Patanjali: ರೀಟೇಲ್ ಮಾತ್ರವಲ್ಲ, ಹೋಲ್ಸೇಲ್ ಬ್ಯುಸಿನೆಸ್ನಲ್ಲೂ ಇವೆ ಈ ಪತಂಜಲಿ ಉತ್ಪನ್ನಗಳು
Patanjali's Dominance in the Wholesale Soybean Market: ಪತಂಜಲಿ ಫುಡ್ಸ್ ಕೇವಲ ಚಿಲ್ಲರೆ ವ್ಯಾಪಾರದಲ್ಲಿ ಮಾತ್ರವಲ್ಲ, ಸಗಟು ಮಾರುಕಟ್ಟೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ರುಚಿ ಸೋಯಾ ಇಂಡಸ್ಟ್ರೀಸ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಪತಂಜಲಿ ಸೋಯಾಬೀನ್ ಎಣ್ಣೆ, ಸೋಯಾ ಫ್ಲೇಕ್ಸ್, ಹಾಗೂ ಇತರ ಸೋಯಾ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಇವುಗಳನ್ನು ಆಹಾರ, ಆರೋಗ್ಯ ಪೂರಕಗಳು ಮತ್ತು ಇತರ ಕೈಗಾರಿಕೆಗಳಿಗೆ ಪೂರೈಸಲಾಗುತ್ತದೆ.

‘ಪತಂಜಲಿ’ ಬ್ರಾಂಡ್ ಹೆಸರಿನಲ್ಲಿ ದಂತ ಕಾಂತಿ, ಗುಲಾಬ್ ಶರಬತ್ತು, ಹಸು ತುಪ್ಪ ಅಥವಾ ಜೇನುತುಪ್ಪದಂತಹ ಉತ್ಪನ್ನಗಳ ಬಗ್ಗೆ ನೀವು ಕೇಳಿರಬೇಕು. ಇವೆಲ್ಲವೂ ಬಾಬಾ ರಾಮದೇವ್ (Baba Ramdev) ಅವರ ಪತಂಜಲಿ ಫುಡ್ಸ್ ಕಂಪನಿಯು ರೀಟೇಲ್ ಉತ್ಪನ್ನಗಳ ಪೋರ್ಟ್ಫೋಲಿಯೊಗಳಾಗಿವೆ. ಆದರೆ ಸಗಟು (ಹೋಲ್ಸೇಲ್) ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಅನೇಕ ಉತ್ಪನ್ನಗಳನ್ನು ಸಹ ಪತಂಜಲಿ ತಯಾರಿಸುತ್ತದೆ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಬಿ2ಬಿ ವಿಭಾಗದಲ್ಲಿ ತನ್ನ ಉತ್ಪನ್ನಗಳಲ್ಲಿ ಅದು ಮಾರುಕಟ್ಟೆಯ ಲೀಡಿಂಗ್ನಲ್ಲಿ ಇದೆ. ಇದು ವಾಸ್ತವ.
2019 ರಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯು ಮಧ್ಯಪ್ರದೇಶದ ರುಚಿ ಸೋಯಾ ಇಂಡಸ್ಟ್ರೀಸ್ ಎನ್ನುವ ಪ್ರಮುಖ ಕಂಪನಿಯೊಂದನ್ನು ಖರೀದಿಸಿತು. ಇದರ ನಂತರ, ಪತಂಜಲಿ ಗ್ರೂಪ್‌ನ FMCG ವ್ಯವಹಾರಗಳು ಕ್ರಮೇಣ ಈ ಕಂಪನಿಗೆ ವರ್ಗವಾದವು. ನಂತರ, ಪತಂಜಲಿ ಫುಡ್ಸ್ ಎಂಬ ಹೊಸ ಕಂಪನಿಯನ್ನು ಸ್ಥಾಪಿಸಲಾಯಿತು. ಆದರೂ ಕೂಡ ರುಚಿ ಸೋಯಾ ಇಂಡಸ್ಟ್ರೀಸ್ನ ಹೋಲ್ಸೇಲ್ ಬ್ಯುಸಿನೆಸ್ ಎಂದಿನಂತೆ ನಡೆದೇ ಇತ್ತು.
ರುಚಿ ಸೋಯಾ ಇಂಡಸ್ಟ್ರೀಸ್ ದೇಶದಲ್ಲಿ ಸೋಯಾಬೀನ್ ಎಣ್ಣೆಯನ್ನು ತಯಾರಿಸಲು ಪ್ರಾರಂಭಿಸಿದ ಮೊದಲ ಕಂಪನಿಯಾಗಿದೆ. ದೇಶದಲ್ಲಿ ಮೊದಲ ಸೋಯಾಬೀನ್ ಸಂಸ್ಕರಣಾ ಘಟಕವನ್ನು ಸ್ಥಾಪಿಸದ ಕಂಪನಿ ಇದು. ಇದರ ‘ಮಹಾಕೋಶ್’ ಎನ್ನುವ ಬ್ರಾಂಡ್ನ ಸೋಯಾಬೀನ್ ಎಣ್ಣೆ ಈಗಾಗಲೇ ಹೆಸರುವಾಸಿಯಾಗಿದೆ. ಕಂಪನಿಯು ವಿವಿಧ ಸೋಯಾ ಉತ್ಪನ್ನಗಳನ್ನು ನ್ಯೂಟ್ರೆಲಾ ಬ್ರಾಂಡ್ ಹೆಸರಿನಲ್ಲಿ ರೀಟೇಲ್ ಮಾರಾಟ ಮಾಡುತ್ತದೆ.
ಇದನ್ನೂ ಓದಿ: ಹಠಯೋಗ, ರಾಜಯೋಗ ಇನ್ನೂ ಹಲವು ಯೋಗಪ್ರಾಕಾರಗಳ ಬಗ್ಗೆ ಬಾಬಾ ರಾಮದೇವ್ರೀಂದ ತಿಳಿಯಿರಿ
ಸಗಟು ವ್ಯಾಪಾರದಲ್ಲೂ ಅಸ್ತಿತ್ವವನ್ನು ಹೊಂದಿರುವ ಕಂಪನಿ
ಈಗ ಪತಂಜಲಿ ಫುಡ್ಸ್ ಆಗಿ ಮಾರ್ಪಟ್ಟಿರುವ ರುಚಿ ಸೋಯಾ ಇಂಡಸ್ಟ್ರೀಸ್, ದೇಶದ ಅತಿದೊಡ್ಡ ಸೋಯಾ ಕೃಷಿ ವ್ಯವಹಾರ ಹೊಂದಿದೆ. ಕಂಪನಿಯು ಸೋಯಾಬೀನ್‌ನ ಗರಿಷ್ಠ ಬಳಕೆಯಲ್ಲಿ ಪರಿಣತಿಯನ್ನು ಹೊಂದಿದೆ. ಕಂಪನಿಯು ದೇಶಾದ್ಯಂತ 10 ಸುಧಾರಿತ ಕ್ರಷಿಂಗ್ ಪ್ಲಾಂಟ್‌ಗಳನ್ನು ಹೊಂದಿದ್ದರೆ, 4 ದೊಡ್ಡ ಸಂಸ್ಕರಣಾಗಾರಗಳನ್ನು ಹೊಂದಿದೆ. 2020 ರಿಂದ ರೀಟೇಲ್ ಸೆಕ್ಟರ್ನಲ್ಲಿ ತನ್ನ ನ್ಯೂಟ್ರೆಲಾ (Nutrela) ಬ್ರ್ಯಾಂಡ್ ಅನ್ನು ಬಲಪಡಿಸಲು ಪ್ರಾರಂಭಿಸಿತು. ಅದೇ ಸಮಯದಲ್ಲಿ, ಕಂಪನಿಯು ಸೋಯಾದಿಂದ ಅನೇಕ ಉಪ ಉತ್ಪನ್ನಗಳನ್ನು B2B ಅಡಿಯಲ್ಲಿ ಇತರ ಕೈಗಾರಿಕೆಗಳಿಗೆ ಮಾರಾಟ ಮಾಡುತ್ತದೆ. ಈ ಸೋಯಾ ಉತ್ಪನ್ನಗಳನ್ನು ಮಿಠಾಯಿಗಳಿಂದ ಹಿಡಿದು ಹೆಲ್ತ್ ಸಪ್ಲಿಮೆಂಟ್ಗಳವರೆಗೆ ಬಳಸಲಾಗುತ್ತದೆ.
- ಟೋಸ್ಟೆಡ್ ಸೋಯಾ ಫ್ಲೇಕ್ಸ್: ಸೋಯಾ ಫ್ಲೇಕ್ಸ್ ಪ್ರೋಟೀನ್ ಸಮೃದ್ಧ ಮತ್ತು ಕಡಿಮೆ ಕೊಬ್ಬಿನ ಉತ್ಪನ್ನವಾಗಿದೆ. ಇದು ಬೇಯಿಸಿದ ಆಹಾರದ ವಿನ್ಯಾಸ ಮತ್ತು ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೋಯಾ ಸಾಸ್ ತಯಾರಿಸಲು ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ.
- ಅನ್ಟೋಸ್ಟೆಡ್ ಸೋಯಾ ಫ್ಲೇಕ್ಸ್: ಇದು ಸೋಯಾ ಫ್ಲೇಕ್ಸ್‌ಗಳ ನೈಸರ್ಗಿಕ ಪರಿಮಳವನ್ನು ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಧಾನ್ಯಗಳು ಅಥವಾ ತಿಂಡಿಗಳಂತಹ ಉಪಾಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಸೋಯಾ ಆಧಾರಿತ ಪ್ರೋಟೀನ್ ತಯಾರಿಸಲು ಬಳಸಲಾಗುತ್ತದೆ.
- ಸೋಯಾ ಹಿಟ್ಟು: ಸೋಯಾಬೀನ್ ಹಿಟ್ಟನ್ನು ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಮಧುಮೇಹ ರೋಗಿಗಳ ಆಹಾರದಲ್ಲಿ ಬಳಸಲಾಗುತ್ತದೆ. ಇದರಲ್ಲಿ ಶೇಕಡಾ 52 ರಷ್ಟು ಪ್ರೋಟೀನ್ ಮತ್ತು ಕಡಿಮೆ ಕೊಬ್ಬು ಇರುವುದರಿಂದ, ಇದನ್ನು ಹೆಲ್ತ್ ಸಪ್ಲಿಮೆಂಟ್ಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ.
- ಸೋಯಾ ಲೆಸಿಥಿನ್ (soy lecithin): ಇದು ಬಿಸ್ಕತ್ತುಗಳು, ಚಾಕೊಲೇಟ್, ಬೇಕರಿ, ಕ್ಯಾಂಡಿ, ಡೈರಿ ಉತ್ಪನ್ನಗಳು, ಸಲಾಡ್ ಡ್ರೆಸ್ಸಿಂಗ್, ಮೇಯನೇಸ್ ಜೊತೆಗೆ ಐಸಿಂಗ್ ಮತ್ತು ಫ್ರಾಸ್ಟಿಂಗ್ ಉದ್ಯಮಗಳಲ್ಲಿ ಬಳಸಲಾಗುವ ಉತ್ಪನ್ನವಾಗಿದೆ. ಇದನ್ನು ಮೃದುವಾದ ಜೆಲ್ ಆಗಿಯೂ ಮತ್ತು ಪ್ರಾಣಿಗಳಿಗೆ ನ್ಯೂಟ್ರಿಯಂಟ್ ಸಪ್ಲಿಮೆಂಟ್ ಆಗಿಯೂ ಬಳಸಲಾಗುತ್ತದೆ.
ಇದನ್ನೂ ಓದಿ: ಪತಂಜಲಿ ದಂತ ಕಾಂತಿ ಟೂತ್ಪೇಸ್ಟ್ ಜನಪ್ರಿಯತೆಗೆ ಕಾರಣ ಏನು? ಶೇ. 89 ಜನರು ಕೊಟ್ಟ ಉತ್ತರ ಇದು
ಇವುಗಳಲ್ಲದೆ, ಕಂಪನಿಯು ಪೂರ್ಣ ಕೊಬ್ಬಿನ ಸೋಯಾ ಹಿಟ್ಟು, ಸೋಯಾಬೀನ್ ಗಂಜಿಯಂತೆ ಕಾಣುವ ಸೋಯಾ ಗ್ರಿಟ್ ಮತ್ತು ಟೆಕ್ಸ್ಚರ್ಡ್ ಸೋಯಾ ಪ್ರೋಟೀನ್ ಅನ್ನು ಸಹ ತಯಾರಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ