ಬಲಿಷ್ಠ ಆರ್ಟಿಲರಿ ಶೆಲ್ ತಯಾರಿಕೆ: ಜರ್ಮನಿಯ ಕಂಪನಿ ಜೊತೆ ರಿಲಾಯನ್ಸ್ ಡಿಫೆನ್ಸ್ 10,000 ಕೋಟಿ ರೂ ಒಪ್ಪಂದ
Reliance Defence and Deihl Defence pact: ಅತ್ಯಾಧುನಿಕ ಮತ್ತು ಬಲಿಷ್ಠ ವುಲ್ಕಾನೊ ಆರ್ಟಿಲರಿ ಶೆಲ್ಗಳನ್ನು ತಯಾರಿಸಲು ಜರ್ಮನಿಯ ಡೀಹ್ ಡಿಫೆನ್ಸ್ ಕಂಪನಿ ಜೊತೆ ರಿಲಾಯನ್ಸ್ ಡಿಫೆನ್ಸ್ ಒಪ್ಪಂದ ಮಾಡಿಕೊಂಡಿದೆ. ವುಲ್ಕನೋ 155 ಎಂಎಂ ಆರ್ಟಿಲರಿ ಶೆಲ್ಗಳನ್ನು ರಿಲಾಯನ್ಸ್ ಭಾರತದಲ್ಲಿ ತಯಾರಿಸಲಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಘಟಕ ಆರಂಭಿಸಲಾಗುತ್ತಿದ್ದು ಇಲ್ಲಿ ಈ ಮದ್ದುಗುಂಡುಗಳ ತಯಾರಿಕೆ ನಡೆಯಲಿದೆ.

ನವದೆಹಲಿ, ಜೂನ್ 11: ಭಾರತದ ಮಿಲಿಟರಿ ಬಲ ಹೆಚ್ಚಿಸಲು ಅನುವು ಮಾಡಿಕೊಡಬಹುದಾದ 10,000 ಕೋಟಿ ರೂ ಮೆಗಾ ಪ್ರಾಜೆಕ್ಟ್ ಅನ್ನು ರಿಲಾಯನ್ಸ್ ಡಿಫೆನ್ಸ್ (Reliance Defence) ಪಡೆದಿದೆ. ಬಹಳ ಶಕ್ತಿಶಾಲಿಯಾದ ಮತ್ತು ಸುಧಾರಿತ ಆರ್ಟಿಲರಿ ಶೆಲ್ ತಯಾರಿಸಲು ಜರ್ಮನ್ ಕಂಪನಿಯೊಂದಿಗೆ ರಿಲಾಯನ್ಸ್ ಒಪ್ಪಂದ ಮಾಡಿಕೊಂಡಿದೆ. ಜರ್ಮನಿಯ ಡೀಹ್ ಡಿಫೆನ್ಸ್ (Deihl Defence) ಕಂಪನಿ ಸಹಾಯದಿಂದ ರಿಲಾಯನ್ಸ್ ಡಿಫೆನ್ಸ್ ಭಾರತದಲ್ಲಿ ವುಲ್ಕಾನೋ 155 ಎಂಎಂ ಆರ್ಟಿಲರಿ ಶೆಲ್ (Vulcano 155mm ammunition) ಅನ್ನು ತಯಾರಿಸಲಿದೆ. ಈ ಒಪ್ಪಂದವು 10,000 ಕೋಟಿ ರೂ ಮೌಲ್ಯದ್ದಾಗಿದೆ.
ಭಾರತದ ರಕ್ಷಣಾ ಪಡೆಗಳ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಪ್ರಮೇಯ ತಪ್ಪಿಸಲು ಈ ಒಪ್ಪಂದ ಸಹಕಾರಿಯಾಗಲಿದೆ. ಭಾರತದಲ್ಲಿ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಮತ್ತಷ್ಟು ಬಲಿಷ್ಠಗೊಳ್ಳಲಿದೆ. 2030ಕ್ಕೆ ಡಿಫೆನ್ಸ್ ರಫ್ತಿಗೆ ಸರ್ಕಾರ ಇಟ್ಟಿರುವ ಗುರಿ ಈಡೇರಿಸಲು ಇದರಿಂದ ಸಾಧ್ಯವಾಗಲಿದೆ.
ಇದನ್ನೂ ಓದಿ: ಭಾರತದಲ್ಲಿ ಇನ್ಫ್ರಾಸ್ಟ್ರಕ್ಚರ್ ಕ್ರಾಂತಿ; 11 ವರ್ಷಗಳಲ್ಲಿ ಆದ ಸಾಧನೆಗಳೇನು? ಇಲ್ಲಿದೆ ಪಟ್ಟಿ
ವುಲ್ಕಾನೋ ಮ್ಯೂನಿಶನ್ ಸಿಸ್ಟಂ ಸಾಮಾನ್ಯವಲ್ಲ…
ವುಲ್ಕಾನೋ 155ಎಂಎಂ ಸಿಸ್ಟಂ ಜರ್ಮನಿಯ ಈ ಡೀಹ್ ಡಿಫೆನ್ಸ್ ಕಂಪನಿಯ ಉತ್ಪನ್ನ. ಇದು ಮಾಮೂಲಿಯ ಶೆಲ್ ರೀತಿಯ ಶಸ್ತ್ರವಲ್ಲ. ಲೇಸರ್ ಮತ್ತು ಜಿಪಿಎಸ್ ಮಾರ್ಗಸೂಚಿತವಾಗಿ ಸಾಗುವ ಇದು ಮಾಮೂಲಿಯ ಶೆಲ್ಗಳಿಗಿಂತ ಹೆಚ್ಚು ನಿಖರವಾಗಿ ಗುರಿಯನ್ನು ಹೊಡೆಯಬಲ್ಲುದು.
ಅನಿಲ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಅಡಿಯಲ್ಲಿ ಬರುವ ರಿಲಾಯನ್ಸ್ ಡಿಫೆನ್ಸ್ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ವಾತಾದ್ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಹೊಸ ಘಟಕದಲ್ಲಿ ಈ ವುಲ್ಕಾನೊ 155ಎಂಎಂ ಸ್ಫೋಟಕವನ್ನು ತಯಾರಿಸಲಿದೆ.
ಇದನ್ನೂ ಓದಿ: ಗಾಂಡೀವ ಅಸ್ತ್ರ ಎಂಕೆ-3, ಮಹಾನ್ ವೇಗದಲ್ಲಿ ಟಾರ್ಗೆಟ್ ನಾಶ ಮಾಡಬಲ್ಲುದು ಭಾರತದ ಈ ಹೊಸ ಕ್ಷಿಪಣಿ
ಈ ಯೂನಿಟ್ನಿಂದ ವರ್ಷಕ್ಕೆ 10,000 ಕೋಟಿ ರೂ ಆದಾಯ ನಿರೀಕ್ಷಿಸಬಹುದು. ಭಾರತದ ಮಿಲಿಟರಿಗೆ ಈ ಅಮ್ಯೂನಿಶನ್ಗಳನ್ನು ಪೂರೈಸಲಾಗುತ್ತದೆ. ಹಾಗೆಯೇ ರಫ್ತು ಕೂಡ ನಡೆಯಲಿದೆ. ಡೀಹ್ ಡಿಫೆನ್ಸ್ನ ಇತರ ಅಂತಾರಾಷ್ಟ್ರೀಯ ಗ್ರಾಹಕರಿಗೂ ಇಲ್ಲಿಂದ ಶೆಲ್ಗಳ ಸರಬರಾಜಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ