AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

YouTube: ಯೂಟ್ಯೂಬ್​ನಿಂದ ಹಣ ಮಾಡಬೇಕೆನ್ನುವವರಿಗೆ ಖುಷಿ ಸುದ್ದಿ; 500 ಸಬ್​ಸ್ಕ್ರೈಬರ್ಸ್ ಇದ್ದರೆ ಸಾಕಂತೆ… ಬದಲಾಗಿದೆ 3 ಮಾನದಂಡಗಳು

Youtube Partner Programme Eligibility Requirements: ಖುಷಿ ಸುದ್ದಿ ಎಂದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಬೇಕಾದ ಅರ್ಹತಾ ಮಾನದಂಡಗಳನ್ನು ಸಡಿಲಿಸಲಾಗುತ್ತಿದೆ. ಇದೇನಾದರೂ ಜಾರಿಯಾದರೆ ಯೂಟ್ಯೂಬ್​ನಲ್ಲಿ ಹಣ ಮಾಡುವ ಕಾಯಕ ಶುರು ಮಾಡಬಯಸುವವರಿಗೆ ಈ ಕೆಲಸ ಹೆಚ್ಚು ಸುಲಭವಾಗಲಿದೆ.

YouTube: ಯೂಟ್ಯೂಬ್​ನಿಂದ ಹಣ ಮಾಡಬೇಕೆನ್ನುವವರಿಗೆ ಖುಷಿ ಸುದ್ದಿ; 500 ಸಬ್​ಸ್ಕ್ರೈಬರ್ಸ್ ಇದ್ದರೆ ಸಾಕಂತೆ... ಬದಲಾಗಿದೆ 3 ಮಾನದಂಡಗಳು
ಯೂಟ್ಯೂಬ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 15, 2023 | 2:52 PM

Share

ವಿಶ್ವದ ಅತಿದೊಡ್ಡ ವಿಡಿಯೋ ಪ್ಲಾಟ್​ಫಾರ್ಮ್ ಎನಿಸಿದ ಯೂಟ್ಯೂಬ್​ನಲ್ಲಿ (Youtube) ಬಹಳ ಜನರು ವಿಡಿಯೋಗಳನ್ನು ಹಾಕುತ್ತಾ ಬಹಳಷ್ಟು ಹಣ ಮಾಡುವುದನ್ನು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಬಹಳಷ್ಟು ಜನರು ಕೆಲಸ ಬಿಟ್ಟು ಪೂರ್ಣಾವಧಿ ಯೂಟ್ಯೂಬ್ ವಿಡಿಯೋ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಹಲವು ಮಾಧ್ಯಮಗಳಿಗಂತೂ ಯೂಟ್ಯೂಬ್ ಅತಿದೊಡ್ಡ ಆದಾಯಮೂಲವಾಗಿದೆ. ಆದರೆ, ಯೂಟ್ಯೂಬ್​ನಿಂದ ಹಣ ಮಾಡಬೇಕಾದರೆ ಯೂಟ್ಯೂಬ್ ಪಾರ್ಟ್ನರ್ (Youtube Partner Programme) ಅರ್ಹತೆ ಪಡೆಯಬೇಕು. ಖುಷಿ ಸುದ್ದಿ ಎಂದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಬೇಕಾದ ಅರ್ಹತಾ ಮಾನದಂಡಗಳನ್ನು (Eligibility Requirements) ಸಡಿಲಿಸಲಾಗುತ್ತಿದೆ. ಇದೇನಾದರೂ ಜಾರಿಯಾದರೆ ಯೂಟ್ಯೂಬ್​ನಲ್ಲಿ ಹಣ ಮಾಡುವ ಕಾಯಕ ಶುರು ಮಾಡಬಯಸುವವರಿಗೆ ಈ ಕೆಲಸ ಹೆಚ್ಚು ಸುಲಭವಾಗಲಿದೆ.

500 ಸಬ್​ಸ್ಕ್ರೈಬರ್ಸ್ ಸಾಕು ಸಂಪಾದನೆ ಶುರು ಮಾಡಲು

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ ಹೊಂದಬೇಕಾದರೆ ಕೆಲವೊಂದಿಷ್ಟು ಮಾನದಂಡಗಳಿವೆ. ಅದರಲ್ಲಿ 1000 ಸಬ್​ಸ್ಕ್ರೈಬರ್ಸ್ ಹೊಂದಿರಬೇಕು; ಒಟ್ಟು ವಿಡಿಯೋಗಳು 4,000 ಗಂಟೆಗಳ ವೀಕ್ಷಣೆ ಪಡೆದಿರಬೇಕು; ಯೂಟ್ಯೂಬ್ ಶಾರ್ಟ್ಸ್ ವಿಡಿಯೋಗಳು 1 ಕೋಟಿ ವೀಕ್ಷಣೆ ಹೊಂದಿರಬೇಕು ಎಂಬಿತ್ಯಾದಿ ಷರತ್ತುಗಳಿವೆ.

ಈಗ ಇದರಲ್ಲಿ ಮೂರು ಮಾನದಂಡಗಳನ್ನು ಸಡಿಲಿಸಲಾಗಿದೆ. ಒಂದು ಸಾವಿರ ಬದಲಿಗೆ 500 ಸಬ್​ಸ್ಕ್ರೈಬರ್ಸ್ ಹೊಂದಿದ್ದರೆ ಸಾಕು; 4,000 ಗಂಟೆಗಳ ವೀಕ್ಷಣೆ ಬದಲು 3,000 ಗಂಟೆಗಳ ವೀಕ್ಷಣೆ ಇದ್ದರೆ ಸಾಕು. ಹಾಗೆಯೇ, ಶಾರ್ಟ್ಸ್ ವಿಡಿಯೋಗಳ ವೀಕ್ಷಣೆ 1 ಕೋಟಿ ಬದಲು 30 ಲಕ್ಷ ಇದ್ದರೆ ಸಾಕು ಎಂದು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಸಂಸ್ಥೆ ಮಾಹಿತಿ ನೀಡಿದೆ. ಆದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಅರ್ಹರಾಗಲು ಬೇಕಾದ ಬೇರೆಲ್ಲಾ ಮಾನದಂಡಗಳು ಹಾಗೇ ಮುಂದುವರಿಯಲಿವೆ.

ಇದನ್ನೂ ಓದಿ: EPF: ಇಪಿಎಫ್ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಏನಾಗುತ್ತದೆ? ಮರ್ಜ್ ಮಾಡುವ ಪ್ರಕ್ರಿಯೆ ಹೇಗೆ? ವಿವರ ತಿಳಿದಿರಿ

ಸದ್ಯ ಈ ಹೊಸ ಮಾರ್ಪಾಡು ಅಮೆರಿಕ, ಬ್ರಿಟನ್, ಕೆನಡಾ, ತೈವಾನ್ ಮತ್ತು ಸೌತ್ ಕೊರಿಯಾದಲ್ಲಿ ಮೊದಲು ಅಳವಡಿಕೆ ಆಗಲಿದೆ. ಆ ಬಳಿಕ ಬೇರೆ ಕಡೆ ಜಾರಿಯಾಗಬಹುದು. ಭಾರತೀಯ ಯೂಟ್ಯೂಬ್ ಆಸಕ್ತರು ಈ ಅವಕಾಶಕ್ಕಾಗಿ ಇನ್ನಷ್ಟು ದಿನ ಕಾಯಬೇಕಾಗಬಹುದು.

ನೀವು ಒಮ್ಮೆ ಯೂಟ್ಯೂಬ್ ಚಾನಲ್ ಆರಂಭಿಸಿ, ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಅಪ್ಲೈ ಮಾಡಿದ್ದರಾಯ್ತು. ಯೂಟ್ಯೂಬ್ ನಿಗದಿಪಡಿಸಿರುವ ಮಾನದಂಡಗಳನ್ನು ನೀವು ತಲುಪಿದ ಬಳಿಕ ತಾನಾಗೇ ವರಮಾನ ಬರತೊಡಗುತ್ತದೆ. ಅಂದರೆ ಮಾನಿಟೈಸೇಶನ್ ಆಗತೊಡಗುತ್ತದೆ. ನಿಮ್ಮ ವಿಡಿಯೋಗಳಿಗೆ ಬರುವ ಜಾಹೀರಾತುಗಳಿಂದ ಗೂಗಲ್​ಗೆ ಆದಾಯ ಬರುತ್ತದೆ. ನೀವು ಯೂಟ್ಯೂಬ್ ಪಾರ್ಟ್ನರ್ ಆಗಿದ್ದರೆ ಆ ಆದಾಯವನ್ನು ಯೂಟ್ಯೂಬ್ ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ.

ಇದನ್ನೂ ಓದಿ: BSE Record: ಭಾರತದ ಒಟ್ಟು ಷೇರುಸಂಪತ್ತು 292 ಲಕ್ಷ ಕೋಟಿ ರೂಗೆ ಏರಿಕೆ; ಇದು ಹೊಸ ದಾಖಲೆ

ಪೇಯ್ಡ್ ಚ್ಯಾಟ್, ಟಿಪ್ಪಿಂಗ್, ಶಾಪಿಂಗ್ ಫೀಚರ್, ಚಾನಲ್ ಮೆಂಬರ್​ಶಿಪ್ ಇತ್ಯಾದಿ ಹೊಸ ರೀತಿಯ ಆದಾಯಮಾರ್ಗಗಳನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಹಾಗೆಯೇ, ಈಗ ಯೂಟ್ಯೂಬ್ ವಿಡಿಯೋಗಳಿಗೆ ಮ್ಯೂಸಿಕ್ ಬಳಸಲು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಯಾವುದೇ ಕಾಪಿರೈಟ್ ಇಲ್ಲದ, ಫ್ರೀ ಆಗಿ ಹಂಚಿಕೆಯಾಗುವ ಮ್ಯೂಸಿಕ್ ಸಂಗ್ರಹವನ್ನು ಯೂಟ್ಯೂಬ್ ಇಟ್ಟಿದೆ. ಇದರಲ್ಲಿ ಯಾರು ಬೇಕಾದರೂ ತಮ್ಮ ಯೂಟ್ಯೂಬ್ ವಿಡಿಯೋಗಳಿಗೆ ಬಳಸಬಹುದು. ಇಂತಹ ಮ್ಯೂಸಿಕ್ ಸಂಗ್ರಹವನ್ನು ಯೂಟ್ಯೂಬ್ ನಿರಂತವಾಗಿ ಹೆಚ್ಚಿಸುತ್ತಲೇ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್