FD: ಒಂದೇ ಎಫ್​ಡಿ ಒಳ್ಳೆಯದೋ, ಸಣ್ಣ ಮೊತ್ತದ ವಿವಿಧ ಠೇವಣಿಗಳು ಉತ್ತಮವಾ? ಬಡ್ಡಿ ದರ, ಲಿಕ್ವಿಡಿಟಿ ಇತ್ಯಾದಿ ಸಂಗತಿ ಗಮನಿಸಿ ನಿರ್ಧರಿಸಿ

Consolidated FD or Smaller Multiple FDs?: ನಿಮ್ಮಲ್ಲಿ ದೊಡ್ಡ ಮೊತ್ತದ ಹಣ ಇದ್ದು ಎಫ್​ಡಿಗೆ ಹಾಕಬೇಕೆಂದಿದ್ದಾಗ, ಒಂದೇ ಠೇವಣಿಯಲ್ಲಿ ಅಷ್ಟೂ ಹಣ ಇಡುವುದೋ, ಅಥವಾ ಸಣ್ಣ ಸಣ್ಣ ಮೊತ್ತಗಳ ಬೇರೆ ಬೇರೆ ಠೇವಣಿಗಳಲ್ಲಿ ಆ ಹಣ ಇರಿಸುವುದೋ ಎಂಬ ಗೊಂದಲ ಏರ್ಪಡುವುದು ಸಹಜ.

FD: ಒಂದೇ ಎಫ್​ಡಿ ಒಳ್ಳೆಯದೋ, ಸಣ್ಣ ಮೊತ್ತದ ವಿವಿಧ ಠೇವಣಿಗಳು ಉತ್ತಮವಾ? ಬಡ್ಡಿ ದರ, ಲಿಕ್ವಿಡಿಟಿ ಇತ್ಯಾದಿ ಸಂಗತಿ ಗಮನಿಸಿ ನಿರ್ಧರಿಸಿ
ಹೂಡಿಕೆ
Follow us
|

Updated on: Jun 13, 2023 | 6:02 PM

ನಿಶ್ಚಿತ ಠೇವಣಿಗಳು ಭಾರತದಲ್ಲಿ ಬಹಳ ಜನಪ್ರಿಯವಾದ ಹೂಡಿಕೆ ಯೋಜನೆಗಳಾಗಿವೆ. ಉತ್ತಮ ಬಡ್ಡಿ, ಸುರಕ್ಷಿತ ಹೂಡಿಕೆ ಎನಿಸಿವೆ. ಈಕ್ವಿಟಿ ಮಾರುಕಟ್ಟೆಗೆ (Share Market) ತೆರೆದುಕೊಳ್ಳದ ಹಾಗೂ ಅದರತ್ತ ಆಕರ್ಷಿತರಾಗದ ಬಹಳ ಮಂದಿಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಎಂಬುದು ಡೀಫಾಲ್ಟ್ ಇನ್ವೆಸ್ಟ್​ಮೆಂಟ್ ಸ್ಕೀಮ್ ಅಗಿದೆ. ಶೇ. 6ರಿಂದ ಶೇ. 9ರವರೆಗೂ ವಾರ್ಷಿಕ ಬಡ್ಡಿ ಕೊಡುವ ಎಫ್​ಡಿಗಳು ನಿಜಕ್ಕೂ ಉತ್ತಮ ಹೂಡಿಕೆ ಅಯ್ಕೆಯೇ. ಆದರೆ, ಒಂದು ಸಾವಿರ ರೂನಿಂದ 10 ಕೋಟಿ ರೂವರೆಗೆ ಹೂಡಿಕೆ ಆಯ್ಕೆಗಳಿದ್ದು, ಪ್ರತಿಯೊಂದು ಅವಧಿ ಠೇವಣಿಗೂ ಪ್ರತ್ಯೇಕ ಬಡ್ಡಿ ದರಗಳುಂಟು.

ನಿಮ್ಮಲ್ಲಿ 2 ಕೋಟಿ ರೂ ಇದ್ದು ಅಷ್ಟೂ ಹಣವನ್ನು ಎಫ್​ಡಿಗೆ ಹಾಕಬೇಕೆಂದಿದ್ದಾಗ, ಒಂದೇ ಠೇವಣಿಯಲ್ಲಿ ಅಷ್ಟೂ ಹಣ ಇಡುವುದೋ, ಅಥವಾ ಸಣ್ಣ ಸಣ್ಣ ಮೊತ್ತಗಳ ಬೇರೆ ಬೇರೆ ಠೇವಣಿಗಳಲ್ಲಿ ಆ ಹಣ ಇರಿಸುವುದೋ ಎಂಬ ಗೊಂದಲ ಏರ್ಪಡುವುದು ಸಹಜ. ಆದರೆ, ಈ ಬಗ್ಗೆ ನಿರ್ಧಾರಕ್ಕೆ ಬರುವ ಮುನ್ನ ಆ ಎರಡರ ಸಾಧಕ ಬಾಧಕಗಳನ್ನು ತಿಳಿಯುವುದು ಉತ್ತಮ.

ಇದನ್ನೂ ಓದಿPAN Card: ಆಧಾರ್ ಮೂಲಕ ನಿಮ್ಮ ಪ್ಯಾನ್ ಕಾರ್ಡ್​ನಲ್ಲಿನ ವಿಳಾಸ ಬದಲಿಸುವ ವಿಧಾನ

ಒಂದೇ ಎಫ್​ಡಿಯಲ್ಲಿ ಎಲ್ಲಾ ಹಣ ಇಟ್ಟರೆ ಹೇಗೆ?

ಸಾಧಕ: ಒಂದೇ ನಿಶ್ಚಿತ ಠೇವಣಿ ಖಾತೆ ಇದ್ದಾಗ ಸರಳ ಎನಿಸುತ್ತದೆ. ಒಟ್ಟಿಗೆ ರಿಟರ್ನ್ಸ್ ದುಡ್ಡು ಸಿಕ್ಕುತ್ತದೆ.

ಬಾಧಕ: ನಿಮಗೆ ತುರ್ತಾಗಿ ಹಣಬೇಕಾಗಿ ಬಂದಾಗ ಎಫ್​ಡಿಯನ್ನು ರದ್ದುಪಡಿಸಬೇಕಾಗುತ್ತದೆ. ಎಫ್​ಡಿ ಮೊತ್ತದ ನಿರ್ದಿಷ್ಟ ಪ್ರತಿಶತದಷ್ಟು ಹಣವನ್ನು ದಂಡವಾಗಿ ಕಟ್ಟಬೇಕಾಗಬಹುದು.

ಸಣ್ಣ ಸಣ್ಣ ಎಫ್​ಡಿಯಲ್ಲಿ ಹೂಡಿಕೆ ಮಾಡಿದರೆ ಹೇಗೆ?

ಸಾಧಕ: ಬೇರೆ ಬೇರೆ ಅವಧಿ ಠೇವಣಿಗೆ ಬಡ್ಡಿ ದರ ಎಷ್ಟಿದೆ ನೋಡಿಕೊಂಡು ಹೂಡಿಕೆ ಮಾಡಬಹುದು. ನಿಮಗೆ ತುರ್ತಾಗಿ ಹಣ ಬೇಕಾದಾಗ ಅಷ್ಟು ಮೊತ್ತ ಇರುವ ಎಫ್​ಡಿಯನ್ನು ಮಾತ್ರ ರದ್ದು ಮಾಡಬಹುದು. ಉಳಿದ ಎಫ್​ಡಿಗಳನ್ನು ಹಾಗೇ ಮುಂದುವರಿಸಬಹುದು.

ಇದನ್ನೂ ಓದಿCrorepati Calculation: 10 ವರ್ಷದಲ್ಲಿ 1 ಕೋಟಿ ಹಣ ಗಳಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಎಸ್​ಐಪಿ ಲೆಕ್ಕಾಚಾರ

ಬಾಧಕ: ಬೇರೆ ಬೇರೆ ಎಫ್​ಡಿಗಳಿದ್ದರೆ ಅವುಗಳನ್ನು ಟ್ರ್ಯಾಕ್ ಮಾಡುವುದು ತುಸು ಗಲಿಬಿಲಿಯಾಗಬಹುದು.

ಈ ಮೇಲಿನ ವಿಚಾರಗಳನ್ನು ಪರಿಗಣಿಸಿ ನಿರ್ಧಾರಕ್ಕೆ ಬರಬಹುದು. ನಿಮ್ಮ ಭವಿಷ್ಯದ ವೆಚ್ಚಕ್ಕೆಂದು ನೀವು ಎಫ್​ಡಿಯನ್ನು ಇಡುತ್ತೀರೆಂದರೆ ಸಣ್ಣ ಸಣ್ಣ ಮೊತ್ತದ ಎಫ್​ಡಿಗಳು ಉತ್ತಮ ಆಯ್ಕೆ ಆಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ