AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Insurance: ಸಿಂಗಲ್ ಪ್ರೀಮಿಯಮ್ ಇನ್ಷೂರೆನ್ಸ್ ಪಾಲಿಸಿ ಜನಪ್ರಿಯವಾಗುತ್ತಿರುವುದು ಯಾಕೆ? ಅದರ ಅನುಕೂಲತೆಗಳೇನು?

Single Premium Insurance Policy Benefits: ಸಿಂಗಲ್ ಪ್ರೀಮಿಯಮ್ ಯೋಜನೆಗಳು ವಿಮಾ ಕಂಪನಿಗಳಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಋತುಮಾನಕ್ಕೆ ಅನುಸಾರವಾಗಿ ಉದ್ಯೋಗ ಅಥವಾ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರು ಇಂಥ ಯೋಜನೆಯನ್ನು ಆರಿಸಿಕೊಳ್ಳುತ್ತಿದ್ದಾರೆ.

Insurance: ಸಿಂಗಲ್ ಪ್ರೀಮಿಯಮ್ ಇನ್ಷೂರೆನ್ಸ್ ಪಾಲಿಸಿ ಜನಪ್ರಿಯವಾಗುತ್ತಿರುವುದು ಯಾಕೆ? ಅದರ ಅನುಕೂಲತೆಗಳೇನು?
ಇನ್ಷೂರೆನ್ಸ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jun 14, 2023 | 6:23 PM

ದೇಶದಲ್ಲಿ ಜೀವ ವಿಮೆಯ ವ್ಯವಹಾರ (Insurance business) ಬಹಳ ವೇಗವಾಗಿ ಬೆಳವಣಿಗೆಯಾಗುತ್ತಿದೆ. 2023ರಲ್ಲಿ, ಜೀವ ವಿಮಾ ಕಂಪನಿಗಳು ಸಂಗ್ರಹಿಸಿದ ಪ್ರೀಮಿಯಮ್ ಮೊತ್ತದಲ್ಲಿ ಶೇ. 20ರಷ್ಟು ಹೆಚ್ಚಳ ಆಗಿದೆ. ಮಾರ್ಚ್ 2023ರಲ್ಲಿ ಅದು ಶೇ. 35ರಷ್ಟು ಆಗಿತ್ತು. ಜೀವ ವಿಮಾ ಯೋಜನೆಗಳ ಬೇಡಿಕೆಯಲ್ಲಿನ ಈ ಹೆಚ್ಚಳವು ಮುಖ್ಯವಾಗಿ ಹಣಕಾಸು ವರ್ಷದ ಅಂತ್ಯ ಭಾಗದಲ್ಲಿ ಕಂಡುಬಂದಿತ್ತು. ಇದರಲ್ಲಿ ಖಾಸಗಿ ವಿಮಾ ಕಂಪನಿಗಳು ಸಿಂಹಪಾಲು ಪಡೆದು ಮೇಲುಗೈ ಸಾಧಿಸಿದ್ದವು. ಮತ್ತೊಂದೆಡೆ, ಸಾರ್ವಜನಿಕ ವಿಮಾ ಕಂಪನಿಯಾದ LIC ಮಾತ್ರ ಪ್ರೀಮಿಯಮ್ ಸಂಗ್ರಹಣೆಯಲ್ಲಿ ಹಿಂದುಳಿದಿತ್ತು.

ಸಿಂಗಲ್ ಪ್ರೀಮಿಯಮ್​ನ ಅನುಕೂಲತೆಗಳೇನು?

ಸಿಂಗಲ್ ಪ್ರೀಮಿಯಮ್ ಯೋಜನೆಗಳು ವಿಮಾ ಕಂಪನಿಗಳಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಋತುಮಾನಕ್ಕೆ ಅನುಸಾರವಾಗಿ ಉದ್ಯೋಗ ಅಥವಾ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರು ಇಂಥ ಯೋಜನೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಇಂಥವರಿಗೆ ಮುಂದಿನ ದಿನದಲ್ಲಿ ನಿಯಮಿತವಾಗಿ ಪ್ರೀಮಿಯಮ್ ಕಟ್ಟಲು ಆಗುತ್ತದೆಯೋ? ಅಥವಾ ಇಲ್ಲವೋ? ಎನ್ನವುದು ಗೊತ್ತಿರುವುದಿಲ್ಲ.

ಈ ಕಾರಣದಿಂದ ಸಿಂಗಲ್ ಪ್ರೀಮಿಯಮ್​ನ ಪಾಲಿಸಿಗಳ ಬೇಡಿಕೆ ಹೆಚ್ಚುತ್ತಿದೆ. ಜುಲೈ 2022ರಲ್ಲಿ ಒಟ್ಟಾರೆ ವಿಮಾ ಪ್ರೀಮಿಯಮ್​ಗಳಲ್ಲಿ ಸಿಂಗಲ್ ಪ್ರೀಮಿಯಮ್​ಗಳ ಕೊಡುಗೆ ಶೇ. 79ರಷ್ಟು ಇತ್ತು ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟಿ ರಿಸರ್ಚ್ ವರದಿ ತಿಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ. 65ರಷ್ಟಿತ್ತು.

ಇದನ್ನೂ ಓದಿ: Multibagger: ರಾಜ್ ರೇಯಾನ್- ಇದಪ್ಪಾ ಮಲ್ಟಿಬ್ಯಾಗರ್ ಷೇರು; 1 ಲಕ್ಷಕ್ಕೆ ಎರಡೇ ವರ್ಷದಲ್ಲಿ 4.45 ಕೋಟಿ ರೂ ಲಾಭ

2023ರ ಜನವರಿಮಾರ್ಚ್ ತ್ರೈಮಾಸಿಕದಲ್ಲಿ, ಹೊಸ ಸಿಂಗಲ್ ಪ್ರೀಮಿಯಮ್ ಪಾಲಿಸಿಗಳ ವ್ಯವಹಾರದಿಂದ ಜೀವ ವಿಮಾ ಕಂಪನಿಗಳುದಾಖಲೆಯ ಮೊತ್ತವನ್ನು ಸಂಗ್ರಹಿಸಿರುವುದನ್ನು ಅಂಕಿಅಂಶಗಳು ತಿಳಿಸಿವೆ. ಈ ವರ್ಷ, ಸಿಂಗಲ್ ಪ್ರೀಮಿಯಮ್ ಪಾಲಿಸಿಗಳ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಬಜೆಟ್​ನಲ್ಲಿ 5 ಲಕ್ಷ ರೂ. ಗೂ ಅಧಿಕ ಪ್ರೀಮಿಯಮ್ ಇರುವ ಪಾಲಿಸಿಗಳನ್ನು ತೆರಿಗೆ ವ್ಯಾಪ್ತಿಯೊಳಗೆ ತಂದಿರುವುದೇ ಇದಕ್ಕೆ ಕಾರಣವಾಗಿದೆ .

ಸಿಂಗಲ್ ಪ್ರೀಮಿಯಮ್ ವಿಮಾ ಪಾಲಿಸಿಯೊಂದರಲ್ಲಿ, ನೀವು ನಿಗದಿತ ಅವಧಿಗಳಲ್ಲಿ ಪ್ರೀಮಿಯಮ್ ಕಟ್ಟಬೇಕಿಲ್ಲಲ್ಲ. ನೀವು ಕೇವಲ ಒಂದು ಬಾರಿ ಪ್ರೀಮಿಯಮ್ ಕಟ್ಟಿ ಎಲ್ಲಾ ತಲೆನೋವುಗಳಿಂದ ಪಾರಾಗಿಬಿಡುವಿರಿ. ಬಹಳ ದೊಡ್ಡ ಮೊತ್ತದ ಹಣವನ್ನು ಹೊಂದಿರುವ ಜನರು ಇಂತಹ ಪಾಲಿಸಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಪರ್ಸನಲ್ ಫೈನಾನ್ಸ್ ಪರಿಣಿತ ಜಿತೇಂದ್ರ ಸೋಲಂಕಿ ಹೇಳುವಂತೆ, ಒಂದು ದೊಡ್ಡ ಮೊತ್ತವನ್ನು ಒಮ್ಮೆ ಹೂಡಿಕೆ ಮಾಡಿ ನಿಮ್ಮ ಸಂಪೂರ್ಣ ಜೀವಮಾನಕ್ಕೆ ಜೀವ ವಿಮೆಯ ರಕ್ಷಣೆ ಪಡೆಯಲು ಸಿಂಗಲ್ ಪ್ರೀಮಿಯಮ್ ಪಾಲಿಸಿ ನಿಮಗೆ ಅವಕಾಶ ಮಾಡಿಕೊಡುತ್ತದೆ. ಒಂದು ಪಾಲಿಸಿಗಾಗಿ 10-15 ವರ್ಷಗಳ ಕಾಲ ಪ್ರತಿ ವರ್ಷ ಪ್ರೀಮಿಯಮ್​ಗಳನ್ನು ಕಟ್ಟುವ ಬಗ್ಗೆ ಗ್ರಾಹಕರು ಚಿಂತಿಸಬೇಕಾಗಿಲ್ಲ. ನೀವು ಕಟ್ಟುವ ಸಿಂಗಲ್ ಪ್ರೀಮಿಯಮ್​ನ ಮೊತ್ತವು ಒಂದು ಸಾಮಾನ್ಯ ಪಾಲಿಸಿಗೆ ಕಟ್ಟಬೇಕಾಗುವ ಒಟ್ಟು ಪ್ರೀಮಿಯಮ್ ಮೊತ್ತಕ್ಕೆ ಹೋಲಿಸಿದಾಗ ಕಡಿಮೆಯೇ ಇರುತ್ತೆ. ಹೀಗಾಗಿ, ಒಂದೇ ಬಾರಿಗೆ ದೊಡ್ಡ ಮೊತ್ತದ ಪ್ರೀಮಿಯಮ್​ ಕಟ್ಟುವ ಮೂಲಕ ಹಣದ ಉಳಿತಾಯವೂ ಆಗುತ್ತೆ. ಕೊರೋನಾ ಮಹಾಮಾರಿಯ ನಂತರ ಸಿಂಗಲ್ ಪ್ರೀಮಿಯಮ್ ಪಾಲಿಸಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ.

ಸಿಂಗಲ್ ಪ್ರೀಮಿಯಮ್ ಯಾರಿಗೆ ಸೂಕ್ತ ?

ಒಂದು ಸಾಮಾನ್ಯ ವಿಮಾ ಪಾಲಿಸಿ ಒಳ್ಳೆಯದೋ ಅಥವಾ ಸಿಂಗಲ್ ಪ್ರೀಮಿಯಮ್ ಪಾಲಿಸಿ ಒಳ್ಳೆಯದೋ ? ಎನ್ನುವುದು ಒಂದು ದೊಡ್ಡ ಪ್ರಶ್ನೆ. ಇಲ್ಲಿ ಕೆಲವು ಅಂಶಗಳನ್ನು ಪರಿಗಣಿಸುವುದು ಮುಖ್ಯ. ಒಂದೇ ಬಾರಿಗೆ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಿದ್ಧರಿರುವವರಿಗೆ ಹಾಗೆ ಮಾಡಿ ಉತ್ತಮ ಲಾಭ ಗಳಿಸಲು ಸಿಂಗಲ್ ಪ್ರೀಮಿಯಮ್ ಪಾಲಿಸಿ ಅತ್ಯುತ್ತಮ ಆಯ್ಕೆ. ಸಾಮಾನ್ಯವಾಗಿ ಒಂದು ಸಿಂಗಲ್ ಪ್ರೀಮಿಯಮ್ ಪಾಲಿಸಿಯ ಅವಧಿ ಇತರ ನಿಯಮಿತ ವಿಮಾ ಪಾಲಿಸಿಯ ಅವಧಿಗಿಂತ ಕಡಿಮೆ ಇರುತ್ತೆ. ಈ ಪಾಲಿಸಿಯನ್ನು ಹೆಚ್ಚು ಆದಾಯ ಇರುವ ಜನರು ಮಾಡಿಸುತ್ತಾರೆ.

ಇದನ್ನೂ ಓದಿ: FD: ಒಂದೇ ಎಫ್​ಡಿ ಒಳ್ಳೆಯದೋ, ಸಣ್ಣ ಮೊತ್ತದ ವಿವಿಧ ಠೇವಣಿಗಳು ಉತ್ತಮವಾ? ಬಡ್ಡಿ ದರ, ಲಿಕ್ವಿಡಿಟಿ ಇತ್ಯಾದಿ ಸಂಗತಿ ಗಮನಿಸಿ ನಿರ್ಧರಿಸಿ

ಸಿಂಗಲ್ ಪ್ರೀಮಿಯಮ್​ಗೆ ತೆರಿಗೆ ನಿಯಮಗಳೇನು ?

ನೀವು ಒಂದು ಸಿಂಗಲ್ ಪ್ರೀಮಿಯಮ್ ಪಾಲಿಸಿಗೆ ಹಣ ಪಾವತಿಸಿದಾಗ, ನಿಮಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತದ ಲಾಭ ಸಿಗುತ್ತದೆ. ಈ ಸೆಕ್ಷನ್​ನ ಅಡಿಯಲ್ಲಿ, ನಿಮ್ಮ ಹೂಡಿಕೆಗಳ ಮೇಲೆ, ನೀವು ಗರಿಷ್ಠ 1.5 ಲಕ್ಷ ರೂ. ವರೆಗೆ ತೆರಿಗೆ ಕಡಿತದ ಲಾಭ ಪಡೆಯಬಹುದು. ಈ ಸೌಲಭ್ಯ ಒಮ್ಮೆ ಮಾತ್ರ ಪಡೆಯಲು ಸಾಧ್ಯ. ಹೂಡಿಕೆಯ ಅವಧಿ ಮುಗಿದ ನಂತರ ಹಿಂಪಡೆಯುವ ಮೊತ್ತಕ್ಕೆ ಸೆಕ್ಷನ್10ಡಿ ಅಡಿಯಲ್ಲಿ ತೆರಿಗೆ ಕಟ್ಟಬೇಕಾಗಿರುವುದಿಲ್ಲ. ಇಲ್ಲಿ ಎರಡು ವಿಚಾರ ಗಮಿಸಬೇಕು.

ಮೊದಲನೆಯದು, ಏಪ್ರಿಲ್ 2012ರ ನಂತರ ನೀಡಲಾಗಿರುವ ಪಾಲಿಸಿಗಳಿಗೆ, ಯಾವುದೇ ಹಣಕಾಸು ವರ್ಷದಲ್ಲಿ ಕಟ್ಟಿರುವ ಪ್ರೀಮಿಯಮ್ ಮೊತ್ತವು ಪಾಲಿಸಿಯ ಸಮ್ ಅಶೂರ್ಡ್ ಮೊತ್ತದ ಶೇ.10ಕ್ಕಿಂತ ಹೆಚ್ಚಾಗಿರದಿದ್ದಲ್ಲಿ ಮಾತ್ರವೇ ತೆರಿಗೆ ವಿನಾಯಿತಿಯ ಸೌಲಭ್ಯ ಸಿಗುತ್ತದೆ. ಎರಡನೆಯದಾಗಿ, ಏಪ್ರಿಲ್ 1, 2023ರ ನಂತರ ಕೊಳ್ಳಲಾಗಿರುವ ಯುಎಲ್ಐಪಿ (ಯೂನಿಟ್ ಲಿಂಕ್ಡ್ ಪಾಲಿಸಿ) ಅಲ್ಲದ ಪಾಲಿಸಿಗಳಿಗೆ, ಒಂದು ವರ್ಷದಲ್ಲಿ ಕಟ್ಟಲಾದ ಒಟ್ಟು ಪ್ರೀಮಿಯಮ್ ಮೊತ್ತವು 5 ಲಕ್ಷ ರೂ. ಗಿಂತ ಹೆಚ್ಚಾಗಿದ್ದರೆ, ಮೆಚ್ಯುರಿಟಿ ಸಮಯದಲ್ಲಿ ತೆರಿಗೆ ಕಡಿತದ ಲಾಭ ಸಿಗುವುದಿಲ್ಲ.

(ಕೃಪೆ: ಮನಿ9)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ