂದಿಸಿ, ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
ಈಗ ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ವಿಳಾಸದ ಪ್ರಕಾರ ಪ್ಯಾನ್ ಕಾರ್ಡ್ನಲ್ಲಿ ಮಾಹಿತಿ ಅಪ್ಡೇಟ್ ಆಗುತ್ತದೆ. ಎಲ್ಲವೂ ಸರಾಗವಾಗಿ ಆಗಿರುವುದನ್ನು ಖಚಿತಪಡಿಸಲು ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸಕ್ಕೆ ಇಮೇಲ್ ಮತ್ತು ಎಸ್ಸೆಮ್ಮೆಸ್ ಬರುತ್ತದೆ. ಈ ಮೆಸೇಜ್ ಬಂದಿತೆಂದರೆ ನಿಮ್ಮ ಪ್ಯಾನ್ ಕಾರ್ಡ್ ವಿವರ ಅಪ್ಡೇಟ್ ಆಗಿರುವುದು ದೃಢಪಟ್ಟಂತೆಯೇ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ