Crorepati Calculation: 10 ವರ್ಷದಲ್ಲಿ 1 ಕೋಟಿ ಹಣ ಗಳಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಎಸ್​ಐಪಿ ಲೆಕ್ಕಾಚಾರ

How Much To Invest To Become Crorepati: ಶೇ. 8ರಿಂದ ಶೇ. 14ರವರೆಗೆ ವಾರ್ಷಿಕ ರಿಟರ್ನ್ ರೇಟ್ ಇರುವ ವಿವಿಧ ಎಸ್​ಐಪಿ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, 20 ವರ್ಷದಲ್ಲಿ 1 ಕೋಟಿ ರೂ ಸಂಪತ್ತಿನ ಒಡೆಯರು ನೀವಾಗಲು ತಿಂಗಳಿಗೆ ಎಷ್ಟು ಕಟ್ಟಬೇಕು ಎಂಬ ಲೆಕ್ಕಾಚಾರ ಇಲ್ಲಿದೆ....

Crorepati Calculation: 10 ವರ್ಷದಲ್ಲಿ 1 ಕೋಟಿ ಹಣ ಗಳಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಎಸ್​ಐಪಿ ಲೆಕ್ಕಾಚಾರ
ಹೂಡಿಕೆ
Follow us
|

Updated on: Jun 12, 2023 | 5:23 PM

ಹಣ ಮಾಡುವ ಸಿಂಪಲ್ ಸೂತ್ರ ಎಂದರೆ, ಆದಾಯ ಹೆಚ್ಚಿಸಬೇಕು, ಖರ್ಚು ತಗ್ಗಿಸಬೇಕು, ಉಳಿತಾಯ ಹೆಚ್ಚಿಸಬೇಕು, ಹೂಡಿಕೆ ಹೆಚ್ಚಿಸಬೇಕು. ಈ ನಾಲ್ಕು ಅಂಶಗಳನ್ನು (Financial Tips) ಗಮನದಲ್ಲಿಟ್ಟುಕೊಂಡರೆ ಬಹಳ ಬೇಗ ಸಿರಿವಂತರಾಗಬಹುದು. ಹೇಳುವುದು ಸುಲಭ, ಆದರೆ, ಆಚರಣೆಗೆ ತರುವುದು ಕಷ್ಟವೇ. ಈ ನಾಲ್ಕು ಸೂತ್ರಗಳು ನಮ್ಮ ದೈನಂದಿನ ಆಲೋಚನೆಯ ಭಾಗವಾದರೆ ಸುಲಭವಾಗುತ್ತದೆ. ನಿಂತಲ್ಲಿ, ಕೂತಲ್ಲಿ ನಿಮ್ಮ ಕಣ್ಮುಂದೆ ಸಿರಿತನದ ಕನಸು ಬಂದು ಹೋಗುತ್ತಿರಬೇಕು. ಈಗ ನೀವು 10 ವರ್ಷದಲ್ಲಿ 1 ಕೋಟಿ ರೂ ಗಳಿಸಬೇಕು ಎಂಬ ಸಂಕಲ್ಪ ತೊಟ್ಟಿದ್ದೀರೆಂದರೆ, ಅದನ್ನು ಸಾಕಾರಗೊಳಿಸಲು ಏನು ಮಾಡಬೇಕು? ಮೇಲಿನ ನಾಲ್ಕು ಅಂಶಗಳನ್ನು ಅಳವಡಿಸುವುದರ ಜೊತೆಗೆ ಹೂಡಿಕೆಯ ಲೆಕ್ಕಾಚಾರವೂ ನಡೆಯಬೇಕು. 10 ವರ್ಷದಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ 1 ಕೋಟಿ ರೂ ಗಳಿಸಲು ಸಾಧ್ಯ ಎಂಬ ಲೆಕ್ಕಾಚಾರ ತಿಳಿದಿರಲಿ.

ಆದರೆ, ಎಲ್ಲಿ ಹೂಡಿಕೆ ಮಾಡುವುದು ಎಂಬುದೇ ಕ್ಲಿಷ್ಟಕರ ಪ್ರಶ್ನೆ. ಈಗ ಅತ್ಯಂತ ಜನಪ್ರಿಯ ಹೂಡಿಕೆ ಸ್ಕೀಮ್​ಗಳೆಂದರೆ ಅವು ಮ್ಯೂಚುವಲ್ ಫಂಡ್ ಎಸ್​ಐಪಿಗಳು. ಬಹಳಷ್ಟು ಎಸ್​ಐಪಿಗಳು (SIP- Systematic Investment Plan) ಶೇ. 5ರಿಂದ ಶೇ. 40ರವರೆಗೂ ವಾರ್ಷಿಕ ಲಾಭ ತಂದುಕೊಡುತ್ತಿವೆ. ನಾವು ಅಳೆದು ತೂಗಿ ಆಯ್ಕೆ ಮಾಡಿದರೂ ಕೆಲವೊಮ್ಮೆ ಎಸ್​ಐಪಿಯಿಂದ ನಾವು ನಿರೀಕ್ಷಿಸಿದಷ್ಟು ರಿಟರ್ನ್ ಬರದೇ ಹೋಗಬಹುದು. ಆದರೆ, ಹೆಚ್ಚಿನ ಸಂದರ್ಭದಲ್ಲಿ ಎಸ್​ಐಪಿಗಳು ಶೇ. 12ಕ್ಕಿಂತ ಹೆಚ್ಚು ವಾರ್ಷಿಕವಾಗಿ ಲಾಭ ಕೊಡುತ್ತವೆ.

ಇದನ್ನೂ ಓದಿCompany FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್

ಈಗ 10 ವರ್ಷದಲ್ಲಿ ಎಸ್​ಐಪಿಯಲ್ಲಿ ಹೂಡಿಕೆ ಮಾಡಿ 1 ಕೋಟಿ ಮಾಡಲು ಹೇಗೆ ಸಾಧ್ಯ?

ಅನಿಶ್ಚಿತತೆಯ ಕಾರಣಕ್ಕೆ ಎಸ್​ಐಪಿ ಲಾಭ ದರವನ್ನು ಶೇ. 8ರಿಂದ 14ರವರೆಗೂ ಪರಿಗಣಿಸಿ ಲೆಕ್ಕಾಚಾರ ಮಾಡೋಣ.

ಶೇ. 8ರ ರಿಟರ್ನ್ ರೇಟ್ ಇರುವ ಎಸ್​ಐಪಿ

ನೀವು 10 ವರ್ಷದಲ್ಲಿ 1 ಕೋಟ್ಯಾಧೀಶ್ವರ ಆಗಬೇಕಾದರೆ ಈ ಎಸ್​ಐಪಿಯಲ್ಲಿ ತಿಂಗಳಿಗೆ 1.56 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.

ಶೇ. 9ರ ರಿಟರ್ನ್ ರೇಟ್ ಇರುವ ಎಸ್​ಐಪಿ:

ಇಷ್ಟು ವಾರ್ಷಿಕ ಲಾಭ ತಂದುಕೊಡುವ ಎಸ್​ಐಪಿಯಲ್ಲಿ ನೀವು 10 ವರ್ಷದಲ್ಲಿ 1 ಕೋಟಿ ಸಂಪಾದನೆ ಮಾಡಬೇಕಾದರೆ ತಿಂಗಳಿಗೆ 1.34 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.

ಶೇ. 10ರ ದರದಲ್ಲಿ ಹಣ ಬೆಳೆಯುವ ಎಸ್​ಐಪಿ:

ನೀವು ಹೂಡಿಕೆ ಮಾಡುವ ಎಸ್​ಐಪಿ ಅಂತಿಮವಾಗಿ ಶೇ. 10ರ ವಾರ್ಷಿಕ ರಿಟರ್ನ್ ರೇಟ್​ನಲ್ಲಿ ಲಾಭ ತಂದುಕೊಡುತ್ತದೆ ಎಂದು ಭಾವಿಸಿಸೋಣ. ಆಗ 10 ವರ್ಷದಲ್ಲಿ 1 ಕೋಟಿ ರೂ ಸಂಪಾದನೆಗೆ ನೀವು ತಿಂಗಳಿಗೆ 1.16 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.

ಇದನ್ನೂ ಓದಿLIC vs Bank Deposit: ಎಲ್​ಐಸಿ ಪಾಲಿಸಿಗೆ ಹಾಕುವ ಹಣ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಎಷ್ಟು ಸಿಗುತ್ತೆ ರಿಟರ್ನ್ಸ್? ಇಲ್ಲಿದೆ ಒಂದು ಹೋಲಿಕೆ

ಶೇ. 11ರ ರಿಟರ್ನ್ ರೇಟ್ ಇರುವ ಎಸ್​ಐಪಿ:

ಶೇ. 11ರ ವಾರ್ಷಿಕ ಲಾಭ ದರ ಹೊಂದುವ ಎಸ್​ಐಪಿ ಮೂಲಕ 10 ವರ್ಷದಲ್ಲಿ ನೀವು 1 ಕೋಟಿ ರೂ ಪಡೆಯಬೇಕೆಂದರೆ ತಿಂಗಳಿಗೆ 1 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.

ಶೇ. 12ರ ರಿಟರ್ನ್ ರೇಟ್​ನ ಎಸ್​ಐಪಿ:

ಈಗಿರುವ ಪ್ರಮುಖ ಎಸ್​ಐಪಿ ಸ್ಕೀಮ್​ಗಳು ತಂದುಕೊಡುವ ಲಾಭದ ವಾರ್ಷಿಕ ಸರಾಸರಿ ದರ ಪರಿಗಣಿಸಿದರೆ ಅದು ಶೇ. 12. ಇದನ್ನು ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಿದಾಗ, 10 ವರ್ಷದಲ್ಲಿ 1ಕೋಟಿ ರೂ ಗಳಿಸಲು ತಿಂಗಳಿಗೆ ಹೂಡಿಕೆ ಮಾಡಬೇಕಾದ ಹಣ 90,000 ರೂ ಆಗುತ್ತದೆ.

ನಿಮ್ಮ ಎಸ್​ಐಪಿ ಶೇ. 13ರಷ್ಟು ರಿಟರ್ನ್ ಕೊಟ್ಟರೆ….

ನೀವು ತಿಂಗಳಿಗೆ 79,000 ರೂ ಹಣವನ್ನು ಎಸ್​ಐಪಿಯಲ್ಲಿ ಹೂಡಿಕೆ ಮಾಡಿ, ಅದು ಶೇ. 13ರ ವಾರ್ಷಿಕ ದರದಲ್ಲಿ ಬೆಳೆದರೆ ನಿಮ್ಮ ಹಣ 10 ವರ್ಷದಲ್ಲಿ 1 ಕೋಟಿ ರೂ ಆಗುತ್ತದೆ.

ಶೇ. 14ರ ರಿಟರ್ನ್ ರೇಟ್ ಇರುವ ಎಸ್​ಐಪಿ

ನಿಮ್ಮ ಎಸ್​ಐಪಿ ಸ್ಕೀಮ್ ಶೇ. 14ರ ದರದಲ್ಲಿ ಬೆಳೆಯುತ್ತದೆ ಎಂದಾದರೆ ನೀವು 10 ವರ್ಷದಲ್ಲಿ 1 ಕೋಟಿ ರೂ ಗಳಿಸಬೇಕೆಂದರೆ ತಿಂಗಳಿಗೆ 71,000 ರೂ ಕಟ್ಟಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ