AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China Debt Trap: ಚೀನಾದ ಸಾಲದ ಕುಣಿಕೆಗೆ ಸಿಕ್ಕಿರೋದು ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ, ಇಲ್ಲಿದೆ ಟಾಪ್-10 ಪಟ್ಟಿ

List of countries in China debt trap: ಚೀನಾದಿಂದ ಯಥೇಚ್ಛವಾಗಿ ಸಾಲ ಪಡೆದು ತೀರಿಸಲಾಗದೆ ತಮ್ಮ ಜುಟ್ಟನ್ನು ಬಿಟ್ಟುಕೊಟ್ಟಿರುವ, ಕೊಡುತ್ತಿರುವ ಹಲವು ದೇಶಗಳಿವೆ. ಪಾಕಿಸ್ತಾನದ ಹೆಸರು ಮೊದಲು ಕೇಳಿಬರುತ್ತದೆ. ಪಾಕಿಸ್ತಾನ ಮಾತ್ರವಲ್ಲ, ಹಲವು ಆಫ್ರಿಕನ್ ದೇಶಗಳೂ ಕೂಡ ಚೀನಾದ ಡೆಟ್ ಅಸ್ತ್ರಕ್ಕೆ ಸಿಲುಕಿವೆ. ನಿಷ್ಪ್ರಯೋಜಕ ಎನಿಸುವ ಯೋಜನೆಗಳಿಗೆ ಸಾಲ ಪಡೆದು ಅದರ ಹೊರೆ ಇಳಿಸಲಾಗದೇ ಇರುವುದು ಈ ಸ್ಥಿತಿಗೆ ಕಾರಣ.

China Debt Trap: ಚೀನಾದ ಸಾಲದ ಕುಣಿಕೆಗೆ ಸಿಕ್ಕಿರೋದು ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ, ಇಲ್ಲಿದೆ ಟಾಪ್-10 ಪಟ್ಟಿ
ಚೀನಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2025 | 3:59 PM

Share

ನವದೆಹಲಿ, ಜೂನ್ 10: ಇದು ಕಾಕತಾಳೀಯವೋ, ಅಥವಾ ಉದ್ದೇಶಪೂರ್ವಕವಾಗಿ ಬಳಕೆಯಾಗುತ್ತಿರುವ ಅಸ್ತ್ರವೋ, ಬಹಳಷ್ಟು ದೇಶಗಳು ಚೀನಾದ ಸಾಲಗಳ ಕುಣಿಕೆಗೆ ಸಿಲುಕಿ ಒದ್ದಾಡುತ್ತಿವೆ. ಹೆಚ್ಚು ಉಪಯೋಗವಾದ ಯೋಜನೆಗಳಿಗೆ ಸಾಲ (Unproductive loans) ಪಡೆದು ಈ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ತತ್​​ಪರಿಣಾಮವಾಗಿ, ಈ ದೇಶಗಳು ತಮ್ಮ ಜುಟ್ಟು ಜನಿವಾರವನ್ನು ಚೀನಾಗೆ ಇಡಬೇಕಾದಂತಹ, ಮತ್ತು ಆ ಡ್ರ್ಯಾಗನ್ (ಚೀನಾ) ಹೇಳಿದಂತೆ ಕೇಳಬೇಕಾದ ಪರಿಸ್ಥಿತಿಯಲ್ಲಿವೆ.

ಚೀನಾ ಉದ್ದೇಶಪೂರ್ವಕವಾಗಿ ವಿವಿಧ ದೇಶಗಳಿಗೆ ಅನುತ್ಪಾದಕ ಸಾಲ ಕೊಟ್ಟು ಶೂಲಕ್ಕೆ ಸಿಲುಕಿಸುತ್ತದೆ ಎನ್ನುವ ಆರೋಪ ಬಹಳ ಕೇಳಿಬರುತ್ತದೆ. ಪಾಕಿಸ್ತಾನದಲ್ಲಿ ಸಿಪೆಕ್ ಕಾರಿಡಾರ್ ನಿರ್ಮಾಣಕ್ಕಾಗಿ ಚೀನಾ ಯಥೇಚ್ಛವಾಗಿ ಸಾಲ ನೀಡಿದೆ. ಇದರಿಂದ ಪಾಕಿಸ್ತಾನಕ್ಕಿಂತ ಚೀನಾದ ಆರ್ಥಿಕತೆಗೆ ಉಪಯೋಗವಾಗುತ್ತದೆ. ಈ ಸಾಲವು ಪಾಕಿಸ್ತಾನಕ್ಕೆ ಬೇಕಾಗಿಲ್ಲದ ಹೊರೆಯೇ ಆಗಿದೆ.

ಇದನ್ನೂ ಓದಿ: ಡಿಶ್, ಕೇಬಲ್ ಟಿವಿ ಉದ್ಯಮದ ಸಂಕಷ್ಟ: ಕೆಲಸ ಕಳೆದುಕೊಂಡ 5.77 ಲಕ್ಷ ಮಂದಿ

ಬಲೂಚಿಸ್ತಾನದ ಬಂದರನ್ನು ಚೀನಾವೇ ನಿರ್ಮಿಸುತ್ತಿದೆ. ಇಲ್ಲಿಂದ ಪಶ್ಚಿಮ ಏಷ್ಯಾ, ಆಫ್ರಿಕಾಗೆ ಸರಕುಗಳನ್ನು ಸಾಗಿಸಲು ಚೀನಾಗೆ ಒಳ್ಳೆಯ ಶಾರ್ಟ್​​ಕಟ್ ಸಿಕ್ಕಂತಾಗುತ್ತದೆ. ಪಾಕಿಸ್ತಾನ ತನಗೇನೋ ಸಿಗುತ್ತೆ ಎಂದು ಭಾವಿಸಿ ಚೀನಾ ಹಾಕಿದ ತಾಳಕ್ಕೆ ಕುಣಿಯುತ್ತಿದೆ ಎಂದು ಪಾಕಿಸ್ತಾನದೊಳಗಿನ ತಜ್ಞರೇ ಎಚ್ಚರಿಸುತ್ತಲೇ ಬಂದಿದ್ದಾರೆ. ಪಾಕಿಸ್ತಾನದ ಒಟ್ಟಾರೆ ಸಾಲದಲ್ಲಿ ಚೀನಾದ ಪಾಲು ಶೇ. 23ಕ್ಕಿಂತಲೂ ಹೆಚ್ಚಿದೆಯಂತೆ.

ಪಾಕಿಸ್ತಾನದಂತೆ ಶ್ರೀಲಂಕಾದ್ದೂ ಉದಾಹರಣೆ ಇದೆ. ಅಲ್ಲಿಯ ಹಲವು ಅಪ್ರಯೋಜಕ ಯೋಜನೆಗಳಿಗೆ ಚೀನಾ ಸಾಲ ಕೊಟ್ಟಿದೆ. ಅದರಲ್ಲಿ ಹಂಬನ್​​ತೋಟ ಬಂದು ಒಂದು ಉದಾಹರಣೆ. ಬಂದರು ನಿರ್ಮಾಣದ ಸಾಲ ತೀರಿಸಲಾಗದೆ ಆ ಬಂದರನ್ನೇ ಚೀನಾಗೆ ಬಿಟ್ಟುಕೊಟ್ಟಿದೆ ಲಂಕಾ. ಇದರಿಂದ ಭಾರತದ ಕೆಳಮಗ್ಗುಲಿನಲ್ಲಿ ತನ್ನ ನೆಲೆ ನಿರ್ಮಿಸಲು ಚೀನಾಗೆ ಒಳ್ಳೆಯ ಜಾಗ ಸಿಕ್ಕಂತಾಗಿದೆ.

ಇದನ್ನೂ ಓದಿ: ಟ್ರೆಂಡ್ಸ್ ಎಐ ಗ್ಲೋಬಲ್ 30 ಟೆಕ್ ಕಂಪನಿಗಳ ಪಟ್ಟಿ: ರಿಲಾಯನ್ಸ್ ಏಕಮಾತ್ರ ಭಾರತೀಯ ಸಂಸ್ಥೆ

ಚೀನಾದಿಂದ ಅತಿಹೆಚ್ಚು ಸಾಲ ಪಡೆದ 10 ದೇಶಗಳು

  1. ಪಾಕಿಸ್ತಾನ
  2. ಮಾಲ್ಡೀವ್ಸ್
  3. ಲಾವೋಸ್
  4. ಮೊಂಗೋಲಿಯಾ
  5. ಡಿಜಿಬೋಟಿ
  6. ಅಂಗೋಲ
  7. ಶ್ರೀಲಂಕಾ
  8. ವೆನಿಜುವೆಲಾ
  9. ಕಾಂಬೋಡಿಯಾ
  10. ಕೀನ್ಯಾ

ಝಾಂಬಿಯಾ, ಇಥಿಯೋಪಿಯಾ ಇತ್ಯಾದಿ ಇನ್ನೂ ಹಲವು ದೇಶಗಳು ಚೀನಾದ ಸಾಲದ ಜಾಲಕ್ಕೆ ಸಿಲುಕಿವೆ. ಆ ದೇಶಗಳಲ್ಲಿರುವ ಸಂಪನ್ಮೂಲಗಳ ಮೇಲೆ ತನ್ನ ಹಿಡಿತ ಸಾಧಿಸಲು ಚೀನಾ ಈ ವಾಮ ಮಾರ್ಗ ಬಳಸುತ್ತದೆ ಎಂಬ ಆರೋಪಗಳಂತೂ ಕೇಳಿಬರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ