AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪ್ಪಿನಿಂದ ಓಡುವ ಸ್ಕೂಟರ್​​ಗಳು, ಅಗ್ಗವೂ ಹೌದು, ಪರಿಸರಪೂರಕವೂ ಹೌದು; ಮುಂಚೂಣಿಯಲ್ಲಿ ಚೀನಾ, ರೇಸ್​​ನಲ್ಲಿ ಭಾರತ

Sodium Ion powered batteries: ಚೀನಾ ದೇಶದಲ್ಲಿ ಸೋಡಿಯಂ ಅಯಾನ್ ಶಕ್ತ ಬ್ಯಾಟರಿಗಳ ತಯಾರಿಕೆ ಬಹಳ ಹೆಚ್ಚಾಗುತ್ತಿದೆ. ಲಿಥಿಯಂ ಅಯಾನ್ ಬ್ಯಾಟರಿಗಿಂತ ಇವು ಬಹಳ ಅಗ್ಗ ಎನಿಸಿವೆ. ಅಲ್ಲಿ ಸೋಡಿಯಂ ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆ ಹೆಚ್ಚುತ್ತಿದೆ. ಭಾರತದಲ್ಲೂ ಸೋಡಿಯಂ ಚಾಲಿತ ಸ್ಕೂಟರ್ ಈ ವರ್ಷಾಂತ್ಯದಲ್ಲೇ ಮಾರುಕಟ್ಟೆಗೆ ಬರಬಹುದು.

ಉಪ್ಪಿನಿಂದ ಓಡುವ ಸ್ಕೂಟರ್​​ಗಳು, ಅಗ್ಗವೂ ಹೌದು, ಪರಿಸರಪೂರಕವೂ ಹೌದು; ಮುಂಚೂಣಿಯಲ್ಲಿ ಚೀನಾ, ರೇಸ್​​ನಲ್ಲಿ ಭಾರತ
ಇ ಸ್ಕೂಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2025 | 1:52 PM

Share

ನವದೆಹಲಿ, ಜೂನ್ 11: ಬ್ಯಾಟರಿ ಚಾಲಿತ ವಾಹನಗಳ (EVs) ಜನಪ್ರಿಯತೆ ಹೆಚ್ಚುತ್ತಿದೆ. ಬ್ಯಾಟರಿ ತಂತ್ರಜ್ಞಾನಗಳಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿವೆ. ಹೊಸ ಹೊಸ ಸಂಶೋಧನೆಗಳಾಗುತ್ತಿವೆ. ಸದ್ಯ ಬ್ಯಾಟರಿ ಎಂದರೆ ಅದು ಲಿಥಿಯಂ ಅಯಾನ್​​​ನಿಂದ ತಯಾರಿಸಲಾಗುವ ಬ್ಯಾಟರಿಗಳೇ (Lithium-ion battery) ಹೆಚ್ಚು. ಈಗಿನ ಬಹುತೇಕ ಎಲೆಕ್ಟ್ರಿಕ್ ವಾಹನಗಳು ಇದೇ ಲಿಥಿಯಂ ಅಯಾನ್ ಶಕ್ತ ಬ್ಯಾಟರಿಯನ್ನು ಒಳಗೊಂಡಿರುವಂಥವೇ ಆಗಿವೆ. ಇದೇ ಹೊತ್ತಲ್ಲಿ ಈಗ ಸೋಡಿಯಂ ಅಯಾನ್ ಶಕ್ತ ಬ್ಯಾಟರಿಗಳು (Sodium-ion battery) ಗಮನ ಸೆಳೆಯುತ್ತಿವೆ. ಚೀನಾ ಎಂದಿನಂತೆ ಈ ರೇಸ್​​ನಲ್ಲಿ ಮುಂದೋಡುತ್ತಿದ್ದು ಈಗಾಗಲೇ ಹಲವಾರು ಸೋಡಿಯಂ ಬ್ಯಾಟರಿ ಶಕ್ತ ಸ್ಕೂಟರ್​​ಗಳು ಮಾರುಕಟ್ಟೆಗೆ ಬಂದು ಬಿಟ್ಟಿವೆ.

ಸೋಡಿಯಂ ಚಾಲಿತ ಸ್ಕೂಟರ್​​ಗಳು ಅಗ್ಗವೂ ಹೌದು…

ಸೋಡಿಯಂ ಅಯಾನ್​ಗಳನ್ನು ಬಳಸಿ ಬ್ಯಾಟರಿ ತಯಾರಿಸಲಾಗುತ್ತದೆ. ಸೋಡಿಯಂ ಅಯಾನ್​ ಉತ್ಪತ್ತಿಗೆ ಉಪ್ಪನ್ನು ಬಳಸಲಾಗುತ್ತದೆ. ಉಪ್ಪು ಯಥೇಚ್ಛವಾಗಿ ಸಿಗುವ ವಸ್ತುವಾದ್ದರಿಂದ ಬ್ಯಾಟರಿ ತಯಾರಿಕೆಗೆ ಹೆಚ್ಚಿನ ವೆಚ್ಚ ಇರೋದಿಲ್ಲ. ಹೀಗಾಗಿ, ಸೋಡಿಯಂ ಬ್ಯಾಟರಿ ಶಕ್ತ ಸ್ಕೂಟರ್​​ಗಳ ಬೆಲೆಯೂ ಸಹಜವಾಗಿ ಕಡಿಮೆ ಇರುತ್ತದೆ.

ಚೀನಾದ ಕೆಲ ನಗರಗಳಲ್ಲಿ ಈ ಸೋಡಿಯಂ ಚಾಲಿತ ಸ್ಕೂಟರ್​​ಗಳ ಬೆಲೆ 35,000 ರೂನಿಂದ 60,000 ರೂವರೆಗಿನ ಬೆಲೆ ಶ್ರೇಣಿಯಲ್ಲಿ ಮಾರಾಟವಾಗುತ್ತಿದೆಯಂತೆ. ಚೀನಾದ ಅತಿದೊಡ್ಡ ಬ್ಯಾಟರಿ ಕಂಪನಿ ಎನಿಸಿದ ಸಿಎಟಿಎಲ್ ಭಾರೀ ಪ್ರಮಾಣದಲ್ಲಿ ಸೋಡಿಯಂ ಬ್ಯಾಟರಿಗಳನ್ನು ತಯಾರಿಸುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್ ಕ್ರಾಂತಿ; 11 ವರ್ಷಗಳಲ್ಲಿ ಆದ ಸಾಧನೆಗಳೇನು? ಇಲ್ಲಿದೆ ಪಟ್ಟಿ

ಸೋಡಿಯಂ ಅಯಾನ್ ಬ್ಯಾಟರಿ ತಂತ್ರಜ್ಞಾನದಲ್ಲಿ ಇಡೀ ಪ್ರಪಂಚ ಇನ್ನೂ ಅಂಬೆಗಾಲು ಇಡುತ್ತಿರುವ ಹೊತ್ತಲ್ಲಿ ಚೀನಾ ಚಿಗರೆಯಿಂದ ಮುನ್ನುಗ್ಗುತ್ತಿದೆ.

ಸೋಡಿಯಂ ಅಯಾನ್ ಬ್ಯಾಟರಿಯ ಅನುಕೂಲಗಳು

  • ಉಪ್ಪು ಹೇರಳವಾಗಿ ಸಿಗುವ ಸಂಪನ್ಮೂಲವಾದ್ದರಿಂದ ಲಿಥಿಯಂಗೆ ಹೋಲಿಸಿದರೆ ಸೋಡಿಯಂ ಬ್ಯಾಟರಿ ತಯಾರಿಕೆಗೆ ವೆಚ್ಚ ಕಡಿಮೆ ಇರುತ್ತದೆ.
  • ಸೋಡಿಯಂ ಅಯಾನ್ ಬ್ಯಾಟರಿ ಬಹಳ ಬೇರ ಚಾರ್ಜ್ ಆಗುತ್ತದೆ.
  • ಸೋಡಿಯಂ ಅಯಾನ್ ಬ್ಯಾಟರಿ ದೀರ್ಘಾವಧಿ ಬಾಳಿಕೆ (ಜೀವಿತಾವಧಿ) ಬರುತ್ತದೆ.

ಸೋಡಿಯಂ ಅಯಾನ್ ಬ್ಯಾಟರಿ ಅನನುಕೂಲಗಳು

ಈ ಸೋಡಿಯಂ ಬ್ಯಾಟರಿಗಳು ಕಡಿಮೆ ಶಕ್ತಿಯನ್ನು ಹೊಂದಿರುತ್ತವೆ. ಅಂದರೆ, ಒಮ್ಮೆ ಚಾರ್ಜ್ ಮಾಡಿದರೆ ವಾಹನ ಬಹಳ ದೂರ ಸಾಗುವುದಿಲ್ಲ. ಲಿಥಿಯಂ ಬ್ಯಾಟರಿಗೆ ಹೋಲಿಸಿದರೆ ಇದರಲ್ಲಿ ವಾಹನಗಳ ಡ್ರೈವಿಂಗ್ ರೇಂಜ್ ಕಡಿಮೆ ಇರುತ್ತದೆ.

ಸೋಡಿಯಂ ಅಯಾನ್ ಬ್ಯಾಟರಿ ಅಭಿವೃದ್ಧಿಪಡಿಸುವ ತಂತ್ರಜ್ಞಾನ ಇನ್ನೂ ಆರಂಭಿಕ ಹಂತದಲ್ಲಿದೆ. ಹೆಚ್ಚು ಶಕ್ತಿ ತುಂಬಿಸಿಕೊಳ್ಳುವಂತೆ ಮಾಡಬಲ್ಲ ಹೊಸ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗಬಹುದು.

ಇದನ್ನೂ ಓದಿ: ಚೀನಾದ ಸಾಲದ ಕುಣಿಕೆಗೆ ಸಿಕ್ಕಿರೋದು ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ, ಇಲ್ಲಿದೆ ಟಾಪ್-10 ಪಟ್ಟಿ

ಭಾರತದಲ್ಲಿ ಸೋಡಿಯಂ ಬ್ಯಾಟರಿ ತಂತ್ರಜ್ಞಾನ ಹೇಗಿದೆ?

ಭಾರತದಲ್ಲೂ ಸೋಡಿಯಂ ಅಯಾನ್ ಬ್ಯಾಟರಿ ತಂತ್ರಜ್ಞಾನ ಅಭಿವೃದ್ಧಿ ನಿಟ್ಟಿನಲ್ಲಿ ಸಂಶೋಧನೆಗಳಾಗುತ್ತಿವೆ. ಎನರ್ಜೆಟಿಕಾ ಮತ್ತು ಜಿತೇಂದ್ರ ಇವಿ ಕಂಪನಿಗಳು ಸೋಡಿಯಂ ಶಕ್ತಿ ದ್ವಿಚಕ್ರ ವಾಹನಗಳನ್ನು ಈ ವರ್ಷಾಂತ್ಯದೊಳಗೆ ಅಥವಾ ಮುಂದಿನ ವರ್ಷದೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.

ವಿವಿಧ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸೋಡಿಯಂ ಅಯಾನ್ ಬ್ಯಾಟರಿಯ ಅಭಿವೃದ್ಧಿಯತ್ತ ಗಮನ ಹರಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?