Company FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್

Corporate Company Fixed Deposits: ಕಾರ್ಪೊರೇಟ್ ಸಂಸ್ಥೆಯಲ್ಲಿ ಹಣ ಇರಿಸುವುದು ಕೆಲ ಮಂದಿಗೆ ಹಿಂಜರಿಕೆ ಆಗಬಹುದು. ಕಂಪನಿ ಎಫ್​ಡಿ ಬಗ್ಗೆ ಅಷ್ಟು ಭಯದ ಅಗತ್ಯ ಇಲ್ಲ. ಆದರೆ, ಹೂಡಿಕೆ ಮಾಡುವ ಮುನ್ನ ಕೆಲವೊಂದಿಷ್ಟು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡಿರುವುದು ಒಳ್ಳೆಯದು.

Company FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್
ನಿಶ್ಚಿತ ಠೇವಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2023 | 2:42 PM

ನಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡಲು ಇರುವ ಹಲವು ಆಯ್ಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳೂ (Fixed Deposits) ಇವೆ. ಅತಿಹೆಚ್ಚಿನ ಜನರ ಹೂಡಿಕೆ ಆಯ್ಕೆ ಎಫ್​ಡಿಯೇ ಆಗಿದೆ. ಬ್ಯಾಂಕುಗಳ ಅತಿಹೆಚ್ಚು ಆದಾಯ ಮೂಲ ಇವೆ ನಿಶ್ಚಿತ ಠೇವಣಿಗಳೇ ಆಗಿವೆ. ಸ್ಕೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಇಡಬಹುದು. ಹಾಗೆಯೇ, ಕೆಲ ಆಯ್ದ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಎಫ್​ಡಿ ಯೋಜನೆಗಳಿಗೆ ಆರ್​ಬಿಐ ಅವಕಾಶ ಕೊಟ್ಟಿದೆ. ಇಂಥ ಎಫ್​ಡಿಯನ್ನು ಕಾರ್ಪೊರೇಟ್ ಎಫ್​ಡಿ ಅಥವಾ ಕಂಪನಿ ಎಫ್​ಡಿ (Corporate or Company FD) ಎನ್ನುವುದುಂಟು. ಆದರೆ, ಬ್ಯಾಂಕೆಂದರೆ ಜನರಿಗೆ ವಿಶೇಷ ನಂಬಿಕೆ ಉಂಟು. ಅದೇ ಕಾರ್ಪೊರೇಟ್ ಸಂಸ್ಥೆಯಲ್ಲಿ ಹಣ ಇರಿಸುವುದು ಕೆಲ ಮಂದಿಗೆ ಹಿಂಜರಿಕೆ ಆಗಬಹುದು. ಕಂಪನಿ ಎಫ್​ಡಿ ಬಗ್ಗೆ ಅಷ್ಟು ಭಯದ ಅಗತ್ಯ ಇಲ್ಲ. ಆದರೆ, ಹೂಡಿಕೆ ಮಾಡುವ ಮುನ್ನ ಕೆಲವೊಂದಿಷ್ಟು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡಿರುವುದು ಒಳ್ಳೆಯದು.

ಕಂಪನಿಯ ರೇಟಿಂಗ್ ಹೇಗಿದೆ ತಿಳಿಯಿರಿ

ನೀವು ಕಾರ್ಪೊರೇಟ್ ಎಫ್​ಡಿ ಅಥವಾ ಕಂಪನಿ ಎಫ್​ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ಆ ಕಂಪನಿಯ ಹಣಕಾಸು ಸ್ಥಿತಿಗತಿ ಹೇಗಿದೆ, ಗ್ರಾಹಕರೊಂದಿಗಿನ ಅದರ ವ್ಯವಹಾರ ಹೇಗಿದೆ ಎಂಬಿತ್ಯಾದಿ ಸಾಧ್ಯವಾದರೆ ತಿಳಿದಿರಿ. ಅದು ಸಾಧ್ಯವಾಗದೇ ಹೋದರೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಆ ಕಂಪನಿಗೆ ಎಷ್ಟು ಮೌಲ್ಯ ಅಥವಾ ರೇಟಿಂಗ್ ಕೊಟ್ಟಿದ್ದಾರೆ ಎಂಬುದನ್ನಾದರೂ ತಿಳಿದಿರಿ. ಹೆಚ್ಚು ರೇಟಿಂಗ್ ಇದ್ದರೆ ಆ ಕಂಪನಿ ಹೆಚ್ಚು ವಿಶ್ವಾಸಾರ್ಹ ಆಗಿರುತ್ತದೆ.

ಇದನ್ನೂ ಓದಿPoor and Inflation: ಬಡವರು ಇನ್ನಷ್ಟು ಬಡವರಾಗಲು, ಸಿರಿವಂತರು ಇನ್ನಷ್ಟು ಸಿರಿವಂತರಾಗಲು ಏನು ಕಾರಣ? ವಿಷ ವರ್ತುಲವಾ ಹಣದುಬ್ಬರ? ಕುತೂಹಲದ ಉದಾಹರಣೆ

ಕಾರ್ಪೊರೇಟ್ ಎಫ್​ಡಿಯ ಬಡ್ಡಿದರ ತುಲನೆ ಮಾಡಿ

ವಿವಿಧ ಕಂಪನಿಗಳು ನಿಶ್ಚಿತ ಠೇವಣಿಗೆ ಎಷ್ಟು ಬಡ್ಡಿ ಆಫರ್ ಮಾಡುತ್ತವೆ ಎಂದು ತುಲನೆ ಮಾಡಿರಿ. ಉತ್ತಮ ರೇಟಿಂಗ್ ಹೊಂದಿರುವ ಕಂಪನಿಗಳ ಪೈಕಿ ಯಾವುದು ಹೆಚ್ಚು ಬಡ್ಡಿ ಆಫರ್ ಮಾಡುತ್ತದೋ ಆ ಕಂಪನಿಯ ನಿಶ್ಚಿತ ಠೇವಣಿಯನ್ನು ಆರಿಸಿಕೊಳ್ಳಿ.

ಹಾಗೆಯೇ, ತುರ್ತು ಅಗತ್ಯಬಿದ್ದು ಅವಧಿಗೆ ಮುನ್ನ ಠೇವಣಿಯನ್ನು ಹಿಂಪಡೆದುಕೊಂಡರೆ ಎಷ್ಟು ದಂಡ ವಿಧಿಸಲಾಗುತ್ತದೆ, ಠೇವಣಿ ಇದ್ದ ಅಷ್ಟೂ ಅವಧಿಗೆ ಎಷ್ಟು ಬಡ್ಡಿ ಕೊಡಲಾಗುತ್ತದೆ ಎಂಬಿತ್ಯಾದಿ ಅಂಶಗಳನ್ನೂ ತುಲನೆ ಮಾಡಿ ನೋಡಿ.

ಒಳ್ಳೆಯ ಕ್ರೆಡಿಟ್ ರೇಟಿಂಗ್ ಇರುವ ಕಂಪನಿಗಳು ಹಾಗೂ ಎಫ್​ಡಿ ಬಡ್ಡಿ ದರ

  • ಬಜಾಜ್ ಫೈನಾನ್ಸ್: ಶೇ. 7.40ರಿಂದ ಶೇ. 8.35
  • ಮಹೀಂದ್ರ ಫೈನಾನ್ಸ್: ಶೇ. 7.40ರಿಂದ ಶೇ. 7.75
  • ಶ್ರೀರಾಮ್ ಫೈನಾನ್ಸ್: ಶೇ. 7.60ರಿಂದ ಶೇ. 8.50
  • ಐಸಿಐಸಿಐ ಹೌಸಿಂಗ್ ಫೈನಾನ್ಸ್: ಶೇ. 7.00ರಿಂದ ಶೇ. 7.60
  • ಹೆಚ್​ಡಿಎಫ್​ಸಿ ಲಿ: ಶೇ. 7.10ರಿಂದ ಶೇ. 7.70
  • ಎಲ್​ಐಸಿ ಹೌಸಿಂಗ್ ಲಿ: ಶೇ. 7.25ರಿಂದ ಶೇ. 7.75
  • ಪಿಎನ್​ಬಿ ಹೌಸಿಂಗ್ ಫೈನಾನ್ಸ್: ಶೇ. 7ರಿಂದ ಶೇ. 7.70
  • ಹುಡ್ಕೋ: ಶೇ. 7.50ರವರೆಗೂ
  • ಮಹೀಂದ್ರ ಫೈನಾನ್ಸ್: ಶೇ. 7.40ರಿಂದ ಶೇ. 7.75
  • ಶ್ರೀರಾಮ್ ಟ್ರಾನ್ಸ್​ಪೋರ್ಟ್ ಫೈನಾನ್ಸ್ ಲಿ: ಶೇ. 7.34ರಿಂದ ಶೇ. 8.18
  • ಸುಂದರಮ್ ಫೈನಾನ್ಸ್ ಕಂಪನಿ: ಶೇ. 7.25ರಿಂದ ಶೇ. 7.53
  • ಮುತೂಟ್ ಕ್ಯಾಪಿಟಲ್: ಶೇ. 7.50ರಿಂದ ಶೇ. 7.75

ಇದನ್ನೂ ಓದಿLIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್​ಐಸಿ ಸರಳ್ ಪೆನ್ಷನ್ ಪ್ಲಾನ್

ಬಡ್ಡಿಗೆ ತೆರಿಗೆ ಇರುತ್ತದೆ, ಗಮನದಲ್ಲಿರಲಿ

ನಿಶ್ಚಿತ ಠೇವಣಿಗಳಿಂದ ನಿಮಗೆ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಎಫ್​ಡಿಯಿಂದ ಬರುವ ಲಾಭ ನೀವು ಲೆಕ್ಕ ಹಾಕಿದಷ್ಟಿರುವುದಿಲ್ಲ. ನಿಮ್ಮ ಆದಾಯ ತೆರಿಗೆ ಯಾವ ಸ್ಲ್ಯಾಬ್​ನಲ್ಲಿ ಇದೆ ಎನ್ನುವುದರ ಮೇಲೆ ಎಫ್​ಡಿ ಬಡ್ಡಿ ಹಣಕ್ಕೆ ತೆರಿಗೆ ಇರುತ್ತದೆ. ಉದಾಹರಣೆಗೆ, ನಿಮ್ಮ ಆದಾಯವು 10,00,000 ರೂ ಆಗಿದ್ದರೆ ನೀವು ಶೇ. 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಎಫ್​ಡಿಯಿಂದ ನಿಮಗೆ ಒಂದು ವರ್ಷದಲ್ಲಿ ಸಿಗುವ ಬಡ್ಡಿ ಹಣ 1 ಲಕ್ಷ ರೂ ಆಗಿದ್ದರೆ 30,000 ರೂ ಮತ್ತು ಶೇ. 0.4 ಸೆಸ್ ವಿಧಿಸಲಾಗುತ್ತದೆ. ಅಂದರೆ ಸುಮಾರು 31,000 ರೂ ಹಣವನ್ನು ಕಡಿತ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ