Aadhaar Updation: ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಗಡುವು ವಿಸ್ತರಣೆ; ಆನ್ಲೈನ್ನಲ್ಲಿ ಹೇಗೆ ಮಾಡುವುದು? ಇಲ್ಲಿದೆ ವಿವರ
Last Date Extended For Free Aadhaar Updation: 10 ವರ್ಷದಿಂದ ಯಥಾಸ್ಥಿತಿಯಲ್ಲಿರುವ ಆಧಾರ್ನಲ್ಲಿರುವ ನಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆನ್ಲೈನ್ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಲು ಸಾಧ್ಯ.
ಆಧಾರ್ ಕಾರ್ಡ್ನಲ್ಲಿ ನಮ್ಮ ದಾಖಲೆಗಳನ್ನು ಉಚಿತವಾಗಿ ತಿದ್ದುಪಡಿ (Free Aadhaar Card Updation) ಮಾಡಲು ಜೂನ್ 14ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಇದನ್ನು 3 ತಿಂಗಳು ಹೆಚ್ಚಿಸಲಾಗಿದೆ. 2023 ಸೆಪ್ಟಂಬರ್ 14ರವರೆಗೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವ ಅವಕಾಶ ಇದೆ. ಬಹಳ ಜನರ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಿಂದಿನದ್ದಾದರೂ ಒಮ್ಮೆಯೂ ಅಪ್ಡೇಟ್ ಮಾಡಿಲ್ಲ. ಈ ರೀತಿ 10 ವರ್ಷದಿಂದ ಯಥಾಸ್ಥಿತಿಯಲ್ಲಿ ಇರುವ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕು ಎಂದು ಸರ್ಕಾರ ಆಗಾಗ್ಗೆ ಮನವಿ ಮಾಡುತ್ತಿದೆ. ಆಧಾರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೀವು ಅಪ್ಡೇಟ್ ಮಾಡಬಹುದು. ಇದಕ್ಕೆ ನಿರ್ದಿಷ್ಟ ಶುಲ್ಕ ಇರುತ್ತದೆ. ಇದರ ಜೊತೆಗೆ, ಆನ್ಲೈನ್ನಲ್ಲಿ ನೀವೇ ಸ್ವತಃ ಅಪ್ಡೇಶನ್ ಮಾಡಲು ಸಾಧ್ಯ. ಆನ್ಲೈನ್ನಲ್ಲಿ ಸದ್ಯ ಉಚಿತವಾಗಿ ಈ ಸೇವೆ ಲಭ್ಯ ಇದೆ. ಸೆಪ್ಟಂಬರ್ 14ರ ಬಳಿಕ ಆನ್ಲೈನ್ನಲ್ಲೂ ಶುಲ್ಕ ಪಾವತಿಸಿ ಆಧಾರ್ ಅಪ್ಡೇಶನ್ ಮಾಡಬೇಕಾಗುತ್ತದೆ.
ಡೆಮೋಗ್ರಾಫಿಕ್ ಮಾಹಿತಿಯ ನಿಖರತೆ ಕಾಪಾಡಲು ದಯವಿಟ್ಟು ಆಧಾರ್ ಅಪ್ಡೇಟ್ ಮಾಡಿ ಎಂದು ಯುಐಡಿಎಐ ಕರೆ ನೀಡಿದೆ. ಯುಐಡಿಎಐನ ಮೈ ಆಧಾರ್ ಪೋರ್ಟಲ್ ಮೂಲಕ ಸುಲಭವಾಗಿ ನಿಮ್ಮ ಆಧಾರ್ ಅಪ್ಡೇಟ್ ಸಾಧ್ಯವಾಗುತ್ತದೆ. ಇಲ್ಲಿ ನಿಮಗೆ ಗೊಂದಲ ಅಥವಾ ಕಷ್ಟ ಎನಿಸಿದರೆ ಆಧಾರ್ ಸೆಂಟರ್ಗೆ ಹೋಗಿ 25 ರೂ ಶುಲ್ಕ ನೀಡಿ ಈ ಕಾರ್ಯ ಮಾಡಿಸಬಹುದು.
ಆನ್ಲೈನ್ನಲ್ಲಿ ಆಧಾರ್ ಅಪ್ಡೇಶನ್ ಹೇಗೆ ಮಾಡುವುದು?
- ಆಧಾರ್ನ ಅಧಿಕೃತ ಪೋರ್ಟಲ್ ಮೈ ಆಧಾರ್ಗೆ ಹೋಗಿ
- ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ನೆರವಿನಿಂದ ಲಾಗಿನ್ ಆಗಿ.
- ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ ಅಪ್ಡೇಟ್ ಮಾಡಿ
- ಅಪ್ಡೇಟ್ ಆಧಾರ್ ಆನ್ಲೈನ್ ಎಂಬ ಆಪ್ಷನ್ ಆಯ್ದುಕೊಳ್ಳಿ
- ಅಲ್ಲಿ ಕೊಟ್ಟಿರುವ ಸೂಚನೆಗಳ ಪ್ರಕಾರ ಕ್ರಮ ಕೈಗೊಂಡು, ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಈಗ ಸರ್ವಿಸ್ ರಿಕ್ವೆಸ್ಟ್ ನಂಬರ್ (ಎಸ್ಆರ್ಎನ್) ಜನರೇಟ್ ಆಗುತ್ತದೆ. ಅದನ್ನು ಸೇವ್ ಮಾಡಿಟ್ಟುಕೊಂಡಿರಿ.
ಆಧಾರ್ ವಿಚಾರದಲ್ಲಿ ಹೆಲ್ಪ್ಲೈನ್ ನಂಬರ್
ಆಧಾರ್ ಅಪ್ಡೇಶನ್ ಪೂರ್ಣಗೊಂಡಿದೆಯಾ ಎಂಬುದನ್ನು ತಿಳಿದುಕೊಳ್ಳಲು ಯುಐಡಿಎಐನ 1947 ನಂಬರ್ಗೆ ಕರೆ ಮಾಡಬಹುದು. ಇದು ಟಾಲ್ಫ್ರೀ ಆಗಿದ್ದು, ಐವಿಆರ್ಎಸ್ ಸಿಸ್ಟಂ ಆಗಿದೆ. ಆಧಾರ್ ಸ್ಟೇಟಸ್ ಮಾತ್ರವಲ್ಲ, ಆಧಾರ್ ಎನ್ರೋಲ್ಮೆಂಟ್, ಪಿವಿಸಿ ಕಾರ್ಡ್ ಸ್ಟೇಟಸ್ ಅನ್ನೂ ಇಲ್ಲಿ ಪಡೆಯಬಹುದು. ಎಸ್ಸೆಮ್ಮೆಸ್ ಮೂಲಕ ಮಾಹಿತಿಯನ್ನೂ ಪಡೆಯಬಹುದು.
Experience new services built on #IVRS by UIDAI. Residents can call the UIDAI toll-free number 1947, 24×7 to find out their Aadhaar enrollment or update status, PVC card status or to receive information via SMS. pic.twitter.com/C5wNDFAgkH
— Aadhaar (@UIDAI) June 15, 2023
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ