Palm Seeds Deal: ಮಲೇಷ್ಯಾ ಜೊತೆ ಪತಂಜಲಿ ಒಪ್ಪಂದ; ದೇಶಕ್ಕೆ ಲಕ್ಷಾಂತರ ಕೋಟಿ ರೂ ಉಳಿತಾಯ
Patanjali's Palm Oil Deal with Malaysia: ಭಾರತದ ಭಾರಿ ಪ್ರಮಾಣದ ಖಾದ್ಯ ತೈಲ ಆಮದುಗಳನ್ನು ಕಡಿಮೆ ಮಾಡಲು ಪತಂಜಲಿ ಮಹತ್ವದ ಹೆಜ್ಜೆ ಇಟ್ಟಿದೆ. ಮಲೇಷ್ಯಾದ ಸಾವಿತ್ ಕಿನಬಾಲು ಗ್ರೂಪ್ ಜೊತೆ 5 ವರ್ಷಗಳ ಒಪ್ಪಂದದ ಮೂಲಕ 40 ಲಕ್ಷ ತಾಳೆ ಬೀಜಗಳನ್ನು ಪಡೆಯಲಿದೆ. ಇದರಿಂದ ದೇಶೀಯ ತಾಳೆ ಎಣ್ಣೆ ಉತ್ಪಾದನೆ ಹೆಚ್ಚಿ, ಆಮದು ವೆಚ್ಚ ಕಡಿಮೆಯಾಗಲಿದೆ. ಈ ಒಪ್ಪಂದವು ಭಾರತದ ಖಾದ್ಯ ತೈಲ ಸ್ವಾವಲಂಬನೆಗೆ ಕೊಡುಗೆ ನೀಡುತ್ತದೆ.

ಭಾರತದ ಅಧಿಕ ಮಟ್ಟದ ಆಮದುಗಳಿಗೆ ಕಚ್ಛಾ ತೈಲ (crude oil) ಮತ್ತು ಚಿನ್ನ ಮಾತ್ರವೇ ಕಾರಣವಲ್ಲ, ಖಾದ್ಯ ತೈಲವೂ (edible oil) ಪಟ್ಟಿಯಲ್ಲಿದೆ. ಮಲೇಷ್ಯಾ, ಇಂಡೋನೇಷ್ಯಾ, ಬ್ರೆಜಿಲ್, ಅರ್ಜೆಂಟೀನಾ, ರಷ್ಯಾ ಮೊದಲಾದ ದೇಶಗಳಿಂದ ಭಾರತವು ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. 2025ರ ಹಣಕಾಸು ವರ್ಷದಲ್ಲಿ ಭಾರತದ ಖಾದ್ಯ ತೈಲದ ಆಮದು ಮೌಲ್ಯ 104 ಬಿಲಿಯನ್ ಡಾಲರ್, ಅಥವಾ 9 ಲಕ್ಷ ಕೋಟಿ ರೂ ಇರಬಹುದು. ಭಾರತದ ಅಡುಗೆಗೆ ಎಣ್ಣೆಯ ಬಳಕೆ ಬಹಳ ಸಾಮಾನ್ಯ. ಹೀಗಾಗಿ, ಅಡುಗೆ ಎಣ್ಣೆಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಭಾರತದಲ್ಲೂ ಖಾದ್ಯ ತೈಲ ಉತ್ಪಾದನೆ ಇದೆಯಾದರೂ ಅದು ಬೇಡಿಕೆಯನ್ನು ಪೂರೈಸುವಷ್ಟು ಸಾಕಾಗುವುದಿಲ್ಲ. ಇದರಿಂದ ಈ ಎಣ್ಣೆಯ ಆಮದು ಅನಿವಾರ್ಯ ಎಂಬಂತಾಗಿದೆ. ಇಂಥ ಸಂದರ್ಭದಲ್ಲಿ ಪತಂಜಲಿ ಸಂಸ್ಥೆ (Patanjali) ಮಹತ್ವದ ಹೆಜ್ಜೆ ಇಟ್ಟಿದೆ.
ಭಾರತೀಯ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಪಾಮ್ ಆಯಿಲ್ ಅಥವಾ ತಾಳೆ ಎಣ್ಣೆಯಲ್ಲಿ (Palm Oil) ಸ್ವಾವಲಂಬನೆ ಸಾಧಿಸುವ ಹೆಜ್ಜೆ ಅದು. ಮಲೇಷ್ಯಾದ ಸರ್ಕಾರಿ ಸ್ವಾಮ್ಯದ ಸಾವಿತ್ ಕಿನಬಾಲು ಗ್ರೂಪ್ (Sawit Kinabalu) ಸಂಸ್ಥೆ ಜೊತೆಗಿನ 5 ವರ್ಷದ ಡೀಲ್ ಇದಾಗಿದೆ. ಇದರ ಪ್ರಕಾರ, ಈ ಮಲೇಷ್ಯನ್ ಸಂಸ್ಥೆಯು ಪತಂಜಲಿಗೆ ಐದು ವರ್ಷದಲ್ಲಿ 40 ಲಕ್ಷ ತಾಳೆ ಬೀಜಗಳನ್ನು ಪೂರೈಸಲಿದೆ. ಈವರೆಗೆ 15 ಲಕ್ಷ ಪಾಮ್ ಸೀಡ್ಗಳನ್ನು ಕೊಟ್ಟಿದೆ. ಈ ಒಪ್ಪಂದದಿಂದ ಪತಂಜಲಿಗೆ ಮಾತ್ರವಲ್ಲ, ದೇಶಕ್ಕೂ ದೊಡ್ಡ ಲಾಭ ಸಿಗಲಿದೆ.
ಪತಂಜಲಿ ಮತ್ತು ಮಲೇಷ್ಯಾ ನಡುವಿನ ಒಪ್ಪಂದವೇನು?
- ಮಲೇಷ್ಯಾದ ಸರ್ಕಾರಿ ಸಂಸ್ಥೆ ಸವಿತ್ ಕಿನಾಬಾಲು ಗ್ರೂಪ್ ಪತಂಜಲಿ ಜೊತೆ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
- ಈ ಒಪ್ಪಂದದಡಿಯಲ್ಲಿ, ಮಲೇಷ್ಯಾದ ಕಂಪನಿಯು ಪತಂಜಲಿಗೆ 40 ಲಕ್ಷ ತಾಳೆ ಎಣ್ಣೆ ಬೀಜಗಳನ್ನು ಪೂರೈಸಲಿದೆ.
- ಕಂಪನಿಯು ಇಲ್ಲಿಯವರೆಗೆ 15 ಲಕ್ಷ ಟನ್ ಪಾಮ್ ಎಣ್ಣೆಯನ್ನು ಪತಂಜಲಿಗೆ ಪೂರೈಸಿದೆ. ಈ ಒಪ್ಪಂದವು 2027 ರಲ್ಲಿ ಕೊನೆಗೊಳ್ಳಲಿದೆ.
- ಮಲೇಷಿಯಾದ ಈ ಕಂಪನಿಯು ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ತಾಳೆ ಬೀಜಗಳನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.
- ಸವಿತ್ ಕಿನಾಬಾಲು ಕಂಪನಿಯಿಂದ ತರಿಸಲಾದ ತಾಳೆ ಬೀಜಗಳನ್ನು ಪತಂಜಲಿ ಸಂಸ್ಥೆ ಭಾರತದಲ್ಲಿ ರೈತರಿಗೆ ನೀಡಿ ತಾಳೆ ಗಿಡಗಳನ್ನು ಬೆಳೆಸುತ್ತದೆ.
- ಮಲೇಷ್ಯನ್ ಕಂಪನಿಯಿಂದ ಕೃಷಿ ತಜ್ಞರು ತಾಳೆ ಬೀಜ ನೆಡಲಾದ ತೋಟಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತಾರೆ.
- ಮಲೇಷ್ಯಾ ಸರ್ಕಾರವು ಪಾಮ್ ಬೀಜಗಳನ್ನು ವಿದೇಶಕ್ಕೆ ಪೂರೈಸುವ ಇಂತಹ ಒಪ್ಪಂದಕ್ಕೆ ಸಹಿ ಹಾಕಿರುವುದು ಇದೇ ಮೊದಲು.
ಇದನ್ನೂ ಓದಿ: ಪತಂಜಲಿ ಷೇರುಗಳಲ್ಲಿ ಭಾರಿ ಲಾಭ: ಹೂಡಿಕೆದಾರರ ಸಂತಸ ಮತ್ತು ಭವಿಷ್ಯದ ನಿರೀಕ್ಷೆಯೂ ಉತ್ತಮ
ಭಾರತದಲ್ಲಿ ತಾಳೆ ಎಣ್ಣೆಯ ಬಗ್ಗೆ
- ಪತಂಜಲಿ ಗ್ರೂಪ್ ಈಶಾನ್ಯ ಭಾರತದಲ್ಲಿ ತಾಳೆ ಎಣ್ಣೆ ಗಿರಣಿಯನ್ನು ಸ್ಥಾಪಿಸಲು ಯೋಜಿಸಿದ್ದು, ಇದು 2026 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
- ಪ್ರಸ್ತುತ, ಭಾರತದಲ್ಲಿ ಸುಮಾರು 3,69,000 ಹೆಕ್ಟೇರ್ ಭೂಮಿಯಲ್ಲಿ ತಾಳೆ ಬೆಳೆಯಲಾಗುತ್ತಿದ್ದು, ಅದರಲ್ಲಿ ಸುಮಾರು 1,80,000 ಹೆಕ್ಟೇರ್ ಭೂಮಿಯಲ್ಲಿ ತಾಳೆ ಬೆಳೆಯಲು ಸಿದ್ಧವಾಗಿದೆ.
- ಸಾಗುವಳಿ ಪ್ರದೇಶವು ಸ್ಥಿರವಾಗಿ ಹೆಚ್ಚುತ್ತಿದ್ದು, 2024 ರ ವೇಳೆಗೆ ಸರಿಸುಮಾರು 375,000 ಹೆಕ್ಟೇರ್‌ಗಳನ್ನು ತಲುಪುತ್ತಿದೆ.
- ಮುಂದಿನ ದಿನಗಳಲ್ಲಿ 80,000 ರಿಂದ 1,00,000 ಹೆಕ್ಟೇರ್‌ಗಳಷ್ಟು ಹೆಚ್ಚುವರಿ ಪ್ರದೇಶ ಸೇರ್ಪಡೆಯಾಗುವ ನಿರೀಕ್ಷೆಯಿದೆ.
- 2030 ರ ವೇಳೆಗೆ ಇದನ್ನು 66 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದು 28 ಲಕ್ಷ ಟನ್ ಪಾಮ್ ಎಣ್ಣೆಯನ್ನು ಉತ್ಪಾದಿಸುತ್ತದೆ.
- 2021-22ರ ಆರ್ಥಿಕ ವರ್ಷದಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಖಾದ್ಯ ತೈಲಗಳು-ತಾಳೆ ಎಣ್ಣೆ ಮಿಷನ್ (NMEO-OP), ತಾಳೆ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ.
- ಇದರ ಅಡಿಯಲ್ಲಿ, ಮುಖ್ಯವಾಗಿ ಈಶಾನ್ಯ ಭಾರತ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಗಮನ ಹರಿಸಲಾಗಿದೆ.
- ಭಾರತದ ಒಟ್ಟು ತಾಳೆ ಎಣ್ಣೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಶೇ. 98 ರಷ್ಟು ಪಾಲನ್ನು ಹೊಂದಿವೆ.
ಇದನ್ನೂ ಓದಿ: ರೀಟೇಲ್ ಮಾತ್ರವಲ್ಲ, ಹೋಲ್ಸೇಲ್ ಬ್ಯುಸಿನೆಸ್ನಲ್ಲೂ ಇವೆ ಈ ಪತಂಜಲಿ ಉತ್ಪನ್ನಗಳು
ಪತಂಜಲಿಯ ಈ ಒಪ್ಪಂದದಿಂದ ಭಾರತಕ್ಕೆ ಅನುಕೂಲವೇನು?
ಭಾರತವು ವಿಶ್ವದಲ್ಲೇ ಅತಿಹೆಚ್ಚು ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತದೆ. ಭಾರತದ ಖಾದ್ಯ ಎಣ್ಣೆಯ ಆಮದು ವೆಚ್ಚ 9 ಲಕ್ಷ ಕೋಟಿ ರೂ ಮೊತ್ತದಷ್ಟಿದೆ. ಮೇ ತಿಂಗಳಲ್ಲಿ ಭಾರತವು ತಾಳೆ ಎಣ್ಣೆಯೊಂದನ್ನೇ ಸುಮಾರು 5.8 ಲಕ್ಷ ಮೆಟ್ರಿಕ್ ಟನ್ನಷ್ಟು ಆಮದು ಮಾಡಿಕೊಂಡಿತ್ತು. ಪತಂಜಲಿ ಸಂಸ್ಥೆಯು ತಾಳೆ ಎಣ್ಣೆಯನ್ನು ದೇಶೀಯವಾಗಿ ಉತ್ಪಾದನೆ ಮಾಡಲು ಮುಂದಾಗಿರುವುದರಿಂದ ಭಾರತದ ಆಮದು ವೆಚ್ಚ ಗಣನೀಯವಾಗಿ ಇಳಿಕೆ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








