Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN-Aadhaar Link: ಪಾನ್ ಆಧಾರ್ ಲಿಂಕ್ ಮಾಡಿಲ್ಲವಾ? ಹೊಸ ಡೆಡ್​ಲೈನ್ ಕೂಡ ಹತ್ತಿರ ಬರ್ತಿದೆ; ತಪ್ಪಿಸಿಕೊಂಡರೆ ಏನಾಗುತ್ತೆ ಪರಿಣಾಮ? ನೋಡಿ ಡೀಟೇಲ್ಸ್

2023 June 30, Deadline for PAN Aadhaar Linking: 1,000 ರೂ ದಂಡ ಕಟ್ಟಿ ಆಧಾರ್ ಮತ್ತು ಪಾನ್ ಜೋಡಿಸಲು 2023ರ ಮಾರ್ಚ್​ವರೆಗೂ ಕಾಲಾವಕಾಶ ಕೊಡಲಾಗಿತ್ತು. ಈ ಡೆಡ್​ಲೈನ್ ಅನ್ನು 2023ರ ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಇದನ್ನು ತಪ್ಪಿಸಿಕೊಂಡರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ.

PAN-Aadhaar Link: ಪಾನ್ ಆಧಾರ್ ಲಿಂಕ್ ಮಾಡಿಲ್ಲವಾ? ಹೊಸ ಡೆಡ್​ಲೈನ್ ಕೂಡ ಹತ್ತಿರ ಬರ್ತಿದೆ; ತಪ್ಪಿಸಿಕೊಂಡರೆ ಏನಾಗುತ್ತೆ ಪರಿಣಾಮ? ನೋಡಿ ಡೀಟೇಲ್ಸ್
ಪ್ಯಾನ್ ಆಧಾರ್ ಲಿಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 16, 2023 | 5:33 PM

ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ ಅನ್ನು ಲಿಂಕ್ (PAN-Aadhaar linking) ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಕಡ್ಡಾಯಪಡಿಸಿ ವರ್ಷಗಳೇ ಆಗಿವೆ. ಅದರಲ್ಲೂ ತೆರಿಗೆ ಪಾವತಿದಾರರು ಇವೆರಡು ದಾಖಲೆಗಳನ್ನು ಲಿಂಕ್ ಮಾಡುವುದು ಬಹಳ ಅಗತ್ಯ. ಈ ಕಾರ್ಯಕ್ಕಾಗಿ ಇಲಾಖೆ ಹಲವು ಹಂತಗಳಲ್ಲಿ ಡೆಡ್​ಲೈನ್ ನಿಗದಿ ಮಾಡಿದೆ. 2022 ಜೂನ್ 30ವರೆಗೂ 500 ರೂ ದಂಡ ಪಾವತಿಯೊಂದಿಗೆ ಲಿಂಕ್ ಮಾಡಲು ಅವಕಾಶ ಕೊಡಲಾಗಿತ್ತು. ಅದಾದ ಬಳಿಕ 1,000 ರೂ ದಂಡ ಕಟ್ಟಿ ಆಧಾರ್ ಮತ್ತು ಪಾನ್ ಜೋಡಿಸುವ ಅವಕಾಶ ಕೊಡಲಾಯಿತು. ಅದಕ್ಕೆ 2023ರ ಮಾರ್ಚ್​ವರೆಗೂ ಕಾಲಾವಕಾಶ ಕೊಡಲಾಗಿತ್ತು. ಬಹಳ ಜನರು ಇನ್ನೂ ಲಿಂಕ್ ಮಾಡಿಲ್ಲದೇ ಇದ್ದರಿಂದ ಡೆಡ್​ಲೈನ್ ಅನ್ನು 2023ರ ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಈ ಡೆಡ್​ಲೈನ್ ತಪ್ಪಿಸಿಕೊಂಡರೆ ಕೆಲವೊಂದಿಷ್ಟು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಯಾರಿಗೆ ಈ ಪ್ಯಾನ್ ಮತ್ತು ಆಧಾರ್ ಡೆಡ್​ಲೈನ್?

ಈಗ ಹೊಸದಾಗಿ ಪ್ಯಾನ್ ಕಾರ್ಡ್ ಮಾಡಿಸುವವರು 1,000 ರೂ ಪಾವತಿಸಬೇಕಾಗಿಲ್ಲ. 2017 ಜುಲೈ 1ಕ್ಕೆ ಮುನ್ನ, ಅಂದರೆ 2023 ಜೂನ್ 30ರವರೆಗೆ ಯಾರಿಗೆಲ್ಲ ಪ್ಯಾನ್ ಕಾರ್ಡ್ ನೀಡಲಾಗಿತ್ತೋ, ಅಂಥವರು ತಮ್ಮ ಆಧಾರ್ ನಂಬರ್​ಗೆ ಅದನ್ನು ಲಿಂಕ್ ಮಾಡದೇ ಹೋಗಿದ್ದರೆ, ಅಂಥ ಪ್ಯಾನ್ ನಂಬರ್​ಗಳು 2023 ಜೂನ್ 30ರ ಬಳಿಕ ನಿಷ್ಕ್ರಿಯಗೊಳ್ಳುತ್ತವೆ.

2017 ಜುಲೈ 1ರಿಂದ ಯಾರ್ಯಾರು ಪ್ಯಾನ್ ಕಾರ್ಡ್ ಮಾಡಿಸಿದ್ದಾರೋ ಅವರದ್ದು ಡೀಫಾಲ್ಟ್ ಆಗಿ ಆಧಾರ್​ಗೆ ಲಿಂಕ್ ಆಗಿರುತ್ತದೆ. ಯಾಕೆಂದರೆ ಆ ದಿನಾಂಕದಿಂದ ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ದಾಖಲೆ ಕಡ್ಡಾಯಪಡಿಸಲಾಗಿತ್ತು.

ಇದನ್ನೂ ಓದಿAadhaar Updation: ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಗಡುವು ವಿಸ್ತರಣೆ; ಆನ್​ಲೈನ್​ನಲ್ಲಿ ಹೇಗೆ ಮಾಡುವುದು? ಇಲ್ಲಿದೆ ವಿವರ

ಈಗ ಪ್ಯಾನ್ ಕಾರ್ಡ್ ಮಾಡಿಸಬೇಕೆಂದವರೂ ಕೂಡ ಆಧಾರ್ ದಾಖಲೆ ಮೂಲಕವೇ ಮಾಡಿಸಬೇಕು. ಹೀಗಾಗಿ, ಆಟೊಮ್ಯಾಟಿಕ್ ಆಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರುತ್ತದೆ. ಆದರೆ, ಸಮಸ್ಯೆ ಇರುವುದು 2017 ಜುಲೈ 1ಕ್ಕೆ ಮುಂಚೆ ಪ್ಯಾನ್ ಕಾರ್ಡ್ ಮಾಡಿಸಿದ್ದವರಿಗೆ.

2017ರ ಜುಲೈ 1ಕ್ಕೆ ಮುಂಚೆ ಪ್ಯಾನ್ ಕಾರ್ಡ್ ಮಾಡಿಸಿದ್ದವರು ಹಾಗೂ ಅದನ್ನು ಆಧಾರ್​ಗೆ ಲಿಂಕ್ ಮಾಡಿಲ್ಲದೇ ಇರುವವರು, ಅದನ್ನು ಎಲ್ಲಿಯೂ ಉಪಯೋಗಿಸದೇ ಇದ್ದಲ್ಲಿ, ಅದರ ಬದಲಿಗೆ ಹೊಸ ಪ್ಯಾನ್ ನಂಬರ್ ಪಡೆಯಬಹುದು. ಆದರೆ, ಹಳೆಯ ನಂಬರ್ ಅನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದುವಂತಿಲ್ಲ.

ಹಾಗೆಯೇ, 80 ವರ್ಷ ದಾಟಿದ ವೃದ್ಧರು ಪ್ಯಾನ್ ನಂಬರ್ ಅನ್ನು ಆಧಾರ್ ಜೊತೆ ಜೋಡಿಸುವ ಅವಶ್ಯಕತೆ ಇಲ್ಲ. ಇವರಿಗೆ ಐಟಿ ಇಲಾಖೆ ವಿನಾಯಿತಿ ನೀಡಿದೆ.

ಇದನ್ನೂ ಓದಿSovereign Gold Bond: ಸಾವರಿನ್ ಗೋಲ್ಡ್ ಬಾಂಡ್ ಜೂನ್ 17ರಿಂದ: ಅಮೋಘ ಹೂಡಿಕೆ ಅವಕಾಶ ಕಳೆದುಕೊಳ್ಳದಿರಿ; ಏನಿದು ಸ್ಕೀಮ್, ಹೆಚ್ಚಿನ ಮಾಹಿತಿ ತಿಳಿಯಿರಿ

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಏನು ಪರಿಣಾಮ?

2023 ಜೂನ್ 30ರೊಳಗೆ ಆಧಾರ್ ನಂಬರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್​ಗಳು ನಿಷ್ಕ್ರಿಯಗೊಳ್ಳುತ್ತವೆ. ತೆರಿಗೆ ಪಾವತಿದಾರರಿಗೆ ಇದು ಬಹಳ ಮುಖ್ಯ. ನೀವು ಐಟಿ ಫೈಲಿಂಗ್ ಮಾಡಬಹುದಾದರೂ ರೀಫಂಡ್ ದಕ್ಕುವುದಿಲ್ಲ. ಪ್ಯಾನ್ ನಂಬರ್ ನಿಷ್ಕ್ರಿಯಗೊಂಡಿರುವ ಅವಧಿಯಲ್ಲಿ ನಿಮ್ಮ ರೀಫಂಡ್ ಹಣಕ್ಕೆ ಬಡ್ಡಿಯೂ ಜಮೆ ಆಗುವುದಿಲ್ಲ.

ಅಷ್ಟೇ ಅಲ್ಲ, ನಿಷ್ಕ್ರಿಯ ಪ್ಯಾನ್ ಕಾರ್ಡ್ ಹೊಂದಿರುವವರ ವಹಿವಾಟಿಗೆ ಹೆಚ್ಚು ಮೊತ್ತದ ಟಿಡಿಎಸ್ ಮತ್ತು ಟಿಸಿಎಸ್ ಡಿಡಕ್ಟ್ ಆಗುತ್ತದೆ.

ಅಕಸ್ಮಾತ್ ನೀವು ಡೆಡ್​ಲೈನ್ ಮುಗಿದುಹೋಯಿತು ಎಂದು ತೀರಾ ಆಕಾಶ ಕಳಚಿದಂತೆ ಭಾವಿಸಬೇಕಿಲ್ಲ. ನೀವು ಐಟಿ ಇಲಾಖೆ ಅನುಮತಿ ಮೇರೆಗೆ ಪ್ಯಾನ್ ಕಾರ್ಡ್ ಅನ್ನು ಮತ್ತೊಮ್ಮೆ ಸಕ್ರಿಯಗೊಳಿಸಲು ಸಾಧ್ಯ. ಅದಕ್ಕೆ ನಿರ್ದಿಷ್ಟ ದಂಡ ಕಟ್ಟಬೇಕಾಗುತ್ತದೆ. ಅದಕ್ಕೆ 30 ದಿನಗಳ ಸಮಯ ಹಿಡಿಯುತ್ತದೆ. ಪ್ಯಾನ್ ನಂಬರ್ ಮತ್ತೆ ಸಕ್ರಿಯ ಆಗುವವರೆಗೂ ಅದನ್ನು ಎಲ್ಲಿಯೂ ಬಳಸಲು ಹೋಗದಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ