Soros Successor: ಅಪ್ಪನನ್ನು ಮೀರಿಸುವ ಮಗ; ಉದಾರ ದಾನಿ ಜಾರ್ಜ್ ಸೋರೋಸ್ ಸಾಮ್ರಾಜ್ಯ ಮಗನ ಕೈಗೆ; ಅಪ್ಪನಿಗಿಂತ ಹೆಚ್ಚು ರಾಜಕೀಯ ಗುರಿಕಾರ ಮಗ

George Soros Hands Over His Empire To Son: ವಿಶ್ವದ ಶ್ರೀಮಂತರಲ್ಲಿ ಒಬ್ಬರೆನಿಸಿರುವ ಜಾರ್ಜ್ ಸೋರೋಸ್ ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ದಾನ ಮಾಡುತ್ತಾರೆ. ವಿಶ್ವಾದ್ಯಂತ ಪ್ರಗತಿಪರ ಸಂಘಟನೆಗಳಿಗೆ ನೆರವು ಒದಗಿಸುತ್ತಾರೆ. ಈಗ ಅವರ ಕೈಂಕರ್ಯವನ್ನು ಮಗ ಅಲೆಕ್ಸ್ ಮುಂದುವರಿಸಲಿದ್ದಾರೆ.

Soros Successor: ಅಪ್ಪನನ್ನು ಮೀರಿಸುವ ಮಗ; ಉದಾರ ದಾನಿ ಜಾರ್ಜ್ ಸೋರೋಸ್ ಸಾಮ್ರಾಜ್ಯ ಮಗನ ಕೈಗೆ; ಅಪ್ಪನಿಗಿಂತ ಹೆಚ್ಚು ರಾಜಕೀಯ ಗುರಿಕಾರ ಮಗ
ಜಾರ್ಜ್ ಸೋರೋಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2023 | 11:47 AM

ನವದೆಹಲಿ: ವಿಶ್ವ ಶ್ರೀಮಂತರಲ್ಲಿ ಒಬ್ಬರೆನಿಸಿರುವ ಜಾರ್ಜ್ ಸೋರೋಸ್ (George Soros) ತಮ್ಮ ವ್ಯಾವಹಾರಿಕ, ಸಾಮಾಜಿಕ ಮತ್ತು ರಾಜಕೀಯ ಕೈಂಕರ್ಯಗಳ ಸಾಮ್ರಾಜ್ಯವನ್ನು ಕೊನೆಗೂ ತಮ್ಮೊಬ್ಬ ಮಗನಿಗೆ ಹಸ್ತಾಂತರಿಸುತ್ತಿದ್ದಾರೆ. ಎಡಪಂಥೀಯ ಸಂಘಟನೆ ಮತ್ತು ವ್ಯಕ್ತಿಗಳಿಗೆ ನೇರವಾಗಿ ಫಂಡಿಂಗ್ ಮಾಡುವ ಜಾರ್ಜ್ ಸೋರೋಸ್ ಅವರಿಗೆ 92 ವರ್ಷ ವಯಸ್ಸಾಗಿದ್ದು, ಅವರ ಬಹಷ್ಟು ಕೆಲಸಗಳನ್ನು (Philanthropic Works) ಯಾರು ಮುಂದುವರಿಸಬಲ್ಲರು ಎಂಬ ಹಲವು ದಿನಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೆಡ್ಜ್ ಫಂಡ್ ಉದ್ಯಮಿ ಜಾರ್ಜ್ ಸೋರೋಸ್ ಅವರು ತಮ್ಮ ವ್ಯವಹಾರ ಮತ್ತು ಸಮಾಜ ಸೇವೆಯ ಕಾರ್ಯಗಳ ಜವಾಬ್ದಾರಿಯನ್ನು 37 ವರ್ಷದ ಮಗ ಅಲೆಕ್ಸಾಂಡರ್ ಸೋರೋಸ್ (Alexander Soros) ಅವರಿಗೆ ನೀಡಿದ್ದಾರೆ. ಸೋರೋಸ್ ಅವರಿಗೆ ಐವರು ಮಕ್ಕಳಿದ್ದು, ಅವರಲ್ಲಿ ಅಲೆಕ್ಸಾಂಡರ್ 4ನೆಯವರೆನ್ನಲಾಗಿದೆ.

ಇಲ್ಲಿ ಜಾರ್ಜ್ ಸೋರೋಸ್ ಅವರ ಕಾರ್ಯಗಳಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಬಹಳ ಮುಖ್ಯವಾದುದು. ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಈ ಫೌಂಡೇಶನ್ ಬಳಕೆ ಆಗುತ್ತಿದೆ. ವಿಶ್ವದ ವಿವಿಧ ದೇಶಗಳಲ್ಲಿನ ಎಡಪಂಥೀಯ ನಿಲುವಿನ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳಿಗೆ ಈ ಫೌಂಡೇಶನ್ ಮೂಲಕ ಸಹಾಯ ಮಾಡಲಾಗುತ್ತದೆ. ಹೆಡ್ಜ್ ಫಂಡ್ ನಿರ್ವಹಿಸುವ ಸಂಸ್ಥೆಯ ಮಾಲೀಕರಾಗಿರುವ ಜಾರ್ಜ್ ಸೋರೋಸ್ ತಮ್ಮ ಆದಾಯದ ಬಹುಪಾಲಿನ ಹಣವನ್ನು ಓಪನ್ ಸೊಸೈಟಿ ಫೌಂಡೇಶನ್​ಗೆ ನೀಡುತ್ತಾರೆ. ಇದೂವರೆಗೂ ಇವರು 32 ಬಿಲಿಯನ್ ಡಾಲರ್​ಗೂ ಹೆಚ್ಚಿನ ಮೊತ್ತದ ಹಣವನ್ನು ಈ ಫೌಂಡೇಶನ್​ಗೆ ದಾನ ಮಾಡಿದ್ದಾರೆ. 32 ಬಿಲಿಯನ್ ಡಾಲರ್ ಎಂದರೆ ಸುಮಾರು 2.6 ಲಕ್ಷ ಕೋಟಿ ರೂ.

ಇದನ್ನೂ ಓದಿCredit Suisse: ದಿವಾಳಿಯಾದ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಯುಬಿಎಸ್ ತೆಕ್ಕೆಗೆ; ಶ್ರೀಲಂಕಾ, ರಷ್ಯಾ ಸೇರಿದಂತೆ ಹಲವು ದೇಶಗಳಿಂದ ಹೊಸ ಗ್ರಾಹಕರು ಬೇಡ ಎಂದ ಯುಬಿಎಸ್

ಸದ್ಯ ಜಾರ್ಜ್ ಸೋರೋಸ್ ಅವರ ಬಳಿ ವೈಯಕ್ತಿಕವಾಗಿ ಇರುವ ಆಸ್ತಿ ಸುಮಾರು 70,000 ಕೋಟಿ ರೂ ಇರಬಹುದು. ತಮ್ಮ ಸಂಪಾದನೆಯ ಹಣದಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಮೊತ್ತವನ್ನು ಇವರು ಓಪನ್ ಸೋರ್ಸ್ ಫೌಂಡೇಶನ್​ಗೆ ನೀಡಿದ್ದಾರೆ. ಈ ಫೌಂಡೇಶನ್​ನಿಂದ ಪ್ರತೀ ವರ್ಷವೂ 1.5 ಬಿಲಿಯನ್ ಡಾಲರ್​ನಷ್ಟು ಹಣವು ವಿಶ್ವದ ವಿವಿಧೆಡೆಯಲ್ಲಿರುವ ಎಡಪಂಥೀಯ, ಪ್ರಗತಿಪರ ವಿಚಾರಧಾರೆಯ ಸಂಘಟನೆ ಮತ್ತು ವ್ಯಕ್ತಿಗಳಿಗೆ ಫಂಡಿಂಗ್ ರೂಪದಲ್ಲಿ ಹೋಗುತ್ತದೆ. ಅಮೆರಿಕದಲ್ಲಿ ಡೆಮಾಕ್ರಾಟ್ ಪಕ್ಷಕ್ಕೆ ಸೋರೋಸ್ ನೇರ ಬೆಂಬಲ ನೀಡುತ್ತಾರೆ. ಭಾರತದಲ್ಲೂ ಬಹಳಷ್ಟು ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಸೋರೋಸ್ ಫೌಂಡೇಶನ್​ನಿಂದ ನೆರವು ಹರಿದುಬರುತ್ತದೆ.

ಅಲೆಕ್ಸ್ ಸೋರೋಸ್ ಸ್ಪಷ್ಟ ಗುರಿ ಇರುವ ಆ್ಯಕ್ಟಿವಿಸ್ಟ್

ಅಪ್ಪನಂತೆ ಅಲೆಕ್ಸಾಂಡರ್ ಸೋರೋಸ್ ಕೂಡ ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಿಗೆ ನೆರವು ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದಂಟು. 2012ರಲ್ಲಿ ಅಲೆಕ್ಸಾಂಡರ್ ಸೋರೋಸ್ ಫೌಂಡೇಶನ್ ಮೂಲಕ ಜಗತ್ತಿನಾದ್ಯಂತ ಪ್ರಗತಿಪರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದವರಾಗಿದ್ದಾರೆ. ಹೀಗಾಗಿ, ಜಾರ್ಜ್ ಸೋರೋಸ್ ಅವರಿಗೆ ಅಲೆಕ್ಸಾಂಡರ್ ತಕ್ಕ ವಾರಸುದಾರ ಎನಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ