Poor and Inflation: ಬಡವರು ಇನ್ನಷ್ಟು ಬಡವರಾಗಲು, ಸಿರಿವಂತರು ಇನ್ನಷ್ಟು ಸಿರಿವಂತರಾಗಲು ಏನು ಕಾರಣ? ವಿಷ ವರ್ತುಲವಾ ಹಣದುಬ್ಬರ? ಕುತೂಹಲದ ಉದಾಹರಣೆ
Know How Inflation Affects Poor: ಯಾವುದೇ ಆರ್ಥಿಕತೆಗೂ ಹೆಚ್ಚಿನ ಮಟ್ಟದ ಹಣದುಬ್ಬರ ಬಹಳ ಡೇಂಜರ್ ಎಂಬುದನ್ನು ಎಲ್ಲಾ ಅರ್ಥಶಾಸ್ತ್ರಜ್ಞರೂ ಒಪ್ಪಿಕೊಳ್ಳುತ್ತಾರೆ. ಕುತೂಹಲದ ವಿಚಾರ ಎಂದರೆ ಹಣದುಬ್ಬರ ಹೆಚ್ಚು ಬಾಧಿಸುವುದು ಬಡವರನ್ನು. ಬಡವರು ಇನ್ನಷ್ಟು ಬಡತನದ ಸುಳಿಗೆ ಸಿಲುಕುವಂತೆ ಮಾಡುತ್ತದೆ ಇದು.
ಬೆಂಗಳೂರು: ನೀವು ಹಣದುಬ್ಬರದ ಬಗ್ಗೆ ಆಗಾಗ್ಗೆ ಸುದ್ದಿಗಳನ್ನು ಓದುತ್ತಿದ್ದಿರಬಹುದು. ಪಾಕಿಸ್ತಾನ, ಶ್ರೀಲಂಕಾ, ಜಿಂಬಾಬ್ವೆ ದೇಶಗಳಲ್ಲಿ ಅಷ್ಟೊಂದು ಹಣದುಬ್ಬರ ಇದ್ಯಂತೆ. ಅಮೆರಿಕದಲ್ಲಿ ಭಾರತಕ್ಕಿಂತ ಹೆಚ್ಚು ಹಣದುಬ್ಬರ (Inflation) ಇದೆಯಂತೆ ಇತ್ಯಾದಿ ಮಾಹಿತಿ ಗೊತ್ತಿದ್ದಿರಬಹುದು. ಹಣದುಬ್ಬರವನ್ನು ಸರಳವಾಗಿ ಹೇಳಬೇಕೆಂದರೆ ಅದು ಬೆಲೆ ಏರಿಕೆ ಪ್ರಮಾಣ. ಒಂದು ವರ್ಷದ ಅಂತರದಲ್ಲಿ ನಿರ್ದಿಷ್ಟ ವಸ್ತುಗಳ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗಿದೆ ಎಂಬುದನ್ನು ಹಣದುಬ್ಬರ ಸೂಚಿಸುತ್ತದೆ.
ಭಾರತದಲ್ಲಿ ಹಣದುಬ್ಬರ ಶೇ. 7ಕ್ಕಿಂತ ಹೆಚ್ಚು ಇದ್ದದ್ದು ಇದೀಗ 2023ರ ಏಪ್ರಿಲ್ ತಿಂಗಳಲ್ಲಿ ಶೇ. 4.7ಕ್ಕೆ ಬಂದು ನಿಂತಿದೆ. ಅಂದರೆ, 2022ರ ಏಪ್ರಿಲ್ ತಿಂಗಳಲ್ಲಿ ಇದ್ದ ಬೆಲೆಗಳಿಗಿಂತ ಈ ವರ್ಷದ ಏಪ್ರಿಲ್ನಲ್ಲಿ ಬೆಲೆ ಶೇ. 4.7ರಷ್ಟು ಏರಿಕೆ ಆಗಿದೆ ಎಂದು ಈ ಹಣದುಬ್ಬರ ಹೇಳುತ್ತದೆ. ಯಾವುದೇ ಉದ್ಯಮಕ್ಕೆ ಬೆಲೆ ಏರಿಕೆ ಅಗತ್ಯ. ಆದರೆ, ಈ ಏರಿಕೆ ಮಿತಿಯಲ್ಲಿರಬೇಕು ಎಂಬುದು ಅರ್ಥಶಾಸ್ತ್ರಜ್ಞರ ಅನಿಸಿಕೆ. ಭಾರತ ಸರ್ಕಾರ ಹಣದುಬ್ಬರದ ಮಿತಿ ಶೇ. 4ರಷ್ಟು ಇರಬೇಕೆಂದು ನಿಗದಿ ಮಾಡಿದೆ. ತುಸು ಏರುಪೇರಾದರೂ ಅದು ಶೇ. 2ರಿಂದ ಶೇ. 6ರ ಒಳಗೆ ಇರುವಂತೆ ನೋಡಿಕೊಳ್ಳಿ ಎಂದು ಆರ್ಬಿಐಗೆ ಸರ್ಕಾರ ಸೂಚಿಸಿದೆ. ಹಣದುಬ್ಬರ ತಾಳಿಕೆಯ ಮಟ್ಟಕ್ಕಿಂತ ಹೆಚ್ಚಿದ್ದರೆ ರೆಪೋ ದರ ಇತ್ಯಾದಿ ಕ್ರಮಗಳ ಮೂಲಕ ಆರ್ಬಿಐ ನಿಯಂತ್ರಣ ಸಾಧಿಸಲು ಯತ್ನಿಸುತ್ತದೆ.
ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತದಾ ಹಣದುಬ್ಬರ?
ಇದು ಬಹಳ ಮುಖ್ಯವಾದ ಸಂಗತಿ. ಯಾವುದೇ ಆರ್ಥಿಕತೆಗೂ ಹೆಚ್ಚಿನ ಮಟ್ಟದ ಹಣದುಬ್ಬರ ಬಹಳ ಡೇಂಜರ್ ಎಂಬುದನ್ನು ಎಲ್ಲಾ ಅರ್ಥಶಾಸ್ತ್ರಜ್ಞರೂ ಒಪ್ಪಿಕೊಳ್ಳುತ್ತಾರೆ. ಕುತೂಹಲದ ವಿಚಾರ ಎಂದರೆ ಹಣದುಬ್ಬರ ಹೆಚ್ಚು ಬಾಧಿಸುವುದು ಬಡವರನ್ನು. ಬಡವರು ಇನ್ನಷ್ಟು ಬಡತನದ ಸುಳಿಗೆ ಸಿಲುಕುವಂತೆ ಮಾಡುತ್ತದೆ ಇದು. ಆದರೆ, ಶ್ರೀಮಂತರ ಮೇಲೆ ಇದರ ಪರಿಣಾಮ ಹೆಚ್ಚು ಇಲ್ಲ. ಬಡವರಿಂದ ಕಸಿದುಹೋದ ಹಣ ಶ್ರೀಮಂತರ ಬುಟ್ಟಿ ಸೇರುವಂತೆ ಮಾಡುತ್ತದೆ ಈ ಹಣದುಬ್ಬರ…
ಬಡವರಿಗೆ ಹಣದುಬ್ಬರದ ಬಾಧೆ ಹೆಚ್ಚು ಹೇಗೆ?
ಕೆಲ ಉದಾಹರಣೆಗಳನ್ನು ಇಲ್ಲಿ ನೀಡಬಹುದು… ಎ ಎಂಬ ವ್ಯಕ್ತಿ ಮಧ್ಯಮ ವರ್ಗದವ ಎಂದಿಟ್ಟುಕೊಳ್ಳೋಣ.
- ಎ ವ್ಯಕ್ತಿಯ ವರ್ಷದ ಆದಾಯ: 12,00,000 ರೂ
- ವರ್ಷದ ವೆಚ್ಚ: 7,00,00 ರೂ
- ಉಳಿತಾಯ: 5,00,000 ರೂ
ಈಗ ಶೇ. 10ರಷ್ಟು ಹಣದುಬ್ಬರ ಇದೆ. ಆದಾಯದಲ್ಲಿ ಶೇ. 5ರಷ್ಟು ಹೆಚ್ಚಳ ಆಗಿದೆ ಎಂದಿಟ್ಟುಕೊಳ್ಳಿ. ಆಗ ಒಂದು ವರ್ಷದಲ್ಲಿ ಹೀಗಿರುತ್ತೆ ಎ ವ್ಯಕ್ತಿಯ ಆಯವ್ಯಯ:
- ವರ್ಷದ ಆದಾಯ: 12,60,000 ರೂ
- ವರ್ಷದ ವೆಚ್ಚ: 7,70,000 ರೂ
- ಉಳಿತಾಯ: 4,90,000 ರೂ
ಈಗ ಬಡವ ಅಥವಾ ಕೆಳಮಧ್ಯಮ ವರ್ಗದ ವ್ಯಕ್ತಿಯ ಆಯವ್ಯಯ ಪರಿಗಣಿಸಿ ನೋಡೋಣ…
- ಬಿ ವ್ಯಕ್ತಿಯ ವರ್ಷದ ಆದಾಯ: 2,00,000 ರೂ
- ವರ್ಷದ ವೆಚ್ಚ: 1,75,000 ರೂ
- ಉಳಿತಾಯ: 25,000 ರೂ
ವರ್ಷದ ಬಳಿಕ ಶೇ. 10ರಷ್ಟು ಹಣದುಬ್ಬರ ಮತ್ತು ಶೇ. 5 ಆದಾಯ ಏರಿಕೆ ಆದರೆ ಈ ಬಿ ವ್ಯಕ್ತಿಯ ಉಳಿತಾಯ 18,000 ರೂಗೆ ಇಳಿಯುತ್ತದೆ. ಅಂದರೆ, ಕಡಿಮೆ ಆದಾಯದ ವ್ಯಕ್ತಿಗೆ ಹೆಚ್ಚು ನಷ್ಟ ಉಂಟಾಗುತ್ತದೆ. ಹೆಚ್ಚು ಹಣ ಇರುವ ಶ್ರೀಮಂತ ಹಣದುಬ್ಬರದ ಸಂದರ್ಭದಲ್ಲಿ ತಮ್ಮ ಅಪಾರ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡಿ ವೃದ್ಧಿಸಲು ಅವಕಾಶ ಹೊಂದಿರುತ್ತಾನೆ. ಆ ಮೂಲಕ ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ, ಹೆಚ್ಚು ಉಳಿತಾಯ ಸಾಧ್ಯ ಇಲ್ಲದ ಬಡವರು ಏನು ಮಾಡಲು ಸಾಧ್ಯ..? ಬೆಲೆ ಏರಿಕೆಯ ವಿಷವರ್ತುಲಕ್ಕೆ ಸಿಲುಕಿ ಆತ ಕ್ರಮೇಣ ಹೆಚ್ಚೆಚ್ಚು ಬಡವನಾಗುತ್ತಾ ಹೋಗುತ್ತಾನೆ.
ಬಡವರು ಈ ವಿಷವರ್ತುಲದಿಂದ ಹೊರಬರಬೇಕಾದರೆ ಆದಾಯ ಹೆಚ್ಚಳ ಅಥವಾ ವೆಚ್ಚ ಕಡಿತ ಮಾತ್ರವೇ ಮಾರ್ಗ. ಆದಾಯ ಹೆಚ್ಚಳಕ್ಕೆ ಮಾರ್ಗ ಇಲ್ಲದಿದ್ದರೆ ವೆಚ್ಚ ಕಡಿತ ಮಾಡಿಯಾದರೂ ಹಣ ಉಳಿಸಿ, ಆ ಹಣವನ್ನು ಎಫ್ಡಿಯೋ, ಆರ್ಡಿಯೋ, ಷೇರಿಗೋ ಹೂಡಿಕೆ ಮಾಡಿ ಬೆಳೆಸುವತ್ತ ಜನರು ಗಮನ ಕೊಡುವುದು ಲೇಸು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ