AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Microsoft: ಮೈಕ್ರೋಸಾಫ್ಟ್ ಷೇರುಬೆಲೆ ಹೊಸ ದಾಖಲೆ; ಷೇರುಸಂಪತ್ತು 212 ಲಕ್ಷ ಕೋಟಿ ರೂ

Record Share Price For Microsoft: ಅಮೆರಿಕದ ಷೇರುಪೇಟೆಯಲ್ಲಿ ಮೈಕ್ರೋಸಾಫ್ಟ್ ಷೇರುಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರಿದೆ. ಅದರ ಪರಿಣಾಮವಾಗಿ ಷೇರುಸಂಪತ್ತು 2.588 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಹೋಗಿದೆ. ಆ್ಯಪಲ್ ಬಿಟ್ಟರೆ ಅತಿಹೆಚ್ಚು ಷೇರುಸಂಪತ್ತು ಹೊಂದಿರುವುದು ಮೈಕ್ರೋಸಾಫ್ಟ್ ಸಂಸ್ಥೆಯೇ.

Microsoft: ಮೈಕ್ರೋಸಾಫ್ಟ್ ಷೇರುಬೆಲೆ ಹೊಸ ದಾಖಲೆ; ಷೇರುಸಂಪತ್ತು 212 ಲಕ್ಷ ಕೋಟಿ ರೂ
ಮೈಕ್ರೋಸಾಫ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 16, 2023 | 10:39 AM

Share

ನವದೆಹಲಿ: ಮೈಕ್ರೋಸಾಫ್ಟ್ ಕಾರ್ಪೊರೇಷನ್ ಸಂಸ್ಥೆಯ ಷೇರು ಬೆಲೆ (Microsoft Corporation Share Price) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಅಮೆರಿಕದ ನಾಸ್ಡಾಕ್ (Nasdaq) ಷೇರುಪೇಟೆಯಲ್ಲಿ ಮೈಕ್ರೋಸಾಫ್ಟ್​ನ ಒಂದು ಷೇರುಬೆಲೆ ಜೂನ್ 15ರ ಅಂತ್ಯಕ್ಕೆ 348.10 ಡಾಲರ್ (28,514 ರೂ) ತಲುಪಿತ್ತು. 2021ರ ನವೆಂಬರ್ 19ರಂದು ಅದರ ಷೇರುಬೆಲೆ 343.11 ಡಾಲರ್ ಇದ್ದದ್ದು ಅದೇ ದಾಖಲೆಯಾಗಿತ್ತು. ಈಗ ಅದನ್ನೂ ಮೀರಿಸಿ ಮೈಕ್ರೋಸಾಫ್ಟ್ ಷೇರು ಮುಂದಡಿ ಇಟ್ಟಿದೆ. ಗುರುವಾರದ ವಹಿವಾಟಿನ (June 15) ಒಂದು ಹಂತದಲ್ಲಿ ಷೇರುಬೆಲೆ 349 ರೂಗಿಂತ ಹೆಚ್ಚೇ ಹೋಗಿತ್ತು. ಬಳಿಕ ತುಸು ಇಳಿಕೆಗೊಂಡು 348.10 ರೂ ಮುಟ್ಟಿತ್ತು.

ಜೂನ್ 16ರ ವಹಿವಾಟಿನಲ್ಲಿ ಇದರ ಷೇರುಬೆಲೆ ಇನ್ನಷ್ಟು ಎತ್ತರಕ್ಕೆ ಹೋಗುತ್ತದಾ ಎಂಬ ಕುತೂಹಲ ಇದೆ. ಆದರೆ, 348 ಡಾಲರ್ ಎಂದರೆ ಸುಮಾರು 28,000 ರೂ ಆಗುತ್ತದೆ. ಭಾರತದ ಎಂಆರ್​ಎಫ್ ಕಂಪನಿಯ ಷೇರುಬೆಲೆ 1 ಲಕ್ಷ ರೂ ದಾಟಿದ ಸುದ್ದಿ ಕೇಳಿದ ಕೆಲವರಿಗೆ ಮೈಕ್ರೋಸಾಫ್ಟ್ ಷೇರುಬೆಲೆ ಇಷ್ಟು ಕಡಿಮೆಯಾ ಎನಿಸಬಹುದು. ಆದರೆ, ಮೈಕ್ರೋಸಾಫ್ಟ್​ನ ಷೇರುಗಳ ಪ್ರಮಾಣ ಅತ್ಯಧಿಕ ಇದ್ದು, ಅದರ ಒಟ್ಟು ಷೇರುಸಂಪತ್ತು (Market Capitalization) 2.59 ಟ್ರಿಲಿಯನ್ ಡಾಲರ್ ಆಗಿದೆ. ಅಂದರೆ ಸುಮಾರು 212 ಲಕ್ಷ ಕೋಟಿ ರೂ ಷೇರುಸಂಪತ್ತನ್ನು ಮೈಕ್ರೋಸಾಫ್ಟ್ ಹೊಂದಿದೆ.

ಇದನ್ನೂ ಓದಿPakistan: ಪಾಕಿಸ್ತಾನದಿಂದ ಕಾಲ್ಕೀಳುತ್ತಿದೆ ಶೆಲ್; ಅಲ್ಲಾಹುವೇ ಕಾಪಾಡಬೇಕೆಂದ ನೆಟ್ಟಿಗರು

ಮೈಕ್ರೋಸಾಫ್ಟ್ ಷೇರಿಗೆ ಈ ಪರಿ ಬೇಡಿಕೆ ಬರಲು ಏನು ಕಾರಣ?

ಚ್ಯಾಟ್​ಜಿಪಿಟಿ ತಯಾರಕ ಓಪನ್​ಎಐ ಸಂಸ್ಥೆ ಬಗ್ಗೆ ಕೇಳಿರಬಹುದು. ಈ ಕಂಪನಿಯ ಮೇಲೆ ಮೈಕ್ರೋಸಾಫ್ಟ್ ಸಾಕಷ್ಟು ಹೂಡಿಕೆ ಮಾಡಿದೆ. ಈಗಾಗಲೇ ತನ್ನಲ್ಲಿರುವ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಮತೆ ಅಥವಾ ಯಂತ್ರ ಬುದ್ಧಿಮತ್ತೆ) ತಂತ್ರಜ್ಞಾನ ಅವಳಡಿಸಿಕೊಳ್ಳುತ್ತಿದೆ. ಗೂಗಲ್ ಸರ್ಚ್ ಎಂಜಿನ್ ಅನ್ನು ಹಿಂದಕ್ಕೆ ಸರಿಸುವಂತೆ ಬಿಂಗ್ ಸರ್ಚ್ ಎಂಜಿನ್ ಅನ್ನು ಮೈಕ್ರೋಸಾಫ್ಟ್ ಅಪ್​ಗ್ರೇಡ್ ಮಾಡುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಮೈಕ್ರೋಸಾಫ್ಟ್ ವರ್ಷಕ್ಕೆ 10 ಬಿಲಿಯನ್ ಡಾಲರ್ ಆದಾಯ ಗಳಿಸಬಹುದು ಎಂದು ಆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದರು. ಹಾಗೆಯೇ, 53 ಹಣಕಾಸು ಸಂಸ್ಥೆಗಳ ಪೈಕಿ 44 ಸಂಸ್ಥೆಗಳು ಮೈಕ್ರೋಸಾಫ್ಟ್ ಷೇರಿಗೆ ಬಯ್ ಸೂಚನೆ ನೀಡಿದ್ದರು. ಅದರೆ, ಇದರ ಷೇರು ಖರೀದಿಸಿದರೆ ಲಾಭ ಮಾಡಬಹುದು ಎಂಬುದರ ಸೂಚನೆ ಅದು. ಇದರ ಬೆನ್ನಲ್ಲೇ ಷೇರುಪೇಟೆಯಲ್ಲಿ ಅದರ ಷೇರಿಗೆ ಒಳ್ಳೆಯ ಡಿಮ್ಯಾಂಡ್ ಶುರುವಾಗಿದೆ.

ಇದನ್ನೂ ಓದಿYouTube: ಯೂಟ್ಯೂಬ್​ನಿಂದ ಹಣ ಮಾಡಬೇಕೆನ್ನುವವರಿಗೆ ಖುಷಿ ಸುದ್ದಿ; 500 ಸಬ್​ಸ್ಕ್ರೈಬರ್ಸ್ ಇದ್ದರೆ ಸಾಕಂತೆ… ಬದಲಾಗಿದೆ 3 ಮಾನದಂಡಗಳು

ಬೇರೆ ಕಂಪನಿಗಳ ಷೇರುಗಳಿಗೂ ಸುಗ್ಗಿ

ಮಾರುಕಟ್ಟೆ ಬಂಡವಾಳದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವುದು ಆ್ಯಪಲ್ ಸಂಸ್ಥೆಯೇ. ಅದರ ಷೇರುಬೆಲೆಯೂ ಹೊಸ ಎತ್ತರಕ್ಕೆ ಹೋಗಿದೆ. ಗ್ರಾಫಿಕ್ಸ್ ಚಿಪ್​ಗಳನ್ನು ತಯಾರಿಸುವ ಎನ್​ವಿಡಿಯಾ ಕಂಪನಿಯ ಷೇರು ಬೆಲೆ 432.89 ಡಾಲರ್​ಗೆ ಹೋಗಿದೆ. ಅದೂ ಸಹ ಆ ಕಂಪನಿಗೆ ದಾಖಲೆಯೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು