AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gandiva: ಗಾಂಡೀವ ಅಸ್ತ್ರ ಎಂಕೆ-3, ಮಹಾನ್ ವೇಗದಲ್ಲಿ ಟಾರ್ಗೆಟ್ ನಾಶ ಮಾಡಬಲ್ಲುದು ಭಾರತದ ಈ ಹೊಸ ಕ್ಷಿಪಣಿ

India's Gandiva missile: ಆಪರೇಷನ್ ಸಿಂದೂರದ ಬಳಿಕ ಭಾರತದ ಮಿಲಿಟರಿ ಬಲದ ಬಗ್ಗೆ ಜಗತ್ತಿನ ಗಮನ ನೆಟ್ಟಿದೆ. ಭಾರತವೂ ಕೂಡ ತನ್ನ ಬತ್ತಳಿಕೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೊಸ ಪ್ರಬಲ ಅಸ್ತ್ರಗಳನ್ನು ಸೇರಿಸುತ್ತಿದೆ. ಈ ನಿಟ್ಟಿನಲ್ಲಿ ಅಸ್ತ್ರ ಎಂಕೆ-3 ಕ್ಷಿಪಣಿಯ ಅಭಿವೃದ್ಧಿ ಕೊನೆಯ ಹಂತಕ್ಕೆ ಬಂದಿದೆ. ಇದನ್ನು ಡಿಆರ್​ಡಿಒ ಗಾಂಡೀವ ಎಂದು ಹೆಸರಿಟ್ಟಿದೆ. ಈ ಗಾಂಡೀವ ಕ್ಷಿಪಣಿ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...

Gandiva: ಗಾಂಡೀವ ಅಸ್ತ್ರ ಎಂಕೆ-3, ಮಹಾನ್ ವೇಗದಲ್ಲಿ ಟಾರ್ಗೆಟ್ ನಾಶ ಮಾಡಬಲ್ಲುದು ಭಾರತದ ಈ ಹೊಸ ಕ್ಷಿಪಣಿ
ಗಾಂಡೀವ ಕ್ಷಿಪಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2025 | 6:18 PM

Share

ನವದೆಹಲಿ, ಜೂನ್ 9: ಅರ್ಜುನ ಗಾಂಡೀವ ಬಿಲ್ಲು ಬಗ್ಗೆ ಕೇಳಿರಬಹುದು. ಅದರಿಂದ ಒಮ್ಮೆ ಪ್ರಯೋಗಿಸಿದರೆ ಎದುರಾಳಿ ನಾಶವಾಗದೇ ಇರಲು ಅಸಾಧ್ಯ. ಅಷ್ಟರಮಟ್ಟಿಗೆ ನಿಖರ, ಪ್ರಬಲ, ವೇಗದ ಅಸ್ತ್ರ ಅದು. ಭಾರತದ ಡಿಆರ್​​ಡಿಒ ಸಂಸ್ಥೆ ಇದೇ ಗಾಂಡೀವ ಹೆಸರಿನ ಒಂದು ಶಕ್ತಿಶಾಲಿ ಕ್ಷಿಪಣಿ ಅಭಿವೃದ್ದಿಪಡಿಸುತ್ತಿದೆ. ಅಸ್ತ್ರ ಸರಣಿಯ ಮೂರನೇ ಕ್ಷಿಪಣಿ ಇದು. ಅಸ್ತ್ರ ಎಂಕೆ-3 ಕ್ಷಿಪಣಿಯ (Gandiva Astra MK-III missile) ಅಭಿವೃದ್ಧಿ ಅಂತಿಮ ಹಂತಕ್ಕೆ ಬಂದಿದೆ.

ಅಸ್ತ್ರ ಎಂಕೆ-3 ಒಂದು BVRAAM (Beyond Visual Range Air to Air Missile) ಕ್ಷಿಪಣಿಯಾಗಿದ್ದು, ಇದು 300ರಿಂದ 350 ಕಿಮೀ ಸ್ಟ್ರೈಕ್ ರೇಂಜ್ ಹೊಂದಿದೆ. ಅಸ್ತ್ರ ಎಂಕೆ-1 ಕ್ಷಿಪಣಿ 80-110 ಕಿಮೀ ಶ್ರೇಣಿ ಇದ್ದರೆ, ಎಂಕೆ-2 ಕ್ಷಿಪಣಿ 140-160 ಕಿಮೀ ಶ್ರೇಣಿ ಇದೆ. ಇದರ ಕನಿಷ್ಠ ಎರಡು ಪಟ್ಟು ಶ್ರೇಣಿಯು ಮೂರನೇ ಸರಣಿಯ ಅಸ್ತ್ರ ಕ್ಷಿಪಣಿಯಲ್ಲಿದೆ.

ಇದನ್ನೂ ಓದಿ: ಭಾರತದ ಡ್ರೋನ್ ನಾಶಕ ಡಿ4 ಸಿಸ್ಟಂ ಖರೀದಿಗೆ ತೈವಾನ್ ಆಸಕ್ತಿ; ಚೀನಾದ ಆ ಕಡೆ ಮಗ್ಗುಲಿನಲ್ಲಿ ಭಾರತದ ಬಲ?

ಮೊದಲೆರಡು ಶ್ರೇಣಿಯ ಅಸ್ತ್ರ ಎಂಕೆ ಕ್ಷಿಪಣಿಗಳು ಮಾಮೂಲಿಯ ರಾಕೆಟ್ ಮೋಟಾರುಗಳಿಂದ ಚಲಾಯಿಸಲ್ಪಡುತ್ತವೆ. ಇದರೊಳಗೆ ಆಕ್ಸಿಡೈಸರ್​​ಗಳನ್ನು ಮೊದಲೇ ಹೊಂದಿಸಿಡಬೇಕು. ಆದರೆ, ಗಾಂಡೀವ ಕ್ಷಿಪಣಿ ಅಥವಾ ಅಸ್ತ್ರ ಎಂಕೆ-3 ಕ್ಷಿಪಣಿಯು ಎಸ್​ಎಫ್​​​ಡಿಆರ್ ಪ್ರೊಪಲ್ಷನ್ ಸಿಸ್ಟಂನಿಂದ ಚಲಾಯಿಸಲ್ಪಡುತ್ತದೆ. ಆಕ್ಸಿಡೈಸರ್ ಅನ್ನು ಅಳವಡಿಸುವ ಅವಶ್ಯಕತೆ ಇರಲ್ಲ. ಇದು ಆಗಸದಲ್ಲಿ ಇರುವಾಗಲೇ ಅಲ್ಲಿರುವ ಆಮ್ಲಜನಕವನ್ನು ಆಕ್ಸಿಡೈಸರ್​ಗೆ ಬಳಸಿಕೊಳ್ಳುತ್ತದೆ. ಇದರ ಮೂಲಕ ಬಹಳ ದೀರ್ಘಾವಧಿ ಮತ್ತು ಹೆಚ್ಚು ದೂರ ಇದು ಸೂಪರ್​ಸಾನಿಕ್ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಇದರ ನೋ ಎಸ್ಕೇಪ್ ಝೋನ್ ಅಥವಾ ಎನ್​​ಇಝಡ್ ಹೆಚ್ಚಿನ ಶ್ರೇಣಿಯಲ್ಲಿದ್ದು, ಈ ಶ್ರೇಣಿಗೆ ಬರುವ ಯಾವ ಗುರಿಯನ್ನೂ ಈ ಕ್ಷಿಪಣಿ ಬಿಡುವುದಿಲ್ಲ. ಇದು 20 ಕಿಮೀ ಎತ್ತರದಲ್ಲಿ 340 ಕಿಮೀವರೆಗೂ ದೂರ ಕ್ರಮಿಸಬಲ್ಲುದು. 8 ಕಿಮೀ ಎತ್ತರದಲ್ಲಿ 190 ಕಿಮೀವರೆಗೂ ಓಡುವ ಸಾಮರ್ಥ್ಯ ಹೊಂದಿದೆ.

ಚೀನಾದ ಪಿಎಲ್-15 ಕ್ಷಿಪಣಿ, ಪಾಕಿಸ್ತಾನದಲ್ಲಿರುವ ಎಲ್ಲಾ ಶ್ರೇಣಿಯ ಕ್ಷಿಪಣಿಗಳಿಗಿಂತ ಭಾರತದ ಈ ಹೊಸ ಅಸ್ತ್ರ ಎಂಕೆ-3 ಕ್ಷಿಪಣಿ ಪ್ರಬಲವಾಗಿದೆ. ಎದುರಾಳಿಗಳ ಯುದ್ಧವಿಮಾನಗಳು ತಪ್ಪಿಸಿಕೊಳ್ಳದಂತೆ ಇದು ನಿಖರವಾಗಿ ಉಡಾಯಿಸಲು ಶಕ್ತವಾಗಿದೆ.

ಇದನ್ನೂ ಓದಿ: ಸರ್ಕಾರದ ಈ ಕ್ರಮ ಎಚ್​​ಎಎಲ್​​ಗೆ ಕಹಿ ಎನಿಸಿದರೂ, ದೇಶದ ಭವಿಷ್ಯಕ್ಕೆ ಉತ್ತಮ: ಮಾಜಿ ವಾಯುಸೇನೆ ಮುಖ್ಯಸ್ಥರ ಅನಿಸಿಕೆ

ಸದ್ಯ, ಈ ಗಾಂಡೀವ ಕ್ಷಿಪಣಿಯನ್ನು ಸುಖೋಯ್-30 ಎಂಕೆಐ ಯುದ್ಧವಿಮಾನಕ್ಕೆ ಸೇರಿಸಿ ಪ್ರಯೋಗ ಮಾಡಲಾಗುತ್ತಿದೆ. ನಂತರ ಎಚ್​​ಎಎಲ್​​ನ ತೇಜಸ್, ಮಿಗ್-29 ಯುದ್ಧವಿಮಾನಗಳಿಂದಲೂ ಈ ಕ್ಷಿಪಣಿ ಪ್ರಯೋಗದ ಪರೀಕ್ಷೆ ನಡೆಯಲಿದೆ. ಸಾಧ್ಯವಾದರೆ ರಫೇಲ್ ಹಾಗೂ ಇನ್ನೂ ಅಭಿವೃದ್ಧಿಗೊಳ್ಳುತ್ತಿರುವ ಎಎಂಸಿಎ ಯುದ್ಧ ವಿಮಾನಗಳಲ್ಲೂ ಈ ಕ್ಷಿಪಣಿ ಪರೀಕ್ಷೆ ನಡೆಸುವ ಉದ್ದೇಶ ಇದೆ.

(ಮಾಹಿತಿ ಮೂಲ: idrw.org)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ