AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಲಾ ರೋಬೋಟ್ಯಾಕ್ಸಿ ಆರಂಭ; ಭಾರತದಲ್ಲಿ ಡ್ರೈವರ್​​ಲೆಸ್ ಕಾರ್ ಸರ್ವಿಸ್ ಸಾಧ್ಯವಾ? ಸ್ಥಳೀಯ ಸ್ಟಾರ್ಟಪ್​​ಗಳಿಂದಲೂ ನಡೆದಿದೆ ಪ್ರಯತ್ನ

Tesla Robotaxis hit roads in US: ಟೆಸ್ಲಾ ಕಂಪನಿಯ ರೋಬೋಟ್ಯಾಕ್ಸಿ ಎನ್ನುವ ಚಾಲಕರಹಿತ ವಾಹನ ಸೇವೆ ಅಮೆರಿಕದ ಆಸ್ಟಿನ್ ನಗರದಲ್ಲಿ ಮೊದಲಿಟ್ಟಿದೆ. ಡ್ರೈವರ್​​ಲೆಸ್ ಕಾರು ಬಿಡುಗಡೆ ಮಾಡಿರುವ ಗೂಗಲ್-ಊಬರ್ ಮತ್ತು ಅಮೇಜಾನ್ ಸಾಲಿಗೆ ಟೆಸ್ಲಾ ಸೇರ್ಪಡೆಯಾಗಿದೆ. ಭಾರತದಲ್ಲೂ ಕೆಲ ಸ್ಟಾರ್ಟಪ್​​ಗಳು ಆಟೊಮೋಶನ್ ವಾಹನಗಳ ಅಭಿವೃದ್ಧಿಯಲ್ಲಿವೆ. ಮಹೀಂದ್ರ, ಅಶೋಕ್ ಲೇಲ್ಯಾಂಡ್, ಟಾಟಾ ಮೋಟಾರ್ ಮೊದಲಾದ ಕಂಪನಿಗಳು ವಿವಿಧ ಸ್ಟಾರ್ಟಪ್​ಗಳ ಜೊತೆ ಸೇರಿ ಚಾಲಕರಹಿತ ವಾಹನಗಳನ್ನು ತಯಾರಿಸುತ್ತಿವೆ.

ಟೆಸ್ಲಾ ರೋಬೋಟ್ಯಾಕ್ಸಿ ಆರಂಭ; ಭಾರತದಲ್ಲಿ ಡ್ರೈವರ್​​ಲೆಸ್ ಕಾರ್ ಸರ್ವಿಸ್ ಸಾಧ್ಯವಾ? ಸ್ಥಳೀಯ ಸ್ಟಾರ್ಟಪ್​​ಗಳಿಂದಲೂ ನಡೆದಿದೆ ಪ್ರಯತ್ನ
ರೋಬೋಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 23, 2025 | 2:11 PM

Share

ನವದೆಹಲಿ, ಜೂನ್ 23: ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಕೊನೆಗೂ ತನ್ನ ಬಹುನಿರೀಕ್ಷಿತ ರೋಬೋಟ್ಯಾಕ್ಸಿ ಸೇವೆಯನ್ನು (Robotaxi service) ಆರಂಭಿಸಿದೆ. ಟೆಸ್ಲಾದ ಮುಖ್ಯ ಕಚೇರಿ ಇರುವ ಆಸ್ಟಿನ್ ನಗರದಲ್ಲಿ ಅದರ ಡ್ರೈವರ್​​ಲೆಸ್ ಕಾರ್​​ಗಳು (driverless vehicles) ಸಂಚರಿಸಲು ಆರಂಭಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರೋಬೋಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಫೋಟೋ, ವಿಡಿಯೋ, ಅನುಭವ ಹಂಚಿಕೊಂಡಿದ್ದಾರೆ.

ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್​​ನಿಂದ ರೋಬೋಟ್ಯಾಕ್ಸಿ ಸೇವೆ ಆರಂಭವಾಗಿರುವುದನ್ನು ಪ್ರಕಟಿಸಿದ್ದಾರೆ. ಪ್ರತೀ ಟ್ರಿಪ್​​ಗೆ 4.20 ಡಾಲರ್ (ಸುಮಾರು 360 ರೂ) ದರ ನಿಗದಿ ಮಾಡಿರುವುದನ್ನು ತಿಳಿಸಿದ್ದಾರೆ. ನಿರ್ದಿಷ್ಟ ಜಿಯೋಫೆನ್ಸ್ಡ್ ಪ್ರದೇಶದಲ್ಲಿ ಇದರ ಸಂಚಾರ ಇರಲಿದೆ. ಜಿಯೋಫೆನ್ಸ್ಡ್ ಎಂದರೆ ನಿಗದಿತ ಭೂಭಾಗವಾಗಿರಬಹುದು.

ಗೂಗಲ್-ಊಬರ್, ಅಮೇಜಾನ್​​ನಿಂದಲೂ ಚಾಲ್ತಿಯಲ್ಲಿ ಡ್ರೈವರ್​​ಲೆಸ್ ಕ್ಯಾಬ್ ಪ್ರಯೋಗ

ಗೂಗಲ್ ಮತ್ತು ಊಬರ್ ಸಂಸ್ಥೆಗಳು ಜಂಟಿಯಾಗಿ ವೇಮೋ ಸರ್ವಿಸ್ ಅನ್ನು ಕಳೆದ ವರ್ಷ ಆರಂಭಿಸಿದ್ದವು. ವೇಮೋ ಎನ್ನುವ ಈ ಸರ್ವಿಸ್ ಪರಿಣಾಮಕಾರಿಯಾಗಿದೆಯಾದರೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕದ ಲಾಸ್ ಏಂಜಲಿಸ್, ಆಸ್ಟಿನ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಫೀನಿಕ್ಸ್ ನಗರಗಳಲ್ಲಿ 1,500ಕ್ಕೂ ಅಧಿಕ ಚಾಲಕರಹಿತ ವಾಹನಗಳು ಓಡಾಟ ನಡೆಸುತ್ತಿವೆ.

ಇದನ್ನೂ ಓದಿ: ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ

ಹಾಗೆಯೆ, ಅಮೇಜನ್ ಕಂಪನಿಯ ಝೂಕ್ಸ್ (Zoox) ಕೂಡ ಇತ್ತೀಚೆಗೆ ಟ್ರಯಲ್ ರನ್ ಆರಂಭಿಸಿದೆ.

ಭಾರತದಲ್ಲೂ ನಡೆಯುತ್ತಿದೆ ವಿವಿಧ ಸ್ಟಾರ್ಟಪ್​​ಗಳಿಂದ ಪ್ರಯತ್ನ…

ಅಮೆರಿಕದಂತಹ ಸ್ಪಷ್ಟ ಹಾಗೂ ಉತ್ತಮ ಇನ್​ಫ್ರಾಸ್ಟ್ರಕ್ಚರ್ ಇರುವ ರಸ್ತೆಗಳಲ್ಲಿ ಡ್ರೈವರ್​ಲೆಸ್ ಕಾರುಗಳು ಕೆಲ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದರೆ, ಭಾರತದಂತಹ ಕ್ಲಿಷ್ಟಕರ ಸೌಕರ್ಯ ವ್ಯವಸ್ಥೆಯಲ್ಲಿ ಅವುಗಳಿಗೆ ಸಾಧ್ಯವಾ ಎನ್ನುವ ಪ್ರಶ್ನೆ ಇದೆ.

ರಸ್ತೆಯಲ್ಲಿ ಸರಿಯಾದ ಚಿಹ್ನೆಗಳಿಲ್ಲದಿರುವುದು, ಲೇನ್ ವರ್ಗೀಕರಣ ಇಲ್ಲದಿರುವುದು ಇತ್ಯಾದಿ ನಾನಾ ಸಮಸ್ಯೆಗಳಿವೆ. ಅವುಗಳ ಮಧ್ಯೆ ಹಲವು ಕಂಪನಿಗಳು ಮತ್ತು ಸ್ಟಾರ್ಟಪ್​​ಗಳು ಡ್ರೈವರ್​ಲೆಸ್ ವಾಹನಗಳ ಪ್ರಯೋಗ ನಡೆಸುತ್ತಿವೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತಂದಿದೆ.

ಇದನ್ನೂ ಓದಿ: Sahkari Taxi: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು

ಬೆಂಗಳೂರಿನ ಮೈನಸ್ ಝೀರೋ ಎನ್ನುವ ಸ್ಟಾರ್ಟಪ್ ಮತ್ತು ಅಶೋಕ್ ಲೇಲ್ಯಾಂಡ್ ಸಂಸ್ಥೆ ಜಂಟಿಯಾಗಿ ಡ್ರೈವರ್​​ಲೆಸ್ ವಾಹನ ಅಭಿವೃದ್ಧಿಪಡಿಸುತ್ತಿವೆ. ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರ, ಬೆಂಗಳೂರಿನ ಸ್ವಾಯತ್ ರೋಬೋಸ್, ನಯನ್ ಟೆಕ್ನಾಲಜೀಸ್, ರೋಸ್​ಎಐ ಮೊದಲಾದ ಕೆಲವಾರು ಸ್ಟಾರ್ಟಪ್​​ಗಳು ಮತ್ತು ಕಂಪನಿಗಳು ಆಟೊಮೋಟಿವ್ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಸಮುದ್ರದ ಬಂದರು, ಫ್ಯಾಕ್ಟರಿ ಅಂಗಣ ಇತ್ಯಾದಿ ಕಡೆ ಈ ಚಾಲಕರಹಿತ ವಾಹನಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರಿನಂಥ ಭಾರೀ ಟ್ರಾಫಿಕ್ ಇರುವ ನಗರಗಳಲ್ಲಿ ಇವುಗಳು ಸುಲಭವಾಗಿ ಓಡಾಡುವಂತಾಗಲು ದಶಕವಾದರೂ ಬೇಕಾಗಬಹುದು ಎನ್ನುತ್ತಾರೆ ಪರಿಣಿತರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!